ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು?; 12 ಅಂಶಗಳು; ಅಜಕ್ಕಳ ಗಿರೀಶ್ ಭಟ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು?; 12 ಅಂಶಗಳು; ಅಜಕ್ಕಳ ಗಿರೀಶ್ ಭಟ್ ಬರಹ

ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು?; 12 ಅಂಶಗಳು; ಅಜಕ್ಕಳ ಗಿರೀಶ್ ಭಟ್ ಬರಹ

ಭಾರತ - ಪಾಕ್ ಉದ್ವಿಗ್ನತೆ ಹೆಚ್ಚಾಗುತ್ತಿರುವ ಸನ್ನಿವೇಶ ಇದು. ಪಹಲ್ಗಾಮ್ ದಾಳಿ ಬಳಿಕ ಭಾರತ ಸರ್ಕಾರ, ಭಯೋತ್ಪಾದನೆ ವಿರುದ್ಧ ತನ್ನ ಸಮರವನ್ನು ಬಿಗಿಗೊಳಿಸಿದೆ. ಊಹಾಪೋಹಗಳು ಹೆಚ್ಚಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು, ಅದಕ್ಕಿರುವ ನಿಜವಾದ ಥ್ರೆಟ್ ಏನು, 12 ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ ಲೇಖಕ ಅಜಕ್ಕಳ ಗಿರೀಶ್ ಭಟ್.

ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು ಎಂಬುದನ್ನು ವಿವರಿಸುವ 12 ಅಂಶಗಳ ಕಡೆಗೆ ಅಜಕ್ಕಳ ಗಿರೀಶ್ ಭಟ್ ಗಮನಸೆಳೆದಿದ್ದಾರೆ.
ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ದೇಶದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು ಎಂಬುದನ್ನು ವಿವರಿಸುವ 12 ಅಂಶಗಳ ಕಡೆಗೆ ಅಜಕ್ಕಳ ಗಿರೀಶ್ ಭಟ್ ಗಮನಸೆಳೆದಿದ್ದಾರೆ.

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ಸರ್ಕಾರ ಭಯೋತ್ಪಾದನೆ ವಿರುದ್ಧದ ತನ್ನ ಸಮರ ತೀವ್ರಗೊಳಿಸಿದೆ. ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ನೆಲದ ಮೇಲಿರುವ ಉಗ್ರ ಶಿಬಿರ, ಉಗ್ರ ಸಂಘಟನೆಗಳ ಮೂಲಸೌಕರ್ಯಗಳನ್ನು ಭಾರತೀಯ ಸೇನೆ ನಾಶಪಡಿಸುವ ಕೆಲಸ ಮಾಡುತ್ತಿದೆ. ಈ ನಡುವೆ, ಸಾಮಾಜಿಕ ತಾಣಗಳಲ್ಲಿ ಊಹಾಪೋಹದ ಬರಹಗಳು, ಸುದ್ದಿಗಳ ಹರಡುವಿಕೆ ಕಡಿಮೆ ಏನಲ್ಲ. ಈ ಸನ್ನಿವೇಶದ ನಡುವೆ ನಮಗೆ ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ಎಂಬುದು ಗೊತ್ತಿರಬೇಕು. ಅದೇ ರೀತಿ ದೇಶದ ಒಳಗೆ ಮತ್ತು ಹೊರಗೆ ಭಾರತೀಯ ಸಂಸ್ಕೃತಿಯ ಏಕಸೂತ್ರಕ್ಕೆ ಇರುವ ನಿಜವಾದ ಥ್ರೆಟ್ ಏನು ಎಂಬುದೂ ತಿಳಿದಿರಬೇಕು ಎನ್ನುತ್ತ 12 ಅಂಶಗಳ ಕಡೆಗೆ ಗಮನಸೆಳೆದಿದ್ದಾರೆ ಲೇಖಕ ಅಜಕ್ಕಳ ಗಿರೀಶ್ ಭಟ್.

