ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಹೇಳಿ ಮಾಡಿಸಿದ ಭಾರತ 5 ಬೆಸ್ಟ್ ಜಾಗಗಳಿವು; ನಿಮಗೂ ಈ ಕನಸಿದ್ದರೆ ಪ್ಲಾನ್ ಮಾಡಿ
ಮದುವೆ ಸೀಸನ್ ಶುರುವಾಗಿದೆ. ಭಾರತದಲ್ಲಿ ನವೆಂಬರ್‌ನಿಂದ ಡಿಸೆಂಬರ್ ಅಂತ್ಯದ ಒಳಗೆ 48 ಲಕ್ಷ ಜನ ಮದುವೆಯಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನಿಮಗೆ ಡೆಸ್ಟಿನೇಷನ್ ವೆಡ್ಡಿಂಗ್ ಆಸೆ ಇದ್ಯಾ, ಇದಕ್ಕೆ ಬೆಸ್ಟ್ ಜಾಗ ಯಾವುದು ಅಂತ ಹುಡುಕ್ತಾ ಇದ್ದೀರಾ. ಇಲ್ಲಿದೆ ನೋಡಿ ಉತ್ತರ. ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಹೇಳಿ ಮಾಡಿಸಿದ ಭಾರತದ ಟಾಪ್ 5 ತಾಣಗಳು ಇವೇ ನೋಡಿ.
ಮದುವೆ ಜೀವನದ ಒಂದು ಭಾಗ. ಪ್ರತಿಯೊಬ್ಬರಿಗೂ ತನ್ನ ಮದುವೆ ಹೀಗೆ ಆಗಬೇಕು ಎನ್ನುವ ಕನಸಿರುತ್ತದೆ. ಕೆಲವರಿಗೆ ಗೋಧೋಳಿ ಲಗ್ನದಲ್ಲಿ ಮದುವೆಯಾಗುವ ಕನಸಿದ್ದರೆ ಕೆಲವರಿಗೆ ಮನೆಯಲ್ಲೇ ಮಂಟಪ ಹಾಕಿಸಿ ಮದುವೆಯಾಗಬೇಕು ಎನ್ನುವ ಆಸೆ ಇರುತ್ತದೆ. ಇನ್ನೂ ಕೆಲವರಿಗೆ ಡೆಸ್ಟಿನೇಷನ್ ವೆಡ್ಡಿಂಗ್ ಆಗಬೇಕು ಎಂಬ ಬಯಕೆ ಇರುತ್ತದೆ.
ಡೆಸ್ಟಿನೇಷನ್ ವೆಡ್ಡಿಂಗ್ ಅಂತ ಬಂದಾಗ ಎಲ್ಲಿ ಆಗೋದು ಎನ್ನುವ ಗೊಂದಲ ಇರುತ್ತದೆ. ಇದಕ್ಕಾಗಿ ಒಂದಿಷ್ಟು ತಾಣಗಳನ್ನು ಹುಡುಕುತ್ತೇವೆ. ಭಾರತದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಸೂಕ್ತ ಎನ್ನಿಸುವ ಹಲವು ತಾಣಗಳಿವೆ. ಇದರಲ್ಲಿ ಟಾಪ್ 5 ಜಾಗಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.
ಡೆಸ್ಟಿನೇಷನ್ ವೆಡ್ಡಿಂಗ್ ಕುರಿತು ಆಲೋಚಿಸುತ್ತಿರುವವರಿಗೆ ವೀಸಾ ಸಂಸ್ಥೆಯು 5 ಸುಂದರ ಭಾರತೀಯ ತಾಣಗಳನ್ನು ಶಿಫಾರಸು ಮಾಡುತ್ತದೆ. ಜೊತೆಗೆ ಕನಸಿನ ತಾಣದಲ್ಲಿ ಕಡಿಮೆ ಖರ್ಚಿನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆಸಲು ಟಿಪ್ಸ್ ನೀಡುತ್ತದೆ. ಆ ತಾಣಗಳು ಯಾವುವು ಮತ್ತು ಕಡಿಮೆ ಖರ್ಚಿನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲು ಇರುವ ಟಿಪ್ಸ್‌ಗಳೇನು ನೋಡಿ.
