Railway rules: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಎಷ್ಟು ಗಂಟೆಯ ಬಳಿಕ ಮಲಗಬಹುದು? ಭಾರತೀಯ ರೈಲ್ವೆಯ ನಿಯಮಗಳನ್ನು ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Railway Rules: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಎಷ್ಟು ಗಂಟೆಯ ಬಳಿಕ ಮಲಗಬಹುದು? ಭಾರತೀಯ ರೈಲ್ವೆಯ ನಿಯಮಗಳನ್ನು ತಿಳಿಯಿರಿ

Railway rules: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಎಷ್ಟು ಗಂಟೆಯ ಬಳಿಕ ಮಲಗಬಹುದು? ಭಾರತೀಯ ರೈಲ್ವೆಯ ನಿಯಮಗಳನ್ನು ತಿಳಿಯಿರಿ

Railway new rules: ಭಾರತೀಯ ರೈಲ್ವೆಯ ಸ್ಲೀಪರ್‌ ಕೋಚ್‌ ಬುಕ್ಕಿಂಗ್‌ ಮಾಡಿರುವ ಪ್ರಯಾಣಿಕರು ರೈಲಿನ ಸ್ಲೀಪರ್‌ ಬರ್ತ್‌ ಅನ್ನು ರಾತ್ರಿ ಎಷ್ಟು ಗಂಟೆಯ ಬಳಿಕ ಬೆಡ್‌ ಆಗಿ ಬಳಸಬಹುದು ಎಂದು ತಿಳಿದಿರಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ರೈಲಿನಲ್ಲಿ ಮಲಗಲು ಅವಕಾಶ ನೀಡಲಾಗಿದೆ.

Railway rules: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಎಷ್ಟು ಗಂಟೆಯ ಬಳಿಕ ಮಲಗಬಹುದು?
Railway rules: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಎಷ್ಟು ಗಂಟೆಯ ಬಳಿಕ ಮಲಗಬಹುದು?

Railway new rules: ಭಾರತೀಯ ರೈಲ್ವೆಯು ಎಲ್ಲಾ ಬಗೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸ್ಲೀಪರ್‌ ಬರ್ತ್‌ನ ಬಳಕೆ ಕುರಿತು ನಿಯಮಗಳನ್ನು ಹೊಂದಿದೆ. ರಿಸರ್ವ್‌ ಮಾಡಿದ ರೈಲ್ವೆ ಪ್ರಯಾಣವು ಖುಷಿಕೊಡುವ ವಿಚಾರ. ಆದರೆ, ಬಹುದೂರದ ಪ್ರಯಾಣ ಕೈಗೊಳ್ಳುವಾಗ ಸಹ ಪ್ರಯಾಣಿಕರ ಜತೆ ಕೆಲವೊಮ್ಮೆ ಕಿರಿಕಿರಿ ಮಾಡಿಕೊಳ್ಳಬೇಕಾಗಬಹುದು. ರೈಲಿನಲ್ಲಿ ಸ್ಲೀಪರ್‌ ಕ್ಲಾಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದರೆ ನಿಮಗೆ ನಿರ್ದಿಷ್ಟ ಸಂಖ್ಯೆಯ ಬರ್ತ್‌ ದೊರಕಬಹುದು. ಆದರೆ, ಹಗಲು ಹೊತ್ತಿನಲ್ಲಿ ಮೇಲಿನ ಬರ್ತ್‌ಗಳಲ್ಲಿ ಪ್ರಯಾಣಿಕರು ಮಲಗದೆ ಕೆಳಗಿನ ಬರ್ತ್‌ಗೆ ಬಂದು ಕುಳಿತುಕೊಳ್ಳುತ್ತಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಯಾಣಿಕರ ನಡುವೆ ವಾಗ್ವಾದಗಳು ಉಂಟಾಗಬಹುದು. ನೀನು ಬುಕ್‌ ಮಾಡಿರುವುದು ಮೇಲಿನ ಬರ್ತ್‌, ಇಲ್ಲಿಗ್ಯಾಕೆ ಬಂದೆ ಎಂದು ಕೆಲವರು ಜಗಳಕ್ಕೆ ಬರಬಹುದು. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಚರ್ಚಿಸುತ್ತಿದ್ದರು. ಕೆಲವರು ಸಂಜೆ ಐದು ಗಂಟೆಯ ಬಳಿಕ ಸ್ಲೀಪರ್‌ ಕೋಚ್‌ ಅನ್ನು ಬೆಡ್‌ ಆಗಿ ಬಳಸಬಹುದು ಎಂದು ವಾದಿಸುತ್ತಿದ್ದರು. ಇನ್ನು ಕೆಲವರು ಸಂಜೆ ಆರು ಗಂಟೆಗೆ ಎಂದು ಕಾಮೆಂಟ್‌ ಮಾಡಿದ್ದರು. ಕೆಲವರು ರಾತ್ರಿ ಹತ್ತು ಗಂಟೆ ಎನ್ನುತ್ತಿದ್ದರು. ಹಾಗಾದರೆ, ರೈಲಲ್ಲಿ ಸ್ಲೀಪರ್‌ ಬರ್ತ್‌ ಅನ್ನು ಬೆಡ್‌ ಆಗಿ ಬಳಸಲು ಸರಿಯಾದ ಸಮಯ ಯಾವುದು?

