ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತೀರಾ; ನೀವು ತಿಳಿಯಬೇಕಾದ ಪ್ರಮುಖ 7 ನಿಯಮಗಳಿವು -Indian Railway-indian railways 7 important rules you must know before traveling by train rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತೀರಾ; ನೀವು ತಿಳಿಯಬೇಕಾದ ಪ್ರಮುಖ 7 ನಿಯಮಗಳಿವು -Indian Railway

ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುತ್ತೀರಾ; ನೀವು ತಿಳಿಯಬೇಕಾದ ಪ್ರಮುಖ 7 ನಿಯಮಗಳಿವು -Indian Railway

ಯಾವುದೇ ರೀತಿಯ ಆಡಚಣೆಗಳಿಲ್ಲದೆ ನೀವು ಸುರಕ್ಷಿತವಾಗಿ ನಿಗದಿತ ಸ್ಥಳಕ್ಕೆ ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಈ 7 ನಿಯಮಗಳು ನಿಮಗೆ ತಿಳಿದಿರಬೇಕು.

ರೈಲಿನಲ್ಲಿ ಪ್ರಯಾಣ ಮಾಡುವುದಕ್ಕು ಮುನ್ನ ಪ್ರತಿಯೊಬ್ಬ ಪ್ರಯಾಣಿಕನು ತಿಳಿದಿರಬೇಕಾದ 7 ನಿಯಮಗಳನ್ನು ಇಲ್ಲಿ ನೀಡಲಾಗಿದೆ.
ರೈಲಿನಲ್ಲಿ ಪ್ರಯಾಣ ಮಾಡುವುದಕ್ಕು ಮುನ್ನ ಪ್ರತಿಯೊಬ್ಬ ಪ್ರಯಾಣಿಕನು ತಿಳಿದಿರಬೇಕಾದ 7 ನಿಯಮಗಳನ್ನು ಇಲ್ಲಿ ನೀಡಲಾಗಿದೆ.

ಅತ್ಯಂತ ಸುರಕ್ಷಿತ ಸಾರಿಗೆಯಲ್ಲಿ ರೈಲು ಸೇವೆ ಕೂಡ ಒಂದು. ವಿಶ್ವದ ಅತಿ ದೊಡ್ಡ ರೈಲು ಸೇವೆಗಳಲ್ಲಿ ಭಾರತೀಯ ರೈಲು ಪ್ರಮುಖವಾಗಿದೆ. ದೇಶದಲ್ಲಿ ರೈಲು ಮಾರ್ಗದ ಉದ್ದ ಸುಮಾರು 68,000 ಕಿಲೋ ಮೀಟರ್‌ಗಳಿಗಿಂತ ಹೆಚ್ಚಿದೆ. ಕಳೊಂದು ದಶಕದಿಂದೀಚೆಗೆ ರೈಲುಗಳಿಗೆ ಹೊಸ ಸ್ಪರ್ಶವನ್ನು ನೀಡುವ ಮೂಲಕ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಹೊಸ ಅನುಭವವನ್ನು ನೀಡುವಂತೆ ಮಾಡಲಾಗುತ್ತಿದೆ. ದೇಶಾದ್ಯಂತ ಕನಿಷ್ಠ 23 ಲಕ್ಷ ಮಂದಿ ಪ್ರತಿನಿತ್ಯ ರೈಲುಗಳಲ್ಲಿ ಸಂಚಾರ ಮಾಡುತ್ತಾರೆ.

ನೀವೇನಾದರೂ ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ ನಿಗದಿತ ಸ್ಥಳಗಳಿಗೆ ಸುಗಮವಾಗಿ ಪ್ರಯಾಣಿಸಲು ಭಾರತೀ ರೈಲ್ವೆ ರೂಪಿಸಿರುವ ಪ್ರಮುಖ ನಿಯಮಗಳನ್ನು ತಿಳಿದುಕೊಂಡಿರಬೇಕು. ಆ ನಿಮಯಗಳು ಯಾವುವು ಅನ್ನೋದರ ವಿವರವನ್ನು ನೋಡೋಣ.