ಭಾರತೀಯ ಸಂಸ್ಕೃತಿಯ ಏಕಸೂತ್ರ ಏನು? ಅದಕ್ಕಿರುವ ನಿಜವಾದ ಥ್ರೆಟ್ ಏನು

ಕದನ ವಿರಾಮ ನಿಲ್ಲುತ್ತದೋ ಇಲ್ಲವೋ ಗೊತ್ತಿಲ್ಲ.. ದೇಶವು ಯುದ್ಧದಲ್ಲಿರುವ ಹೊತ್ತಲ್ಲಿ ಪ್ರಜೆಗಳೂ ಯುದ್ಧೋತ್ಸಾಹದಲ್ಲಿ ಮಾತನಾಡುವುದು, ಬರೆಯುವುದು ಸಹಜವೇ ಹೌದು. ನಮ್ಮ ದೇಶದ ಸೈನ್ಯಶಕ್ತಿ ಪಾಕಿಗಿಂತ ಉತ್ತಮವಿರುವುದರಿಂದ, ಪಿಒಕೆ ವಶಪಡಿಸಿಕೊಳ್ಳಲು ಇದು ಸಕಾಲವೆಂದೂ ಪಾಕಿಸ್ತಾನವನ್ನು ಭೂಪಟದಿಂದ ಅಳಿಸಿಹಾಕಬಹುದೆಂದೂ ಬಹಳ ಮಂದಿ ಹೇಳಿದರು. ( ನಾನು ಕಳೆದ ಕೆಲವು ದಿನಗಳಲ್ಲಿ ಯುದ್ಧೋತ್ಸಾಹದ ಯಾವ ಪೋಸ್ಟನ್ನೂ ಹಾಕಿಲ್ಲ.) ಈ ಸಂಕೀರ್ಣ ಸನ್ನಿವೇಶದಲ್ಲಿ ಸ್ವಲ್ಪ ಶಾಂತ ಮನಸ್ಸಿನಿಂದ ಯೋಚಿಸಿ ನಾವು ಗಮನಕ್ಕೆ ತಂದುಕೊಳ್ಳಬೇಕಾದ ಕೆಲವು ಮುಖ್ಯ ಅಂಶಗಳಿವೆ.

ದೇಶದ ಒಳಗೆ ಮತ್ತು ಹೊರಗೆ ಭಾರತೀಯ ಸಂಸ್ಕೃತಿಯ ಏಕಸೂತ್ರಕ್ಕೆ ಇರುವ ನಿಜವಾದ ಥ್ರೆಟ್ ಏನು; 12 ಅಂಶಗಳು

1) ನಾವು ಈಗ ಹಿಂದಿನ ಕಾಲದ ರಾಜಮಹಾರಾಜರ ಯುದ್ಧದ ಕಾಲದಲ್ಲಿ ಇಲ್ಲ. ಯಾವ ಒಂದು ದೇಶ ಅಥವಾ ಅದರ ಭಾಗವನ್ನು ಸೇರಿಸಿಕೊಳ್ಳುವುದು ಅಸಾಧ್ಯವೆಂಬಷ್ಟು ಕಷ್ಟ.

2) ರಷ್ಯಾ- ಉಕ್ರೇನ್ ಯುದ್ಧವನ್ನು ನೋಡಿದರೆ ಗೊತ್ತಾಗುವಂತೆ, ಯಾವ ಸಣ್ಣ ದೇಶವಾದರೂ ಅಥವಾ ಮಿಲಿಟರಿ ಶಕ್ತಿ ಕಡಿಮೆ ಇರುವ ದೇಶವಾದರೂ ಸುಲಭದಲ್ಲಿ ಸೋಲೊಪ್ಪುವುದಿಲ್ಲ. ಹೋರಾಡುತ್ತಲೇ ಇರುತ್ತದೆ. ಹಾಗೆ ಹೋರಾಡಲು ಅಂತಹ ಸಣ್ಣ ದೇಶಕ್ಕೆ ಶಸ್ತ್ರಾತ್ರ ಇತ್ಯಾದಿ ಸರಬರಾಜು ಮಾಡಿ ಸಹಾಯ ಮಾಡುವ ದೇಶಗಳು ಇದ್ದೇ ಇರುತ್ತವೆ. ದುಷ್ಟರಿಗೂ ಸಹಕಾರಿಗಳು ಇದ್ದೇ ಇರುತ್ತಾರೆ. ಕುರುಕ್ಷೇತ್ರದಲ್ಲಿ ಕೌರವರ ಕಡೆಗೇ ಹೆಚ್ಚು ಅರಸರ ಬೆಂಬಲ ಇದ್ದುದು, ಹೆಚ್ಚು ಸೈನ್ಯವಿದ್ದುದು.