ರೈಲಿನಲ್ಲಿ ಎಷ್ಟು ಗಂಟೆ ಬಳಿಕ ನಿದ್ದೆ ಮಾಡಬಹುದು?

ರೈಲಿನಲ್ಲಿ ನಿದ್ದೆ ಮಾಡುವ ಸಮಯದ ಕುರಿತು ಭಾರತೀಯ ರೈಲ್ವೆಯ ಕಮರ್ಷಿಯಲ್‌ ಮ್ಯಾನುಯಲ್‌ ವಾಲ್ಯೂಮ್‌ 1ರ 652 ಪ್ಯಾರಾದಲ್ಲಿ ತಿಳಿಸಲಾಗಿದೆ. ಸ್ಲೀಪರ್‌ ಬೆಡ್‌ ಮೇಲೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಪ್ರಯಾಣಿಕರು ಮಲಗಬಹುದು. ಉಳಿದ ಸಮಯದಲ್ಲಿ ಕೆಳಗಿನ ಬರ್ತ್‌ ಅನ್ನು ಸೀಟ್‌ ಆಗಿ ಬಳಸಬಹುದು ಎಂದು ತಿಳಿಸಲಾಗಿದೆ. ಮೇಲಿನ ಹಂತದ ಬರ್ತ್‌ಗಳನ್ನು ಬುಕ್‌ ಮಾಡಿರುವವರು ಕೆಳಗಿನ ಬರ್ತ್‌ನ ಸೀಟ್‌ಗಳಲ್ಲಿ ಕುಳಿತುಕೊಳ್ಳಬಹುದು ಎಂದು ಹೇಳಲಾಗಿದೆ. ಆದರ, ಈ ಪ್ರಯಾಣಿಕರು ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ತಮ್ಮ ಮೇಲಿನ ಬರ್ತ್‌ಗಳನ್ನು ಹೊರತುಪಡಿಸಿ ಕೆಳಗಿನ ಬರ್ತ್‌ನಲ್ಲಿ ಕುಳಿತುಕೊಳ್ಳಬಾರದು ಎಂದು ತಿಳಿಸಲಾಗಿದೆ.

