ಭಾರತದ 5 ನೈಸರ್ಗಿಕ ಅದ್ಭುತಗಳು: ಸಹ್ಯಾದ್ರಿ ಪರ್ವತದ ಸೊಬಗು, ಸುಂದರಬನದ ಸೌಂದರ್ಯ, ಥಾರ್‌ ಮರುಭೂಮಿಯ ಬೆರಗು
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದ 5 ನೈಸರ್ಗಿಕ ಅದ್ಭುತಗಳು: ಸಹ್ಯಾದ್ರಿ ಪರ್ವತದ ಸೊಬಗು, ಸುಂದರಬನದ ಸೌಂದರ್ಯ, ಥಾರ್‌ ಮರುಭೂಮಿಯ ಬೆರಗು

ಭಾರತದ 5 ನೈಸರ್ಗಿಕ ಅದ್ಭುತಗಳು: ಸಹ್ಯಾದ್ರಿ ಪರ್ವತದ ಸೊಬಗು, ಸುಂದರಬನದ ಸೌಂದರ್ಯ, ಥಾರ್‌ ಮರುಭೂಮಿಯ ಬೆರಗು

ಭಾರತದ 5 ನೈಸರ್ಗಿಕ ಅದ್ಭುತಗಳು: ಸುಂದರಬನ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಘಟ್ಟಗಳು, ಥಾರ್‌ ಮರುಭೂಮಿ, ಉತ್ತರಾಖಂಡದ ವ್ಯಾಲಿ ಆಫ್‌ ಫ್ಲವರ್ಸ್‌, ಮಣಿಪುರದ ಲೋಕ್‌ಟಕ್‌ ಸರೋವರಗಳು ಭಾರತದ ಐದು ನೈಸರ್ಗಿಕ ಅದ್ಭುತಗಳಾಗಿವೆ.

ಭಾರತದ 5 ನೈಸರ್ಗಿಕ ಅದ್ಭುತಗಳು
ಭಾರತದ 5 ನೈಸರ್ಗಿಕ ಅದ್ಭುತಗಳು

ಭಾರತದ 5 ನೈಸರ್ಗಿಕ ಅದ್ಭುತಗಳು: ಭಾರತವು ವಿಶಿಷ್ಟ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದೆ. ಇದೇ ರೀತಿ ಭಾರತದ ಪರಿಸರ ಕೂಡ ವೈವಿಧ್ಯಮಯ. ದಟ್ಟ ಕಾಡುಗಳು, ವಿಶಾಲ ಮರುಭೂಮಿಗಳು, ಗುಹೆಗಳು ಸೇರಿದಂತೆ ಅನೇಕ ನೈಸರ್ಗಿಕ ಅದ್ಭುತಗಳನ್ನು ಹೊಂದಿದೆ. ಇದು ಭಾರತದ ಜೀವವೈವಿಧ್ಯತೆ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಲೇಖಣದಲ್ಲಿ ಭಾರತದ ಐದು ಅದ್ಭುತವಾದ ನೈಸರ್ಗಿಕ ವಿಷಯಗಳನ್ನು ನೋಡೋಣ.

1. ಸುಂದರಬನ್‌ ರಾಷ್ಟ್ರೀಯ ಉದ್ಯಾನವನ

ಇದು ದಕ್ಷಿಣ ಏಷ್ಯಾ ಮತ್ತು ಜಗತ್ತಿನ ಒಂದು ಅನನ್ಯ ನೈಸರ್ಗಿಕ ಅದ್ಭುತ. ಭಾರತ ಮತ್ತು ಬಾಂಗ್ಲಾದೇಶದಲ್ಲಿ ಸುಮಾರು 10,000 ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಹ್ಯಾಲೋಫೈಟಿಕ್ ಮ್ಯಾಂಗ್ರೋವ್ ಅರಣ್ಯ ಎಂಬ ಸ್ಥಾನಮಾನವನ್ನು ಅನುಭವಿಸುತ್ತಿದೆ. ಇದು ಬಂಗಾಳದ ಜಲಾನಯನ ಪ್ರದೇಶದಲ್ಲಿ ಸಂಗಮಿಸುವ ಎರಡು ದೊಡ್ಡ ಭಾರತೀಯ ನದಿಗಳಾದ ಗಂಗಾ ಮತ್ತು ಬ್ರಹ್ಮಪುತ್ರಗಳ ಮುಖಜ ಭೂಮಿಯಾಗಿದೆ. ಇಡೀ ಪ್ರದೇಶವು ಪ್ರಸಿದ್ಧ ರಾಯಲ್ ಬೆಂಗಾಲ್ ಟೈಗರ್ಸ್ ಸಾಮ್ರಾಜ್ಯವಾಗಿದೆ. ಸುಂದರಬನ್ ರಾಷ್ಟ್ರೀಯ ಉದ್ಯಾನವನವು ಹುಲಿ ಮತ್ತು ಜೀವಗೋಳದ ಮೀಸಲು ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕಂಡುಬರುವ ಸುಂದರವಾದ ಮರಗಳ ಕಾರಣದಿಂದ ಸುಂದರ ಬನ ಎಂಬ ಹೆಸರಿಡಲಾಗಿದೆ. ಈ ಉದ್ಯಾನವನವನ್ನು 1984 ರ ಮೇ 4 ರಂದು ರಾಷ್ಟ್ರೀಯ ಉದ್ಯಾನವನವಾಗಿ ಮಾಡಲಾಯಿತು. ಇದಕ್ಕೂ ಮುನ್ನ ಇದು 1977ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿತ್ತು. ಬಳಿಕ ಇದನ್ನು ಸುಂದರಬನ ಹುಲಿ ಸಂರಕ್ಷಿತ ಪ್ರದೇಶ ಎಂದು ಮಾಡಲಾಯಿತು. ಇದು ಯನೆಸ್ಕೊ ಪಾರಂಪರಿಕಾ ತಾಣವಾಗಿದೆ.

2. ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳು ಅಥವಾ ಸಹ್ಯಾದ್ರಿ ಪರ್ವತ ಶ್ರೇಣಿ ಎನ್ನುವುದು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿಯಾಗಿದೆ. ಇದಕ್ಕ ಸಹ್ಯಾದ್ರಿ ಪರ್ವತಗಳು ಎಂಬ ಹೆಸರೂ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಸಹ್ಯಾದ್ರಿ ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಪತೀನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇದೆ. ಇದು ಸುಮಾರು 1600 ಕಿಮೀ. ವ್ಯಾಪಿಸಿದೆ. ಪಶ್ಚಿಮ ಘಟ್ಟಗಳು ಸಹ್ಯಾದ್ರಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ.ಇದು ಅತ್ಯಂತ ಜೀವವೈವಿಧ್ಯದ ಸ್ಥಳ.

3. ಥಾರ್‌ ಮರುಭೂಮಿ

ಥಾರ್‌ ಮರುಭೂಮಿಗೆ ಗ್ರೇಟ್‌ ಇಂಡಿಯನ್‌ ಮರುಭೂಮಿ ಎಂದು ಕರೆಯಲಾಗುತ್ತದೆ. ಇದು ಭಾರತ ಮತ್ತು ಪಾಕಿಸ್ತಾನದಲ್ಲಿ 2 ಲಕ್ಷ ಕಿ.ಮೀ. ಹೊಂದಿದೆ. ಇದು ಭಾರತೀಯ ಉಪಖಂಡದ ವಾಯುವ್ಯ ಭಾಗದಲ್ಲಿರುವ ಶುಷ್ಕ ಪ್ರದೇಶವಾಗಿದೆ. ಇದು ಜಗತ್ತಿನ 18ನೇ ಅತಿದೊಡ್ಡ ಮರುಭೂಮಿ. ಜಗತ್ತಿನ 9ನೇ ಅತಿದೊಡ್ಡ ಬಿಸಿ ಉಷ್ಣವಲಯದ ಮರುಭೂಮಿಯಾಗಿದೆ. ಥಾರ್‌ ಮರುಭೂಮಿಯ ಶೇಕಡ 85 ಭಾಗ ಭಾರತದಲ್ಲಿದೆ. ಶೇಕಡ 15 ಭಾಗ ಪಾಕಿಸ್ತಾನದಲ್ಲಿದೆ. ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡ 4.56 ಭಾಗ ಥಾರ್‌ ಮರುಭೂಮಿಯಾಗಿದೆ. ಶೇಕಡ 60ರಷ್ಟು ಥಾರ್‌ ಮರುಭೂಮಿಯ ಭಾಗ ರಾಜಸ್ಥಾನದಲ್ಲಿದೆ. ಗುಜರಾತ್‌, ಪಂಜಾಬ್‌, ಹರಿಯಾಣಕ್ಕೂ ಈ ಮರುಭೂಮಿ ವಿಸ್ತರಿಸಿದೆ.

4. ಉತ್ತರಾಖಂಡ ಹೂಗಳ ಕಣಿವೆ (ವ್ಯಾಲಿ ಆಫ್‌ ಫ್ಲವರ್ಸ್‌)

ಉತ್ತರಾಖಂಡದ ವ್ಯಾಲಿ ಆಫ್‌ ಫ್ಲವರ್ಸ್‌ ಕೂಡ ಭಾರತದ ಪ್ರಮುಖ ನೈಸರ್ಗಿಕ ಅದ್ಭುತ. ಇದು ಉತ್ತರಾಖಂಡದ ಪಶ್ಚಿಮ ಹಿಮಾಲಯ ಶ್ರೇಣಿಯಲ್ಲಿ ಶಾಂತವಾಗಿ ಆವರಿಸಿರುವ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿದೆ. ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ 87 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಪ್ರದೇಶವನ್ನು ಆವರಿಸಿದೆ. ಇದು ಹಿಮಾಲಯ ಶ್ರೇಣಿಗಳಲ್ಲಿ ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ. ಈ ಅದ್ಭುತ ಸ್ಥಳವನ್ನು 1931ರಲ್ಲಿ ಮಹಾನ್ ಪರ್ವತಾರೋಹಿ ಫ್ರಾಂಕ್ ಎಸ್ ಸ್ಮಿತ್ ಕಂಡುಹಿಡಿದರು. ಇದರ ಇನ್ನೊಂದು ಬದಿಯಲ್ಲಿ ಪುಷ್ಪಾವತಿ ನದಿಯೊಂದಿಗೆ ಇರುವ ಸೊಂಪಾದ ಕಾಡುಗಳು, ಹಿಮದಿಂದ ಆವೃತ್ತವಾದ ಪರ್ವತವಳು, ಎತ್ತರದ ಪರ್ವತಗಳು ಗಮನ ಸೆಳೆಯುತ್ತವೆ. ಕಣಿವೆಯು ಕಪ್ಪು ಕರಡಿ, ಚಿರತೆ, ಕೆಂಪು ನರಿ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ಕೆಲವು ಅಳಿವನಿಂಚಿನ ಪ್ರಾಣಿಗಳು ಇಲ್ಲಿವೆ. ಇದು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದೆ.

5. ಮಣಿಪುರದ ಲೋಕ್‌ಟಕ್ ಸರೋವರ

ಇದು ಕೂಡ ಭಾರತದ ನೈಸರ್ಗಿಕ ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ತೇಲುವ ದ್ವೀಪಗಳು ಎಂದೂ ಕರೆಯಲಾಗುತ್ತದೆ. ಈ ಪುರಾತನ ಸರೋವರವು ಮಣಿಪುರದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಇದು ಜಲವಿದ್ಯುತ್ ಉತ್ಪಾದನೆ, ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗೆ ನೀರಿನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ . ಈ ಸರೋವರವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಗ್ರಾಮೀಣ ಮೀನುಗಾರರಿಗೆ ಜೀವನಾಧಾರವಾಗಿದೆ.

Whats_app_banner