ಕನ್ನಡ ಸುದ್ದಿ  /  Lifestyle  /  Indian Railways How To Book Train Coach Or Entire Train For Trip Cost And Other Details Here Rmy

Indian Railways: ಪ್ರವಾಸ ಹೋಗಲು ರೈಲು ಕೋಚ್ ಅಥವಾ ಇಡೀ ರೈಲನ್ನೇ ಬುಕ್ ಮಾಡುವುದು ಹೇಗೆ; ಈ ವಿಧಾನ ತಿಳಿಯಿರಿ

ಐಆರ್‌ಸಿಟಿಸಿಯಲ್ಲಿ ರೈಲಿನ ಒಂದು ಬೋಗಿ ಅಥವಾ ಇಡೀ ರೈಲನ್ನೇ ಬುಕ್ ಮಾಡಿಕೊಳ್ಳಬಹುದು. ಅದು ಹೇಗೆ, ಹಣ ಎಷ್ಟಾಗುತ್ತೆ, ಏನೆಲ್ಲಾ ಪ್ರಕ್ರಿಯೆಗಳು ಇರಲಿವೆ ಅನ್ನೋದನ್ನ ತಿಳಿಯಿರಿ.

ರೈಲಿನ ಒಂದು ಬೋಗಿ ಅಥವಾ ಇಡೀ ರೈಲನ್ನೇ ಬುಕ್ ಮಾಡಿಕೊಂಡು ಪ್ರವಾಸಕ್ಕೆ ಹೋಗಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ. (ಫೋಟೋ ಫೈಲ್-AP)
ರೈಲಿನ ಒಂದು ಬೋಗಿ ಅಥವಾ ಇಡೀ ರೈಲನ್ನೇ ಬುಕ್ ಮಾಡಿಕೊಂಡು ಪ್ರವಾಸಕ್ಕೆ ಹೋಗಬಹುದು. ಅದು ಹೇಗೆ ಅನ್ನೋದರ ವಿವರ ಇಲ್ಲಿದೆ. (ಫೋಟೋ ಫೈಲ್-AP) (AP)

ಬೆಂಗಳೂರು: ಪ್ರವಾಸಕ್ಕೆ ಹೋಗಲು ಸಾಮಾನ್ಯವಾಗಿ ಬಸ್, ಕಾರು, ಟಿಟಿಗಳನ್ನು ಬುಕ್ ಮಾಡಿಕೊಂಡು ಹೋಗುವುದನ್ನ ನೋಡಿದ್ದೇವೆ. ಭಾರತದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ರೈಲಿನಲ್ಲೂ ಟಿಕೆಟ್ ಬುಕ್ ಮಾಡಿಕೊಂಡು ಪ್ರವಾಸ ಹೋಗೋದು ಹಳೆಯ ವಿಚಾರ. ಆದರೆ ರೈಲಿನ ಒಂದು ಬೋಗಿ ಇಲ್ಲವೇ ಇಡೀ ರೈಲನ್ನೇ ಬುಕ್ ಮಾಡಿಕೊಳ್ಳಬಹುದು. ಇದು ಅಚ್ಚರಿ ಅನಿಸಿದರೂ ನಿಜ. ಎಷ್ಟೋ ಮಂದಿಗೆ ಒಂದು ರೈಲಿನ ಬೋಗಿ ಅಥವಾ ಇಡೀ ರೈಲನ್ನೇ ಬುಕ್ ಮಾಡಿಕೊಂಡು ಪ್ರವಾಸ ಹೋಗಬಹುದಾದ ವಿಚಾರ ತಿಳಿದಿರುವುದಿಲ್ಲ. ಒಂದು ವೇಳೆ ನಿಮಗೆ ಈ ಮಾಹಿತಿ ತಿಳಿಯದಿದ್ದರೆ ಈ ಸ್ಟೋರಿ ಸಂಪೂರ್ಣ ವಿವರ ತಿಳಿಬಹುದು. ಒಂದು ರೈಲಿನ ಬೋಗಿ ಅಥವಾ ಇಡೀ ರೈಲನ್ನೇ ಐಆರ್‌ಸಿಟಿಸಿಯಲ್ಲಿ ಬುಕ್ ಮಾಡಿಕೊಳ್ಳುವುದು ಹೇಗೆ, ಖರ್ಚು ಎಷ್ಟಾಗುತ್ತೆ, ಬುಕಿಂಗ್ ಮಾರ್ಗಸೂಚಿ, ಏನೆಲ್ಲಾ ದಾಖಲೆಗಳು ಬೇಕು ಅನ್ನೋದರ ಮಾಹಿತಿ ಇಲ್ಲಿದೆ.

