ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌-ರಾಧಿಕಾ ಅದ್ದೂರಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ; ಹೀಗಿದೆ ಅಂಬಾನಿ ಮಗನ ಮದುವೆ ಊಟದ ಮೆನು-india news anant radhika lavish pre wedding event in jamnagar gujarat ambani sons wedding dinner menu is as follows rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌-ರಾಧಿಕಾ ಅದ್ದೂರಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ; ಹೀಗಿದೆ ಅಂಬಾನಿ ಮಗನ ಮದುವೆ ಊಟದ ಮೆನು

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌-ರಾಧಿಕಾ ಅದ್ದೂರಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ; ಹೀಗಿದೆ ಅಂಬಾನಿ ಮಗನ ಮದುವೆ ಊಟದ ಮೆನು

ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಚ್‌ ಅವರ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತಿಥಿಯಗಳಿಗೆ 2500 ಕ್ಕೂ ಅಧಿಕ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಮೆನುವಿನಿಂದ ಬಾಣಸಿಗರವರೆಗೆ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದ ಫುಡ್‌ ಮೆನು ವಿವರ ಇಲ್ಲಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌-ರಾಧಿಕಾ ಅದ್ದೂರಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ; ಹೀಗಿದೆ ಅಂಬಾನಿ ಮಗನ ಮದುವೆ ಊಟದ ಮೆನು
ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್‌-ರಾಧಿಕಾ ಅದ್ದೂರಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ; ಹೀಗಿದೆ ಅಂಬಾನಿ ಮಗನ ಮದುವೆ ಊಟದ ಮೆನು

ಭಾರತದ ಖ್ಯಾತಿ ಉದ್ಯಮಿ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಅವರ ವಿವಾಹ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ಅನಂತ್‌ ಹಾಗೂ ರಾಧಿಕಾ ಮರ್ಜೆಂಟ್‌ ಗುಜರಾತ್‌ನ ಜಾಮ್‌ ನಗರದಲ್ಲಿ ತಮ್ಮ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಮಾಡಿಕೊಳ್ಳಲಿದ್ದಾರೆ. ಮಾರ್ಚ್‌ 1 ರಿಂದ 3ರವರೆಗೆ ಈ ಇವರ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳು ನಡೆಯಲಿದೆ. 3 ದಿನಗಳ ಕಾಲ ನಡೆಯಲಿರುವ ಈ ಅದ್ದೂರಿ ಕಾರ್ಯಕ್ರಮಕ್ಕೆ ದೇಶ-ವಿದೇಶಗಳ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಮಾರ್ಕ್‌ ಜುಕರ್‌ಬರ್ಗ್‌, ಸುಂದರ್‌ ಪಿಚೈ, ಬಿಲ್‌ಗೇಟ್ಸ್‌. ಸಚಿನ್‌ ತೆಂಡ್ಕೂಲರ್‌, ಎಂಎಸ್‌ ಧೋನಿ, ಸಲ್ಮಾನ್‌ ಖಾನ್‌ ಸೇರಿದಂತೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ರಂಗ ಗಣ್ಯರು ಭಾಗವಹಿಸಲಿದ್ದಾರೆ.

ಮೂರು ದಿನಗಳ ಕಾಲದ ಈ ಕಾರ್ಯಕ್ರಮದಲ್ಲಿ ಅತಿಥಿಗಳಿಗಾಗಿ ವಿವಿಧ ರೀತಿಯ ಚಟುವಟಿಕೆಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿಗಳಿಗಾಗಿ ಅಂಬಾನಿ ಹಾಗೂ ಮರ್ಚೆಂಟ್‌ ಕುಟುಂಬದವರು ವಿಶೇಷ ಫುಡ್‌ ಮೆನು ರೆಡಿ ಮಾಡಿದ್ದಾರೆ.

ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್‌ ಮೆನು ಹೀಗಿದೆ

ಎಬಿಪಿ ಲೈವ್‌ನ ವರದಿಯ ಪ್ರಕಾರ ವಿಶೇಷ ಇಂದೋರಿ ಮೆನು ತಯಾರಿಸಲು 25 ಬಾಣಸಿಗರ ತಂಡ ಇಂದೋರ್‌ನ ಜಾಮ್‌ನಗರಕ್ಕೆ ಬರಲಿದೆ. ಥಾಯ್‌, ಮೆಕ್ಸಿಕನ್‌, ಜಪಾನೀಸ್‌, ಪಾರ್ಸಿ ಹಾಗೂ ಪ್ಯಾನ್‌ ಏಷ್ಯನ್‌ ಪಾಕಪದ್ಧತಿಗಳನ್ನು ಈ ಮೆನು ಒಳಗೊಂಡಿರಲಿದೆ.

