Indian Railways: ರೈಲಿನಲ್ಲಿ ಏನು ಕೊಂಡೊಯ್ಯಬಹುದು? ಏನು ಕೊಂಡೊಯ್ಯಬಾರದು? ಭಾರತೀಯ ರೈಲ್ವೆಯ ಲಗೇಜ್ ರೂಲ್ಸ್ ತಿಳಿದುಕೊಳ್ಳಿ
ರೈಲು ಪ್ರಯಾಣದ ವೇಳೆ ನಿಮ್ಮ ಲಗೇಜ್ ಹೇಗಿರಬೇಕು, ಎಷ್ಟು ಕೆಜಿ ವರೆಗೆ ಅನುಮತಿ ನೀಡಲಾಗುತ್ತೆ, ನಿಗದಿಗಿಂತ ಹೆಚ್ಚು ಲಗೇಜ್ ತೆಗೆದುಕೊಂಡು ಹೋದರೆ ಏನು ಆಗುತ್ತೆ? ರೈಲು ಲಗೇಜ್ ನಿಯಮಗಳು ಏನು ಹೇಳುತ್ತವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾರಿಗೆಗಳಲ್ಲಿ ಅತ್ಯಂತ ಸುರಕ್ಷಿತವೆಂದರೆ ಅದು ರೈಲು ಸೇವೆ. ರೈಲಿನಲ್ಲಿ ಪ್ರಯಾಣಿಸಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮೊಂದಿಗೆ ಲಗೇಜ್ ಅನ್ನು ಸಹ ತೆಗೆದುಕೊಂಡು ಹೋಗಬಹುದು. ಆದರೆ ನಿಮ್ಮೊಂದಿಗೆ ತೆಗೆದುಕೊಂಡು ಹೋಗುವ ವಸ್ತುಗಳ ಬಗ್ಗೆ ರೈಲು ನಿಯಮಗಳನ್ನು ತಿಳಿದುಕೊಳ್ಳಬೇಕು. ಈ ನಿಯಮಗಳು ನಿಮಗೆ ತಿಳಿದಿದ್ದರೆ ಮುಂದಾಗುವ ಸಮಸ್ಯೆಗಳಿದೆ ಪಾರಾಗಬಹುದು. ನಿಗದಿತ ಮಿತಿಗಿಂತ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋದರೆ ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಮೊದಲೇ ರೈಲಿನಲ್ಲಿ ಏನು ಕೊಂಡೊಯ್ಯಬಹುದು? ಏನು ಕೊಂಡೊಯ್ಯಬಾರದು ಎಂಬುದರ ಕುರಿತು ಭಾರತೀಯ ರೈಲ್ವೆಯ ಲಗೇಜ್ ರೂಲ್ಸ್ ತಿಳಿದುಕೊಳ್ಳಿ.
100 ಕೆಜಿಗಿಂತ ಹೆಚ್ಚಿನ ತೂಕ ಅಥವಾ ಹೊರಗಿನ ಅಳತೆಯಲ್ಲಿ 1 ಮೀ*1ಮೀ*0.7 ಮೀಟರ್ ಮೀರಿದೆ. ನಿರ್ದಿಷ್ಟಪಡಿಸಿದ ಆಯಾಮಗಳಲ್ಲಿ ಯಾವುದಾದರೂ ಒಂದನ್ನು ಮೀರಿದ ಪ್ಯಾಕೇಜ್ ಅನ್ನು ಬೃಹತ್ ಲಗೇಜ್ ಎಂದು ಪರಿಗಣಿಸಲಾಗುತ್ತದೆ. ವಾಲ್ಯೂ-ಮೆಟ್ರಿಕ್ ಆಧಾರದ ಮೇಲೆ ನಿಜವಾದ ತೂಕವು 100 ಕೆಜಿಗಿಂತ ಕಡಿಮೆಯಿದ್ದರೂ ಸಹ. ಆಯಾಮಗಳಲ್ಲಿ ಒಂದನ್ನು ನಿಗದಿತ ಶೇಕಡಾ 10 ರಷ್ಟು ಮೀರುವಂತಿಲ್ಲ.
ಯಾವುದೇ ಕಾರಣಕ್ಕೂ ಇವುಗಳನ್ನ ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ
ಆಕ್ರಮಣಕಾರಿ ಆರ್ಟಿಕಲ್ಸ್, ಸ್ಫೋಟಕ, ಅಪಾಯಕಾರಿ ವಸ್ತುಗಳು, ಸುಡುವ ಆರ್ಟಿಕಲ್ಸ್ ಹಾಗೂ ಮತ್ತು ಖಾಲಿ ಕ್ಯಾಸ್ ಸಿಲಿಂಡರ್, ಸತ್ತ ಕೋಳಿ, ಆಮ್ಲಗಳು ಹಾಗೂ ನಾಶಕಾರಿ ಪದಾರ್ಥಗಳು ಹಾಗೂ ಇತರೆ ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ.
