ರಾಮಾಯಣ: ರಾಮನಿಗೆ ಆಪ್ತರನ್ನು ಸೃಷ್ಟಿಸುವ ಕೆಲಸ ಆರಂಭ; ದೇವತೆಗಳಿಂದ ಕಪಿ ನಾಯಕರ ಸೃಷ್ಟಿ ಹೇಗಾಯಿತು?-indian mythology ramayana work of creating friends for rama kapi nayaka story here sts ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ರಾಮಾಯಣ: ರಾಮನಿಗೆ ಆಪ್ತರನ್ನು ಸೃಷ್ಟಿಸುವ ಕೆಲಸ ಆರಂಭ; ದೇವತೆಗಳಿಂದ ಕಪಿ ನಾಯಕರ ಸೃಷ್ಟಿ ಹೇಗಾಯಿತು?

ರಾಮಾಯಣ: ರಾಮನಿಗೆ ಆಪ್ತರನ್ನು ಸೃಷ್ಟಿಸುವ ಕೆಲಸ ಆರಂಭ; ದೇವತೆಗಳಿಂದ ಕಪಿ ನಾಯಕರ ಸೃಷ್ಟಿ ಹೇಗಾಯಿತು?

ದೊಡ್ಡದಾದ ಸಾಗರವನ್ನೇ ಕ್ಷಣಮಾತ್ರದಲ್ಲಿ ದಾಟುವ ವೀರರಿರುತ್ತಾರೆ. ಕೇವಲ ತಮ್ಮ ಕಾಲನ್ನು ಅಪ್ಪಳಿಸಿ ಭೂಮಿಯನ್ನೇ ನಡಗಿಸಬಲ್ಲ ಶಕ್ತಿವಂತರು ಕಂಡುಬರುತ್ತಾರೆ. ರಾಮನಿಗೆ ಆಪ್ತರನ್ನು ಸೃಷ್ಟಿಸುವ ಕೆಲಸ ಆರಂಭದಲ್ಲಿ ದೇವತೆಗಳಿಂದ ಕಪಿ ನಾಯಕರ ಸೃಷ್ಟಿ ಹೇಗಾಯಿತು ಎಂಬ ರಾಮಾಯಣದ ಕಥೆಯ ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ಬರೆದಿದ್ದಾರೆ.

 ವಾನರ ಸೈನ್ಯ ರಾಮ ಮತ್ತು ಲಕ್ಷಣರನ್ನು ಹೊತ್ತು ಸಾಗುತ್ತಿರುವುದು. ಫೋಟೊ-pinterest.com
ವಾನರ ಸೈನ್ಯ ರಾಮ ಮತ್ತು ಲಕ್ಷಣರನ್ನು ಹೊತ್ತು ಸಾಗುತ್ತಿರುವುದು. ಫೋಟೊ-pinterest.com

ರಾಮಾಯಣದ ಮುಂದುವರಿದ ಭಾಗದಲ್ಲಿ ರಾವಣ ಮತ್ತು ಕುಂಭಕರ್ಣರ ಸಂಹಾರಕ್ಕಾಗಿ ರಾಮ ಲಕ್ಷ್ಮಣರ ಜನ್ಮವು ಭೂಲೋಕದಲ್ಲಿ ಆಗುತ್ತದೆ. ಆದರೆ ದೇವತೆಗಳ ಜವಾಬ್ದಾರಿಯು ಇನ್ನಷ್ಟು ಹೆಚ್ಚುತ್ತದೆ. ರಾಮನ ರೂಪದಲ್ಲಿರುವ ಭಗವಾನ್ ವಿಷ್ಣುವಿಗೆ ಸಹಾಯ ಮಾಡಲು ರಾಮನಿಗೆ ಆಪ್ತರನ್ನು ಸೃಷ್ಟಿಸುವ ಕೆಲಸವು ಅವರದಾಗುತ್ತದೆ. ಬ್ರಹ್ಮನು, ಎಲ್ಲಾ ದೇವತೆಗಳಲ್ಲಿ ರಾವಣನಿಗೆ ಮಾಯ ಯುದ್ಧ ತಿಳಿದಿದೆ. ಆದ್ದರಿಂದ ಈಗ ಸೃಷ್ಟಿಯಾಗುವ ಜನರಿಗೆ ಮಾಯಯುದ್ಧದ ಬಗ್ಗೆ ತಿಳಿದಿರಬೇಕು. ದೈಹಿಕವಾಗಿ ಸದೃಢರಾಗಿರಬೇಕು. ಮಾಡುವ ಕೆಲಸ ಕಾರ್ಯಗಳಲ್ಲಿ ಗಾಳಿಯನ್ನು ಮೀರಿಸುವ ವ್ಯಕ್ತಿತ್ವ ಇರಬೇಕು. ಇಷ್ಟಲ್ಲದೆ ಯಾವುದೇ ಕಾರಣಕ್ಕೂ ನ್ಯಾಯ ನೀತಿಯನ್ನು ಬಿಡದವರಾಗಿರಬೇಕು. ಬುದ್ಧಿ ಶಕ್ತಿ ಇವರ ಮೂಲ ಆಸ್ತಿಯನ್ನ ಬೇಕು. ಇಂತಹವರು ಸಹ ಮಾತ್ರ ಮಹಾ ವಿಷ್ಣುವಿಗೆ ಸರಿಸಮನಾಗಿ ಸಹ ಸಹಾಯ ಮಾಡಲು ಸಾಧ್ಯ ಎಂದು ತಿಳಿಸುತ್ತಾನೆ.

