ಮಗನ ಮದುವೆ ಕಾರ್ಯಕ್ರಮದಲ್ಲಿ ಕಾಂಚೀಪುರಂ ಕೈಮಗ್ಗ ಸೀರೆ, ಶಾಸ್ತ್ರೀಯ ನೃತ್ಯದ ಮೂಲಕ ಗಮನ ಸೆಳೆದ ನೀತಾ ಅಂಬಾನಿ; Video
ಕನ್ನಡ ಸುದ್ದಿ  /  ಜೀವನಶೈಲಿ  /  ಮಗನ ಮದುವೆ ಕಾರ್ಯಕ್ರಮದಲ್ಲಿ ಕಾಂಚೀಪುರಂ ಕೈಮಗ್ಗ ಸೀರೆ, ಶಾಸ್ತ್ರೀಯ ನೃತ್ಯದ ಮೂಲಕ ಗಮನ ಸೆಳೆದ ನೀತಾ ಅಂಬಾನಿ; Video

ಮಗನ ಮದುವೆ ಕಾರ್ಯಕ್ರಮದಲ್ಲಿ ಕಾಂಚೀಪುರಂ ಕೈಮಗ್ಗ ಸೀರೆ, ಶಾಸ್ತ್ರೀಯ ನೃತ್ಯದ ಮೂಲಕ ಗಮನ ಸೆಳೆದ ನೀತಾ ಅಂಬಾನಿ; Video

ಭಾರತದ ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿಯವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ ಈವೆಂಟ್‌ ಗುಜರಾತ್‌ನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಅನಂತ್‌ ತಾಯಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದ್ದರು. ಅಲ್ಲದೇ ಕಾಂಚೀವರಂ ಕೈಮಗ್ಗ ಸೀರೆಯಲ್ಲಿ ಗಮನ ಸೆಳೆದರು.

ಮಗನ ಮದುವೆ ಕಾರ್ಯಕ್ರಮದಲ್ಲಿ ಕಾಂಚೀಪುರಂ ಕೈಮಗ್ಗ ಸೀರೆ, ಶಾಸ್ತ್ರೀಯ ನೃತ್ಯದ ಮೂಲಕ ಗಮನ ಸೆಳೆದ ನೀತಾ ಅಂಬಾನಿ
ಮಗನ ಮದುವೆ ಕಾರ್ಯಕ್ರಮದಲ್ಲಿ ಕಾಂಚೀಪುರಂ ಕೈಮಗ್ಗ ಸೀರೆ, ಶಾಸ್ತ್ರೀಯ ನೃತ್ಯದ ಮೂಲಕ ಗಮನ ಸೆಳೆದ ನೀತಾ ಅಂಬಾನಿ

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಖ್ಯಾತ ಉದ್ಯಮಿ ಮುಕೇಶ್‌ ಅವರ ಪುತ್ರ ಅನಂತ್‌ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮ (ಪ್ರಿ ವೆಡ್ಡಿಂಗ್‌ ಈವೆಂಟ್‌) ಗುಜರಾತ್‌ನ ಜಾಮ್‌ನಗರದಲ್ಲಿ ಬಹಳ ಅದ್ಧೂರಿಯಾಗಿ ನೆರವೇರಿತು. ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಹಲವು ಗಣ್ಯರು ಭಾಗವಹಿಸಿದ್ದರು. ಮಗನ ಮದುವೆಯಲ್ಲಿ ಪಕ್ಕಾ ದೇಸಿಯಾಗಿ ಮಿಂಚಿದ್ದರು ತಾಯಿ ನೀತಾ ಅಂಬಾನಿ. ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನೀತಾ ಕೈ ಮಗ್ಗ ಸೀರೆ ಧರಿಸಿ ಗಮನ ಸೆಳೆದಿದ್ದರೆ, ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ನೀತಾ ಅಂಬಾನಿ ಧರಿಸಿದ್ದ ಕಾಂಚೀಪುರಂ ಕೈಮಗ್ಗ ಸೀರೆಯ ವೈಶಿಷ್ಟ್ಯ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆ ಧರಿಸಿದ್ದರು. ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ ಕೈಮಗ್ಗದ ಸೀರೆಯಾಗಿದೆ. ಕೈಮಗ್ಗ ನೀರೆಯಲ್ಲಿ ಪರಿಣತರಾಗಿರುವ ಕುಲಶಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಿರುವ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿಗಳನ್ನು ಸೀರೆಯಲ್ಲಿ ಕಾಣಬಹುದಾಗಿದೆ.

