Property Documents: ಆಸ್ತಿ ಮಾಲೀಕತ್ವ ಹೊಂದಿರುವವರು ಹೊಂದಿರಬೇಕಾದ 5 ದಾಖಲೆ ಪತ್ರಗಳು, ಮನೆ ನಿವೇಶನ ಖರೀದಿದಾರರಿಗೆ ಮಾರ್ಗದರ್ಶಿ
ಕನ್ನಡ ಸುದ್ದಿ  /  ಜೀವನಶೈಲಿ  /  Property Documents: ಆಸ್ತಿ ಮಾಲೀಕತ್ವ ಹೊಂದಿರುವವರು ಹೊಂದಿರಬೇಕಾದ 5 ದಾಖಲೆ ಪತ್ರಗಳು, ಮನೆ ನಿವೇಶನ ಖರೀದಿದಾರರಿಗೆ ಮಾರ್ಗದರ್ಶಿ

Property Documents: ಆಸ್ತಿ ಮಾಲೀಕತ್ವ ಹೊಂದಿರುವವರು ಹೊಂದಿರಬೇಕಾದ 5 ದಾಖಲೆ ಪತ್ರಗಳು, ಮನೆ ನಿವೇಶನ ಖರೀದಿದಾರರಿಗೆ ಮಾರ್ಗದರ್ಶಿ

Legal Documents to Own Property: ಕರ್ನಾಟಕದಲ್ಲಿ ಆಸ್ತಿ ನೋಂದಣಿ ಈಗ ಆನ್‌ಲೈನ್‌ ಆಗಿದೆ. Kaveri 2.0 ಬಂದಿರುವುದರಿಂದ ಆನ್‌ಲೈನ್‌ ಮೂಲಕ ಆಸ್ತಿ ನೋಂದಣಿ ಸುಲಭವಾಗಿದೆ. ಆಸ್ತಿ ಹೊಂದಿರುವವರು ಅಥವಾ ಮುಂದಿನ ದಿನಗಳಲ್ಲಿ ಆಸ್ತಿ ಖರೀದಿಸಲು ಬಯಸುವವರು ತಿಳಿದಿರಬೇಕಾದ ಐದು ಪ್ರಮುಖ ದಾಖಲೆಪತ್ರಗಳ ಮಾಹಿತಿ ಇಲ್ಲಿ ನೀಡಲಾಗಿದೆ.

Property Documents: ಆಸ್ತಿ ಮಾಲೀಕತ್ವ ಹೊಂದಿರುವವರು ಹೊಂದಿರಬೇಕಾದ 5 ದಾಖಲೆ ಪತ್ರಗಳು, ಮನೆ ನಿವೇಶನ ಖರೀದಿದಾರರಿಗೆ ಮಾರ್ಗದರ್ಶಿ
Property Documents: ಆಸ್ತಿ ಮಾಲೀಕತ್ವ ಹೊಂದಿರುವವರು ಹೊಂದಿರಬೇಕಾದ 5 ದಾಖಲೆ ಪತ್ರಗಳು, ಮನೆ ನಿವೇಶನ ಖರೀದಿದಾರರಿಗೆ ಮಾರ್ಗದರ್ಶಿ

ಭಾರತದಲ್ಲಿ ಆಸ್ತಿ ಮಾಲೀಕರು ಕೆಲವೊಂದು ಪ್ರಾಪರ್ಟಿ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಂದರೆ ಆಸ್ತಿಯ ಸೇಲ್‌ಡೀಡ್‌, ಜನರಲ್‌ ಪವರ್‌ ಫ್‌ ಅಟಾರ್ನಿ, ಎನ್‌ಒಸಿ, ಸೇಲ್‌ ಅಗ್ರಿಮೆಂಟ್‌, ಅಲೋಟ್‌ಮೆಂಟ್‌ ಲೆಟರ್‌, ಪೊಸೆಷನ್‌ ಲೆಟರ್‌, ಖಾತಾ ಪ್ರತ್ರ, ಮ್ಯೂಟೇಷನ್‌, ಬಿಲ್ಡಿಂಗ್‌ ಪ್ಲಾನ್‌ ಪ್ರತಿ, ಪಾವತಿ ರಸೀದಿಗಳು, ಆಸ್ತಿ ತೆರಿಗೆ ಸರ್ಟಿಫಿಕೇಟ್‌, ಮನೆ ನಿರ್ಮಾಣ ಪೂರ್ಣಗೊಂಡ ಸರ್ಟಿಫಿಕೇಟ್‌, ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಇತ್ಯಾದಿ ಹಲವು ದಾಖಲೆಪತ್ರಗಳ ಅಗತ್ಯವಿರುತ್ತದೆ. ಭೂಮಿ ಅಥವಾ ಕಟ್ಟಡ ಮಾಲೀಕತ್ವ ಪಡೆಯುವ ಸಂದರ್ಭದಲ್ಲಿ ಹತ್ತು ಹಲವು ದಾಖಲೆಪತ್ರಗಳನ್ನು ಮಾರಾಟಗಾರರು ಮತ್ತು ಖರೀದಿದಾರರು ಹೊಂದಿರಬೇಕಾಗುತ್ತದೆ. ಅವುಗಳಲ್ಲಿ ಐದು ಪ್ರಮುಖ ದಾಖಲೆಪತ್ರಗಳ ಕುರಿತು ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಮೂಲಪತ್ರ ಅಥವಾ ಸೇಲ್‌ ಡೀಡ್‌

