ಕನ್ನಡ ಸುದ್ದಿ  /  Lifestyle  /  India News What Is Blue Aadhaar Card Why It Is Required For Children Details Here Rmy

Blue Aadhaar Card: ಬ್ಲೂ ಆಧಾರ ಕಾರ್ಡ್ ಎಂದರೇನು? 5 ವರ್ಷದೊಳಗಿನ ಮಕ್ಕಳಿಗೆ ಯಾಕೆ ತುಂಬಾ ಮುಖ್ಯ

Blue Aadhaar Card: ಆಧಾರ್ ಪ್ರಾಧಿಕಾರವು 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದಲ್ಲಿರುವ ‘ಬಾಲ್ ಆಧಾರ್ ಕಾರ್ಡ್’ ಅನ್ನು ವಿತರಿಸುತ್ತದೆ. ಇದನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ತಿಳಿಯಿರಿ.

5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಬಾಲ್ ಆಧಾರ್ ಕಾರ್ಡ್ ಅಂತ ಕರೆಲಾಗುತ್ತದೆ. ಇದನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ತಿಳಿಯಿರಿ.
5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇದನ್ನು ಬಾಲ್ ಆಧಾರ್ ಕಾರ್ಡ್ ಅಂತ ಕರೆಲಾಗುತ್ತದೆ. ಇದನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ತಿಳಿಯಿರಿ.

ಬೆಂಗಳೂರು: ಹುಟ್ಟಿದ ಮಗುವಿನಿಂದ ಹಿಡಿದ ವೃದ್ಧವರಿಗೆ ಭಾರತದ ಪ್ರಜೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬ್ಯಾಂಕ್ ವ್ಯವಹಾರ, ಸಾಲ ಸೌಲಭ್ಯ, ತೆರಿಗೆ ಸಲ್ಲಿಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಸ್ವಸಹಾಯ ಸಂಘಗಳು ಯಾವುದೇ ಇರಲಿ 12 ಸಂಖ್ಯೆಯ ಆಧಾರ್ ಬೇಕೇ ಬೇಕು.

ಭಾರತದ ವಿಶಿಷ್ಟ ಗುರಿತಿನ ಪ್ರಾಧಿಕಾರ-ಯುಐಡಿಎಐ ಈ 12 ಸಂಖ್ಯೆಯ ಆಧಾರ್ ಅನ್ನು ನೀಡುತ್ತದೆ. ಈ ವಿಶಿಷ್ಟ ಗುರಿತಿನ ಸಂಖ್ಯೆನ್ನು ಎಲ್ಲಾ ಭಾರತೀಯ ಹೊಂದುವುದು ಕಡ್ಡಾಯವಾಗಿದೆ. ಹುಟ್ಟಿದ ಮಗುವಿನಿಂದ ಹಿಡಿದು ಎಲ್ಲರಿಗೂ ಆಧಾರ್ ಹೊಂದಿರಬೇಕು. ಯುಐಡಿಎಐ ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ಇದನ್ನು ಇದು ನೀಲಿ ಬಣ್ಣದಲ್ಲಿ ಇರುತ್ತದೆ. ಹೀಗಾಗಿ ಇದನ್ನು ಬ್ಲೂ ಆಧಾರ್ ಕಾರ್ಡ್ ಅಂತಲೂ ಕರೆಯಲಾಗುತ್ತದೆ. ಸಾಮಾನ್ಯವಾಗಿ 5 ವರ್ಷ ಮೇಲ್ಪಟ್ಟವರಿಗೆ ನೀಡುವ ಆಧಾರ್ ಕಾರ್ಡ್‌ ಬಿಳಿ ಬಣ್ಣದಿಂದ ಕೂಡಿರುತ್ತದೆ.

ಮಕ್ಕಳಿಗೆ ನೀಡುವಂತ ನೀಲಿ ಬಣ್ಣದ ಆಧಾರ್ ಕಾರ್ಡ್ ಅನ್ನು 5 ವರ್ಷದೊಳಗಿನ ಮಕ್ಕಳದ್ದೇ ಎಂದು ಸುಲಭವಾಗಿ ಗುರುತಿಸಬಹುದು. ಇದು ದೊಡ್ಡವರಿಗೆ ನೀಡುವ ಕಾರ್ಡ್‌ಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. 2016ರ ಸೆಕ್ಷನ್ 3 (1)ರ ಪ್ರಕಾರ, ದಾಖಲಾತಿ ಪ್ರಕ್ರಿಯೆಯ ಸಮಯದಲ್ಲಿ ತಮ್ಮ ಜನಸಂಖ್ಯಾ ಮಾಹಿತಿ ಬಯೋಮೆಟ್ರಿಕ್ ಮಾಹಿತಿಯನ್ನು ಪ್ರಸ್ತುತಪಡಿಸುವ ಮೂಲಕ ಮಕ್ಕಳನ್ನ ಒಳಗೊಂಡಂತೆ ಭಾರತದ ಪ್ರತಿಯೊಬ್ಬ ನಿವಾಸಿ ಆಧಾರ್ ಸಂಖ್ಯೆ ಪಡೆಯಲು ಅರ್ಹರಾಗಿರುತ್ತಾರೆ.

