Ganesh Chaturthi 2023: ಗಣೇಶ ಚತುರ್ಥಿ ಹಬ್ಬ ಯಾವಾಗ, ವಿನಾಯಕನ ಹಬ್ಬ ದಿನಾಂಕ, ಪೂಜಾ ಸಮಯ, ಮೂರ್ತಿ ವಿಸರ್ಜನೆ ವಿವರ
When is Ganesh Chaturthi in 2023: ಈ ವರ್ಷ ಗಣೇಶ ಚತುರ್ಥಿ ಸೆಪ್ಟೆಂಬರ್ 19ರಂದು (19 Sept, 2023) ಸೋಮವಾರ ದೇಶಾದ್ಯಂತ ವಿಜ್ರಂಭಣೆಯಿಂದ ನಡೆಯಲಿದೆ. ಗಣೇಶ ಹಬ್ಬ ಪೂಜಾ ಸಮಯ, ಮೂರ್ತಿ ವಿಸರ್ಜನೆ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
Ganesh Chaturthi in 2023 Date And Time: ಗಣೇಶ ಹಬ್ಬ ಈ ಬಾರಿ ಸೆಪ್ಟೆಂಬರ್ 19 ಮಂಗಳವಾರ ನಡೆಯಲಿದೆ. ಅಂದಹಾಗೆ ಇದು ಒಂದು ದಿನದ ಹಬ್ಬವಲ್ಲ. ಹಲವು ದಿನ ಗಣೇಶನ ಭಜಿಸಿ ಮೂರ್ತಿ ವಿಸರ್ಜನೆ ಮಾಡುವಂತಹ ಸುಂದರ ಹಬ್ಬವಿದು. ವಕ್ರತುಂಡ ವಿನಾಯಕನ ಹುಟ್ಟುಹಬ್ಬದ ದಿನ ದೇಶದೆಲ್ಲೆಡೆ ಸಂಭ್ರಮವಿರುತ್ತದೆ. ಕರ್ನಾಟಕದ ವಿವಿಧ ನಗರಗಳಲ್ಲಿ, ಮುಂಬೈ ಸೇರಿದಂತೆ ವಿವಿಧೆಡೆ ಗಣೇಶ ಚತುರ್ಥಿ ವಿಜ್ರಂಭಣೆಯಿಂದ ನಡೆಯುತ್ತದೆ. ಮಹಾರಾಷ್ಟ್ರ, ಗುಜರಾತ್, ಒಡಿಸ್ಸಾ, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಬ್ಬದ ಸಂಭ್ರಮವೇ ಬೇರೆ ರೀತಿಯಾಗಿರುತ್ತದೆ. ಎಲ್ಲೆಡೆ ಗಣೇಶ ಬಪ್ಪಾ ಮೋರ್ಯ ಕೇಳಿಬರಲಿದೆ.
ಗಣೇಶ ಚತುರ್ಥಿ ದಿನಾಂಕ, ಪೂಜಾ ಸಮಯ ವೇಳಾಪಟ್ಟಿ
- ಗಣೇಶ ಚತುರ್ಥಿ ಆರಂಭ ದಿನಾಂಕ: ಸೆಪ್ಟೆಂಬರ್ 19, 2023 (ಮಂಗಳವಾರ)
- ಗಣೇಶ ಚತುರ್ಥಿ ಮುಕ್ತಾಯ: ಸೆಪ್ಟೆಂಬರ್ 28, 2023 (ಗುರುವಾರ)
- ಗಣೇಶ ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 18 (2:39 PM)
- ಗಣೇಶ ಚತುರ್ಥಿ ತಿಥಿ ಮುಕ್ತಾಯ: ಸೆಪ್ಟೆಂಬರ್ 19 (1:43 PM)
- ಗಣೇಶ ಪೂಜಾ ಮುಹೂರ್ತ: 11:00 AM ರಿಂದ 1:26 PM (ಸೆಪ್ಟೆಂಬರ್ 19)
- ಗಣೇಶ ವಿಸರ್ಜನೆ ದಿನಾಂಕ: ಸೆಪ್ಟೆಂಬರ್ 28, 2023
ಗಣೇಶ ಚತುರ್ಥಿ ಯಾವಾಗ?
ಗಣೇಶ ಹಬ್ಬ 10 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 28ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 28ರಂದು ಗಣೇಶನ ವಿಸರ್ಜನೆ ನಡೆಯಲಿದೆ. ವಿದ್ಯೆ, ಬುದ್ಧಿ, ಸಮೃದ್ಧಿ, ಅದೃಷ್ಟದ ದೇವರಾದ ಗಣೇಶನಿಗೆ ಸಮರ್ಪಿತವಾದ ಈ ಹಬ್ಬವು ದೇಶದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಗಣೇಶನಿಗೆ 108 ಹೆಸರುಗಳಿವೆ. ಗಣಪತಿ, ಗಜಾನನ, ಧೂಮ್ರಕೇತು, ಏಕದಂತ, ವಕ್ರತುಂಡ, ಸಿದ್ಧಿ ವಿನಾಯಕ ಇತ್ಯಾದಿ ಹೆಸರುಗಳಿಂದ ಗಣಪತಿಯನ್ನು ಸ್ತುತಿಸಲಾಗುತ್ತದೆ.