1. ಲಕ್ಷದ್ವೀಪ ದ್ವೀಪಗಳು
ಸ್ಫಟಿಕ ಸ್ಪಷ್ಟ ಲಗೂನ್‌ಗಳು, ಅತ್ಯಂತ ಶುದ್ಧವಾಗಿ ಕಾಣುವ ಸಮುದ್ರ ತೀರಗಳನ್ನು, ಅತ್ಯಾಕರ್ಷಕ ಮರಳ ದಂಡೆಗಳು, ಚಿನ್ನದ ಬಣ್ಣದ ಮರಳು ಹಾಗೂ ಪ್ರಶಾಂತ ವಾತಾವರಣವನ್ನು ಹೊಂದಿರುವ ಲಕ್ಷದ್ವೀಪದಲ್ಲಿ ಮದುವೆ ಆಗುವ ಆಸೆ ಅನೇಕರಿಗೆ ಇರುತ್ತದೆ. ಬೀಚ್ ವೆಡ್ಡಿಂಗ್‌ನಲ್ಲಿ ಆಸೆ ಹೊಂದಿರುವವರು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಇಲ್ಲಿನ ಹೋಟೆಲ್‌ಗಳಲ್ಲಿ ಅತ್ಯುತ್ತಮ ಆಫರ್ ಅನ್ನು ಪಡೆಯಬಹುದು. ಈ ಮೂಲಕ ಕೈಗೆಟಕುವ ದರದಲ್ಲಿ ಲಕ್ಷದ್ವೀಪದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಬಹುದು.
2. ಮಸ್ಸೂರಿ, ಉತ್ತರಾಖಂಡ
‘ಕ್ವೀನ್ ಆಫ್ ಹಿಲ್ಸ್‘ ಅಥವಾ ಬೆಟ್ಟಗಳ ರಾಣಿ ಎಂದೇ ಕರೆಯಲ್ಪಡುವ ಮಸ್ಸೂರಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ಮದುವೆಯಾಗುವ ಆಸೆ ಇರುವವರು ವಿಮಾನದ ಟಿಕೆಟ್‌ಗಳನ್ನು ಬುಕ್ ಮಾಡಲು ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಅತ್ಯಾಕರ್ಷಕ ರಮಣೀಯ ಬೆಟ್ಟಗಳ ದೃಶ್ಯಗಳು, ಹಸಿರು ವೈಭವ, ಅದ್ಭುತ ವಾಸ್ತುಶೈಲಿ, ಆಹ್ಲಾದಕರ ವಾತಾವರಣ ಇವೆಲ್ಲವೂ ಈ ಪ್ರದೇಶವನ್ನು ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಸೂಕ್ತವಾಗಿಸಿವೆ.
3. ಮಾಂಡು, ಮಧ್ಯಪ್ರದೇಶ
ಕೋಟೆ ಕೊತ್ತಲಗಳ ಪುರಾತನ ನಗರ. ಅದಕ್ಕಿಂತ ಹೆಚ್ಚಾಗಿ ಪೌರಾಣಿಕ ಪ್ರೇಮಕತೆಯ ಸಂಕೇತವಾಗಿರುವ ಜಹಾಜ್ ಮಹಲ್‌ಗೆ ಹೆಸರುವಾಸಿಯಾಗಿರುವ ಮಾಂಡು ಬಿಗ್ ಫ್ಯಾಟ್ ಇಂಡಿಯನ್ ವೆಡ್ಡಿಂಗ್‌ಗೆ ಪರಿಪೂರ್ಣ ನಗರವಾಗಿದೆ. ಅದ್ಭುತ ಸ್ಥಳಗಳು ಮತ್ತು ಪ್ರಾದೇಶಿಕ ಫ್ಲೇವರ್ ಹೊಂದಿರುವ ಈ ಸ್ಥಳದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲಾನ್ ಮಾಡುತ್ತಿರುವವರು ಹೋಟೆಲ್‌ಗಳನ್ನು ಬುಕ್ ಮಾಡಲು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಕ್ರೆಡಿಟ್ ಕಾರ್ಡ್‌ಗಳ ಬಳಕೆಯಿಂದ ಈ ಸ್ಥಳವು ಪಾಕೆಟ್ ಫ್ರೆಂಡ್ಲಿ ಸ್ಥಳವಾಗಿ ಬದಲಾಗಿದೆ.