3) ಇಸ್ರೇಲಿಗೆ ಅಮೆರಿಕದಂತಹ ದೇಶದ ಗಟ್ಟಿ ಬೆಂಬಲ ಇದ್ದಾಗಲೂ, ಅದು ಗಾಜಾಪಟ್ಟಿಯಲ್ಲಿ ಅಷ್ಟೊಂದು ಜನರನ್ನು ಕೊಂದರೂ ಹಮಾಸನ್ನು ಸುಮ್ಮನಾಗಿಸಲು ಅಥವಾ ಶರಣಾಗಿಸಲು ಸಾಧ್ಯವಾಗಿಲ್ಲ.

4) ನಾವು ಒಪ್ಪಲಿ, ಬಿಡಲಿ, ಚೀನಾ ಏನು ಮಾಡುತ್ತದೆ ಎಂಬುದನ್ನು ನಮ್ಮ ದೇಶದ ಮತ್ತು ದೇಶವಾಸಿಗಳ ಹಿತಚಿಂತಕರು ಗಮನಿಸದೆ ಇರಲು ಸಾಧ್ಯವಿಲ್ಲ.. ಪ್ರಜಾಪ್ರಭುತ್ವವಿಲ್ಲದ, ವಾಕ್ ಸ್ವಾತಂತ್ರ್ತವಿಲ್ಲದ ಚೀನಾವು ದಿನದಿಂದ ದಿನಕ್ಕೆ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಿ ಬೆಳೆದಿದೆ ಮತ್ತು ಮುಂದೆಯೂ ಬೆಳೆಯುತ್ತಲೇ ಇರುತ್ತದೆ ಎಂಬ ಬಗ್ಗೆ ಯಾವ ಸಂಶಯವೂ ಬೇಡ. ಪ್ರಜಾಪ್ರಭುತ್ವ ಮತ್ತು ಇತರ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕಾದ ಭಾರತ ಚೀನಾವನ್ನು ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ಹಿಂದಿಕ್ಕುತ್ತದೆ ಎಂಬ ಯಾವ ನಿರೀಕ್ಷೆಯೂ ಸದ್ಯಕ್ಕೆ ಸಾಧ್ಯವಿಲ್ಲ.. ಪಾಕಿಸ್ತಾನದ ಮೇಲೆ ಪ್ರೀತಿಯಿಂದಲ್ಲದಿದ್ದರೂ ಏಷ್ಯಾದಲ್ಲಿ ಭಾರತ ಬೆಳೆಯುವುದನ್ನು ಸಹಿಸಲಾರದ ಚೀನಾವು ನಿರ್ಣಾಯಕ ಹಂತದಲ್ಲಿ ಯುದ್ಧದಲ್ಲಿ ಪಾಕ್ ಪರವಾಗಿ ನೇರ ಭಾಗಿಯಾಗುವುದನ್ನು ಕೂಡ ನಿರೀಕ್ಷಿಸದೆ ಇರಲಾಗದು.. ಇನ್ನೊಂದು ಮುಖ್ಯ ಸಂಗತಿಯೇನೆಂದರೆ, ಚೀನಾಕ್ಕೆ ಪಾಕಿನಲ್ಲಿ ಇರುವಷ್ಟು ಹಿತಾಸಕ್ತಿ ರಷ್ಯಾಕ್ಕೆ ಭಾರತದಲ್ಲಿ ಇರಲು ಖಂಡಿತಾ ಸಾಧ್ಯವಿಲ್ಲ.. ಇನ್ನು ಅಮೇರಿಕಾ ಭೌಗೋಳಿಕವಾಗಿ ದೂರವೇ.. ಅದರ ಲಾಭ ನೋಡುವ ಅದು ಅದರ ವಾಯುಸೇನೆಯನ್ನು ಕಳುಹಿಸುತ್ತದೆ ಎಂಬ ಯಾವ ನಿರೀಕ್ಷೆಯೂ ಸಾಧ್ಯವಿಲ್ಲ.