ಆಸ್ತಿಯ ಮಾಲೀಕತ್ವವನ್ನು ನಿರ್ಧರಿಸುವಲ್ಲಿ ಮೂಲಪತ್ರವು ಮುಖ್ಯ ದಾಖಲೆಯಾಗಿರುತ್ತದೆ. ಇದು ಭೂಮಿಯ ಮಾಲೀಕತ್ವದ ಬಗ್ಗೆ ಇರುವ ಸರಪಳಿಯನ್ನು ಗುರುತು ಹಿಡಿಯುತ್ತದೆ ಮತ್ತು ನಿವೇಶನದ ಚರಿತ್ರೆಗೆ ಸಂಬಂಧಿಸಿದ ದಾಖಲೆಯನ್ನು ಒದಗಿಸುತ್ತದೆ. ಇದು ಕಡ್ಡಾಯವಾಗಿ ಹೊಂದಿರಬೇಕಾದ ಡಾಕ್ಯುಮೆಂಟ್‌.

ಪವರ್‌ ಆಫ್‌ ಅಟಾರ್ನಿ

ಇದು ಇನ್ನೊಂದು ಪ್ರಮುಖ ಡಾಕ್ಯುಮೆಂಟ್‌. ಜಮೀನು ಮಾರಾಟ ಮಾಡುವವರು ಮಾಲೀಕರಲ್ಲದಿದ್ದ ಪಕ್ಷದಲ್ಲಿ, ಅವರು ಪವರ್‌ ಆಫ್‌ ಅಟಾರ್ನಿ ಹೊಂದಿರಬೇಕು. ಹಾಗೂ ಅದರಲ್ಲಿ ಅವರಿಗೆ ನಿವೇಶನ ಮಾರಾಟ ಮಾಡಲು ಅಧಿಕಾರ ನೀಡಿರಬೇಕು. ಯಾವುದೇ ಮಾರಾಟಗಾರರಿಂದ ಜಮೀನನ್ನು ಖರೀದಿಸಬೇಕೆಂದಿದ್ದಲ್ಲಿ, ಯಾವಾಗಲೂ ಪವರ್‌ ಆಫ್‌ ಅಟಾರ್ನಿಯನ್ನು ಪರಿಶೀಲಿಸಬೇಕಾಗುತ್ತದೆ. ಆಸ್ತಿ ಖರೀದಿ ಸಮಯದಲ್ಲಿ ಈ ದಾಖಲೆಪತ್ರ ಪಡೆಯಲು ಮರೆಯಬೇಡಿ.

ಕ್ರಯದ ಕರಾರು ಪತ್ರ

ಪ್ರಾಪರ್ಟಿ ಮಾರಾಟಗಾರರು ಖರೀದಿದಾರರಿಗೆ ಭೂಮಾಲೀಕತ್ವದ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಕ್ರಯದ ಕರಾರು ಪತ್ರವು ದಾಖಲಿಸುತ್ತದೆ. ಅದನ್ನು ನೀವು ಉಪ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಮೌಲ್ಯೀಕರಣ ಮಾಡಬೇಕಾಗುತ್ತದೆ.