4. ಲಾವಾಸಾ, ಮಹಾರಾಷ್ಟ್ರ
ಆಕರ್ಷಕ ವಾಸ್ತುಶಿಲ್ಪ ಮತ್ತು ಪ್ರಶಾಂತವಾದ ಸರೋವರದ ನೋಟವನ್ನು ಹೊಂದಿರುವ ಲಾವಾಸಾ ಯುರೋಪಿಯನ್ ದೃಶ್ಯ ವೈಭವವನ್ನು ಹೊಂದಿರುವ ಸ್ಥಳವಾಗಿದೆ. ಅಂದದ ಸ್ಥಳದಲ್ಲಿ ಮದುವೆ ಆಗಲು ಬಯಸುವವರಿಗೆ ಈ ಸ್ಥಳ ಅತ್ಯಂತ ಸೂಕ್ತವಾಗಿದೆ. ಖರ್ಚುಗಳನ್ನು ಮಾಡುವುದು ಸುಲಭ. ಆದರೆ ಒಮ್ಮೆಲೇ ಜಾಸ್ತಿ ಖರ್ಚು ಮಾಡುವುದಕ್ಕೆ ಕಷ್ಟ ಕೂಡ. ಇಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಯ ಸೌಲಭ್ಯದ ಜೊತೆಗೆ ಇಎಂಐ ಸೌಲಭ್ಯ ಕೂಡ ಸಿಗುತ್ತದೆ. ಹಾಗಾಗಿ ಇಲ್ಲಿ ಯಾವುದೇ ಒತ್ತಡವಿಲ್ಲದೆ ನಿಮ್ಮ ಕನಸಿನ ಡೆಸ್ಟಿನೇಷನ್ ವೆಡ್ಡಿಂಗ್ ನಡೆಸಬಹುದಾಗಿದೆ.
5. ಹಂಪಿ, ಕರ್ನಾಟಕ
ಐತಿಹಾಸಿಕ ಅದ್ಭುತವಾಗಿರುವ ಹಂಪಿ ಮನಮೋಹಕವಾಗಿರುವ ಸ್ಥಳಗಳು, ಪುರಾತನ ದೇವಾಲಯಗಳು ಮತ್ತು ವಿಸ್ಮಯಗೊಳಿಸುವ ಬಂಡೆಗಳನ್ನು ಹೊಂದಿರುವ ಪುರಾತನ ಸಾಮ್ರಾಜ್ಯದ ಪರಂಪರೆಯುಳ್ಳ ಸ್ಥಳವಾಗಿದೆ. ನೈಸರ್ಗಿಕ ಸೌಂದರ್ಯ ಮತ್ತು ವಾಸ್ತುಶಿಲ್ಪದ ಭವ್ಯತೆಯ ಅದ್ಭುತ ಮಿಶ್ರಣವಾಗಿರುವ ಹಂಪಿಯು ಕಾಲಾತೀತ ಸೊಗಸನ್ನು ಹೊಂದಿದೆ. ಇಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಯೋಜಿಸುವವರು ಡೆಬಿಟ್ ಕಾರ್ಡ್ ಅನ್ನು ಸಹ ಕೈಯಲ್ಲಿ ಇಟ್ಟುಕೊಳ್ಳುವುದು ಅವಶ್ಯ. ಯಾಕೆಂದರೆ ಯಾವುದೇ ಕೊನೆಯ ಕ್ಷಣದ ಖರೀದಿ, ವ್ಯವಸ್ಥೆ ಮಾಡಲು ಡೆಬಿಟ್ ಕಾರ್ಡ್ ಬಳಸಬಹುದಾಗಿದೆ.
ಮದುವೆ ಸೀಸನ್ ಆರಂಭಗೊಂಡಿದೆ. ಭಾರತದಲ್ಲಿಯೇ ಅತ್ಯಾಕರ್ಷಕವಾದ ಹಲವಾರು ತಾಣಗಳು ಮದುವೆ ಆಯೋಜಕರ ಗಮನ ಸೆಳೆಯುತ್ತದೆ. ಬುದ್ಧಿವಂತಿಕೆಯಿಂದ ಪ್ಲಾನ್ ಮಾಡುವುದರಿಂದ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸಮರ್ಪಕವಾಗಿ ಬಳಸುವುದರಿಂದ ಸುಂದರವಾದ ಸ್ಥಳಗಳಲ್ಲಿ, ಇದ್ದುದರಲ್ಲಿಯೇ ಸೂಕ್ತ ದರದಲ್ಲಿ ಮದುವೆಯನ್ನು ಮಾಡಿಕೊಳ್ಳಬಹುದಾಗಿದೆ.