ಕುಸಿಯುತ್ತಿದೆ ಬಡ್ಡಿದರ: ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು; ಇಲ್ಲಿದೆ ಇನ್ನಷ್ಟು ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಕುಸಿಯುತ್ತಿದೆ ಬಡ್ಡಿದರ: ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು; ಇಲ್ಲಿದೆ ಇನ್ನಷ್ಟು ವಿವರ

ಕುಸಿಯುತ್ತಿದೆ ಬಡ್ಡಿದರ: ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು; ಇಲ್ಲಿದೆ ಇನ್ನಷ್ಟು ವಿವರ

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಹಾಗೆಯೇ ತಟಸ್ಥ ದಿಂದ ಅಕಮ್ಮಡೇಟಿವ್‌ಗೆ ನಿಲುವನ್ನು ಬದಲಾಯಿಸಿದೆ. ಈ ಬಗ್ಗೆ ಇಲ್ಲಿದೆ ವಿವರ.

ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು
ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು (PC: Canva)

ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಹಾಗೆಯೇ ತಟಸ್ಥ ದಿಂದ ಅಕಮ್ಮಡೇಟಿವ್‌ಗೆ ನಿಲುವನ್ನು ಬದಲಾಯಿಸಿದೆ. ಇದರಿಂದ ಈ ವರ್ಷ ಸ್ಥಿರ ಠೇವಣಿ ದರ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಅಂದರೆ ಹಿರಿಯ ನಾಗರಿಕರಿಗೆ ಇದು ವಿಶೇಷವಾಗಿ ಪರಿಣಾಮ ಬೀರುತ್ತದೆ.

ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 15 ರಿಂದ ತನ್ನ ವಿಶೇಷ ದರದ 400 ದಿನಗಳ ಸ್ಥಿರ ಠೇವಣಿ ಯೋಜನೆಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಉಳಿತಾಯ ಖಾತೆ ಬಡ್ಡಿದರವನ್ನು ಶೇ. 3 ರಿಂದ ಶೇ. 2.75ಕ್ಕೆ ಇಳಿಸಿದೆ. ಬಡ್ಡಿದರ ಕುಸಿಯುತ್ತಿರುವುದರಿಂದ ಹಿರಿಯ ನಾಗರಿಕರು ದೀರ್ಘಾವಧಿಯ ಎಫ್‌ಡಿಗಳು, ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡುವುದು ಉತ್ತಮ.

ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು (SCSS) ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಅವರು ಈ ಯೋಜನೆಯಲ್ಲಿ ರೂ. 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಹಾಗೆಯೇ ಕುಟುಂಬದ ಹೂಡಿಕೆ 60 ಲಕ್ಷ ರೂ.ಗಳವರೆಗೆ ಇರಬಹುದು. ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆ (ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಅಥವಾ POMIS ಎಂದು ಕರೆಯಲಾಗುತ್ತದೆ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಇತರ ಎರಡು ಲಾಭದಾಯಕ ಆಯ್ಕೆಗಳಾಗಿವೆ ಎಂದು ಅಪ್ನಾಧನ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಸ್ಥಾಪಕಿ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನಲ್ಲಿ ನೋಂದಾಯಿಸಲಾದ ಹೂಡಿಕೆ ಸಲಹೆಗಾರ್ತಿ ಪ್ರೀತಿ ಝೆಂಡೆ ಮಾಹಿತಿ ನೀಡಿದ್ದಾರೆ.

