ಛೋಲೆ ಭಟೂರೆ ಐಸ್‌ಕ್ರೀಮ್; ನೀವು ಕಲ್ಪಿಸಿಯೂ ಇರದ ಡಿಶ್‌ ವೈರಲ್, ಇದನ್ನು ತಿನ್ನೋರು ಯಾರು ಎಂದ ನೆಟ್ಟಿಗರು -Video-india news video of chole bhature ice cream recipe viral in social media bizarre food combination trending internet jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಛೋಲೆ ಭಟೂರೆ ಐಸ್‌ಕ್ರೀಮ್; ನೀವು ಕಲ್ಪಿಸಿಯೂ ಇರದ ಡಿಶ್‌ ವೈರಲ್, ಇದನ್ನು ತಿನ್ನೋರು ಯಾರು ಎಂದ ನೆಟ್ಟಿಗರು -Video

ಛೋಲೆ ಭಟೂರೆ ಐಸ್‌ಕ್ರೀಮ್; ನೀವು ಕಲ್ಪಿಸಿಯೂ ಇರದ ಡಿಶ್‌ ವೈರಲ್, ಇದನ್ನು ತಿನ್ನೋರು ಯಾರು ಎಂದ ನೆಟ್ಟಿಗರು -Video

ಕೆಲವು ಸಂದರ್ಭಗಳಲ್ಲಿ ಆಹಾರವು ತಿನ್ನುವ ಉದ್ದೇಶದ ಬದಲಾಗಿ ಪ್ರದರ್ಶನ ಅಥವಾ ಪ್ರಚಾರದ ಉದ್ದೇಶಕ್ಕಾಗಿ ಮಾತ್ರ ತಯಾರಾಗುತ್ತವೆ. ತಿನ್ನಲು ಸಾಧ್ಯವಿಲ್ಲದಂಥಾ ಕಾಂಬಿನೇಷನ್‌ನ ಆಹಾರ ತಯಾರಿಸುವವರು ಇದ್ದಾರೆ. ಇದಕ್ಕೆ ಈ ಛೋಲೆ ಭಟೂರೆ ಐಸ್‌ಕ್ರೀಮ್ ಒಂದು ಉದಾಹರಣೆ.

ಛೋಲೆ ಭಟೂರೆ ಐಸ್‌ಕ್ರೀಮ್; ನೀವು ಕಲ್ಪಿಸಿಯೂ ಇರದ ಡಿಶ್‌ ವೈರಲ್
ಛೋಲೆ ಭಟೂರೆ ಐಸ್‌ಕ್ರೀಮ್; ನೀವು ಕಲ್ಪಿಸಿಯೂ ಇರದ ಡಿಶ್‌ ವೈರಲ್ (X)

ಸೋಷಿಯಲ್‌ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್‌ ಆಗುತ್ತವೆ. ಅದರಲ್ಲೂ ಆಹಾರದ ವಿಚಾರವಾಗಿ ಜನರ ಆಸಕ್ತಿಗೆ ಅನುಸಾರವಾಗ ಭಿನ್ನ ವಿಭಿನ್ನ ಆಹಾರ, ರೆಸಿಪಿಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಇದರಲ್ಲಿ ಕೆಲವೊಂದು ರೆಸಿಪಿಗಳು ಜನರಿಗೆ ಇಷ್ಟವಾಗುತ್ತವೆ. ಇನ್ನೂ ಕೆಲವು ಡಿಶ್‌ಗಳು ಜನರಿಂದ ಭಾರಿ ಟೀಕೆಗಳಿಗೆ ಒಳಗಾಗುತ್ತವೆ. ಹೀಗೂ ಚಿತ್ರವಿಚಿತ್ರವಾಗಿ ಅಡುಗೆ ಮಾಡ್ತಾರಾ ಎಂಬಂತೆ ಜನರು ಮಾತನಾಡಿಕೊಳ್ತಾರೆ. ಇಲ್ಲೊಂದು ರೆಸಪಿ ಕೂಡಾ ಇದೇ ರೀತಿ ಜನರ ಟೀಕೆಗೆ ಕಾರಣವಾಗಿದೆ. ಅದು ಯಾವ ರೆಸಿಪಿ ಎಂಬುದನ್ನು ನೋಡೋಣ ಬನ್ನಿ.