ಮೂರು ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 2500 ಖಾದ್ಯಗಳು ಇರಲಿದ್ದು, ಮೂರು ದಿನಗಳು ಬೇರೆ ಬೇರೆ ಮೆನು ಇರಲಿದೆ.

ಬೆಳಗಿನ ಉಪಾಹಾರಕ್ಕೆ - 70ಕ್ಕೂ ಹೆಚ್ಚು ತಿನಿಸುಗಳು

ಮಧ್ಯಾಹ್ನದ ಊಟಕ್ಕೆ 250ಕ್ಕೂ ಹೆಚ್ಚು ಖಾದ್ಯಗಳು

ರಾತ್ರಿ ಊಟಕ್ಕೆ - 250ಕ್ಕೂ ಹೆಚ್ಚು ಭಕ್ಷ್ಯಗಳು

ಇವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಸ್ಪೆಷಲ್‌ ಎಂದರೆ ಮೆನುವಿನಲ್ಲಿ ಮಿಡ್‌ನೈಟ್‌ ಮೆನು ಇರಲಿದೆ. ಇದು 12 ರಿಂದ 4 ಗಂಟೆವರೆಗೆ ಲಭ್ಯವಿರಲಿದೆ.

ಇಂದೋರಿ ಸರಾಫಾ, ಕೌಂಟ್‌ ಜಿಲೇಬಿ, ಪೋಹಾ, ಭುಟ್ಟೆ ಕಿ ಕೀಸ್‌, ಖೋಪ್ರಾ ಪ್ಯಾಟಿಗಳಂತಹ ಇಂದೋರಿ ಖಾದ್ಯಗಳು ಈ ಲಿಸ್ಟ್‌ನಲ್ಲಿ ಇರಲಿವೆ.

ಜಾಮ್‌ನಗರದಲ್ಲೇ ಕಾರ್ಯಕ್ರಮ ನಡೆಯುತ್ತಿರುವುದೇಕೆ?

ಅನಂತ್‌ ಹಾಗೂ ರಾಧಿಕಾ ಜಾಮ್‌ನಗರದಲ್ಲಿ ತಮ್ಮ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮ ಮಾಡಿಕೊಳ್ಳುತ್ತಿರುವುದೇಕೆ ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ಸಿಎನ್‌ಬಿಸಿಯೊಂದಿಗೆ ಮಾತನಾಡಿದ ಅನಂತ್‌ ನನ್ನ ಹೃದಯ ಜಾಮ್‌ ನಗರದಲ್ಲಿದೆ. ನಾನು ಈ ಜಾಗದಲ್ಲಿ ನನ್ನ ಬಾಲ್ಯದ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ನನ್ನ ಪೋಷಕರು ಹಾಗೂ ಅಜ್ಜಿ ಮದುವೆ ಕಾರ್ಯಕ್ರಮಕ್ಕೆ ಜಾಮ್‌ನಗರವೇ ಸೂಕ್ತ ಎಂದು ಅಂತಿಮವಾಗಿ ಆ ಸ್ಥಳವನ್ನೇ ಆಯ್ಕೆ ಮಾಡಲು ಹೇಳಿದರುʼ ಎಂದಿದ್ದಾರೆ. ಅದಲ್ಲದೇ ಇಲ್ಲಿ ಅನಂತ್‌ ಅವರ ಫ್ಯಾಷನ್‌ ಪ್ರಾಜೆಕ್ಟ್‌ ವಂತರಾ ಕೂಡ ಇದ್ದು, ತಮ್ಮ ಸಹೋದ್ಯೋಗಿಗಳೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಜೂನಿಯರ್‌ ಅಂಬಾನಿ ಆಸೆಯೂ ಇರಬಹುದು.

ರಾಧಿಕಾ ಮರ್ಚೆಂಟ್‌ ಹಾಗೂ ಅನಂತ್‌ ಅಂಬಾನಿ ಬಾಲ್ಯ ಸ್ನೇಹಿತರು. ರಾಧಿಕಾ ಕೈಗಾರಿಕೋದ್ಯಮಿ, ಸಿಇಒ, ಎನ್‌ಕೋರ್ ಹೆಲ್ತ್‌ಕೇರ್‌ನ ಉಪಾಧ್ಯಕ್ಷ ವಿರೇನ್ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ತನ್ನ ತಂದೆಯ ಕಂಪನಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣಿ ಕಲ್ಯಾಣ, ಆರ್ಥಿಕ ಸಬಲೀಕರಣ, ಮಾನವ ಹಕ್ಕುಗಳು, ಇತರವುಗಳಿಗೆ ಸಂಬಂಧಿಸಿದ ವಿವಿಧ ಲೋಕೋಪಕಾರಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ಅತಿಥಿಗಳು ಭಾಗವಹಿಸಲಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)