ಕನ್ನಡ ಸುದ್ದಿ  /  Lifestyle  /  India News 26 Yr Old Indian Woman Crowned Guinness World Record Title For Having Most Teeth Viral News Uks

World Record: ಹಲ್ಲುಗಳ ತೋರಿಸಿ ಗಿನ್ನೆಸ್ ದಾಖಲೆ ಪುಟ ಸೇರಿದ್ರು 26 ವರ್ಷದ ಭಾರತೀಯ ಯುವತಿ, ಎಷ್ಟು ಹಲ್ಲುಗಳಿವೆ ಗೆಸ್ ಮಾಡಿ

ಮಹಿಳೆಯರ ವಿಭಾಗದಲ್ಲಿ ಅತಿ ಹೆಚ್ಚು ಹಲ್ಲು ಹೊಂದಿರುವ ದಾಖಲೆ ಈಗ ಭಾರತದ 26 ವರ್ಷದ ಯುವತಿಯ ಹೆಸರಿಗೆ ದಾಖಲಾಗಿದೆ. ಹೆಚ್ಚುವರಿ ಹಲ್ಲುಗಳನ್ನು ಹೊಂದಿರುವ ಪುರುಷ ಕೆನಡಾದಲ್ಲಿದ್ದು ಅವರ ಬಾಯಿಯಲ್ಲಿ 41 ಹಲ್ಲುಗಳಿವೆ.

ಮಹಿಳೆಯರ ವಿಭಾಗದಲ್ಲಿ ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಗಿನ್ನೆಸ್ ವಿಶ್ವ ದಾಖಲೆ ಈಗ ಭಾರತದ 26 ವರ್ಷದ ಯುವತಿ ಕಲ್ಪನಾ ಬಾಲನ್ ಹೆಸರಿಗೆ ವರ್ಗಾವಣೆಯಾಗಿದೆ.
ಮಹಿಳೆಯರ ವಿಭಾಗದಲ್ಲಿ ಅತಿ ಹೆಚ್ಚು ಹಲ್ಲುಗಳನ್ನು ಹೊಂದಿರುವ ಗಿನ್ನೆಸ್ ವಿಶ್ವ ದಾಖಲೆ ಈಗ ಭಾರತದ 26 ವರ್ಷದ ಯುವತಿ ಕಲ್ಪನಾ ಬಾಲನ್ ಹೆಸರಿಗೆ ವರ್ಗಾವಣೆಯಾಗಿದೆ. (Guinness World Record)

ನಿಮ್ಮ ಬಾಯಿಯಲ್ಲಿ ಎಷ್ಟು ಹಲ್ಲುಗಳಿವೆ ( Number of Tooth in the mouth)? 32 ಅಂತ ಥಟ್ ಅಂತ ಉತ್ತರಿಸಬಹುದು. ಆದರೆ ವಾಸ್ತವ ಹಾಗಿಲ್ಲ. ಒಬ್ಬೊಬ್ಬರ ಬಾಯಿಯಲ್ಲಿ ಹಲ್ಲುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಆದರೆ ಈ ಹಲ್ಲುಗಳ ವಿಚಾರದಲ್ಲಿ ಗಿನ್ನೆಸ್ ವಿಶ್ವದಾಖಲೆ (Guinness World Record) ನಿರ್ಮಿಸಬಹುದು ಅಂತ ಯಾರಾದರೂ ಗೆಸ್ ಮಾಡಿದ್ರಾ?

ಟ್ರೆಂಡಿಂಗ್​ ಸುದ್ದಿ

ಭಾರತದ 26 ವರ್ಷದ ಯುವತಿಯೊಬ್ಬರು ತನ್ನ ಬಾಯೊಳಗಿನ ಹಲ್ಲುಗಳನ್ನು ತೋರಿಸಿ ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಿದ್ದಾರೆ. ಹೌದು, ಗಿನ್ನೆಸ್‌ ವಿಶ್ವ ದಾಖಲೆ ವಿವರದ ಪ್ರಕಾರ ಅವರ ಬಾಯಿಯಲ್ಲಿವೆ 38 ಹಲ್ಲುಗಳು!