ಗಣೇಶನ ಜನ್ಮದಿನದಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಹಿಂದೂ ಪಂಚಾಂಗದ ಭಾದ್ರಪದ ಮಾಸದ ಶುಕ್ಲ ಪಕ್ಷದ ಸಮಯದಲ್ಲಿ ಗಣೇಶನು ಜನಿಸಿದನು. ಗಣೇಶನ ಜನ್ಮದ ಕುರಿತು ಇರುವ ಕತೆ ನಿಮಗೆ ಗೊತ್ತಿರಬಹುದು. ಪಾರ್ವತಿ ದೇವಿಯು ಗಣೇಶನನ್ನು ಕಾವಲು ನಿಲ್ಲಲು ನಿಲ್ಲಿಸುವುದು, ಶಿವನು ಆ ಸಮಯದಲ್ಲಿ ಬಂದಾಗ ಗಣಪತಿಯು ಆತನನ್ನು ಒಳಗೆ ಬಿಡದೆ ಇರುವುದು, ಕೋಪಗೊಂಡ ಶಿವನು ಗಣೇಶನ ಶಿರ ಕಡಿಯುವುದು, ಬಳಿಕ ಆನೆಯ ತಲೆ ಜೋಡಿಸುವುದು... ಎಲ್ಲಾ ದೇವರಿಗೆ ಪೂಜೆ ಸಲ್ಲಿಸುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಬೇಕು. ಇದೇ ಕಾರಣಕ್ಕೆ ಮೊದಲೊಂದಿಪೆ ಗಣನಾಥ ಎಂದು ಹೇಳಲಾಗುತ್ತದೆ.
ಗಣೇಶ ಚತುರ್ಥಿ ಪೂಜಾ ಸಮಯ
ಹಿಂದೂ ಪಂಚಾಂಗದ ಪ್ರಕಾರ ವಿನಾಯಕ ಚತುರ್ದಶಿ ಅಥವಾ ಗಣೇಶ ಚತುರ್ಥಿಯು ಸೆಪ್ಟೆಂಬರ್ 18 ಸೋಮವಾರದಿಂದಲೇ ಆರಂಭವಾಗಲಿದೆ. ಅಂದು ಮಧ್ಯಾಹ್ನ 12:39 ಗಂಟೆಗೆ ಗಣೇಶ ಚತುರ್ಥಿ ಆರಂಭವಾಗಿ ಸೆಪ್ಟೆಂಬರ್ 19ರ ಮಂಗಳವಾರ ರಾತ್ರಿ 8:43 ಗಂಟೆಗೆ ಮುಗಿಯುತ್ತದೆ. ನೀವು ಹಗಲು ಹೊತ್ತಿನಲ್ಲಿ ಗಣೇಶ ಪೂಜೆಯ ಮುಹೂರ್ತ ಮಾಡುವುದಾದರೆ ಅದು ಬೆಳಗ್ಗೆ 11:01 ಗಂಟೆಯಿಂದ ಅಪರಾಹ್ನ 01:28 ಗಂಟೆಯವರೆಗೆ ಇರಲಿದೆ. ಎರಡು ಗಂಟೆ 27 ನಿಮಿಷಗಳ ಕಾಲ ಗಣೇಶ ಪೂಜಾ ಸಮಯ ಇರುತ್ತದೆ.
ಗಣೇಶ ಹಬ್ಬ ಪೂಜಾ ವಿಧಿ ನಿಯಮಗಳು
- ಭಕ್ತರು ಬೇಗನೆ ಎದ್ದು ಸ್ನಾನ ಕೈಂಕರ್ಯಗಳನ್ನು ಮುಗಿಸಿ ಶುಭ್ರ ಬಟ್ಟೆ ಧರಿಸಬೇಕು
- ಒಂದು ಮಣೆ ಅಥವಾ ಪೀಠದಲ್ಲಿ ಕೆಂಪು ಅಥವಾ ಹಳದಿ ಬಟ್ಟೆ ಇಡಬೇಕು. ಅದರ ಮೇಲೆ ಗಣೇಶನ ಮೂರ್ತಿ ಇಡಬೇಕು.
- ಗಂಗಾ ಜಲ ಚಿಮುಕಿಸಿ. ಹಣತೆ ಅಥವಾ ದೀಪ ಬೆಳಗಿ. ಕುಂಕುಮ ತಿಲಕವನ್ನು ಗಣೇಶನ ಹಣೆಗೆ ಹಚ್ಚಿ. ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕ ಇತ್ಯಾದಿಗಳನ್ನು ನೀಡಿ. ಹಳದಿ ಹೂವುಗಳಿಂದ ಗಣೇಶನನ್ನು ಅಲಂಕರಿಸಿ. 5 ಬಗೆಯ ಒಣಹಣ್ಣುಗಳು, 5 ಬಗೆಯ ಹಣ್ಣುಗಳು ಇತ್ಯಾದಿಗಳನ್ನು ಇಡಿ. ಅಂದರೆ, ಫಲಪುಷ್ಪ ಅರ್ಪಿಸಿ.
- ಗಣೇಶನ ಪೂಜಾ ಕೋಣೆಯನ್ನು ಅಲಂಕರಿಸಿ.
- ಓಂ ಗಣ ಗಣಪತೇಯೇ ನಮಃ ಮಂತ್ರದಿಂದ ಪೂಜೆ ಆರಂಭಿಸಿ.
- ಗಣೇಶ ಕಥೆ, ಗಣೇಶ ಸ್ತ್ರೋತ್ರ, ಗಣೇಶ ಆರತಿ ಇತ್ಯಾದಿಗಳಿಂದ ಪೂಜೆ ಮಾಡಿ.
- ದಿನವಿಡಿ ಗಣೇಶನ ಕೀರ್ತನೆ, ಭಜನೆ ಮೊಳಗಲಿ.
- ಗಣೇಶನ ದೇಗುಲಗಳಿಗೆ ಭೇಟಿ ನೀಡಿ.