Instant Chutney Recipe: ಕೊತ್ತಂಬರಿ ಚಟ್ನಿ, ಮಸಾಲಾ ಚಟ್ನಿ; ದೋಸೆ, ಇಡ್ಲಿಗೆ ಸರಿ ಹೊಂದುವ ದೀಢೀರ್‌ ಚಟ್ನಿ ರೆಸಿಪಿಗಳು-instant chutney recipe for dosa idly including coriander chutney masala chutney dip recipes rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Instant Chutney Recipe: ಕೊತ್ತಂಬರಿ ಚಟ್ನಿ, ಮಸಾಲಾ ಚಟ್ನಿ; ದೋಸೆ, ಇಡ್ಲಿಗೆ ಸರಿ ಹೊಂದುವ ದೀಢೀರ್‌ ಚಟ್ನಿ ರೆಸಿಪಿಗಳು

Instant Chutney Recipe: ಕೊತ್ತಂಬರಿ ಚಟ್ನಿ, ಮಸಾಲಾ ಚಟ್ನಿ; ದೋಸೆ, ಇಡ್ಲಿಗೆ ಸರಿ ಹೊಂದುವ ದೀಢೀರ್‌ ಚಟ್ನಿ ರೆಸಿಪಿಗಳು

Chutney Recipes: ಪೂರಿಗೆ ಸಾಗು, ಚಪಾತಿಗೆ ಟೊಮೆಟೊ ಗೊಜ್ಜು ಕಾಂಬಿನೇಷನ್‌ ಇದ್ದಂತೆ ದೋಸೆಗೆ ಚಟ್ನಿ ಒಳ್ಳೆ ಕಾಂಬಿನೇಷನ್‌. ನೀವು ದೋಸೆ, ಇಡ್ಲಿ ತಯಾರಿಸಿದಾಗಲೆಲ್ಲಾ ಒಂದೇ ರೀತಿಯ ಚಟ್ನಿ ತಿಂದು ಬೇಸರ ಎನಿಸಿದಲ್ಲಿ ಈ ದಿಢೀರ್‌ ಚಟ್ನಿ ರೆಸಿಪಿಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ದಿಢೀರ್‌ ಚಟ್ನಿ ರೆಸಿಪಿಗಳು
ದಿಢೀರ್‌ ಚಟ್ನಿ ರೆಸಿಪಿಗಳು (PC: Pixabay)

ಚಟ್ನಿ ರೆಸಿಪಿಗಳು: ದೋಸೆ, ಇಡ್ಲಿಗೆ ಉತ್ತಮ ಕಾಂಬಿನೇಶನ್‌ ಅಂದ್ರೆ ಅದು ಚಟ್ನಿ. ಚಪಾತಿ, ರೊಟ್ಟಿ, ಚಿತ್ರಾನ್ನದೊಂದಿಗೆ ಕೂಡಾ ಚಟ್ನಿ ಬಹಳ ರುಚಿಯಾಗಿರುತ್ತದೆ. ಆದರೆ ಕೆಲವೊಮ್ಮೆ ಪ್ರತಿ ಬಾರಿಯೂ ಒಂದೇ ರೀತಿಯ ಚಟ್ನಿ ತಿನ್ನುವುದು ಬೇಸರ ಎನಿಸುತ್ತದೆ. ಆ ಸಮಯದಲ್ಲಿ ಬೇರೆ ಯಾವ ಚಟ್ನಿ ಮಾಡುವುದು ಎಂಬ ಗೊಂದಲವೂ ಇರುತ್ತದೆ.

ಹೆಚ್ಚಿನ ಶ್ರಮ ಇಲ್ಲದೆ, ರುಚಿಯಾದ ಅತಿ ಕಡಿಮೆ ಸಮಯದಲ್ಲಿ ತಯಾರಿಸುವ ಕೆಲವೊಂದು ಚಟ್ನಿ ರೆಸಿಪಿಗಳು ಇಲ್ಲಿವೆ. ಒಮ್ಮೆ ತಿಂದರೆ ಖಂಡಿತ ನೀವು ಮತ್ತೊಮ್ಮೆಇದರ ರುಚಿಯನ್ನು ಸವಿಯಲೇಬೇಕು.

1 ನಿಮಿಷದ ದಿಢೀರ್‌ ಚಟ್ನಿ

ಬೇಕಾಗುವ ಸಾಮಗ್ರಿಗಳು

ದೊಡ್ಡ ಈರುಳ್ಳಿ - 2

ಟೊಮೆಟೊ - 3

ಬೆಳ್ಳುಳ್ಳಿ - 5

ಒಣ ಮೆಣಸಿನಕಾಯಿ - 5

ಹುಣಸೆ ಹಣ್ಣು - ಸ್ವಲ್ಪ

ತುಪ್ಪ - 1 ಚಮಚ

ಸಾಸಿವೆ - 1/2 ಟೀಸ್ಪೂನ್

ಕರಿಬೇವು - ಸ್ವಲ್ಪ

ಉಪ್ಪು - ರುಚಿಗೆ ತಕ್ಕಂತೆ

ತಯಾರಿಸುವ ವಿಧಾನ

ಮೊದಲು ಈರುಳ್ಳಿ ಮತ್ತು ಟೊಮೆಟೊ ಹುರಿಯಬೇಕು.

ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ, ಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಗ್ರೈಂಡ್‌ ಮಾಡಿ

ಸ್ಟೌ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಈರುಳ್ಳಿ, ಕರಿಬೇವಿನ ಸೊಪ್ಪು ಹಾಕಿ ಮಿಕ್ಸ್ ಮಾಡಿ.