5) ಕಳೆದುಕೊಳ್ಳುವುದಕ್ಕೆ ಏನೂ ಇಲ್ಲದವರು ಯಾವಾಗಲೂ ಯುದ್ಧದಲ್ಲಿ ಅನುಕೂಲದ ಸ್ಥಿತಿಯಲ್ಲಿ ಇರುತ್ತಾರೆ. ಕಳೆದುಕೊಳ್ಳಲು ಮರ್ಯಾದೆ ಇಲ್ಲದವರ ಮರ್ಯಾದೆ ತೆಗೆಯುವುದು ಹೇಗೆ? ನಾಗರಿಕರ ಮೇಲೆ ಶೆಲ್ ಹಾಕುವ ದೇಶ ಪಾಕಿಸ್ತಾನ. ಹೀಗಿರುವಾಗ, ಹುಚ್ಚನ ಅಥವಾ ಕುಡಿದ ಮತ್ತಿನಲ್ಲಿರುವವನ ಕೈಯಲ್ಲಿರುವ ಆಯುಧವನ್ನು ಜಾಣ್ಮೆಯಿಂದ ದೂರಮಾಡದೆ ಹತ್ತಿರ ಹೋಗುವುದು ಕಷ್ಟ. ನಮ್ಮ ದೇಶದ ಗಡಿಯಲ್ಲಿ ಇರುವ ದೇಶವಾಸಿಗಳ ಬಗ್ಗೆಯೂ ಕಾಳಜಿ ಕಳೆದುಕೊಳ್ಳಲಾಗದು.

6) ಯಾರು ಸರಿ ಯಾರು ತಪ್ಪು ಎಂಬುದನ್ನು ಬಿಟ್ಟು ನೋಡಿದರೂ ಇಸ್ರೇಲ್- ಪ್ಯಾಲೆಸ್ಟೈನ್/ ಗಾಜಾಪಟ್ಟಿಯ ಹೋರಾಟದಲ್ಲಿ ಒಂದು‌ ಮುಖ್ಯ ಪಾಠವಿದೆ. ಮತೀಯ ನೆಲೆಯಿಂದ ಪ್ರೇರಿತವಾದ ಹೋರಾಟವನ್ನು ಅಷ್ಟು ಸುಲಭದಲ್ಲಿ ಮುಗಿಸಲು ಸಾಧ್ಯವಿಲ್ಲ. ಸುಲಭದಲ್ಲಿ ಅಲ್ಲ; ಬಹುಶಃ ಎಂದಿಗೂ ಸಾಧ್ಯವಿಲ್ಲವೇನೋ. ಪಾಕಿಸ್ತಾನ‌ವನ್ನಾಗಲೀ ಕಶ್ಮೀರಿ ಕಣಿವೆಯ ಬಹುಸಂಖ್ಯಾತರನ್ನಾಗಲೀ ರಿಲಿಜಿಯಸ್ ಅಲ್ಲದ ನೆಲೆಯಲ್ಲಿ ಕಾಣಲು ಸಾಧ್ಯವೇ ಇಲ್ಲ.

7) ಹಿಂದಿನ ಒಂದು ಪೋಸ್ಟ್ ನಲ್ಲಿ ನಾನು ಎಲ್ಲರಿಗೂ ಗೊತ್ತಿರುವಂಥ, ಒಂದು ಸಮೀಕರಣ ಹಾಕಿದ್ದೆ. ಪಾಕ್ ಜನರು-ಪಾಕ್ ಆಡಳಿತ- ಮಿಲಿಟರಿ- ಭಯೋತ್ಪಾದಕರು- ಕಶ್ಮೀರಿ ಕಣಿವೆಯ ಬಹುಸಂಖ್ಯಾತರು ಇವರೆಲ್ಲ ಒಂದೇ ಎಂಬುದಾಗಿ. ಅಂದರೆ ಅವರೆಲ್ಲರೂ ಏಕಪ್ರಕಾರವಾಗಿ ಭಾರತದ್ವೇಷಿಗಳೇ. ಬುದ್ಧಿವಂತರು ಈ ಸಮೀಕರಣವನ್ನು ಭಾರತದೇಶದಲ್ಲಿರುವ ಇನ್ನೂ ಎರಡು ಮೂರು ಫ್ಯಾಕ್ಟರ್ ಗಳನ್ನು ಸೇರಿಸಿ ಇನ್ನಷ್ಟು ವಿಸ್ತರಿಸಿ ಅರ್ಥಮಾಡಿಕೊಳ್ಳಬಲ್ಲರು. ಇದು ಅರ್ಥವಾದಾಗ ಪಾಕಿನ ಜೊತೆಗಿನ ಯುದ್ಧದ ಸಂಕೀರ್ಣತೆ ಗೊತ್ತಾಗುತ್ತದೆ. ನಮ್ಮ ಸಾಹಿತಿಗಳು ಹೇಳುವಂತೆ ಅಪವಾದವೆಂಬಂತೆ ಭಾರತವನ್ನು ದ್ವೇಷಿಸದ ಕೆಲವು ಪಾಕಿಗಳು ಇರಬಹುದು. ಅದರಿಂದ ಇಂಪ್ಯಾಕ್ಟ್ ಏನಿಲ್ಲ.