ರಾಮನ ಆ ಸ್ನೇಹ ಪಡೆಗೆ ಸಮಯಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಂಡು ಯುದ್ಧ ಮಾಡುವ ಕಲೆ ಅವರಿಗೆ ತಿಳಿದಿರಬೇಕು. ಯಾವುದೇ ಅಸ್ತ್ರಗಳಿಗೆ ಬಲಿಯಾಗಬಾರದು. ದೀರ್ಘಕಾಲಕಾಲ ಶ್ರೀರಾಮನಿಗೆ ಸಹಾಯ ಮಾಡಬೇಕು ಎಂದು ಹೇಳುತ್ತಾನೆ. ಶ್ರೀರಾಮನಿಗೆ ಸಹಾಯ ಮಾಡಲೆಂದೆ ಜಾಂಬವಂತನನ್ನು ಸ್ವತಹ ನಾನೇ ಸೃಷ್ಟಿ ಮಾಡಿದ್ದೇನೆ. ನಾನು ಕಳಿಸುವ ವೇಳೆ ನನ್ನ ಮುಖದಿಂದ ಅವನ ಜನನವಾಗಿದೆ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ಋಷಿಮುನಿಗಳು ವೀರರಾದ ಕಾಡಿನಲ್ಲಿ ವಾಸಿಸುವ ಮಕ್ಕಳನ್ನು ಸೃಷ್ಟಿಸುತ್ತಾರೆ. ಇದರಿಂದ ಪ್ರೇರಿತನಾದ ಇಂದ್ರನು ತನ್ನ ಎಲ್ಲಾ ಗುಣ ಧರ್ಮಗಳನ್ನು ಹೊಂದಿದ ವಿಶೇಷವಾದ ಕಾಂತಿಯನ್ನು ಹೊಂದಿದ ವಾನರ ಕುಲದ ಶ್ರೇಷ್ಠ ವಾಲಿಯನ್ನು ಸೃಷ್ಟಿಸುತ್ತಾನೆ. ಇದರ ಮಧ್ಯೆ ಮೂರು ಲೋಕಕ್ಕೆ ಬೆಳಕನ್ನು ನೀಡುವ ಸೂರ್ಯನು ಮತ್ತೊಬ್ಬ ವಾನರ ಶ್ರೇಷ್ಠ ಸುಗ್ರೀವನ ಸೃಷ್ಟಿಗೆ ಕಾರಣನಾಗುತ್ತಾನೆ. ವಿದ್ಯಾ ಬುದ್ಧಿಗೆ ಹೆಸರಾದ ಬೃಹಸ್ಪತಿಯು ವಾನರ ಕುಲದಲ್ಲಿ ಅತಿ ಹೆಚ್ಚು ಬುದ್ಧಿವಂತ ಎಂಬ ವಾನರನನ್ನು ಸೃಷ್ಟಿಸುತ್ತಾನೆ. ಮತ್ತೊಬ್ಬ ವಾನರನಾದ ದಂಧಮಾದ ಕುಬೇರನ ಮಗನಾಗಿ ಜನ್ಮತ್ತಾಳುತ್ತಾನೆ.

ಶಿಲ್ಪ ಶಾಸ್ತ್ರಕ್ಕೆ ಅನುಕೂಲವಾಗಲೆಂದು ನಲನೆಂಬ ಕಪಿಯ ಸೃಷ್ಟಿಯು ವಿಶ್ವಕರ್ಮನಿಂದ ಆಗುತ್ತದೆ. ನೀಲನೆಂಬ ವಾನರನು ಅಗ್ನಿಯ ಮಗನಾಗುತ್ತಾನೆ. ಇವನಲ್ಲಿ ವಿಶೇಷವಾದ ತೇಜಸ್ವಿ ಇರುತ್ತದೆ. ಎಂದಿಗೂ ಸೋಲುವ ಮಾತು ಇವನಿಗಿರುವುದಿಲ್ಲ. ಕುಲದಲ್ಲಿಯೇ ಹೆಚ್ಚಿನ ಪರಾಕ್ರಮಿಯಾಗುತ್ತಾನೆ. ದೈವ ವೈದ್ಯರಾದ ಅಶ್ವಿನಿ ದೇವತೆಗಳು ಮೈಂದ ಮತ್ತು ದ್ವಿವಿಧರೆಂಬ ವಾನರರನ್ನು ಸೃಷ್ಟಿಸುತ್ತಾರೆ. ವರುಣನು ಸುಷೇಣ ಎಂಬ ವಾನರನ ಸೃಷ್ಟಿಗೆ ಕಾರಣವಾಗುತ್ತಾನೆ. ವಾಯುದೇವನ ಮಗನಾಗಿ ಹನುಮಂತನು ಗರುಡನಿಗೆ ಸರಿಸಮಾನವಾದಂತ ಬುದ್ಧಿಶಕ್ತಿಯನ್ನು ದೈಹಿಕ ಶಕ್ತಿಯನ್ನು ಗಳಿಸುತ್ತಾನೆ.