ಗ್ರೈಂಡ್‌ ಮಾಡಿದ ಚಟ್ನಿಯನ್ನು ಪಾತ್ರೆಗೆ ಹಾಕಿ ಅದಕ್ಕೆ ಬೇಕಾಗುವಷ್ಟು ನೀರು ಹಾಕಿ 1 ನಿಮಿಷ ಕುದಿಸಿದರೆ ಮಸಾಲಾ ಚಟ್ನಿ ರೆಡಿ. ಈ ಚಟ್ನಿ, ದೋಸೆ ಮತ್ತು ಇಡ್ಲಿಗೆ ಬಹಳ ರುಚಿಯಾಗಿರುತ್ತದೆ.

ಇದನ್ನು ಹೊರತುಪಡಿಸಿ ಇನ್ನಿತರ ಸುಲಭವಾದ ಚಟ್ನಿಗಳ ರೆಸಿಪಿ ಈ ರೀತಿ ಇದೆ.

ತೆಂಗಿನಕಾಯಿ ಚಟ್ನಿ ರೆಸಿಪಿ

ಬೇಕಾಗುವ ಸಾಮಗ್ರಿಗಳು

ತೆಂಗಿನಕಾಯಿ - 1/4 ಕಪ್

ಕಡ್ಲೆ - 1/4 ಕಪ್

ಮೆಣಸಿನಕಾಯಿ - 2 ಟೀಸ್ಪೂನ್

ಜೀರ್ಗೆ 1/4 ಟೀ ಸ್ಪೂನ್

ಕೊತ್ತಂಬರಿ ಸೊಪ್ಪು - ಸ್ವಲ್ಪ

ಉಪ್ಪು - ರುಚಿಗೆ

ನೀರು - ಅಗತ್ಯಕ್ಕೆ

ಶುಂಠಿ - 1/4 ಇಂಚು

ತಯಾರಿಸುವ ವಿಧಾನ

ಮೇಲಿನ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಅಗತ್ಯವಿರುವಷ್ಟು ನೀರು ಸೇರಿಸಿ. ತೆಂಗಿನಕಾಯಿ ಚಟ್ನಿ ದಪ್ಪವಾಗಿದ್ದರೆ ಉತ್ತಮ, ಆದ್ದರಿಂದ ಕಡಿಮೆ ನೀರನ್ನು ಸೇರಿಸಿ.

ಕೊತ್ತಂಬರಿ ಚಟ್ನಿ

ಬೇಕಾಗುವ ಸಾಮಗ್ರಿಗಳು

ಕೊತ್ತಂಬರಿ ಸೊಪ್ಪು - 1/4 ಕಪ್

ತುಪ್ಪ - 3/4 ಕಪ್

ಕೊತ್ತಂಬರಿ ಸೊಪ್ಪು - 1 ಕಟ್ಟು

ಜೀರ್ಗೆ - 1/2 ಚಮಚ

ಒಣ ಮೆಣಸಿನಕಾಯಿ - 2

ಹುಣಸೆಹಣ್ಣು - ಸಣ್ಣ ತುಂಡು

ನಿಂಬೆ ಹೋಳು - ಅರ್ಧ

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಎಲ್ಲಾ ಸಾಮಗ್ರಿಗಳಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಚಟ್ನಿಯನ್ನು ಸಾಧ್ಯವಾದಷ್ಟು ದಪ್ಪವಾಗಿ ಗ್ರೈಂಡ್‌ ಮಾಡಿದರೆ ನಿಮಗೆ ರುಚಿಕರವಾದ ಕೊತ್ತಂಬರಿ ಚಟ್ನಿ ಸವಿಯಲು ಸಿದ್ಧವಾಗಿದೆ.

ಮಸಾಲಾ ಚಟ್ನಿ

ಬೇಕಾಗುವ ಸಾಮಗ್ರಿಗಳು

ಉದ್ದಿನ ಬೇಳೆ - 1 ಚಮಚ

ತುಪ್ಪ - 1 ಚಮಚ

ಮೆಣಸಿನಕಾಯಿ - 2 ಚಮಚ

ಈರುಳ್ಳಿ - 1

ಶುಂಠಿ - 1 ಇಂಚು

ಬೆಳ್ಳುಳ್ಳಿ - 4

ಟೊಮೆಟೊ - 1

ಹುಣಸೆಹಣ್ಣು - ಸಣ್ಣ ತುಂಡು

ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಉದ್ದಿನಬೇಳೆ, ಕರಿಮೆಣಸು, ಈರುಳ್ಳಿ ಚೂರುಗಳು, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ 2 ನಿಮಿಷ ಫ್ರೈ ಮಾಡಿ. ಈ ಮಿಶ್ರಣಕ್ಕೆ ಟೊಮೆಟೊ ಮತ್ತು ಉಪ್ಪು ಸೇರಿಸಿ. ಇದನ್ನು 6-7 ನಿಮಿಷಗಳ ಕಾಲ ಫ್ರೈ ಮಾಡಿ. ಟೊಮೆಟೊ ಮೃದುವಾದ ನಂತರ, ಅದನ್ನು ತಣ್ಣಗಾಗಲು ಬಿಡಿ. ಇದನ್ನು ಮಿಶ್ರಣ ಮಾಡಿ ನುಣ್ಣಗೆ ರುಬ್ಬಿದರೆ ಮಸಾಲಾ ಚಟ್ನಿ ಸವಿಯಲು ಸಿದ್ಧ.

mysore-dasara_Entry_Point