Indian Railways: ರೈಲಿನ 1 ಬೋಗಿಯಲ್ಲಿ ಎಷ್ಟು ಚಕ್ರ ಇರುತ್ತದೆ? ತೂಕ, ಆಕಾರ ಸೇರಿದಂತೆ ರೈಲಿನ ಗಾಲಿಯ ಆಸಕ್ತಿದಾಯಕ ವಿಷಯಗಳನ್ನು ತಿಳಿಯಿರಿ
Rail wheel Facts: ರೈಲಿನ ಚಕ್ರದ ಆಕಾರ ಹೊರಗೆ ತೆಳ್ಳಗೆ, ಒಳಗೆ ದಪ್ಪಗೆ ಏಕೆ ಇರುತ್ತದೆ? ರೈಲಿನ ಗಾಲಿಯ ತೂಕ ಎಷ್ಟಿರುತ್ತದೆ? ರೈಲಿನಲ್ಲಿ ಎಷ್ಟು ಬೋಗಿಗಳು ಇರುತ್ತವೆ? ಹೀಗೆ ರೈಲಿನ ಬೋಗಿ, ಚಕ್ರಗಳ ಕುರಿತಾದ ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

ಪ್ರತಿದಿನ ಲಕ್ಷಾಂತರ ಜನರು ಭಾರತೀಯ ರೈಲ್ವೆಯ ವಿವಿಧ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನೀವು ಕೂಡ ರೈಲಿನಲ್ಲಿ ಸಾಕಷ್ಟು ಬಾರಿ ಸಂಚರಿಸಿರಬಹುದು. ನೀವು ಎಂದಾದರೂ ರೈಲಿನ ಗಾಲಿ ಅಥವಾ ರೈಲಿನ ಚಕ್ರಗಳನ್ನು ಗಮನಿಸಿದ್ದೀರಾ? ರೈಲಿನ ಚಕ್ರದ ಆಕಾರ ಏಕೆ ಶಂಖಾಕೃತಿಯಲ್ಲಿದೆ? ಈ ಚಕ್ರ ಎಷ್ಟು ತೂಕ ಇರಬಹುದು ಎಂದು ಯೋಚಿಸಿದ್ದೀರ? ರೈಲಿನ ಗಾಲಿಗೆ ಸಂಬಂಧಪಟ್ಟ ಒಂದಿಷ್ಟು ವಿಚಾರಗಳು ಇಲ್ಲಿವೆ.
ಒಂದು ಬೋಗಿಯಲ್ಲಿ ಎಷ್ಟು ಚಕ್ರಗಳು ಇರುತ್ತವೆ?
ಒಂದು ಕೋಚ್‌ನಲ್ಲಿ ಎರಡು ಬೋಗಿಗಳು ಇರುತ್ತವೆ. ಎರಡು ಬೋಗಿಗಳಲ್ಲಿ (ಒಂದು ಕೋಚ್‌ನಲ್ಲಿ) ಎಂಟು ಚಕ್ರಗಳು ಇರುತ್ತವೆ. ಸಾಮಾನ್ಯವಾಗಿ ಪ್ಯಾಸೇಂಜರ್ ಟ್ರೇನ್‌ಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕೋಚುಗಳು (ಒಂದು ಕೋಚ್‌ನಲ್ಲಿ ಎರಡು ಬೋಗಿ ಇರಬಹುದು, ಕೋಚ್ ಬೇರೆ, ಬೋಗಿ ಬೇರೆ ನೆನಪಿಟ್ಟುಕೊಳ್ಳಿ) ಇರುತ್ತವೆ. ಪ್ಯಾಸೇಂಜರ್ ಕಾರ್ಸ್‌ನಲ್ಲಿ (ಕೋಚ್) ನಾಲ್ಕು ಆ್ಯಕ್ಸೆಲ್‌ಗಳು ಅಂದರೆ ಎಂಟು ಚಕ್ರಗಳು ಇರುತ್ತವೆ. ಪ್ರತಿಯೊಂದು ಬೋಗಿಗಳು ಎರಡು ಆ್ಯಕ್ಸೆಲ್‌ಗಳು ಅಂದರೆ ನಾಲ್ಕು ಚಕ್ರಗಳನ್ನು ಹೊಂದಿರುತ್ತವೆ. ನಾಲ್ಕು ಆ್ಯಕ್ಸೆಲ್ ಇದ್ದರೆ ಎಂಟು ಚಕ್ರಗಳು, ಆರು ಆಕ್ಸೆಲ್ ಇದ್ದರೆ 12 ಚಕ್ರಗಳು ಇರುತ್ತವೆ. ಸರಕು ಸಾಗಾಟದ ರೈಲುಗಳಲ್ಲಿ ಆಯಾ ಸರಕು ಸಾಗಾಟದ ರೈಲಿಗೆ ತಕ್ಕಂತೆ ಈ ಸಂಖ್ಯೆ ಹೆಚ್ಚು ಇರಬಹುದು.
ರೈಲಿನ ಚಕ್ರದ ಆಕಾರ ಏಕೆ ಹೀಗಿದೆ?