8) ಹಾಗಿದ್ದರೆ, ಈ ಬಗೆಯ ಭಯೋತ್ಪಾದಕರ ಉಪಟಳಕ್ಕೆ ಏನೂ ಮದ್ದಿಲ್ಲವೆ? ಮಿಲಿಟರಿ ನೆಲೆಯಿಂದ, ಒಂದು ಮದ್ದು ಎಂದರೆ, ಪಾಕಿಸ್ತಾನಕ್ಕೆ ಚೀನದ ನೇರ ಬೆಂಬಲ ಅಥವಾ ಇತರ ಅಂತಾರಾಷ್ಟ್ರೀಯ ಸಮುದಾಯಗಳ ಬೆಂಬಲ ಸಿಗದಷ್ಟರವರೆಗೆ ಮಾತ್ರ ಎಸ್ಕಲೇಟ್ ಮಾಡುವುದು. ಇದು ಒಂದೆರಡು ಸಲದಲ್ಲಿ ಮುಗಿಯುವಂಥದ್ದಲ್ಲ. ನಿರಂತರವಾದುದು... ಆದರೆ, ಯಾವುದೇ ಮಿಲಿಟರಿ ಪರಿಹಾರಗಳು ಯಶಸ್ವಿಯಾಗಬೇಕಾದರೆ ದೇಶದ ಒಳಗೆ ಇರುವ ಪಾಕ್ ದುಷ್ಟತನದ ಪರವಾಗಿರುವ ಧ್ವನಿಗಳು ಅಡಗಬೇಕು.

9) ಇಸ್ರೇಲಿನ ರೂತ್ಲೆಸ್ನೆಸ್ ಭಾರತಕ್ಕೆ ಸಾಧ್ಯವಿಲ್ಲ. ಅಂತೆಯೇ ಪಾಕಿಸ್ತಾನದಂತೆ ನಾಗರಿಕರ ಮೇಲೆ ದಾಳಿಯನ್ನಾಗಲೀ ನಾಗರಿಕರನ್ನೇ ಶೀಲ್ಡ್ ಆಗಿ ಬಳಸುವುದೂ ಭಾರತಕ್ಕೆ ಸಾಧ್ಯವಿಲ್ಲ. ಜ್ಞಾನದ ಜೊತೆಗಲ್ಲದೆ ಕ್ಷಾತ್ರವು ಇರದಿದ್ದ ಪರಂಪರೆ ಭಾರತದ್ದು. ಹೀಗಿರುವ ನಂಬಿಕೆಯ ಪರಂಪರೆಯಿರುವ ಭಾರತವು, ರೂತ್ಲೆಸ್ ಆಗಿಯೇ ಆಯುಧದೊಂದಿಗೆಯೇ ಬೆಳೆದಂತಹ ಮತೀಯ ನಂಬಿಕೆಯ ಪರಂಪರೆಯಿರುವ ಪಾಕಿಸ್ತಾನಕ್ಕೆ ruthlessness ನಲ್ಲಿ ಎಂದಿಗೂ ಸರಿಗಟ್ಟಲಾರದು!

10) ಪಾಕಿಸ್ತಾನದ ಮೇಲೆ ವಾಯುದಾಳಿ ಆಗುತ್ತಿರುವಾಗ 'ಯುದ್ದ ನಿಲ್ಲಿಸಿ, ಯುದ್ಧ ಯಾವುದಕ್ಕೂ ಪರಿಹಾರವಲ್ಲ' ಎಂದವರು ಕದನವಿರಾಮ‌ ಆದಾಗ ಅದನ್ನು ಹೇಡಿತನವೆಂದು ಕರೆದರೆ ಮತ್ತು ಅಂಥವರೇ ಬುದ್ಧಿಜೀವಿಗಳು ಮತ್ತು ವಿವಿ ಬೋಧಕರೂ ಆಗಿರುವ ದೇಶದಲ್ಲಿ ಯಾವುದೂ ನೆಟ್ಟಗಿರದು!

11) ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಇಲ್ಲಿಯ ಬಹುತ್ವವುಳ್ಳ ಸಂಸ್ಕೃತಿ ಯಾಕೆ ಪಾಕಿಸ್ತಾನ ಅಥವಾ ಜಗತ್ತಿನ ಯಾವುದೇ ರಿಲಿಜಿಯಸ್ ಸಂಸ್ಕೃತಿಗಿಂತ ಉತ್ತಮ ಮತ್ತು ಆಧುನಿಕ ಜಗತ್ತಿನಲ್ಲಿ ಹೆಚ್ಚು ಅನುಕರಣೀಯ, ಅನುಸರಣೀಯ ಎಂಬುದನ್ನು ಜಗತ್ತಿಗೆ ತೋರಿಸಲು ನಮಗೆ ಸಾಧ್ಯವಾಗಿಲ್ಲ. ಇದು ಸಾಧ್ಯವಾಗದೆ ಇರಲು ಕಳೆದ ಹಲವು ದಶಕಗಳಿಂದ ಊರ್ಜಿತದಲ್ಲಿದ್ದ/ ಇರುವ ಜ್ಣಾನಾಧಿಕಾರ ಕೇಂದ್ರಗಳೇ ಕಾರಣ. ಭಾರತದ ಸಾಂಸ್ಕೃತಿಕ ಶ್ರೇಷ್ಠತೆಯು ಜಗತ್ತಿ‌ನ ನರೆಟಿವ್ ಆಗುವಂತಾದರೆ ಮಾತ್ರ ನಾವು ಅಂತಾರಾಷ್ಟ್ರೀಯವಾಗಿ ಬಲಗೊಳ್ಳಲು ಸಾಧ್ಯ.

12) ದೀರ್ಘಕಾಲಿಕ ಸಕಾರಾತ್ಮಕ ಪರಿಣಾಮ ಸಾಧ್ಯವಾಗಬೇಕಾದರೆ, ಭಾರತೀಯ ಸಂಸ್ಕೃತಿಯೊಳಗಿನ‌ ಏಕಸೂತ್ರ ಏನು? ಭಾರತದ ಒಳಗೆ ಮತ್ತು ಹೊರಗೆ ಅದಕ್ಕಿರುವ ನಿಜವಾದ ಥ್ರೆಟ್ ಏನು? ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಆಗಬೇಕು. ಈ ಅವೇರ್ನೆಸ್ ಜನರಲ್ಲಿ ಉಂಟಾದರೆ ಮಾತ್ರ ದೇಶದ ಒಳಗೆ ಸಾಕಷ್ಟು ಮಟ್ಟಿಗೆ ಒಮ್ಮನಸ್ಸು ಉಂಟಾದೀತು. ಮೇಲೆ ಹೇಳಿದ ಸಮೀಕರಣದಲ್ಲಿರಿವ ಫ್ಯಾಕ್ಟರುಗಳನ್ನು ಬಿಟ್ಹಾಕಿ ಉಳಿದವರು ಒಗ್ಗಟ್ಟಾದಾರು. ಅದಾದಾಗ ಟ್ರಂಪ್ ಅಲ್ಲ ಮತ್ತೊಬ್ಬ ಹೇಳಿದರೂ ಕೇಳದ‌ ಮತ್ತು ನಮ್ಮ ದೇಶ, ನಮ್ಮ ಸೈನ್ಯ, ನಮ್ಮ ಖುಷಿ ಎಂದು ಹೇಳುವ ದೃಢತೆ ನಮ್ಮ ದೇಶಕ್ಕೆ ಬಂದೀತು.

ಫೇಸುಬುಕ್‌ನಲ್ಲಿ ಬರೆಯುವವರು ನಿಜವಾಗಿ ಮಾಡಲು ಸಾಧ್ಯವಿರುವುದು ಮತ್ತು ನಿಜವಾಗಿ ಮಾಡಬೇಕಾದ್ದೇನೆಂದರೆ, ಈ ಬಗೆಯ ಜಾಗೃತಿಯನ್ನು ಉಂಟುಮಾಡುವುದು.

| ಬರಹ- ಅಜಕ್ಕಳ ಗಿರೀಶ್ ಭಟ್, ಲೇಖಕರು, ಬೆಂಗಳೂರು

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.