ಸುಭಾಷ್ ಚಂದ್ರ ಬೋಸ್, ಮಹಾತ್ಮಗಾಂಧಿ ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕೆಲವು ಪ್ರಸಿದ್ಧ ಘೋಷವಾಕ್ಯಗಳು ಇಲ್ಲಿವೆ-independence day motivational slogans of indian freedom fighters august 15 india got freedom subhash chandra bose prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸುಭಾಷ್ ಚಂದ್ರ ಬೋಸ್, ಮಹಾತ್ಮಗಾಂಧಿ ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕೆಲವು ಪ್ರಸಿದ್ಧ ಘೋಷವಾಕ್ಯಗಳು ಇಲ್ಲಿವೆ

ಸುಭಾಷ್ ಚಂದ್ರ ಬೋಸ್, ಮಹಾತ್ಮಗಾಂಧಿ ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕೆಲವು ಪ್ರಸಿದ್ಧ ಘೋಷವಾಕ್ಯಗಳು ಇಲ್ಲಿವೆ

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ವಿಶೇಷವಾಗಿ ವಿದ್ಯಾರ್ಥಿಗಳ ಸಡಗರ ತುಸು ಹೆಚ್ಚೇ ಇದೆ. ಶಾಲೆ-ಕಾಲೇಜುಗಳನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರನ್ನು ಮೆಲುಕು ಹಾಕುವುದು ಮಾತ್ರವಲ್ಲ, ಅವರ ಘೋಷವಾಕ್ಯಗಳನ್ನು ನೆನೆಯೋಣ. ಇಲ್ಲಿದೆ ಕೆಲವು ಘೋಷವಾಕ್ಯಗಳ ಪಟ್ಟಿ.

ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯದ ಪಟ್ಟಿ ಇಲ್ಲಿದೆ.
ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯದ ಪಟ್ಟಿ ಇಲ್ಲಿದೆ.

ಸುಮಾರು 200 ವರ್ಷಗಳ ಬ್ರಿಟೀಷ್ ಆಳ್ವಿಕೆಯಿಂದ ಮುಕ್ತವಾದ ಭಾರತ ಆಗಸ್ಟ್ 15, 1947ರಂದು ಸ್ವಾತಂತ್ರ್ಯ ಪಡೆದುಕೊಂಡಿತು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅನೇಕ ಮಹನೀಯರು ಹೋರಾಡಿ, ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರತಿಯೊಬ್ಬ ಭಾರತೀಯ ನಾಗರಿಕರಲ್ಲಿ ದೇಶಭಕ್ತಿ ಉಕ್ಕಿ ಹರಿಯುತ್ತದೆ. ಅಲ್ಲದೆ, ದೇಶಕ್ಕಾಗಿ ಬಲಿದಾನಗೈದ ವೀರರನ್ನು ಮೆಲುಕು ಹಾಕುವ ದಿನವಿದು. ಅದರಲ್ಲೂ ಮಕ್ಕಳಿಗೆ ಸ್ವಾತಂತ್ರ್ಯದ ಮಹತ್ವ, ಇತಿಹಾಸ ಹಾಗೂ ಇದಕ್ಕಾಗಿ ತಮ್ಮ ನೆತ್ತರು ಹರಿಸಿದ ವೀರ ಹೋರಾಟಗಾರರ ಬಗ್ಗೆ ತಿಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯ.

ಸ್ವಾತಂತ್ರ್ಯ ದಿನಾಚರಣೆ ಅಂದ್ರೆ ದೇಶವೇ ಹಬ್ಬದಂತೆ ಸಂಭ್ರಮಿಸುವ ದಿನ. ದೇಶದಾದ್ಯಂತ ಶಾಲಾ-ಕಾಲೇಜುಗಳು ಬಹಳ ಅರ್ಥಪೂರ್ಣವಾಗಿ ಈ ದಿನವನ್ನು ಆಚರಿಸುತ್ತದೆ. ಧ್ವಜಾರೋಹಣ, ಸಾಂಸ್ಕೃತಿಕ ಹಾಗೂ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಮಕ್ಕಳು ಕೂಡ ಬಹಳ ಉತ್ಸಾಹದಿಂದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದ ವೀರ ಹೋರಾಟಗಾರರನ್ನು ನೆನಪು ಮಾಡಿಕೊಳ್ಳುವುದಷ್ಟೇ ಅಲ್ಲ, ಅವರು ಮಾಡಿದ್ದ ಘೋಷಣೆಗಳನ್ನು ಕೂಡ ಗೌರವಿಸುವುದು ನಮ್ಮ ಕರ್ತವ್ಯ.

ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದ ಘೋಷಣೆ (ಸ್ಲೋಗನ್‌) ಗಳು ಯಾವುವು?