ಎಸ್‌ಸಿಎಸ್‌ಎಸ್ ಕನಿಷ್ಠ ಜೂನ್ 30ರ ವರೆಗೆ ವಾರ್ಷಿಕ ಶೇ. 8.2 ರಷ್ಟು ಬಡ್ಡಿದರವನ್ನು (ತ್ರೈಮಾಸಿಕ ಪಾವತಿ) ನೀಡುತ್ತದೆ. ಅಂತೆಯೇ, ಪಿಒಎಂಐಎಸ್ ಪ್ರಸ್ತುತ ವಾರ್ಷಿಕ ಶೇ. 7.4 ರಷ್ಟು (ಮಾಸಿಕವಾಗಿ ಪಾವತಿಸಬೇಕಾದ) ಬಡ್ಡಿದರವನ್ನು ನೀಡುತ್ತದೆ. ಆದರೆ ಎನ್‌ಎಸ್‌ಸಿ ಬಡ್ಡಿದರವು ಶೇ. 7.7 (ವಾರ್ಷಿಕವಾಗಿ ಸಂಯೋಜಿತ, ಮುಕ್ತಾಯದ ಸಮಯದಲ್ಲಿ ಪಾವತಿಸಬೇಕಾದ) ಬಡ್ಡಿದರವನ್ನು ನೀಡುತ್ತದೆ. ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಿರ ಠೇವಣಿಗಳು ಪ್ರಸ್ತುತ ಹಿರಿಯ ನಾಗರಿಕರಿಗೆ ಶೇ. 7.5 ರಷ್ಟು ಬಡ್ಡಿದರವನ್ನು ಹೊಂದಿವೆ. ಎಚ್‍ಡಿಎಫ್‌ಸಿ ಬ್ಯಾಂಕ್ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯೊಂದಿಗೆ ಎಫ್‍ಡಿಗಳಿಗೆ ಶೇ. 7.5 ರಷ್ಟು ಬಡ್ಡಿದರಗಳನ್ನು ನೀಡುತ್ತದೆ.

ದೀರ್ಘಾವಧಿಯ ಸ್ಥಿರ ಠೇವಣಿ ಆಯ್ಕೆ ಮಾಡುವುದು ಉತ್ತಮ

ಬಡ್ಡಿದರಗಳು ಮತ್ತಷ್ಟು ಕುಸಿಯಲಿರುವ ಕಾರಣ, ಹಿರಿಯ ನಾಗರಿಕರು ತಮ್ಮ ಸ್ಥಿರ ಠೇವಣಿಗಳು ಶೀಘ್ರದಲ್ಲೇ ನವೀಕರಣಕ್ಕಾಗಿ ಬರುತ್ತಿದ್ದರೆ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು. ಸಾಮಾನ್ಯವಾಗಿ, ದೀರ್ಘಾವಧಿಯ ಎಫ್‌ಡಿಗಳಿಗಿಂತ ಕಡಿಮೆ ಅವಧಿಯ ಠೇವಣಿಗಳನ್ನು ಆಯ್ಕೆ ಮಾಡುವ ಪ್ರವೃತ್ತಿ ಇರುತ್ತದೆ. ಆದರೆ, ಪ್ರಸ್ತುತ ಬಡ್ಡಿದರವು 25 ಮೂಲ ಅಂಕಗಳಷ್ಟು ಕಡಿಮೆಯಿದ್ದರೂ ಸಹ, ನೀವು ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಎಫ್‍ಡಿ ಗಳನ್ನು ಆಯ್ಕೆ ಮಾಡುವುದು ಉತ್ತಮ. ಈ ಬಾರಿ ಅವಧಿಯ ಮೇಲೆ ಹೆಚ್ಚು ಗಮನಹರಿಸುವುದು ಉತ್ತಮ ಎಂದು ಪ್ಲಾನ್‌ಅಹೆಡ್ ಫೈನಾನ್ಷಿಯಲ್ ಪ್ಲಾನರ್ಸ್‌ನ ಸಂಸ್ಥಾಪಕ ವಿಶಾಲ್ ಧವನ್ ಸಲಹೆ ನೀಡಿದ್ದಾರೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), 5 ವರ್ಷಗಳವರೆಗೆ ಇರಲಿದ್ದು ಶೇ. 8.2 ರಷ್ಟು ತ್ರೈಮಾಸಿಕವಾಗಿ ಪಾವತಿಸಬೇಕು.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), 5 ವರ್ಷಗಳವರೆಗೆ ಶೇ. 7.7 ರಷ್ಟು ವಾರ್ಷಿಕವಾಗಿ ಮುಕ್ತಾಯದಲ್ಲಿ ಪಾವತಿಸಬೇಕು.