ಚಾರ್ಟರ್ ಟ್ರೈನ್ ಅಥವಾ ರೈಲಿನ ಕೋಚ್ ಅನ್ನು ಐಆರ್‌ಸಿಟಿಸಿಯ ಎಫ್‌ಟಿಆರ್ ವೆಬ್‌ಸೈಟ್‌ನಲ್ಲಿ ಬುಕ್ ಮಾಡಿಕೊಳ್ಳಬಹುದು. ಯಾವುದೇ ರೈಲು ನಿಲ್ದಾಣದಿಂದ ಈ ಪ್ರಯಾಣವನ್ನು ಆರಂಭಿಸಬಹುದು. ಆದರೆ ರೈಲು ನಿಲುಗಡೆಗೆ 10 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ಚಾರ್ಟರ್ ಕೋಚ್‌ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಬುಕ್ ಮಾಡಿಕೊಳ್ಳುವ ಕೋಚ್‌ಗಳನ್ನ ಎಲ್ಲಾ ರೈಲುಗಳೊಂದಿಗೆ ಜೋಡಿಸಲಾಗುವುದಿಲ್ಲ.

ರೈಲು ಕೋಚ್ ಅಥವಾ ಇಡೀ ರೈಲನ್ನು ಎಷ್ಟು ದಿನಗಳಿಗಿಂತ ಮೊದಲು ಬುಕ್ ಮಾಡಿಕೊಳ್ಳಬೇಕು?

ಎಫ್‌ಟಿಆರ್ ನೋಂದಣಿಯನ್ನು ಗರಿಷ್ಠ 6 ತಿಂಗಳ ಮುಂಚಿತವಾಗಿ ಮತ್ತು ಪ್ರಯಾಣದ ದಿನಾಂಕಕ್ಕೆ 30 ದಿನಗಳ ಮೊದಲು ಬುಕ್ ಮಾಡಿಕೊಳ್ಳಬೇಕಾಗುತ್ತದೆ

ಒಂದು ರೈಲಿನಲ್ಲಿ ಕನಿಷ್ಠ ಎಷ್ಟು ಕೋಚ್‌ಗಳನ್ನ ಬುಕ್ ಮಾಡಿಕೊಳ್ಳಬಹುದು?

ರೈಲ್ವೆ ಇಲಾಖೆಯಲ್ಲಿನ ತಾಂತ್ರಿಕ ಕಾರ್ಯಸಾಧ್ಯತೆಗಳನ್ನು ಅವಲಂಬಿಸಿ ಫುಲ್‌ ತಾರೀಫ್‌ ರೇಟ್ (ಎಫ್‌ಟಿಆರ್‌) ನಲ್ಲಿ ಒಂದು ರೈಲಿನಲ್ಲಿ 2 ಕೋಚ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. 2 ಎಸ್‌ಎಲ್‌ಆರ್ ಕೋಚ್‌ಗಳು, ಜನರೇಟರ್ ಕಾರ್ ಸೇರಿದಂತೆ ಗರಿಷ್ಠ 24 ಕೋಚ್‌ಗಳನ್ನು ಕಾಯ್ದಿರಿಸಲು ಅವಕಾಶವಿದೆ.