ನೀವು ಛೋಲೆ ಭಟೂರೆ ತಿಂದಿರಬಹುದು. ಉತ್ತರ ಭಾರತದ ಜನಪ್ರಿಯ ಡಿಶ್‌ಗೆ ಈ ಹೆಸರು. ಪೂರಿಗೆ ಕಡಲೆಯ ಬಾಜಿಯ ಕಾಂಬಿನೇಷನ್‌ಗೆ ಛೋಲೆ ಭಟೂರೆ ಎಂದು ಹೇಳುತ್ತಾರೆ. ಇದನ್ನು ಒಂದೊಂದು ಭಾಗದಲ್ಲಿ ಭಿನ್ನವಾಗಿಯೂ ಮಾಡುವವರಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಛೋಲೆ ಭಟೂರೆ ಐಸ್ ಕ್ರೀಮ್ ತಯಾರಿಸಿದ್ದಾನೆ. ಊಹೆಗೂ ಬಾರದ ರೀತಿಯ ಈ ಆಹಾರಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಚ್ಚರಿಯ ಕಾಂಬಿನೇಷನ್‌ನ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಮೂರು ತಿಂಗಳು ಹಳೆಯ ವಿಡಿಯೋ ಜನರಲ್ಲಿ ಅಚ್ಚರಿ ಮೂಡಿಸಿದೆ. ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋ ನೋಡಿ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ತಿನ್ನುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಅಂತರ್ಜಾಲದಲ್ಲಿ ವಿಲಕ್ಷಣ ಆಹಾರಗಳು ವೈರಲ್‌ ಆಗುವುದು ಹೊಸದೇನಲ್ಲ. ಈ ಹಿಂದೆಯೂ ವಿಚಿತ್ರ ಕಾಂಬಿನೇಷನ್‌ಗಳ ರೆಸಿಪಿಗಳು ವೈರಲ್‌ ಆಗಿವೆ. ಇದಕ್ಕೆ ಹೊಸ ಸೇರ್ಪಡೆಯೇ ಛೋಲೆ ಭಟೂರೆ. ವ್ಯಕ್ತಿಯೊಬ್ಬರು ಉತ್ತರ ಭಾರತೀಯರ ನೆಚ್ಚಿನ ಆಹಾರ ಛೋಲೆ ಭಟೂರೆಯಿಂದ ಐಸ್‌ಕ್ರೀಮ್ ಮಾಡಿದ್ದಾರೆ. ಯೋಚಿಸುವುದಕ್ಕೆ ವಿಚಿತ್ರವಾಗಿರುವ ಈ ವಿಡಿಯೋವನ್ನು ಮಯೂರ್ ಎಂಬ ಬಳಕೆದಾರ Xನಲ್ಲಿ ಹಂಚಿಕೊಂಡಿದ್ದಾರೆ.‌ ಇದನ್ನು ನೋಡಿದ ಜನರು ಇದು ಆಹಾರದ ವ್ಯರ್ಥ ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ

ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಯು ಭಟೂರೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಐಸ್ ಕ್ರೀಂ ಮಿಶ್ರಣ ಮಾಡಿ ಸರ್ವ್‌ ಮಾಡುತ್ತಾನೆ. ಈ ವಿಡಿಯೋ ನೋಡಿದ ಜನರು ಕಾಮೆಂಟ್‌ಗಳಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಲಕ್ಷಣ ಆಹಾರವನ್ನು ಸೇವಿಸುವವರು ಯಾರು? ಇದರ ಪ್ರಯೋಜನ ಏನು ಎಂಬುದೇ ಜನರಿಗೆ ಗೊತ್ತಾಗಿಲ್ಲ.

ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, "ನಾನು ನೋಡಿದ ಅತ್ಯಂತ ಅಸಹ್ಯಕರ ಆಹಾರ" ಎಂದು ಹೇಳಿದ್ದಾರೆ. ಮತ್ತೊಬ್ಬರು "ಇದನ್ನು ಖರೀದಿಸಲು ಯಾರು ಹಣ ಖರ್ಚು ಮಾಡುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.