ವಿಶೇಷ ಚೇತನರು ಅಥವಾ ಅಂಗವಿಕಲರಿಗೆ ಸೀಟ್‌ ಅಥವಾ ಬರ್ತ್‌ ಅನ್ನು ಹೆಚ್ಚು ಸಮಯ ಬಳಸಲು ಅವಕಾಶ ನೀಡಲಾಗಿದೆ. ನೀವು ರಾತ್ರಿ ಹತ್ತು ಗಂಟೆಗೆ ಮೊದಲು ರೈಲಿಗೆ ಹತ್ತಿದ್ದರೆ ಟಿಟಿಇಯು ನಿಮ್ಮ ಟಿಕೆಟ್‌ ಅನ್ನು ರಾತ್ರಿ ಹತ್ತು ಗಂಟೆ ಬಳಿಕ ಪರಿಶೀಲನೆ ಮಾಡಲು ಅನುಮತಿ ಇರುವುದಿಲ್ಲ. ನೈಟ್‌ ಲ್ಯಾಂಪ್‌ ಹೊರತುಪಡಿಸಿದ ಉಳಿದ ಎಲ್ಲಾ ಲೈಟ್‌ಗಳನ್ನು ರಾತ್ರಿ ಹತ್ತು ಗಂಟೆ ಬಳಿಕ ಆಫ್‌ ಮಾಡಬೇಕು ಎಂದು ನಿಯಮದಲ್ಲಿ ತಿಳಿಸಲಾಗಿದೆ. ಗುಂಪಾಗಿ ಪ್ರಯಾಣ ಮಾಡುವವರು ರಾತ್ರಿ ಹತ್ತು ಗಂಟೆಯ ಬಳಿಕ ಇತರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ದೊಡ್ಡ ಧ್ವನಿಯಲ್ಲಿ ಮಾತನಾಡಬಾರದು.

ಎಲ್ಲಾದರೂ ನೀವು ನಿಗದಿತ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ವಿಫಲರಾದರೆ ಮುಂದಿನ ಎರಡು ಸ್ಟೇಷನ್‌ನೊಳಗೆ ರೈಲು ಹತ್ತಬಹುದು. ಈ ಸಮಯದಲ್ಲಿ ನಿಮ್ಮ ಸೀಟ್‌ ಅನ್ನು ಟಿಟಿಇಯು ಇತರೆ ಪ್ರಯಾಣಿಕರಿಗೆ ನೀಡುವುದಿಲ್ಲ. ಆದರೆ, ಎರಡು ಸ್ಟೇಷನ್‌ ದಾಟಿದ ಬಳಿಕ ನೀವು ಬಂದಿಲ್ಲವೆಂದಾದರೆ ಟಿಟಿಇಯು ನಿಮ್ಮ ಸೀಟ್‌ ಅನ್ನು ಬೇರೆಯವರಿಗೆ ನೀಡಬಹುದು.

ಹೀಗೆ ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವು ನಿಯಮಗಳನ್ನು ಹೊಂದಿದೆ. ವಿಶೇಷವಾಗಿ ರಾತ್ರಿ ಹತ್ತು ಗಂಟೆಯ ಬಳಿಕವೂ ಜನರು ನಿದ್ದೆ ಮಾಡಲು ಬಿಡದೆ ಸೌಂಡ್‌ ಮಾಡುತ್ತಿದ್ದರೆ ನೀವು ಈ ಕುರಿತು ಟಿಟಿಇಗೆ ದೂರು ನೀಡಬಹುದು. ಇದೇ ರೀತಿ ಹಗಲು ಹೊತ್ತಿನಲ್ಲಿ ಕೆಳಗಿನ ಬರ್ತ್‌ನಲ್ಲಿ ಮಲಗಲು ಬಯಸುವವರಿಗೆ ಮೇಲಿನ ಬರ್ತ್‌ನವರು ಕುಳಿತುಕೊಳ್ಳಲು ಬಂದಾಗ ಕಷ್ಟವಾಗಬಹುದು. ನೀವು ರೈಲಿನಲ್ಲಿ ಹಗಲು ಹೊತ್ತು ಕೂಡ ಮಲಗಬೇಕೆಂದು ಬಯಸಿದರೆ ಮೇಲಿನ ಬರ್ತ್‌ ಅನ್ನು (ಕೆಳಗೆ ಕುಳಿತವರ ತಲೆಗೆ ತಾಗದಷ್ಟು ಎತ್ತರದಲ್ಲಿರುವ ಮೂರನೇ ಸಾಲಿನ ಬರ್ತ್‌ ಅನ್ನು ತೆರೆದು ಮಲಗಬಹುದು.

Whats_app_banner