ರಾಷ್ಟ್ರೀಯ ಉಳಿತಾಯ/ಅಂಚೆ ಕಚೇರಿ ಸಮಯದ ಠೇವಣಿಗಳು 5 ವರ್ಷಗಳವರೆಗೆ ಶೇ. 7.5 ರಷ್ಟು, ವಾರ್ಷಿಕವಾಗಿ ಪಾವತಿಸಬೇಕು. ಆದರೆ ತ್ರೈಮಾಸಿಕವಾಗಿ ಲೆಕ್ಕ ಹಾಕಬೇಕು.

ರಾಷ್ಟ್ರೀಯ ಸಣ್ಣ ಉಳಿತಾಯ ಮಾಸಿಕ ಆದಾಯ ಯೋಜನೆ (MIS) 5 ವರ್ಷಗಳು, ಶೇ. 7.4 ರಷ್ಟನ್ನು ಮಾಸಿಕವಾಗಿ ಪಾವತಿಸಬೇಕು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿ 5-10 ವರ್ಷಗಳವರೆಗೆ 7.5 ರಷ್ಟು ಪಾವತಿಸಬೇಕು.

ಬ್ಯಾಂಕ್ ಆಫ್ ಇಂಡಿಯಾ (BOI) 5-8 ವರ್ಷಗಳವರೆಗೆ ಶೇ. 6.75 ರಷ್ಟು ಪಾವತಿಸಬೇಕು.

ಷೇರುಗಳಿಗೆ ಮೀಸಲಿಡಿ

ಮಾರುಕಟ್ಟೆಯ ಏರಿಳಿತಗಳು ನಡೆಯುತ್ತಿರುವ ಹೊರತಾಗಿಯೂ , ಹಿರಿಯ ನಾಗರಿಕರು ತಮ್ಮ ಹೂಡಿಕೆಯ ಒಂದು ಭಾಗವನ್ನು ಷೇರುಗಳಿಗೂ ಮೀಸಲಿಡಬೇಕು ಎಂದು ಹಣಕಾಸು ಸಲಹೆಗಾರರು ಸಲಹೆ ನೀಡಿದ್ದಾರೆ. ನೇರವಾಗಿ ಹೂಡಿಕೆ ಮಾಡುವ ಬದಲು, ಹೈಬ್ರಿಡ್ ಅಥವಾ ಸಮತೋಲಿತ ಪ್ರಯೋಜನ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಬಹುದು.

ಹಿರಿಯ ನಾಗರಿಕರು ಬಡ್ಡಿದರಗಳ ಕುಸಿತದಿಂದ ಹೆಚ್ಚು ತೊಂದರೆಗೊಳಗಾಗದಿರುವುದು ಒಳ್ಳೆಯದು. ಆರ್‌ಬಿಐ ನಿರ್ಧಾರಗಳ ಹಿಂದಿನ ಅಂಶಗಳಲ್ಲಿ ಆಹಾರ ಹಣದುಬ್ಬರದಲ್ಲಿನ ತೀವ್ರ ಕುಸಿತ ಮತ್ತು ಮುಖ್ಯ ಹಣದುಬ್ಬರ ಮುನ್ಸೂಚನೆಗಳಲ್ಲಿನ ಸುಧಾರಣೆ ಸೇರಿವೆ. ಹಣದುಬ್ಬರ ಕಡಿಮೆಯಾಗುವುದರಿಂದ ವೆಚ್ಚಗಳು ಸಹ ಕಡಿಮೆಯಾಗುತ್ತವೆ. ಆದ್ದರಿಂದ, ಕಡಿಮೆ ದರಗಳಿಂದ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ.

Priyanka Gowda

eMail
Whats_app_banner