1. ಚಲಿಸುತ್ತಿರುವ ರೈಲಿನಲ್ಲಿ ವಿನಾಕಾರಣ ಅಲರ್ಟ್ ಚೈನ್ ಎಳೆಯುವಂತಿಲ್ಲ

ನೀವು ರೈಲಿನ ಪ್ರಯಾಣಿಸುವವರಾಗಿದ್ದಾರೆ. ರೈಲಿನ ಪ್ರತಿಯೊಂದು ಕೋಚ್‌ನ ಬಾಗಿಲ ಪಕ್ಕದಲ್ಲೇ ತರ್ತು ಎಚ್ಚರಿಕೆಯ ಚೈನ್ ಅಳವಡಿಸಿರುವುದನ್ನು ನೋಡಿರುತ್ತೀರಿ.ಇದನ್ನು ಎಂತಹ ಸಂದರ್ಭಗಳಲ್ಲಿ ಬಳಸಬೇಕು ಎಂಬುದು ತಿಳಿದಿರಬೇಕು. ವೈದ್ಯಕೀಯ ತುರ್ತು ಸಂದರ್ಭ, ಪ್ರಯಾಣಿಕರ ಸುರಕ್ಷತೆಗೆ ಬೆದರಿಕೆ, ಅಪಘಾತ, ಮಕ್ಕಳು, ವೃದ್ಧರು ಅಥವಾ ಅಂಗವಿಕಲ ವ್ಯಕ್ತಿ ಇಲ್ಲವೇ ಸಹ ಪ್ರಯಾಣಿಕರು ತಪ್ಪಿಸಿಕೊಂಡರೆ ತುರ್ತು ಸಂದರ್ಭದಲ್ಲಿ ಮಾತ್ರ ಈ ಚೈನ್ ಎಳೆಯಬೇಕಾಗುತ್ತದೆ.

2. ಪ್ರಯಾಣ ಮಾಡುತ್ತಲೇ ಪ್ರಯಾಣವನ್ನು ವಿಸ್ತರಿಸಿಕೊಳ್ಳಬಹುದು

ಹಬ್ಬ ಹರಿದಿನಗಳು, ಸಾಲು ಸಾಲು ರಜೆಗಳ ಸಂದರ್ಭದಲ್ಲಿ ರೈಲುಗಳು ತುಂಬಿ ತುಳುಕುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ನೀವು ನಿಗದಿತ ಸ್ಥಳಕ್ಕೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗಿರುವುದಿಲ್ಲ. ಇಂತಹ ವೇಳೆ ಸಮೀಪದ ನಿಲ್ದಾಣಕ್ಕೆ ಮಾತ್ರ ಟಿಕೆಟ್ ಖರೀದಿಸಿದ್ದರೆ ನೀವು ನಿಗದಿತ ಸ್ಥಳಕ್ಕೆ ತಲುಪಲು ಟ್ರಾವಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಆಯ್ಕೆ ಮಾಡಬಹುದು. ಟಿಕೆಟ್ ಪಡೆದು ನಿಮ್ಮ ನಿಗದಿತ ಸ್ಥಳಕ್ಕೆ ತಲುಪಬಹುದು. ಆದರೆ ಸೀಟು ಅದೇ ಇರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಖಾಲಿ ಇರುವ ಸೀಟು ನಿಮಗೆ ನೀಡಲಾಗುತ್ತದೆ.