ಋಣಭಾರ ದೃಢೀಕರಣ ಪ್ರಮಾಣ ಪತ್ರ

ಆಸ್ತಿ ನೋಂದಣಿ ಸಮಯದಲ್ಲಿ ಇಸಿ, ಒಸಿ ಇತ್ಯಾದಿ ಎರಡಕ್ಷರದ ಹಲವು ಪದಗಳನ್ನು ನೀವು ಕೇಳಿರಬಹುದು. ಇಲ್ಲಿ ಇಸಿ ಎಂದರೆ ಎನ್‌ಕ್ಯುಂಬೆರೆನ್ಸ್‌ ಸರ್ಟಿಫಿಕೇಟ್.‌ ಇದಕ್ಕೆ ಸಂಕ್ಷಿಪ್ತವಾಗಿ ಇಸಿ ಎಂದು ಕರೆಯಲಾಗುತ್ತದೆ. ಋುಣಭಾರ ದೃಢೀಕರಣ ಪ್ರಮಾಣಪತ್ರದಲ್ಲಿ ಭೂಮಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ದಾಖಲಿಸಲಾಗಿರುತ್ತದೆ. ನೀವು ಖರೀದಿಸುತ್ತಿರುವ ಭೂಮಿಯು ಯಾವುದೇ ಹಣ ಸಂಬಂಧಿತ ಅಥವಾ ಕಾನೂನುಬದ್ಧ ಬಂಧನಗಳಿಂದ ಮುಕ್ತವಾಗಿದೆ ಎನ್ನುವುದಕ್ಕೆ ಇದು ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಋಣಭಾರ ಪತ್ರ ಪಡೆಯಲು ಮರೆಯಬೇಡಿ.

ಖಾತೆ ಪ್ರಮಾಣ ಪತ್ರ

ಕಟ್ಟಡವನ್ನು ನಿರ್ಮಿಸಲು ಬೇಕಾದ ಪರವಾನಗಿಯನ್ನು ಪಡೆಯಲು ಖಾತಾ ಪ್ರಮಾಣ ಪತ್ರವು ಬೇಕಾಗುತ್ತದೆ. ಇದು ಆಸ್ತಿಯಲ್ಲಿನ ಸ್ಥಳದ ಗಾತ್ರ, ನಿರ್ಮಿಸಲಾಗಿರುವ ವಿಸ್ತೀರ್ಣ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ ಮತ್ತು ಆಸ್ತಿ ತೆರಿಗೆ ಪಾವತಿಸಲು ಹಾಗೂ ಕಟ್ಟಡ ಪರವಾನಗಿ ಪಡೆಯಲು ಇದು ಅತ್ಯಗತ್ಯವಾಗಿರುತ್ತದೆ.

ಹೀಗೆ ನೀವು ನಿವೇಶನ ಖರೀದಿಸುವುದಾದರೆ ಅಥವಾ ಫ್ಲಾಟ್‌ ಖರೀದಿಸುವುದಾದರೆ ಅದಕ್ಕೆ ಸಂಬಂಧಪಟ್ಟಂತೆ ಯಾವೆಲ್ಲ ಪತ್ರಗಳು, ದಾಖಲೆಗಳು ಅಗತ್ಯವಿರುತ್ತದೆ ಎಂದು ತಿಳಿದುಕೊಳ್ಳಿ. ಸೇಲ್‌ಡೀಡ್‌, ಜನರಲ್‌ ಪವರ್‌ ಫ್‌ ಅಟಾರ್ನಿ, ಎನ್‌ಒಸಿ, ಸೇಲ್‌ ಅಗ್ರಿಮೆಂಟ್‌, ಅಲೋಟ್‌ಮೆಂಟ್‌ ಲೆಟರ್‌, ಪೊಸೆಷನ್‌ ಲೆಟರ್‌, ಖಾತಾ ಪ್ರತ್ರ, ಮ್ಯೂಟೇಷನ್‌, ಬಿಲ್ಡಿಂಗ್‌ ಪ್ಲಾನ್‌ ಪ್ರತಿ, ಪಾವತಿ ರಸೀದಿಗಳು, ಆಸ್ತಿ ತೆರಿಗೆ ಸರ್ಟಿಫಿಕೇಟ್‌, ಮನೆ ನಿರ್ಮಾಣ ಪೂರ್ಣಗೊಂಡ ಸರ್ಟಿಫಿಕೇಟ್‌, ಆಕ್ಯುಪೆನ್ಸಿ ಸರ್ಟಿಫಿಕೇಟ್‌ ಇತ್ಯಾದಿಗಳಲ್ಲಿ ನಿಮ್ಮ ಪ್ರಾಪರ್ಟಿಗೆ ಅಗತ್ಯವಿರುವ ದಾಖಲೆ ಯಾವುದೆಂದು ತಿಳಿದುಕೊಂಡು ಪಡೆಯರಿ. ಈ ಕುರಿತು ವಕೀಲರಿಂದ ಅಥವಾ ಆಸ್ತಿ ವ್ಯವಹಾರ ತಿಳಿದಿರುವವರಿಂದ ಮಾಹಿತಿ ಪಡೆಯಿರಿ.

Whats_app_banner