ಸಾಮಾನ್ಯ ವಯಸ್ಕರ ಬಾಯಿಯಲ್ಲಿರುವ ಹಲ್ಲುಗಳ ಸಂಖ್ಯೆಗಿಂತ 6 ಹೆಚ್ಚು ಹಲ್ಲುಗಳನ್ನು ಹೊಂದಿರುವ ಯುವತಿಯ ಹೆಸರು ಕಲ್ಪನಾ ಬಾಲನ್‌ (Kalpana Balan). ಅವರ ಬಾಯಿಯಲ್ಲಿ 38 ಹಲ್ಲುಗಳಿವೆ.

ಗಿನ್ನೆಸ್ ವಿಶ್ವದ ದಾಖಲೆಯ ವಿವರ ಹೇಳುವುದು ಇಷ್ಟು

ಗಿನ್ನೆಸ್ ವಿಶ್ವದಾಖಲೆಯ ವಿವರ ಪ್ರಕಾರ, ಕಲ್ಪನಾ ಬಾಲನ್‌ ಅವರ ಹದಿಹರೆಯದಲ್ಲಿ, ಹೆಚ್ಚುವರಿ ಹಲ್ಲುಗಳು ಒಂದೊಂದಾಗಿ ಬೆಳೆಯಲು ಪ್ರಾರಂಭಿಸಿದವು. ಈ ಬೆಳವಣಿಗೆ ಕಾರಣ ನೋವು ಏನೂ ಆಗಿಲ್ಲ. ಆದರೆ ಆಹಾರವು ಆಗಾಗ್ಗೆ ಅವುಗಳ ನಡುವೆ ಸಿಲುಕಿಕೊಳ್ಳುವುದರಿಂದ ತಿನ್ನುವಾಗ ಸಮಸ್ಯೆ ಆಗುತ್ತಿತ್ತು. ಯಾಕೆ ಎಂದು ಪರಿಶೀಲಿಸಿದಾಗ ಹೆಚ್ಚುವರಿ ಹಲ್ಲುಗಳ ಗುಂಪು ಕಂಡುಬಂತು. ಅದನ್ನು ತೆಗೆಸಲು ಪಾಲಕರು ಸೂಚಿಸಿದರು.

ದಂತ ವೈದ್ಯರ ಬಳಿ ಹೋದಾಗ ಅವರು ಆ ಹಲ್ಲುಗಳನ್ನು ಆ ಹಂತದಲ್ಲಿ ತೆಗೆಯುವುದು ಕಷ್ಟ. ಬೆಳೆಯಲು ಬಿಡಿ ಎಂದರು. ಕೊನೆಗೆ ಹಲ್ಲು ತೆಗೆಸದೇ ಹಾಗೆಯೇ ಬಿಟ್ಟಿದ್ದರು ಕಲ್ಪನಾ. ನಾಲ್ಕು ಹೆಚ್ಚುವರಿ ದವಡೆಯ (ಕೆಳ ದವಡೆ) ಹಲ್ಲುಗಳನ್ನು ಮತ್ತು ಎರಡು ಹೆಚ್ಚುವರಿ ಮ್ಯಾಕ್ಸಿಲ್ಲರಿ (ಮೇಲಿನ ದವಡೆ) ಹಲ್ಲುಗಳನ್ನು ಕಲ್ಪನಾ ಈಗ ಹೊಂದಿದ್ದಾರೆ.