3. ಮಧ್ಯದಲ್ಲಿನ ಬೆರ್ತ್ ನಿಯಮ

ರೈಲು ಪ್ರಯಾಣದ ವೇಳೆ ಬೆರ್ತ್ ನಿಯಮ ತುಂಬಾ ಮುಖ್ಯವಾಗಿದೆ. ಕೆಳಗಿನ ಬೆರ್ತ್‌ಗೂ ಅಪ್ಪರ್‌ ಬೆರ್ತ್‌ ನಡುವೆ ಇರುವುದೇ ಮಿಡಲ್ ಬೆರ್ತ್. ಹಗಲಿನ ಪ್ರಯಾಣದ ವೇಳೆ ಯಾವುದೇ ಕಾರಣಕ್ಕೂ ಮಧ್ಯದ ಬರ್ತ್ ಅನ್ನು ಮಡಚುವಂತಿಲ್ಲ ಎಂದು ನಿಯಮ ಹೇಳುತ್ತದೆ. ಪ್ರಯಾಣಿಕರು ಮಧ್ಯದ ಬೆರ್ತ್‌ನಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಮಾತ್ರ ಮಲಗಬಹುದಾಗಿದೆ. ಸಮಯ ಮೀರಿ ಮಡಚಿದ್ದರೆ ಕೆಳಗಿನ ಬೆರ್ತ್‌ನಲ್ಲಿರುವ ಪ್ರಯಾಣಿಕರು ಅದನ್ನು ಪ್ರಶ್ನಿಸಬಹುದು.

4. ನೀವು ರೈಲು ತಪ್ಪಿಸಿಕೊಂಡರೆ 2 ನಿಮಯ

ಪ್ರಯಾಣಿಕರು ನಿಲ್ದಾಣದಲ್ಲಿ ರೈಲು ಹತ್ತಲು ತಪ್ಪಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಪ್ರಯಾಣಿಕರಿಗೆ ಇಂಥ ಸಂದರ್ಭದಲ್ಲಿ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ರೈಲ್ವೆ ಇಲಾಖೆ ಎರಡು ನಿಲುಗಡೆಗಳ ನಿಮಯವನ್ನು ರೂಪಿಸಿದೆ. ಅಂದರೆ ರೈಲು ನಿಗದಿತ ಸ್ಟೇಷನ್‌ನಿಂದ ಹೊರಟ್ಟಿದ್ದರೆ ಮುಂದಿನ ಎರಡು ನಿಲ್ದಾಣಗಳ ವರೆಗೆ ಆ ಸೀಟನ್ನು ಬೇರೊಬ್ಬ ಪ್ರಯಾಣಿಕನಿಗೆ ವರ್ಗಾಯಿಸುವುದಿಲ್ಲ. ಕನಿಷ್ಠ ಒಂದು ಗಂಟೆ ಅಥವಾ ರೈಲು ಒಟ್ಟಾರೆ ಪ್ರಯಾಣದ ಮುಂದಿನ 2 ನಿಲ್ದಾಣಗಳವರೆಗೆ ಸೀಟ್ ಖಾಲಿ ಇರುತ್ತೆ. ಆಟೋ, ಕ್ಯಾಬ್ ಹೀಗೆ ಪ್ರಯಾಣಿಕರು ಸರ್ಕಸ್ ಮಾಡಿ ಮುಂದಿನ ನಿಲ್ದಾಣಗಳಲ್ಲಿ ರೈಲನ್ನು ಹತ್ತಿರುವ ನಿದರ್ಶನಗಳಿವೆ.