ರೈಲು ಹಳಿಯ ಮೇಲೆ ಇರುವ ಚಕ್ರದ ಹೊರಭಾಗವು ಸಣ್ಣ ಗಾತ್ರ ಹೊಂದಿರುತ್ತದೆ, ಒಳಭಾಗವು ತುಸು ಹೆಚ್ಚು ದಪ್ಪಗಾಗಿ ಇರುತ್ತದೆ. ಅಂದರೆ, ಇದು ಕೊನಿಕಲ್ (ಶಂಕುವಿನಾಕರ) ಆಕಾರ ಹೊಂದಿರುತ್ತದೆ. ರೈಲುಗಳ ಸುರಕ್ಷತೆ, ಸ್ಥಿರತೆಗೆ ಈ ಆಕಾರದ ಕೊಡುಗೆ ಅಪಾರ. ಇದು ಸಂಕೀರ್ಣ ಎಂಜಿನಿಯರಿಂಗ್ ತತ್ತ್ವಗಳ ಪರಿಣಾಮವಾಗಿದೆ. ಈ ಆಕಾರವು ಸನ್ನೆ ತತ್ತ್ವವನ್ನು ಆಧರಿಸಿದೆ. ಹಳಿ ಬಿಟ್ಟು ಚಕ್ರ ಕೆಳಕ್ಕೆ ಬೀಳದಂತೆ ನೋಡಿಕೊಳ್ಳಲು ಈ ವಿನ್ಯಾಸ ನೆರವಾಗುತ್ತದೆ. ಚಕ್ರಗಳ ಆಕಾರ ಮತ್ತು ಅದರ ಹಿಂದಿನ ಎಂಜಿನಿಯರಿಂಗ್ ತತ್ತ್ವಗಳ ಬಗ್ಗೆ ಈ ಮುಂದಿನ ವಿಡಿಯೋ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಒಂದು ರೈಲಿನ ಚಕ್ರ (ಗಾಲಿ) ಎಷ್ಟು ವರ್ಷ ಬಾಳಿಕೆ ಬರುತ್ತದೆ?
ಸಾಮಾನ್ಯವಾಗಿ ಒಂದು ರೈಲಿನ ಚಕ್ರವು ಸಾಮಾನ್ಯವಾಗಿ ಸುಮಾರು ಮೂರು ವರ್ಷ ಬಾಳಿಕೆ ಬರುತ್ತದೆ. ರೈಲಿನ ಚಕ್ರದ ಬಾಳ್ವಿಕೆಯು ಅದು ಪ್ರಯಾಣಿಸಿದ ದೂರ ಇತ್ಯಾದಿ ಇತರೆ ಅಂಶಗಳಿಗೆ ತಕ್ಕಂತೆ ಇರುತ್ತದೆ.
ರೈಲಿನ ಚಕ್ರವನ್ನು ಕಂಡುಹಿಡಿದವರು ಯಾರು?
ಜಾರ್ಜ್ ಸ್ಟೀಫನ್ಸನ್ ಅವರನ್ನು ಫಾದರ್ ಆಫ್ ಟ್ರೇನ್ ವೀಲ್ಸ್ ಎಂದು ಕರೆಯಲಾಗುತ್ತದೆ. 1814ರಲ್ಲಿ ಮೊದಲ ಬಾರಿಗೆ ಇವರು ಬ್ಲೂಚರ್ ಎಂಬ ತನ್ನ ಸ್ಟ್ರೀಮಿಂಗ್ ಎಂಜಿನ್‌ಗೆ ಈ ಚಕ್ರ ಅಳವಡಿಸಿದರು.
ಒಂದು ರೈಲಿನಲ್ಲಿ ಎಷ್ಟು ಬೋಗಿಗಳು ಇರುತ್ತವೆ?
ಸಾಮಾನ್ಯವಾಗಿ ಒಂದು ರೈಲಿನಲ್ಲಿ 12 ಬೋಗಿಗಳು ಇರುತ್ತವೆ. ಈ ಸಂಖ್ಯೆಯನ್ನು ಹೆಚ್ಚೂ ಮಾಡಬಹುದು. ಕಡಿಮೆ ಮಾಡಬಹುದು. ಪ್ರತಿಯೊಂದು ಬೋಗಿಯೂ 18 ಮೀಟರ್ ಉದ್ದವಿರುತ್ತದೆ.
ಒಂದು ರೈಲಿನ ಚಕ್ರ ಎಷ್ಟು ತೂಕ ಇರುತ್ತದೆ?
ರೈಲಿನ ತೂಕ ಸುಮಾರು 800ರಿಂದ 900 ಎಲ್‌ಬಿಎಸ್ ತೂಕ ಹೊಂದಿರುತ್ತದೆ. ಅಂದರೆ, 362 ಕೆಜಿಯಿಂದ 408 ಕೆಜಿ ಇರುತ್ತದೆ. ಕೆಲವೊಂದು ರೈಲುಗಳ ಗಾಲಿ ತೂಕವು ಸುಮಾರು 554 ಕೆಜಿ ತನಕ ಇರುತ್ತದೆ. ಮೀಟರ್‌ಗೇಜ್ ರೈಲಿನ ಗಾಲಿ ತೂಕ ಸುಮಾರು 144 ಕೆಜಿ ಇರುತ್ತದೆ.