ಘೋಷಣೆ ಎಂದರೆ ಒಂದು ನಿರ್ದಿಷ್ಟ ಗುರಿ ಅಥವಾ ಸಂದರ್ಭವನ್ನು ವಿವರಿಸಲು ಬಳಸುವ ಸರಳ, ಸಂಕ್ಷಿಪ್ತ ನುಡಿಗಟ್ಟು ಅಥವಾ ಧ್ಯೇಯವಾಕ್ಯವಾಗಿದೆ. ಘೋಷಣೆ ಮಾಡುವುದರಿಂದ ಜನರು ಪ್ರೇರಣೆಗೆ ಒಳಗಾಗುತ್ತಾರೆ ಹಾಗೂ ನಿರ್ದಿಷ್ಟ ಆಲೋಚನೆ ಅಥವಾ ಗುರಿಯನ್ನು ಪ್ರತಿನಿಧಿಸಬಹುದು. ಘೋಷಣೆಯನ್ನು ಸ್ಫೂರ್ತಿಯ ಮೂಲ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಘೋಷವಾಕ್ಯಗಳಿಂದ ಪ್ರೇರಿತರಾದ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಕಾರಣವಾಯಿತು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ್ದ ಘೋಷಣೆಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರ ಪ್ರಮುಖ ಘೋಷಣೆಗಳ ಪಟ್ಟಿ ಇಲ್ಲಿದೆ

ಮಹಾತ್ಮ ಗಾಂಧಿ:

- ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆಯನ್ನು ಕಟ್ಟಲಾಗದು. ಅದು ಜೀವನದ ಉಸಿರು. ಮನುಷ್ಯನು ಬದುಕಲು ಏನು ಪಾವತಿಸುವುದಿಲ್ಲ?

- ನಾಳೆ ನೀವು ಸಾಯುವ ಹಾಗೆ ಬದುಕಿ, ನೀವು ಶಾಶ್ವತವಾಗಿ ಬದುಕಬೇಕು ಎಂಬುದಾಗಿ ಕಲಿಯಿರಿ.

- ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆ ಅಂದರೆ ಅದು ನೀವಾಗಿರಬೇಕು.

ಬಿ.ಆರ್.ಅಂಬೇಡ್ಕರ್: ಮೊದಲನೆಯದಾಗಿ ಮತ್ತು ಕೊನೆಯದಾಗಿ ನಾವು ಭಾರತೀಯರು.

ಜವಾಹರಲಾಲ್ ನೆಹರು: ಮಧ್ಯರಾತ್ರಿ ಗಂಟೆ ಹೊಡೆಯುವಾಗ, ಜಗತ್ತು ನಿದ್ರಿಸುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ.

ಸರ್ದಾರ್ ವಲ್ಲಭಭಾಯಿ ಪಟೇಲ್: ಭಾರತದ ಪ್ರತಿಯೊಬ್ಬ ನಾಗರಿಕನು ತಾನು ಭಾರತೀಯ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಈ ದೇಶದಲ್ಲಿ ಅವನಿಗೆ ಎಲ್ಲ ಹಕ್ಕುಗಳಿವೆ, ಜೊತೆಗೆ ಕೆಲವು ಕರ್ತವ್ಯಗಳೂ ಇವೆ.

ಸುಭಾಷ್ ಚಂದ್ರ ಬೋಸ್: ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ.

ರವೀಂದ್ರನಾಥ ಟ್ಯಾಗೋರ್: ಎಲ್ಲಿ ಮನಸ್ಸು ಭಯವಿಲ್ಲದೆ ಇರುತ್ತದೆಯೋ ಅಲ್ಲಿ ತಲೆ ಎತ್ತಿರುತ್ತದೆ, ಮತ್ತು ಜ್ಞಾನವು ಮುಕ್ತವಾಗಿರುತ್ತದೆ.

ಬಾಲಗಂಗಾಧರ ತಿಲಕ್: ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ.

ಲಾಲ್ ಬಹದ್ದೂರ್ ಶಾಸ್ತ್ರಿ: ನಾವು ಶಾಂತಿ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ನಂಬುತ್ತೇವೆ, ನಮಗಾಗಿ ಮಾತ್ರವಲ್ಲ ಪ್ರಪಂಚದಾದ್ಯಂತದ ಜನರಿಗೆ.

ಭಗತ್ ಸಿಂಗ್: ಅವರು ನನ್ನನ್ನು ಕೊಲ್ಲಬಹುದು, ಆದರೆ ಅವರು ನನ್ನ ಆಲೋಚನೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಅವರು ನನ್ನ ದೇಹವನ್ನು ಪುಡಿಮಾಡಬಹುದು, ಆದರೆ ಅವರು ನನ್ನ ಚೈತನ್ಯವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.