5. ರಾತ್ರಿ 10 ರನಂತರ ಸಹ ಪ್ರಯಾಣಿಕರಿಗೆ ತೊಂದರೆ ಮಾಡುವಂತಿಲ್ಲ

ರೈಲು ಪ್ರಯಾಣ ದೀರ್ಘವಾಗಿರುತ್ತದೆ. ಪ್ರಯಾಣ ಆನಂದದಾಯಕ ಹಾಗೂ ಹೊರೆಯಾಗದಿರಲು ರಾತ್ರಿ 10 ಗಂಟೆಯ ನಂತರ ಯಾರೂ ಡಿಸ್ಟರ್ಬ್ ಮಾಡುವುದಿಲ್ಲ. ಅಂದರೆ ರಾತ್ರಿ 10 ರೊಳಗೆ ಟಿಟಿಇ ಕೂಡ ಟಿಕೆಟ್ ಪರಿಶೀಲನೆ ಮುಗಿಸಿರಬೇಕೆಂಬ ನಿಮಯವಿದೆ. ಪ್ರಯಾಣಿಕರು ಸರಿಯಾಗಿ ವಿಶ್ರಾಂತಿ ಮತ್ತು ನಿದ್ದೆ ಮಾಡಲೆಂದು ರಾತ್ರಿ 10 ಗಂಟೆಯ ನಂತರ ನೈಟ್ ಮೋಡ್ ಲೈಟ್‌ಗಳನ್ನು ಹೊರತುಪಡಿಸಿದ ಉಳಿದ ಲೈಟ್‌ಗಳನ್ನು ಆಫ್ ಮಾಡಲಾಗುತ್ತದೆ. ಇದೇ ಕಾರಣಕ್ಕೆ ರಾತ್ರಿ 10ರ ನಂತರ ರೈಲಿನಲ್ಲಿ ಆಹಾರ ಸಹ ನೀಡುವುದಿಲ್ಲ.

6. ರೈಲಿನಲ್ಲಿ ಮಾರಾಟ ಮಾಡುವ ಆಹಾರದ ಪ್ಯಾಕೆಟ್‌ಗೆ ನಿಗದಿತ ಬೆಲೆ

ಇದನ್ನೂ ಓದಿ: ಕೇರಳ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರುವರೆಗೂ ವಿಸ್ತರಣೆ, ವೇಳಾಪಟ್ಟಿ ಇಲ್ಲಿದೆ

ಬಸ್ಸು ಅಥವಾ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿಲ ಆಹಾರ, ನೀರು ಹಾಗೂ ಇತರೆ ತನಿಸುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ರೈಲಿನಲ್ಲಿ ನೀಡುವ ಆಹಾರದ ಪ್ಯಾಕ್‌ಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ. ಎಂಆರ್‌ಪಿಎಸ್ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಆಹಾರ ಗುಣಮಟ್ಟದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಳಪೆ ಆಹಾರ, ಪಾನೀಯಗಳನ್ನು ಪೂರೈಸಿದರೆ ಭಾರಿ ದಂಡವನ್ನು ವಿಧಿಸುವ ಅಥವಾ ಪರವಾನಿಗೆ ರದ್ದು ಮಾಡುವ ಅವಕಾಶ ಇದೆ.

7. ರೈಲಿನಲ್ಲಿ ಜೋರಾಗಿ ಶಬ್ದ ಮಾಡುವಂತಿಲ್ಲ

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ರೂಪಿಸಿರುವ ಮಾರ್ಗಸೂಚಿಗಳಲ್ಲಿ ಇದುಕೂಡ ಪ್ರಮುಖವಾಗಿದೆ. ರೈಲಿನಲ್ಲಿ ಜೋರಾಗಿ ಶಬ್ದ ಮಾಡುವುದನ್ನು ನಿಷೇಧಿಸಿದೆ. ಸಹ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಫೋನ್‌ ವೀಕ್ಷಣೆ ವೇಳೆ ವಾಲ್ಯೂಮ್ ಕಡಿಮೆ ಇಟ್ಟುಕೊಳ್ಳಬೇಕು ಅಥವಾ ಹೆಡ್‌ಫೋನ್ ಬಳಸುವಂತೆ ಸಲಹೆ ನೀಡಲಾಗಿದೆ. ರಾತ್ರಿ ವೇಳೆ ಪ್ರಯಾಣಿಕರು ಮಲಗಿರುವ ಸಂದರ್ಭದಲ್ಲಿ ಫೋನ್ ಕರೆಗಳು ಬಂದಾಗ ಕಡಿಮೆ ಧ್ವನಿಯಲ್ಲಿ ಮಾತನಾಡಬೇಕು.

(This copy first appeared in Hindustan Times Kannada website. To read more like this please logon to kannada.hindustantimes.com )

mysore-dasara_Entry_Point