ನೀಲಿ ಆಧಾರ್ ಕಾರ್ಡ್ ಮಾಡಿಸಲು ಏನೇನು ಬೇಕು, ನೋಂದಣಿ ಪ್ರಕ್ರಿಯೆ ಹೇಗಿರುತ್ತೆ?

ಬ್ಲೂ ಅಥವಾ ನೀಲಿ ಆಧಾರ್ ಕಾರ್ಡ್‌ ವಿಶೇಷವಾಗಿ ನವಜಾತ ಶಿಶುಗಳು ಸೇರಿದಂತೆ 5 ವರ್ಷದೊಳಗಿನ ಮಕ್ಕಳಿಗೆ ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಯಾವುದೇ ರೀತಿಯ ಬಯೋಮೆಟ್ರಿಕ್‌ ಅಗತ್ಯ ಇರುವುದಿಲ್ಲ. ಏಕೆಂದರೆ ಪೋಷಕರ ಯುಐಡಿಯೊಂದಿಗೆ ಲಿಂಕ್ ಮಾಡಲಾದ ಜನಸಂಖ್ಯಾ ಮಾಹಿತಿ ಮತ್ತು ಮುಖದ ಫೋಟವನ್ನು ಆಧರಿಸಿ ಕಾರ್ಡ್ ಅನ್ನು ನೀಡಲಾಗುತ್ತದೆ. ಈ ಕಾರ್ಡ್ ಹುಟ್ಟಿದ ದಿನಾಂಕದಿಂದ 5 ವರ್ಷದ ವರೆಗೆ ಮಾತ್ರ ಮಾನ್ಯವಾಗಿರುತ್ತದೆ. 5 ವರ್ಷ ತುಂಬಿದ ನಂತರ ಹತ್ತು ಬೆರಳುಗಳ ಬಯೋಮೆಟ್ರಿಕ್ ಮಾಹಿತಿ, ಐರಿಸ್, ಮುಖದ ಫೋಟೊ ನೀಡಿ ಸಾಮಾನ್ಯ ಆಧಾರ್ ಪಡೆಯಬೇಕು. 15 ನೇ ವಯಸ್ಸಿಗೆ ಇದನ್ನು ಮತ್ತೆ ನವೀಕರಣ ಮಾಡಬೇಕಾಗುತ್ತದೆ.

ಬಾಲ್ ಆಧಾರ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳು

 • ಮಗುವಿನ ಜನನ ಪ್ರಮಾಣಪತ್ರ
 • ನವಜಾತ ಶಿಶುವಾಗಿದ್ದರೆ ಆಸ್ಪತ್ರೆಯ ಡಿಸ್ಚಾರ್ಜ್ ಪತ್ರ
 • ಪೋಷಕರ ಆಧಾರ್ ಕಾರ್ಡ್ ಮಾಹಿತಿಗಳಲ್ಲಿ ಒಂದು
 • ಮಗುವಿನ ಎರಡು ಪಾಸ್‌ಪೋರ್ಟ್ ಗಾತ್ರದ ಫೋಟೊ
 • ವಿಳಾಸ ಪುರಾವೆ
 • ಶಾಲೆಯ ಗುರುತಿನ ಚೀಟಿ

ಇದನ್ನೂ ಓದಿ: ಆಧಾರ್​ ಕಾರ್ಡ್ ಮಾಡಿಸುವುದು ಇನ್ಮುಂದೆ ಪಾಸ್​ಪೋರ್ಟ್ ಮಾಡಿಸಿದಷ್ಟೇ ಕಷ್ಟ; 180 ದಿನಗಳ ಕಾಲ ಕಾಯುವುದು ಅನಿವಾರ್ಯ

ನೀಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಕೊಳ್ಳುವುದು ಹೇಗೆ

 • uidai.gov.in ನಲ್ಲಿ UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ
 • ನನ್ನ ಆಧಾರ್ ಕಾರ್ಡ್ ನ್ಯಾವಿಗೇಟ್ ಮಾಡಿ, ಅಪಾಯಿಂಟ್ಮೆಂಟ್ ಬುಕ್ ಮಾಡಿ
 • ಹೊಸ ಆಧಾರ್ ಆಯ್ಕ ಮಾಡಿ, ಅಗತ್ಯವಿರುವ ವಿವರಗಳನ್ನು ಒದಗಿಸಿ
 • ಕುಟುಂಬದ ಮುಖ್ಯಸ್ಥರೊಂದಿಗೆ ಸಂಬಂಧ ಮತ್ತು ಮಕ್ಕಳು (0-5) ಆಯ್ಕೆ ಮಾಡಿ
 • ಪೋಷಕರ ಫೋನ್ ಸಂಖ್ಯೆ, ವಿಳಾಸ, ಮಗುವಿನ ಅಗತ್ಯ ವಿವರಗಳನ್ನು ನಮೂದಿಸಿ
 • ಬಳಿಕ ಸಮೀಪದ ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್ ಆಯ್ಕೆಮಾಡಿ

ಈ ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಪ್ರಾಧಿಕಾರದಿಂದ ಸಂಬಂಧಪಟ್ಟ ಸಿಬ್ಬಂದಿ ಪರಿಶೀಲನೆ ನಡೆಸಿ 60 ದಿನಗಳೊಳಗಾಗಿ ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com )

ವಿಭಾಗ