World Drug Day: ಮಾದಕ ವಸ್ತುಗಳಿಂದ ದೂರವಿರಿ; ಸಮಾಜ-ಆರೋಗ್ಯವನ್ನ ಕಾಪಾಡಿಕೊಳ್ಳಿ; ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಕುರಿತ ಲೇಖನ
ಕನ್ನಡ ಸುದ್ದಿ  /  ಜೀವನಶೈಲಿ  /  World Drug Day: ಮಾದಕ ವಸ್ತುಗಳಿಂದ ದೂರವಿರಿ; ಸಮಾಜ-ಆರೋಗ್ಯವನ್ನ ಕಾಪಾಡಿಕೊಳ್ಳಿ; ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಕುರಿತ ಲೇಖನ

World Drug Day: ಮಾದಕ ವಸ್ತುಗಳಿಂದ ದೂರವಿರಿ; ಸಮಾಜ-ಆರೋಗ್ಯವನ್ನ ಕಾಪಾಡಿಕೊಳ್ಳಿ; ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಕುರಿತ ಲೇಖನ

International Day Against Drug Abuse and Illicit Trafficking: ಮಾದಕ ದ್ರವ್ಯಗಳ ಬಳಕೆ ಹಾಗೂ ಅಕ್ರಮ ಕಳ್ಳಸಾಗಣೆಯ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಜನರ ಆರೋಗ್ಯವನ್ನು ಕಾಪಾಡುವುದನ್ನು ಶ್ರಮಿಸುವ ಸಲುವಾಗಿ ಪ್ರತಿ ವರ್ಷ ಜೂನ್‌ 26 ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ

ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನ
ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನ

World Drug Day: ಡ್ರಗ್ಸ್‌ ಬಳಕೆ, ದುರುಪಯೋಗ ಹಾಗೂ ಅಕ್ರಮ ಕಳ್ಳಸಾಗಣೆಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 26 ರಂದು ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವ್ಯಸನವನ್ನು ನಿರ್ಮೂಲನೆ ಮಾಡುವ ಕುರಿತು ಜಾಗತಿಕ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಮಾದಕ ವ್ಯಸನವನ್ನು ತಡೆಗಟ್ಟುವ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರು, ವೈದ್ಯರು, ಸಮಾಲೋಚಕರು ಹಾಗೂ ಸಂಘ ಸಂಸ್ಥೆಗಳು ಈ ಸಾಮಾಜಿಕ ಅನಿಷ್ಠದ ವಿರುದ್ಧ ಹೋರಾಡುವುದು ಮಾತ್ರವಲ್ಲ, ವ್ಯಸನಿಗಳು ಹಾಗೂ ಮಾದಕ ದ್ರವ್ಯಗಳಿಂದ ಬಲಿಪಶುವಾದರಿಗೆ ಸಹಾಯ ಮಾಡುವ ಕೆಲಸವನ್ನೂ ಮಾಡುತ್ತಾರೆ.

1987ರ ಡಿಸೆಂಬರ್‌ನಲ್ಲಿ ನಿರ್ಣಯವೊಂದನ್ನು ಅಂಗೀಕರಿಸುವ ಮೂಲಕ ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆಯ ವಿರುದ್ಧದ ದಿನಕ್ಕೆ ಅಧಿಕೃತವಾಗಿ ಚಾಲನೆ ನೀಡಿತು.

ಮಾದಕ ದ್ರವ್ಯಗಳ ಸೇವನೆಯಿಂದಾಗುವ ಅಪಾಯಗಳ ಬಗ್ಗೆ ಪ್ರಚಾರ ಮಾಡಲು ಹಾಗೂ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಹಾಗೂ ನೂರಾರು ಸಂಘ ಸಂಸ್ಥೆಗಳು ಈ ಆಚರಣೆಯಲ್ಲಿ ತೊಡಗುತ್ತಾರೆ. ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನದ ಇತಿಹಾಸ, ಮಹತ್ವದ ಕುರಿತ ಮಾಹಿತಿ ಇಲ್ಲಿದೆ.

2023ರ ಥೀಮ್‌

ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ದಿನದ 2023ರ ಥೀಮ್‌ ಹೀಗಿದೆ. ʼಜನರು ಮೊದಲು; ಕಳಂಕ, ತಾರತಮ್ಯವನ್ನು ನಿಲ್ಲಿಸಿ, ತಡೆಗಟ್ಟುವಿಕೆಯನ್ನು ಹೆಚ್ಚಿಸಿʼ ಎಂಬುದಾಗಿದೆ. ಡ್ರಗ್ಸ್‌ ಬಳಕೆಯನ್ನು ತಡೆಗಟ್ಟಿ, ಆರೋಗ್ಯವನ್ನು ಹಾಗೂ ಸಾಮಾಜದ ಆರೋಗ್ಯವನ್ನು ಕಾಪಾಡಿ ಎಂಬುದು ಈ ಥೀಮ್‌ನ ಉದ್ದೇಶವಾಗಿದೆ.

ಇತಿಹಾಸ

1987, ಡಿಸೆಂಬರ್‌ 7 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯಸಭೆಯ, 42/112 ನಿರ್ಣಯದ ಪ್ರಕಾರ ಮಾದಕ ದ್ರವ್ಯದ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆಯ ಅಂತರರಾಷ್ಟ್ರೀಯ ದಿನದ ಆಚರಣೆಗೆ ಕರೆ ಕೊಡಲಾಗಿತ್ತು.

ಈ ದಿನವು ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಅಫೀಮು ವ್ಯಾಪಾರವನ್ನು ನಾಶಪಡಿಸಿದ ಲಿನ್‌ ಜೆಕ್ಸ್‌ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಆರಂಭಿಸಲಾಗಿತ್ತು. ಮಾದಕ ದ್ರವ್ಯದ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಣೆಯ ವಿರುದ್ಧ ಲಿನ್‌ ಜೆಕ್ಸು ಅವರ ಪ್ರಯತ್ನಗಳಿಗೆ ಬೆಳಕು ಚೆಲ್ಲುವ ಪ್ರಯತ್ನವೂ ಈ ದಿನದ ಆಚರಣೆಯ ಹಿಂದಿನ ಉದ್ದೇಶವಾಗಿದೆ.

ಮಹತ್ವ

ಮಾದಕವಸ್ತುಗಳ ಬಳಕೆದಾರರು ಈ ದಿನವನ್ನು ಎಚ್ಚರಿಕೆಯ ಕರೆಯಾಗಿ ತೆಗೆದುಕೊಳ್ಳಬೇಕು, ಅಲ್ಲದೆ ತಮ್ಮ ಆರೋಗ್ಯ ಮೊದಲು ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಮಾದಕ ದ್ರವ್ಯ ವಿರೋಧಿ ದಿನವು ಇದರಿಂದ ಹೊರ ಬರಲು ಹಾಗೂ ಚೇತರಿಸಿಕೊಳ್ಳುವ ಮಾರ್ಗವನ್ನು ತೋರಿಸುವ ಕೆಲಸ ಮಾಡುತ್ತದೆ. ಈ ದಿನವು ಮಾದಕ ದ್ರವ್ಯವನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ಆಚರಣೆ

* ಮಾದಕವಸ್ತು ಬಳಕೆ ಮತ್ತು ಕಳ್ಳಸಾಗಣೆಯನ್ನು ತಡೆಯುವ ವೇದಿಕೆಗಳಲ್ಲಿ ಎಲ್ಲರೂ ಒಂದಾಗಿ ಸೇರುವುದು.

* ಮಾದಕ ದ್ರವ್ಯಗಳ ಬಳಕೆ ಹಾಗೂ ಅಕ್ರಮ ಕಳ್ಳಸಾಗಣೆಯ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನದಲ್ಲಿ ಭಾಗವಹಿಸುವುದು

* ಮಾದಕ ದ್ರವ್ಯಗಳನ್ನು ತ್ಯಜಿಸಲು ಬಯಸುವವರ ಕಲ್ಯಾಣವನ್ನು ಉತ್ತೇಜಿಸುವ ಸಂಸ್ಥೆಗಳೊಂದಿಗೆ ಸ್ವಯಂಸೇವಕರಾಗಬಹುದು.

* ಚಿಕಿತ್ಸಾ ಸೌಲಭ್ಯಗಳಿಗೆ ದೇಣಿಗೆ ನೀಡುವುದು

* ಮಾದಕದ್ರವ್ಯಗಳು ಆರೋಗ್ಯ ಹಾಗೂ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದರ ಕುರಿತು ನಿಮ್ಮ ಪ್ರೀತಿಪಾತ್ರರಿಗೆ ಶಿಕ್ಷಣ ನೀಡುವುದು. ಈ ರೀತಿಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಮಾಡುವತ್ತ ಕೈ ಜೋಡಿಸಬಹುದು.

Whats_app_banner