ಗಿನ್ನೆಸ್ ದಾಖಲೆ ಪುಟ ಸೇರಿದ ಬಳಿಕ ಕಲ್ಪನಾ ಬಾಲನ್ ಹೇಳಿದ್ದು ಹೀಗೆ

"ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆಯಲು ನನಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಜೀವಮಾನದ ಸಾಧನೆ. ಇನ್ನೂ ಎರಡು ತುಂಬದ ಹಲ್ಲುಗಳು ಇರುವುದರಿಂದ, ಭವಿಷ್ಯದಲ್ಲಿ ತನ್ನ ದಾಖಲೆಯನ್ನು ವಿಸ್ತರಿಸಲು ಸಾಧ್ಯವಾಗಲಿದೆ" ಎಂದು ಕಲ್ಪನಾ ಬಾಲನ್ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಬಳಿಕ ಹೇಳಿದರು.

ಕೆನಡಾದಲ್ಲಿದ್ದಾರೆ ಹೆಚ್ಚು ಹಲ್ಲುಗಳನ್ನು ಹೊಂದಿದ ಪುರುಷ

ಕೆನಡಾದ ಇವಾನೋ ಮೆಲೋನ್‌ ಅವರು ಅತಿ ಹೆಚ್ಚು ಹಲ್ಲು ಹೊಂದಿರುವ ಪುರಷ. ಗಿನ್ನೆಸ್ ವಿಶ್ವ ದಾಖಲೆಯ ವಿವರ ಪ್ರಕಾರ, ಇವಾನೋ ಮೆಲೋನ್ ಅವರಿಗೆ 41 ಹಲ್ಲುಗಳಿವೆ.

ಹೆಚ್ಚುವರಿ ಹಲ್ಲುಗಳಿರುವ ಸಮಸ್ಯೆಗೆ ಏನು ಹೇಳುತ್ತಾರೆ

ಗಿನ್ನೆಸ್ ವಿಶ್ವ ದಾಖಲೆಯ ವಿವರ ಪ್ರಕಾರ ಹೆಚ್ಚವರಿ ಹಲ್ಲಿಗಳು ಬೆಳೆಯುವ ಸಮಸ್ಯೆ ವಿವರ ಹೀಗಿದೆ -

1. ಹೆಚ್ಚುವರಿ ಹಲ್ಲುಗಳ ಉಪಸ್ಥಿತಿಗೆ ವೈದ್ಯಕೀಯ ಪರಿಭಾಷೆಯಲ್ಲಿ ಹೈಪರ್ಡೋಂಟಿಯಾ ಅಥವಾ ಪಾಲಿಡೋಂಟಿಯಾ ಎಂದು ಹೇಳುತ್ತಾರೆ.

2. ವಿಶ್ವದ ಜನಸಂಖ್ಯೆಯ 3.8 ಪ್ರತಿಶತದಷ್ಟು ಜನರು ಒಂದು ಅಥವಾ ಹೆಚ್ಚಿನ ಸೂಪರ್ನ್ಯೂಮರರಿ ಹಲ್ಲುಗಳನ್ನು ಹೊಂದಿದ್ದಾರೆ.

3. ಹೈಪರ್ಡೋಂಟಿಯಾವು ಹಲ್ಲಿನ ರಚನೆಯ ಪ್ರಕ್ರಿಯೆಯಲ್ಲಿನ ಅಸಮರ್ಪಕ ಕ್ರಿಯೆಯ ಪರಿಣಾಮ. ಆದಾಗ್ಯೂ ಅದರ ನಿಖರವಾದ ಕಾರಣ ತಿಳಿದಿಲ್ಲ.

4. ಸಾಮಾನ್ಯ ಹಲ್ಲಿನ ಮೊಗ್ಗು ಬಳಿ ಉಂಟಾಗುವ ಹೆಚ್ಚುವರಿ ಹಲ್ಲಿನ ಮೊಗ್ಗಿನಿಂದ ಅಥವಾ ಸಾಮಾನ್ಯ ಹಲ್ಲಿನ ಮೊಗ್ಗು ವಿಭಜನೆಯಿಂದ ಸೂಪರ್‌ನ್ಯೂಮರರಿ ಹಲ್ಲುಗಳು ಬೆಳೆಯುತ್ತವೆ ಎಂದು ಭಾವಿಸಲಾಗಿದೆ.