ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ -Fancy Dress Ideas-india s great freedom fighters best fancy dress ideas for boys to celebrate independence day 2024 arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ -Fancy Dress Ideas

ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ -Fancy Dress Ideas

Independence Day 2024: ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬರುತ್ತಿದೆ. ಶಾಲೆ, ಸಂಘ, ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಿಮ್ಮ ಪುಟ್ಟ ಮಕ್ಕಳಿಗೆ ದೇಶಭಕ್ತರ ವೇಷ ಹಾಕಿಸಿ, ಖುಷಿ ಪಡಬೇಕೆಂದಿದ್ದರೆ ಇವುಗಳಲ್ಲಿ ನಿಮ್ಮಿಷ್ಟದ ಸ್ವಾತಂತ್ರ್ಯ ಹೋರಟಗಾರರನ್ನು ಆಯ್ಕೆ ಮಾಡಿಕೊಳ್ಳಿ. ಕೊನೇ ಕ್ಷಣದ ಅವಸರಕ್ಕಿಂತ ಇಂದೇ ತೀರ್ಮಾನಿಸಿ.

ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ (ಸಾಂದರ್ಭಿಕ ಚಿತ್ರ)
ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಪುಟಾಣಿ ಈ ಥರ ಕಾಣಿಸಿಕೊಂಡರೆ ಚಂದ; ಭಾರತದ ದೇಶಭಕ್ತರ ವೇಷ ಹಾಕಲು ಇಲ್ಲಿದೆ ಐಡಿಯಾ (ಸಾಂದರ್ಭಿಕ ಚಿತ್ರ) (PC: Pinterest)

ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ (Independence Day 2024) ಯನ್ನು ಆಗಸ್ಟ್‌ 15 ರಂದು ಆಚರಿಸಲಾಗುತ್ತದೆ. ಈ ದಿನವು ದೇಶದ ಹೆಮ್ಮೆಯಾದ ದೇಶಭಕ್ತರನ್ನು ನೆನಪಿಸಿಕೊಳ್ಳಲು ಇರುವ ಶುಭ ಸಂದರ್ಭವಾಗಿದೆ. ರಾಷ್ಟ್ರಧ್ವಜವನ್ನು ಬಾನಂಗಳದಲ್ಲಿ ಹಾರಾಡಿಸಿ, ದೇಶದ ಜನರೆಲ್ಲರು ಒಟ್ಟಾಗಿ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಅವರಿಗೆ ಗೌರವ ಸಲ್ಲಸುವ ದಿನವಾಗಿದೆ. ಬ್ರಿಟೀಷರ ಆಳ್ವಿಕೆಯಿಂದ ಭಾರತ ಮಾತೆಯನ್ನು ಮುಕ್ತಿಗೊಳಿಸಿ, ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುವಂತೆ ಮಾಡಿದವರು ನಮ್ಮ ದೇಶಭಕ್ತರು. ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಅವರ ಹೆಸರುಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಿಕೊಡುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ದಿನಾಚರಣೆಯಂದು ನಿಮ್ಮ ಮುದ್ದು ಕಂದಮ್ಮಗಳಿಗೆ ಮಹಾನ್‌ ದೇಶಭಕ್ತರ ವೇಷ ಹಾಕಿಸಿ, ಅವರ ತ್ಯಾಗ, ಬಲಿದಾನಗಳನ್ನು ಹೇಳಿಕೊಡುವುದರ ಮೂಲಕ ಅವರಿಗೆ ದೇಶಪ್ರೇಮದ ಬಗ್ಗೆ ಹೇಳಿಕೊಡಬಹುದು. ನಿಮ್ಮ ಮುದ್ದು ಮಕ್ಕಳಿಗೆ ಯಾವ ದೇಶಭಕ್ತರ ವೇಷ ಹಾಕಿಸುವುದು ಎಂಬ ಯೋಚನೆಯಲ್ಲಿದ್ದರೆ, ಇಲ್ಲಿರುವ ಕೆಲವು ಐಡಿಯಾಗಳಲ್ಲಿ ಆಯ್ಕೆ ಮಾಡಿಕೊಳ್ಳಿ.

ಮಹಾತ್ಮ ಗಾಂಧಿ

ಅಂಹಿಸೆಯ ಮೂಲಕ ಬ್ರಿಟೀಷರನ್ನು ಮಣಿಸಬಹುದು ಎಂದು ತೋರಿಸಿಕೊಟ್ಟವರು ರಾಷ್ಟ್ರಪಿತ ಮಹಾತ್ಮ ಗಾಂಧಿಯವರು. ಹಲವಾರು ಚಳುವಳಿಗಳ ಮೂಲಕ ದೇಶದ ಜನರಲ್ಲಿ ಸ್ವಾತಂತ್ರ್ಯದ ಬೀಜ ಬಿತ್ತಿದವರು. ಅಂತಹ ಮಹಾತ್ಮ ಗಾಂಧೀಜಿಯವರ ವೇಷ ಹಾಕಿಸಿ ರಾಷ್ಟಪಿತನನ್ನು ನೆನಪಿಸಿಕೊಳ್ಳಬಹದು. ಅದಕ್ಕೆ ನಿಮ್ಮ ಮಗನಿಗೆ ಬಿಳಿ ಧೋತಿ ಮತ್ತು ಶಲ್ಯ ತೊಡಿಸಿ. ಕೈಗೊಂದು ಉದ್ದದ ಕೋಲು ಹಾಗೂ ಕನ್ನಡಕ ಹಾಕಿ, ತಲೆಗೆ ಚರ್ಮದ ಬಣ್ಣದ ಟೋಪಿ ತೋಡಿಸಿ. ರಾಷ್ಟ್ರಪಿತ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಹೇಗೆ ಹೋರಾಟ ಮಾಡಿದರು ಎಂದು ಹೇಳಿ ಕೊಡಿ.