ಈ ರೀತಿ ರಾವಣನ ಸಂಹಾರಕ್ಕೆ ಸಹಾಯವಾಗುವ ಅನೇಕ ಕಪಿ ವೀರರನ್ನು ದೇವತೆಗಳು ಸೃಷ್ಟಿ ಮಾಡುತ್ತಾರೆ. ಪ್ರಾಣಿಗಳಾದ ಹುಲಿ ಮತ್ತು ಸಿಂಹಗಳ ಜೊತೆಯಲ್ಲಿ ನೇರವಾಗಿ ಸೆಣಸಬಲ್ಲಷ್ಟು ಶಕ್ತಿಯುತವಾದ ವೀರರ ಸೃಷ್ಟಿಯಾಗುತ್ತದೆ. ಕೇವಲ ತಮ್ಮ ಕೈಯಿಂದಲೇ ಬೆಳೆದು ನಿಂತ ಮರಗಳನ್ನು ಕಿತ್ತೆಸೆಯುವಷ್ಟು ಶಕ್ತಿಯುತ ರಾಗಿ ಬೆಳೆಯುತ್ತಾರೆ.

ದೊಡ್ಡದಾದ ಸಾಗರವನ್ನೇ ಕ್ಷಣಮಾತ್ರದಲ್ಲಿ ದಾಟುವ ವೀರರಿರುತ್ತಾರೆ. ಕೇವಲ ತಮ್ಮ ಕಾಲನ್ನು ಅಪ್ಪಳಿಸಿ ಭೂಮಿಯನ್ನೇ ನಡಗಿಸಬಲ್ಲ ಶಕ್ತಿವಂತರು ಕಂಡುಬರುತ್ತಾರೆ. ಇವರೆಲ್ಲರ ಮಧ್ಯೆ ವಾಲಿ ಸುಗ್ರೀವ ಮತ್ತು ಹನುಮಂತರು ಮೊದಲ ಸ್ಥಾನವನ್ನು ಗಳಿಸುತ್ತಾರೆ. ಇವರ ಬೆನ್ನ ಹಿಂದೆ ಇವರೆಲ್ಲರ ಅನುಯಾಯಿಗಳಾಗಿ ನೂರಾರು ಜನ ವಾನರರು ಇರುತ್ತಾರೆ.

ಅನೇಕ ಪಕ್ಷಿಗಳು ಸಹ ಗರುಡನಂತೆ ಪರಾಕ್ರಮ ಹೊಂದಿ ರಾಮನಿಗೆ ಸಹಾಯ ಮಾಡುವ ತವಕವನ್ನು ತೋರುತ್ತಾರೆ. ಇದನ್ನುಗಮನಿಸಿದ ಬ್ರಹ್ಮದೇವನು ದೇವತೆಗಳನ್ನು ಕುರಿತು ಶ್ರೀ ರಾಮನಾಗಿ ಜನ್ಮತಾಳಿದ ಶ್ರೀ ವಿಷ್ಣುವಿಗೆ ಸಹಾಯ ಮಾಡಲು ನೀವೆಲ್ಲರೂ ವಾನರ ಸೈನ್ಯವನ್ನೇ ಸೃಷ್ಟಿ ಮಾಡಿದ್ದೀರಿ. ಇವರಲ್ಲಿ ಹಲವರು ರಾಮನು ಜನಿಸುವ ಮುಂಚೆಯೇ ಭೂಲೋಕದಲ್ಲಿ ಜನ್ಮ ತಾಳಿರುತ್ತಾರೆ. ಮತ್ತೊಮ್ಮೆ ನ್ಯಾಯ,ನೀತಿ ಮತ್ತು ಧರ್ಮಕ್ಕೆ ಜಯದೊರೆಯುವ ಕಾಲ ಬಂದಿದೆ ಎಂದು ಹೇಳುತ್ತಾನೆ.

mysore-dasara_Entry_Point