ಭಾರತೀಯ ಸಂಸ್ಕೃತಿ ಹಾಗೂ ಕರಕುಶಲದ ಬಗ್ಗೆ ನೀತಾ ಅಂಬಾನಿಗಿರುವ ಗೌರವ, ಪ್ರೀತಿಗೆ ಇದು ಸಾಕ್ಷಿಯಾಗಿತ್ತು. ಕೆನೆ ಬಣ್ಣದ ಕೈಮಗ್ಗ ಸೀರೆಯ ಜೊತೆಗೆ ಅದಕ್ಕೊಪ್ಪುವ ಹಸಿರು ಹರಳಿನ ಕಿವಿಯೋಲೆ, ಉದ್ದನೆಯ ಸರ ಹಾಗೂ ಬಳೆಗಳನ್ನು ಧರಿಸಿದ್ದು ನೀತಾ. 

ಇನ್ನೊಂದೆಡೆ ಭಾರತ ಕಲೆ ಹಾಗೂ ಸಂಸ್ಕೃತಿಯ ಮೇಲೆ ವಿಶೇಷ ಒಲವು ಹೊಂದಿರುವ ನೀತಾ ಅಂಬಾನಿ ತಮ್ಮ ಮಗನ ಮದುವೆ ಸಂಭ್ರಮದಲ್ಲಿ ಸ್ಥಳೀಯ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮಾತ್ರವಲ್ಲ, ತಾವು ಕೂಡ ನೃತ್ಯ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

ವಿಶ್ವಂಭರಿ ಸ್ತುತಿ ನೃತ್ಯ ಪ್ರದರ್ಶನದ ಮೂಲಕ ಗಮನ ಸೆಳೆದ ನೀತಾ ಅಂಬಾನಿ

ಅನಂತ್‌ ಹಾಗೂ ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಎಲ್ಲವೂ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಸಂಗಡಿಗರೊಂದಿಗೆ ಶಾಸ್ತ್ರೀಯ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ. ಭವ್ಯ ವೇದಿಕೆಯಲ್ಲಿ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ಸಮಾರಂಭಕ್ಕೆ ವಿಶೇಷ ಕಳೆ ಮೂಡುವಂತೆ ಮಾಡಿದ್ದಾರೆ. ಈ ಹಿಂದೆ ತಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿ ನೀತಾ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಲಾ, ಸಂಸ್ಕೃತಿಯನ್ನು ಆರಾಧಿಸುವ ಕುಟುಂಬಕ್ಕೆ ರಾಧಿಕಾ ತಕ್ಕ ಸೊಸೆಯಾಗಲಿದ್ದಾರೆ. ಯಾಕೆಂದರೆ ಆಕೆನೂ ನೃತ್ಯಪಟು.

ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗಿತ್ತು.

ಅನಂತ್ ಹಾಗೂ ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಮಾಡಲಾಗಿತ್ತು.

ತಂಡದೊಂದಿಗೆ ವೇದಿಕೆ ಮೇಲೆ ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡುತ್ತಾ, ತಾಯಿ ಭಗವತಿ ಹಾಗೂ ಸ್ತ್ರೀ ಶಕ್ತಿಯ ಅದ್ಭುತವನ್ನು ತಿಳಿಸುವಂತಹ ಪ್ರದರ್ಶನವನ್ನು ನೀಡಿದ್ದಾರೆ ನೀತಾ ಅಂಬಾನಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner