Passenger Rights: ನೀವೇನಾದರೂ ಭಾರತೀಯ ರೈಲ್ವೆ ಪ್ರಯಾಣಿಕರಾಗಿದ್ದರೆ ನಿಮಗಿರುವ 5 ಹಕ್ಕುಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Passenger Rights: ನೀವೇನಾದರೂ ಭಾರತೀಯ ರೈಲ್ವೆ ಪ್ರಯಾಣಿಕರಾಗಿದ್ದರೆ ನಿಮಗಿರುವ 5 ಹಕ್ಕುಗಳಿವು

Passenger Rights: ನೀವೇನಾದರೂ ಭಾರತೀಯ ರೈಲ್ವೆ ಪ್ರಯಾಣಿಕರಾಗಿದ್ದರೆ ನಿಮಗಿರುವ 5 ಹಕ್ಕುಗಳಿವು

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನೀವಾಗಿದ್ದರೆ ನಿಮಗಾಗಿ ರೈಲ್ವೆ ಇಲಾಖೆ ನೀಡಿರುವ ಪ್ರಮುಖ 5 ಹಕ್ಕುಗಳನ್ನು ತಿಳಿದುಕೊಂಡಿರಬೇಕು.

ರೈಲು ಪ್ರಯಾಣಿಕರಿಗೆ ನೀಡಲಾಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು.
ರೈಲು ಪ್ರಯಾಣಿಕರಿಗೆ ನೀಡಲಾಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು.

ನೀವು ದೂರದ ಊರಗಳಿಗೆ ಕಡಿಮೆ ದರದಲ್ಲಿ ಪ್ರಯಾಣಿಸಲು ಅತ್ಯುತ್ತಮ ಸೇವೆ ಎಂದರೆ ಅದು ರೈಲು ಸೇವೆ ಮಾತ್ರ. ಪ್ರತಿಯೊಂದು ಸಾರಿಗೆಯಂತೆಯೇ ರೈಲ್ವೆ ಕೂಡ ನಿಮಯ, ನಿಬಂಧನೆಗಳನ್ನು ಹೊಂದಿದ್ದು, ಪ್ರಯಾಣಿಕರಿಗೂ ಕೆಲವು ಹಕ್ಕುಗಳನ್ನು ನೀಡಿದೆ ಅವು ಯಾವುವು ಅನ್ನೋದನ್ನ ತಿಳಿಯೋಣ.

1. ಎರಡು ನಿಲುಗಡೆ ನಿಯಮ

ಪ್ರಯಾಣಿಕರು ನಿರ್ದಿಷ್ಟ ನಿಲ್ದಾಣದಲ್ಲಿ ರೈಲು ತಪ್ಪಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಪ್ರಯಾಣಿಕರಿಗೆ ಇಂಥ ಸಂದರ್ಭದಲ್ಲಿ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ರೈಲ್ವೆ ಇಲಾಖೆ ಎರಡು ನಿಲುಗಡೆಗಳ ನಿಮಯವನ್ನು ರೂಪಿಸಿದೆ. ಅಂದರೆ ರೈಲು ನಿಗದಿತ ಸ್ಟೇಷನ್‌ನಿಂದ ಹೊರಟ್ಟಿದ್ದರೆ ಮುಂದಿನ ಎರಡು ನಿಲ್ದಾಣಗಳ ವರೆಗೆ ಆ ಸೀಟನ್ನು ಬೇರೊಬ್ಬ ಪ್ರಯಾಣಿಕನಿಗೆ ವರ್ಗಾಯಿಸುವುದಿಲ್ಲ. ಕನಿಷ್ಠ ಒಂದು ಗಂಟೆ ಅಥವಾ ರೈಲು ಒಟ್ಟಾರೆ ಪ್ರಯಾಣದ ಮುಂದಿನ 2 ನಿಲ್ದಾಣಗಳವರೆಗೆ ಸೀಟ್ ಖಾಲಿ ಇರುತ್ತೆ. ಆಟೋ, ಕ್ಯಾಬ್ ಹೀಗೆ ಪ್ರಯಾಣಿಕರು ಸರ್ಕಸ್ ಮಾಡಿ ಮುಂದಿನ ನಿಲ್ದಾಣಗಳಲ್ಲಿ ರೈಲನ್ನು ಹತ್ತಿಕೊಂಡು ಹೋಗಲು ಇದೊಂದು ಉತ್ತಮ ಅವಕಾಶವಾಗಿದೆ.

2. ತಾತ್ಕಾಲ್ ರಿಫಂಡ್

ಬಹುತೇಕರಿಗೆ ಈ ತಾತ್ಕಾಲ್ ರಿಫಂಡ್ ಬಗ್ಗೆ ತಿಳಿದಿರುವುದಿಲ್ಲ. ತಾತ್ಕಾಲ್ ಟಿಕೆಟ್‌ನಿಂದಲೂ ಹಣ ಮರುಪಾವತಿಯನ್ನು ಪಡೆಯಬಹುದು. ರೈಲು 3 ಗಂಟೆಗಳ ಕಾಲ ವಿಳಂಬವಾಗಿದ್ದರೆ ಅಥವಾ ಮಾರ್ಗ ಬದಲಾಯಿಸಿದ್ದರೆ ನೀವು ತಾತ್ಕಾಲ್ ಟಿಕೆಟ್‌ನ ಹಣವನ್ನು ವಾಪಸ್ ಪಡೆಯಬಹುದು.

3. ಇತರೆ ಪ್ರಕರಣಗಳಲ್ಲಿ ಮರುಪಾವತಿ

ರೈಲು ನಿಗದಿತ ಪ್ರಯಾಣವನ್ನು ಪೂರ್ಣಗೊಳಿಸದಿದ್ರೆ, ರೈಲ್ವೆ ಇಲಾಖೆ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿದ್ದಾಗ ನೀವು ಬುಕ್ಕಿಂಗ್ ಮಾಡಿದ ಟಿಕೆಟ್‌ನ ಸಂಪೂರ್ಣ ಹಣವನ್ನು ವಾಪಸ್ ಪಡೆಯುವ ಹಕ್ಕು ನಿಮಗಿದೆ. ಒಂದು ವೇಳೆ ರೈಲ್ವೆ ಇಲಾಖೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದಾಗ ಆ ಸೇವೆಯನ್ನು ಬಳಸಿಕೊಳ್ಳಲು ನಿಮಗೆ ಆಸಕ್ತಿ ಇಲ್ಲದಿದ್ದರೆ ನೀವು ಟಿಕೆಟ್ ವಾಪಸ್ ನೀಡಿದರೆ ನೀವು ಎಲ್ಲಿಯವರೆಗೆ ಪ್ರಯಾಣಿ ಮಾಡಿರುತ್ತೀರೋ ಅಷ್ಟು ಹಣವನ್ನು ಹೊರತುಪಡಿಸಿ ಉಳಿದ ಹಣವನ್ನು ವಾಪಸ್ ಪಡೆಯಬಹುದು.

4. ರಾತ್ರಿ 10ರ ನಂತರ ಡಿಸ್ಟರ್ಬ್‌ ಮಾಡುವಂತಿಲ್ಲ

ರಾತ್ರಿ 10 ಗಂಟೆಯ ನಂತರ ರೈಲಿನಲ್ಲಿರುವ ಯಾವುದೇ ಪ್ರಯಾಣಿಕರನ್ನು ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್-ಟಿಟಿಇ ಡಿಸ್ಟರ್ಬ್ ಮಾಡುವಂತಿಲ್ಲ. ಅಂದರೆ ಪ್ರಯಾಣಿಕರ ಟಿಕೆಟ್ ಪರಿಶೀಲಿಸುವಂತಿಲ್ಲ. ಇತರೆ ಯಾವುದೇ ರೈಲ್ವೆ ಸಿಬ್ಬಂದಿ ರಾತ್ರಿ 10 ನಂತರ ಪ್ರಯಾಣಿಕರಿಗೆ ತೊಂದರೆ ನೀಡುವಂತಿಲ್ಲ. ಹೀಗಾಗಿ ರಾತ್ರಿ 10 ರೊಳಗೆ ಊಟ, ತಿಂಡಿ, ಪಾನೀಯಗಳ ಪೂರೈಕೆನ್ನು ಮುಗಿಸಿರಬೇಕು.

5. ವೈದ್ಯಕೀಯ ಸಹಾಯ

ರೈಲು ಪ್ರಯಾಣದ ವೇಳೆ ನೀವಾದರೂ ಅಸ್ವಸ್ಥರಾದರೆ ಟಿಕೆಟ್ ಕಲೆಕ್ಟರ್, ರೈಲು ಸೂಪರಿಂಟೆಂಡೆಂಟ್ ಹಾಗೂ ಇತರೆ ಯಾವುದೇ ರೈಲ್ವೆ ಸಿಬ್ಬಂದಿಯಿಂದ ವೈದ್ಯಕೀಯ ನೆರವು ಕೇಳಬಹುದು. ಪ್ರಥಮ ಚಿಕಿತ್ಸೆ ನೀಡುವುದು ಅಗತ್ಯಬಿದ್ದರೆ ವೈದ್ಯಕೀಯ ನೆರವು ಒದಗಿಸುವುದು ರೈಲ್ವೆ ಸಿಬ್ಬಂದಿಯ ಕರ್ತವ್ಯವಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner