ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಬೆಳಿಗ್ಗೆ ಯಾವ ಸಮಯಕ್ಕೆ ಎದ್ದೇಳಬೇಕು, ನಿದ್ದೆಯ ವಿಚಾರದಲ್ಲಿ ವಿಜ್ಞಾನ ಹೇಳುವ ಸತ್ಯವಿದು
ನಿದ್ದೆ ಮನುಷ್ಯನ ದೈನಂದಿನ ದಿನಚರಿಯ ಪ್ರಮುಖ ಭಾಗ. ಪ್ರತಿದಿನ 7 ರಿಂದ 8 ಗಂಟೆ ಹೊತ್ತು ಮಲಗುವುದು ಮಾತ್ರವಲ್ಲ ನಿರ್ದಿಷ್ಟ ಸಮಯದಲ್ಲಿ ಮಲಗಿ, ನಿರ್ದಿಷ್ಟ ಸಮಯದಲ್ಲಿ ಏಳುವುದು ಮುಖ್ಯವಾಗುತ್ತದೆ. ಹಾಗಾದರೆ ಬೆಳಿಗ್ಗೆ ಯಾವ ಸಮಯಕ್ಕೆ ಎದ್ದೇಳುವುದು ಸೂಕ್ತ.

ಆಹಾರ, ಉಸಿರಾಟದಂತೆ ನಿದ್ದೆ ಕೂಡ ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ನಿದ್ದೆಯು ಮಾನವ ದಿನಚರಿಯ ಮಹತ್ವದ ಭಾಗವಾಗಿದೆ. ನಿದ್ದೆಯನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಒಬ್ಬ ವ್ಯಕ್ತಿ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಪರಿಪೂರ್ಣ ನಿದ್ದೆ ಮಾಡುವುದು ಅವಶ್ಯ. ಆರೋಗ್ಯಕರ ಜೀವನ ನಮ್ಮದಾಗಲು ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡಬೇಕು. ದೇಹಾರೋಗ್ಯ ಸುಧಾರಿಸಲು ಹಾಗೂ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡದಿರಲು ಸಾಕಷ್ಟು ನಿದ್ದೆ ಮಾಡುವುದು ಕೂಡ ಮುಖ್ಯವಾಗುತ್ತದೆ.
ಹಿಂದೆಲ್ಲಾ ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇಂದಿನ ಜೀವನಶೈಲಿಯಂತೆ ತಡರಾತ್ರಿವರೆಗೂ ಎದ್ದಿರುವ ಹಲವರು ಬೆಳಗ್ಗೆ ತಡವಾಗಿ ಎದ್ದೇಳುತ್ತಾರೆ. ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಮಲಗುವ ಹಾಗೂ ಬೆಳಿಗ್ಗೆ ಎದ್ದೇಳುವ ಸಮಯದಲ್ಲಿ ಆಗಾಗ ವ್ಯತ್ಯಾಸ ಆಗುತ್ತಿರುವುದು ದೇಹದ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ನಿದ್ದೆಯ ಕ್ರಮದಲ್ಲಿ ಅಂದರೆ ಮಲಗುವ ಮತ್ತು ಏಳುವ ಸಮಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಇತ್ತೀಚಿನ ವರದಿಯೊಂದರ ಪ್ರಕಾರ ಸೂರ್ಯೋದಯದ ನಂತರ ಕೆಲ ಗಂಟೆಗಳಲ್ಲಿ ಮಲಗುವುದು ಹಾಗೂ ಬೆಳಿಗ್ಗೆ ಬೇಗ ಎದ್ದೇಳುವುದು ಈ ಕ್ರಮವನ್ನು ತಪ್ಪದೇ ಅನುಸರಿಸುವುದು ದೇಹದ ಜೈವಿಕ ಗಡಿಯಾರ ಸರಿಯಾಗಿ ಕೆಲಸ ಮಾಡುತ್ತದೆ. ಇದರಿಂದ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವಯಸ್ಕರಿಗೆ ಪ್ರತಿದಿನ ರಾತ್ರಿ 7 ಗಂಟೆಗಳ ಕಾಲ ಉತ್ತಮ ನಿದ್ದೆ ಅತಿ ಅವಶ್ಯ.
ಅಸಮರ್ಪಕ ನಿದ್ದೆಯು ಹೃದಯದ ಸಮಸ್ಯೆ, ಮಧುಮೇಹ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಆ ಕಾರಣಕ್ಕೆ ನಿದ್ದೆಯ ಕ್ರಮದಲ್ಲಿ ಸ್ಥಿರತೆ ಕಾಪಾಡಿಕೊಂಡು ಪ್ರತಿದಿನ ತಪ್ಪದೇ 7 ರಿಂದ 8 ಗಂಟೆಗಳ ಚೆನ್ನಾಗಿ ನಿದ್ದೆ ಮಾಡುವುದು ಬಹಳ ಮುಖ್ಯವಾಗುತ್ತದೆ.