ಯಾವ ವರ್ಗದ ರೈಲಿನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು?
ವರ್ಗ | ಉಚಿತ (ಕೆಜಿ) | ಮಾರ್ಜಿನಲ್ ಮಿತಿ (ಕೆಜಿ) | ಅನುಮತಿಸಲಾದ ಗರಿಷ್ಠ ಪ್ರಮಾಣ ಮಿತಿ (ಕೆಜಿ) |
ಎಸಿ ಪ್ರಥಮ ದರ್ಜೆ | 70 | 15 | 150 |
ಎಸಿ 2 ಟೈಯರ್ ಸ್ಲೀಪರ್/ ಪ್ರಥಮ ದರ್ಜೆ | 50 | 10 | 100 |
ಎಸಿ 3 ಟೈಯರ್ ಸ್ಲೀಪರ್/ ಎಸಿ ಚೇರ್ ಕಾರ್ | 40 | 10 | 40 |
ಸ್ಲೀಪರ್ | 40 | 10 | 80 |
ಎರಡನೇ ವರ್ಗ | 35 | 10 | 70 |
ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಲಗೇಜ್‌ಗಳನ್ನು ಕಂಡುಕೊಂಡರೆ ರೈಲ್ವೆ ಕೆಲವು ಮಾರ್ಜಿನ್ ಅನ್ನು ನಿಗದಿಪಡಿಸಿದೆ, ಆದರೆ ಲಗೇಜ್ ಇದಕ್ಕಿಂತ ಹೆಚ್ಚು ಭಾರವಾಗಿದ್ದರೆ, ಬುಕ್ಕಿಂಗ್ ಮೊತ್ತದ ಆರು ಪಟ್ಟು ದಂಡವನ್ನು ನಿಗದಿಪಡಿಸಲಾಗುತ್ತದೆ. ಅಲ್ಲದೆ, ನಿಷೇಧಿತ ವಸ್ತುಗಳು ಕಂಡುಬಂದರೆ, ಆರ್‌ಪಿಎಫ್ ಮತ್ತು ಜಿಆರ್‌ಪಿ ಮೂಲಕ ಕ್ರಮ ಕೈಗೊಳ್ಳಬಹುದು. ಜೈಲು ಶಿಕ್ಷೆಗೂ ಅವಕಾಶವಿದೆ.
ನೀವು ಹೆಚ್ಚುವರಿ ಲಗೇಜ್ ಹೊಂದಿದ್ದರೆ ಹೀಗೆ ಮಾಡಿ
ಪ್ರಯಾಣಿಕರು ದೊಡ್ಡ ಮತ್ತು ಭಾರವಾದ ಸಾಮಾನುಗಳನ್ನು ಹೊಂದಿದ್ದರೆ, ಅವರು ಅದನ್ನು ಟಿಕೆಟ್ ತೋರಿಸಿ ಪಾರ್ಸೆಲ್ ಕೌಂಟರ್‌ನಲ್ಲಿ ಕಾಯ್ದಿರಿಸಬೇಕು. ಆ ಲಗೇಜ್ ಅನ್ನು ಲಗೇಜ್ ವಾಹನದಲ್ಲಿ ಸಾಗಿಸಬಹುದು. ಇದಕ್ಕಾಗಿ ರೈಲ್ವೆ ನಿಗದಿಪಡಿಸಿದ ದರವನ್ನು ಲಗೇಜ್ ಕೌಂಟರ್ ನಲ್ಲಿ ಪಾವತಿಸಬೇಕಾಗುತ್ತದೆ. ಇದು ಪ್ರಯಾಣದ ಸಮಯದಲ್ಲಿ ತೊಂದರೆಗಳನ್ನು ತಪ್ಪಿಸಬಹುದು.
ಲಗೇಜ್ ಕಳುವಾದರೆ ಏನು ಮಾಡಬೇಕು?
ಚಾಲನೆಯಲ್ಲಿರುವ ರೈಲುಗಳಲ್ಲಿ ಸಾಮಾನುಗಳ ಕಳ್ಳತನ, ದರೋಡೆ / ಡಕಾಯಿಟ್‌ಗಳ ಸಂದರ್ಭದಲ್ಲಿ ನೀವು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಬೇಕು.