ಭಗತ್‌ ಸಿಂಗ್‌

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇಳಿಬರುವ ಮಹಾನ್‌ ದೇಶಭಕ್ತರಲ್ಲಿ ಭಗತ್‌ ಸಿಂಗ್ ಕೂಡಾ ಒಬ್ಬರು. ದೇಶಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದವರು ಅವರು. ಅಂತಹ ಮಹಾನ್‌ ದೇಶಭಕ್ತನ ವೇಷ ಹಾಕಿಸಬೇಕೆಂದಿದ್ದರೆ ಬಿಳಿ ಕುರ್ತಾ, ಕಪ್ಪು ಪ್ಯಾಂಟ್‌ ತೊಡಿಸಿ. ಮೇಲೆ ಕಪ್ಪು ಜಾಕೆಟ್‌ ಹಾಕಿ. ತಲೆಗೆ ಕೇಸರಿ ಬಣ್ಣದ ಪೇಟ ಹಾಕಿ ಥವಾ ಅಗಲವಾದ ಟೋಪಿ ಹಾಕಿ. ಭಗತ್‌ ಸಿಂಗ್‌ನ ಹಾವಭಾವ ಹೇಳಿಕೊಡಿ.

ಬಾಲಗಂಗಾಧರ ತಿಲಕ್

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಲಾಲ್‌, ಬಾಲ್‌, ಪಾಲ್‌ ಎಂದು ಮೂವರನ್ನು ಒಟ್ಟಿಗೆ ಕರೆಯಲಾಗುತ್ತದೆ. ಅವರಲ್ಲಿ ಬಾಲ್‌ ಎಂದರೆ ಬಾಲಗಂಗಾಧರ ತಿಲಕ್‌. ಲೋಕಮಾನ್ಯ ಎಂದೇ ಖ್ಯಾತರಾದ ಬಾಲಗಂಗಾಧರ ತಿಲಕ ಅವರ ವೇಷವನ್ನು ನಿಮ್ಮ ಪುಟ್ಟ ಕಂದಮ್ಮನಿಗೆ ಹಾಕಿಸಬಹುದು. ಅದಕ್ಕೆ ಬಿಳಿ ಧೋತಿ, ಮತ್ತು ಉದ್ದ ತೋಳಿನ ಬಿಳಿ ಕುರ್ತಾ ತೊಡಿಸಿ. ತಲೆಗೆ ಕೆಂಪು ಬಣ್ಣದ ಮರಾಠ ಪೇಟ ತೊಡಿಸಿ. ಕೆಂಪು ಶಲ್ಯವನ್ನು ಮಡಿಕೆ ಮಾಡಿ ಅದನ್ನು ಭುಜದ ಸುತ್ತ ಹಾಕಿ.

ಸುಭಾಸ್‌ ಚಂದ್ರ ಭೋಸ್‌

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಎಂದೇ ಖ್ಯಾತರಾದವರು ಸುಭಾಸ್‌ ಚಂದ್ರ ಬೋಸ್‌ ಅವರು. ಐಎನ್‌ಎ ಅನ್ನು ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡಿದರು. ನಿಮ್ಮ ಪ್ರೀತಿಯ ಕಂದನಿಗೆ ಸುಭಾಸ್‌ ಚಂದ್ರರ ವೇಷ ತೊಡಿಸಬಹುದು. ಅದಕ್ಕೆ ಅಂಗಡಿಯಲ್ಲಿ ಸಿಗುವ ಸುಭಾಸ್‌ ಚಂದ್ರ ಬೋಸ್‌ ಅವರ ಡ್ರೆಸ್‌ ಖರೀದಿಸಿ. ಕನ್ನಡಕ ಮತ್ತು ಟೋಪಿ ತೊಡಿಸಿ. ಸೆಲ್ಯೂಟ್‌ ಮಾಡುವುದನ್ನು ಮರೆಯದೇ ಹೇಳಿಕೊಡಿ.

ಚಂದ್ರಶೇಖರ ಆಜಾದ್‌

ಬ್ರಿಟೀಷ್‌ ಸೇನೆಗೆ ಸಿಂಹ ಸ್ವಪ್ನರಾದ ಚಂದ್ರಶೇಖರ್‌ ಆಜಾದ್‌ ಅವರು ಆಜಾದ್‌ ಎಂದೇ ಖ್ಯಾತರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಯಾಗಿದ್ದರು. ಈ ಕೆಚ್ಚೆದೆಯ ಮಹಾನ್‌ ದೇಶಭಕ್ತನ ವೇಷ ಹಾಕಿಸಬಹುದು. ಬಿಳಿ ಧೋತಿ ಉಡಿಸಿ. ಕಪ್ಪು ಬೆಲ್ಟ್‌ ಮತ್ತು ಶೂ ತೊಡಿಸಿ. ಹುರಿ ಮೀಸೆ ಬಿಡಿಸಿ. ಕೈಯಲ್ಲಿ ಆಟದ ಪಿಸ್ತೂಲ್‌ ಅನ್ನು ಕೊಡಿ.