ರೈಲು ಕೋಚ್ ಅಥವಾ ಇಡೀ ರೈಲನ್ನು ಬುಕ್ ಮಾಡಿಕೊಳ್ಳಲು ಭದ್ರತಾ ಠೇವಣಿ ಕಡ್ಡಾಯ

ಒಂದು ವೇಳೆ ನೀವೇನಾದರೂ ರೈಲಿನ ಕೋಚ್ ಅಥವಾ ಇಡೀ ರೈಲನ್ನು ಬುಕ್ ಮಾಡಿಕೊಳ್ಳಲು ಬಯಸಿದರೆ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಕೋಚ್‌ಗಳ ಪ್ರಯಾಣದ ವಿವರ, ಮಾರ್ಗ ಹಾಗೂ ಇತರೆ ವಿವರಗಳೊಂದಿಗೆ ನೋಂದಣಿ ಮತ್ತು ಪ್ರತಿ ಕೋಚ್‌ಗೆ 50,000 ರೂಪಾಯಿ ಭದ್ರತಾ ಠೇವಣಿ ಪಾವತಿಸಬೇಕು. 18 ಕೋಚ್‌ಗಳ ರೈಲಿಗೆ ಒಟ್ಟಾಗಿ 9 ಲಕ್ಷ ಠೇವಣಿ ಪಾವತಿಸಬೇಕಾಗುತ್ತದೆ.

ರೈಲು ಬೋಗಿ ಅಥವಾ ಇಡೀ ರೈಲು ಬುಕ್ ಮಾಡಿಕೊಳ್ಳುವುದು ಹೇಗೆ

  • ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಎಫ್‌ಟಿಆರ್‌ನ www.ftr.irctc.co.in ಭೇಟಿ ನೀಡಿ
  • ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಆಗಿ (ಒಂದು ವೇಳೆ ಲಾಗಿನ್ ಐಡಿ ಇಲ್ಲದಿದ್ದರೆ ಹೊಸದಾಗಿ ರಚಿಸಿಕೊಳ್ಳಿ)
  • ರೈಲಿನ ಇಡೀ ಕೋಚ್‌ ಅನ್ನು ಕಾಯ್ದಿರಿಸಬೇಕಾದರೆ ಎಫ್‌ಟಿಆರ್ ಸರ್ವೀಸ್ ಅನ್ನು ಆಯ್ಕೆ ಮಾಡಿ
  • ಪೇಮೆಂಟ್‌ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ನಮೂದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
  • ಬಳಿಕ ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ಇನ್ಮುಂದೆ ನಿಮ್ಮ ಶ್ವಾನಕ್ಕೂ ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಬಹುದು; ಅದು ಹೇಗೆ ಅಂತೀರಾ

ಬೋಗಿ ಅಥವಾ ಇಡೀ ರೈಲನ್ನು ಬುಕ್ ಮಾಡಿಕೊಳ್ಳುವ ಮುನ್ನ ನಿಮಗೆ ಈ ಮಾಹಿತಿ ತಿಳಿದಿರಬೇಕು

  • ಪ್ರವಾಸಕ್ಕೆ ಹೋಗುವ ದಿನಾಂಕದಿಂದ ಕನಿಷ್ಠ 6 ತಿಂಗಳ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕು
  • ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ. ನಿಮ್ಮ ಪ್ರಯಾಣ ಮುಗಿದ ಬಳಿಕ ಠೇವಣಿ ಮೊತ್ತವನ್ನ ವಾಪಸ್ ನೀಡಲಾಗುತ್ತೆ
  • ನೀವು ಬುಕ್ ಮಾಡಿಕೊಳ್ಳುವ ಕೋಚ್ ಅಥವಾ ಇಡೀ ರೈಲಿಗೆ ಐಆರ್‌ಸಿಟಿಸಿ ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡುತ್ತದೆ. ಇದರ ನಿಮಗೆ ಹಲವಾರು ಆಯ್ಕೆಗಳಿರುತ್ತವೆ. ನೀವು ಹಣಕ್ಕೆ ತಕ್ಕಂತೆ ಕ್ಯಾಟರಿಂಗ್ ಸಿಗುತ್ತದೆ