ರೈಲು ಕಂಡಕ್ಟರ್‌ಗಳು/ಕೋಚ್ ಅಟೆಂಡೆಂಟ್/ಗಾರ್ಡ್‌ಗಳು ಅಥವಾ ಜಿಆರ್‌ಪಿ ಎಸ್ಕಾರ್ಟ್ ಅನ್ನು ಸಂಪರ್ಕಿಸಿ ಎಫ್‌ಐಆರ್ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಿ. ಇದನ್ನ ನಂತರ ಅಗತ್ಯ ಕ್ರಮಕ್ಕಾಗಿ ಪೊಲೀಸ್ ಠಾಣೆಗೆ ದೂರು ರವಾನಿಸಲಾಗುತ್ತದೆ.
ಪೊಲೀಸರಿಗೆ ದೂರು ನೀಡಲು ನಿಮ್ಮ ಪ್ರಯಾಣವನ್ನು ಅರ್ಧಕ್ಕೆ ಮೊಟುಗೊಳಿಸುವ ಅಗತ್ಯವಿಲ್ಲ. ಪ್ರಯಾಣ ಮುಂದುವರಿಸಬಹುದು. ಯಾವುದೇ ರೀತಿಯ ಸಹಾಯಕ್ಕಾಗಿ ಪ್ರಮುಖ ರೈಲು ನಿಲ್ದಾಣಗಳಲ್ಲಿ ಆರ್‌ಪಿಎಫ್ ಸಹಾಯ ಪಡೆಯಲು ಅವಕಾಶ ಇರುತ್ತದೆ.
ಲಗೇಜ್ ಕಳ್ಳತನವಾದರೆ ಏನು ಮಾಡಬೇಕು?
ಒಂದು ವೇಳೆ ಲಗೇಜ್ ಕಳೆದು ಹೋದರೆ 'ಟಿಟಿಇಗಳು/ಗಾರ್ಡ್‌ಗಳು ಅಥವಾ ಜಿಆರ್‌ಪಿ ಎಸ್ಕಾರ್ಟ್‌ಗೆ ದೂರು ಸಲ್ಲಿಸಬೇಕು. ಇದನ್ನು ಸಂಚಾರದ ವೇಳೆಯಲ್ಲೇ ಮುಂದಿನ ಪೊಲೀಸ್ ಠಾಣೆಯಲ್ಲಿ ವರದಿ ಮಾಡಲಾಗುತ್ತದೆ.
ಸಾಕುಪ್ರಾಣಿಗಳು, ನಾಯಿಗಳು, ಕುದುರೆಗಳನ್ನು ಇತರ ಲೈವ್‌ಗೆ ಸಾಗಿಸುವ ನಿಯಮಗಳು
ಪ್ರಾಣಿಗಳು ಮತ್ತು ಪಕ್ಷಿಗಳು
ಭಾರತೀಯ ರೈಲ್ವೆ ಕಾಯಿದೆಯ ಸೆಕ್ಷನ್ 77-A ಅಡಿಯಲ್ಲಿ, ರೈಲ್ವೆಯ ಹೊಣೆಗಾರಿಕೆ ಇರುತ್ತದೆ. ಪ್ರಾಣಿ ಅಥವಾ ಪಕ್ಷಿಗಳನ್ನು ರೈಲಿನಲ್ಲಿ ಸಾಗಿಸಬೇಕಾದರೆ ನಿಯಮ 1301 ರಲ್ಲಿ ತೋರಿಸಿರುವಂತೆ ಮೌಲ್ಯದ ಮೇಲೆ ಶೇಕಡಾವಾರು ಶುಲ್ಕವನ್ನು ಪಾವತಿಸಬೇಕು.
ಪ್ರತಿ ತಲೆಗೆ ಆನೆಗಳಿಗೆ ರೂ.1500 ರೂಪಾಯಿ, ಕುದುರೆಗಳಿಗೆ 750 ರೂಪಾಯಿ, ಹೇಸರಗತ್ತೆ, ಒಂಟೆಗಳು ಅಥವಾ ಕೊಂಬಿನ ದನಗಳಿಗೆ 200 ರೂಪಾಯಿ, ಕತ್ತೆಗಳು, ಕುರಿಗಳು, ಮೇಕೆಗಳು, ನಾಯಿಗಳು ಮತ್ತು ಇತರ ಪ್ರಾಣಿಗಳು ಅಥವಾ ಪಕ್ಷಿಗಳು 30 ರೂಪಾಯಿ ಇರುತ್ತೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)