ಬೆಳಿಗ್ಗೆ ಎದ್ದೇಳಲು ಸರಿಯಾದ ಸಮಯವಿದು
ತಜ್ಞರ ಪ್ರಕಾರ ವ್ಯಕ್ತಿಗಳು ರಾತ್ರಿ 10 ಗಂಟೆ ಒಳಗೆ ನಿದ್ದೆ ಮಾಡಬೇಕು ಮತ್ತು ಬೆಳಿಗ್ಗೆ 5 ರಿಂದ 6 ಗಂಟೆ ಒಳಗೆ ಎದ್ದೇಳಬೇಕು. ಈ ಸಮಯದಲ್ಲಿ ಪ್ರತಿದಿನ 7 ರಿಂದ 8 ಗಂಟೆ ನಿದ್ದೆ ಆಗಿರುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮರೆಯುವಂತಿಲ್ಲ. ಒಂದು ವೇಳೆ ಒಬ್ಬ ಮನುಷ್ಯ ರಾತ್ರಿ 11 ಗಂಟೆಗೆ ಮಲಗಿದರೆ ಅವನು 6 ರಿಂದ 7 ನಡುವೆ ಎದ್ದೇಳಬೇಕು.
ಸಾಮಾನ್ಯವಾಗಿ ರಾತ್ರಿ 10 ರಿಂದ 11 ಗಂಟೆ ನಡುವೆ ಮಲಗುವುದು ಸಾಕಷ್ಟು ಜನರಿಗೆ ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಕೆಲಸ ಅಥವಾ ಇನ್ನಾವುದೋ ಕಾರಣಕ್ಕೆ ರಾತ್ರಿ ತಡವಾಗಿ ಮಲಗಿದರೂ ಪ್ರತಿದಿನ 7 ಗಂಟೆ ಹೊತ್ತು ತಪ್ಪದೇ ನಿದ್ದೆ ಮಾಡುವುದು ಬಹಳ ಮುಖ್ಯವಾಗುತ್ತದೆ. ನಮ್ಮ ದೇಹಕ್ಕೆ ಪ್ರತಿರಾತ್ರಿ ಕನಿಷ್ಠ 7 ಗಂಟೆಗಳ ಹೊತ್ತು ವಿರಾಮ ನೀಡುವುದು ಅವಶ್ಯ. ನಿದ್ದೆ ಮಾಡುವ ಸಮಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದರಿಂದ ದೇಹದ ಚಕ್ರ ಸರಿಯಾಗಿ ಕೆಲಸ ಮಾಡುವ ಜೊತೆಗೆ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.
ನಿದ್ದೆಯ ಕ್ರಮದ ಬಗ್ಗೆ ಆಯುರ್ವೇದ ಹೇಳುವುದು ಹೀಗೆ
ಆಧುನಿಕ ಸಂಶೋಧನೆ ಪ್ರತಿದಿನ ಯಾವುದೇ ಸಮಯಕ್ಕೆ ಮಲಗಿದರೂ ರಾತ್ರಿ ಹೊತ್ತು 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡುವುದು ಅವಶ್ಯ ಎಂದು ಹೇಳುತ್ತವೆ. ಆದರೆ ಆಯುರ್ವೇದದಲ್ಲಿ ನಿದ್ದೆಯ ಸಮಯಕ್ಕೆ ವಿಶೇಷ ಮಹತ್ವವಿದೆ. ಆಯುರ್ವೇದ ಪ್ರಕಾರ ಸೂರ್ಯಾಸ್ತದ ನಂತರ ಮಲಗಿ, ಸುರ್ಯೋದಯಕ್ಕೂ ಮೊದಲು ಎದ್ದೇಳಬೇಕು ಎಂಬುದನ್ನು ಪ್ರತಿಪಾದಿಸುತ್ತದೆ. ಆಯುರ್ವೇದ ತಜ್ಞರು ಬ್ರಹ್ಮಮುಹೂರ್ತದಲ್ಲಿ ಎದ್ದೇಳಬೇಕು ಎನ್ನುವುದನ್ನು ಶಿಫಾರಸು ಮಾಡುತ್ತಾರೆ. ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎನ್ನುವುದು ಬೆಳಿಗ್ಗೆ 5 ಗಂಟೆಯಿಂದ 5.30 ರ ನಡುವೆ ಇರುತ್ತದೆ. ಈ ಹೊತ್ತಿನಲ್ಲಿ ಎದ್ದೇಳುವುದು ಆರೋಗ್ಯಕ್ಕೆ ಬಹಳ ಮುಖ್ಯವಾಗತ್ತದೆ. ಅಲ್ಲದೇ ಈ ಸಮಯದಲ್ಲಿ ದೇಹ ಉಲ್ಲಸಿತವಾಗಿರುತ್ತದೆ.
ವಿಭಾಗ