International Day of Happiness: ಖುಷಿ ಹಂಚಿ, ಖುಷಿ ಪಡಿ; ವಿಶ್ವ ಸಂತೋಷದ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  International Day Of Happiness: ಖುಷಿ ಹಂಚಿ, ಖುಷಿ ಪಡಿ; ವಿಶ್ವ ಸಂತೋಷದ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

International Day of Happiness: ಖುಷಿ ಹಂಚಿ, ಖುಷಿ ಪಡಿ; ವಿಶ್ವ ಸಂತೋಷದ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

ಸಂತೋಷ-ದುಃಖ ಎರಡೂ ಜೀವನದ ಭಾಗವಾದ್ರೂ ಕೂಡ ಎಲ್ಲರೂ ಬಯಸುವುದು ಸಂತೋಷವನ್ನೇ. ಸಂತಸದಿಂದಿರುವುದು ಯಾರಿಗೆ ಇಷ್ಟವಿಲ್ಲ ಹೇಳಿ. ಇಂತಹ ಸಂತೋಷವನ್ನು ಸಂಭ್ರಮಿಸುವ ಸಲುವಾಗಿ ಒಂದು ದಿನವಿದೆ. ಅದುವೇ ಅಂತರರಾಷ್ಟ್ರೀಯ ಸಂತೋಷದ ದಿನ. ಪ್ರತಿವರ್ಷ ಮಾರ್ಚ್‌ 20 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದರ ಇತಿಹಾಸ, ಮಹತ್ವ ತಿಳಿಯಿರಿ.

ವಿಶ್ವ ಸಂತೋಷದ ದಿನ
ವಿಶ್ವ ಸಂತೋಷದ ದಿನ

ಸಂತೋಷ... ಜಗತ್ತಿನಲ್ಲಿ ಎಲ್ಲರೂ ಬಯಸುವ ಒಂದು ಅದ್ಭುತ ಸಂಗತಿಯಿದು. ಸಂತೋಷವನ್ನ ಬೇಡ ಎಂದು ದೂರ ತಳ್ಳುವವರಿಲ್ಲ. ಇದು ನಮ್ಮೆಲ್ಲರ ಬದುಕಿನ ಪ್ರೇರಕ ಶಕ್ತಿ. ಬದುಕಿನಲ್ಲಿ ನಾವು ಎಲ್ಲರೊಂದಿಗೂ ಉಚಿತವಾಗಿ ಹಂಚಲು ಸಾಧ್ಯವಾಗುವುದು ಸಂತೋಷವನ್ನ ಮಾತ್ರ. ಮನುಷ್ಯನ ಬದುಕು ನೂರಾರು ಭಾವನೆಗಳ ಸಮ್ಮಿಲನ. ಆದರೆ, ಈ ಎಲ್ಲಾ ಭಾವನೆಗಳನ್ನೂ ಮೀರಿದ್ದು ಸಂತೋಷ. ಇದು ಬದುಕಿನ ಭರವಸೆಯೂ ಹೌದು. ಆಯುಷ್ಯವನ್ನು ಹೆಚ್ಚಿಸುವ ಮಾಂತ್ರಿಕ ಶಕ್ತಿಯೂ ಹೌದು. ಸಂತೋಷದಿಂದ ಇರುವುದು ಒಂದು ಕಲೆ, ಸದಾ ಸಂತೋಷದಿಂದ ಇರಲು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರು ಅದೆಷ್ಟೋ ನೋವಿದ್ದರೂ ಸಂತೋಷದಿಂದಲೇ ಬದುಕುತ್ತಿರುತ್ತಾರೆ. ಅದೆಲ್ಲಾ ಸರಿ, ಸಂತೋಷದ ಬಗ್ಗೆ ಯಾಕೆ ಇಷ್ಟೊಂದು ಹೇಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದೀರಾ, ಖಂಡಿತ ಕಾರಣ ಇದೆ. ಅದೇನೆಂದರೆ ನಾಳೆ (ಮಾರ್ಚ್‌ 20) ವಿಶ್ವ ಸಂತೋಷದ ದಿನ ಅಥವಾ ಅಂತರರಾಷ್ಟ್ರೀಯ ಸಂತೋಷದ ದಿನ.

ನಮ್ಮ ಜೀವನದಲ್ಲಿ ಸಂತೋಷದ ಅಸ್ತಿತ್ವದ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭ ಈ ದಿನಾಚರಣೆಯ ಇತಿಹಾಸ, ಮಹತ್ವದ ಬಗ್ಗೆ ತಿಳಿಯಿರಿ.

ವಿಶ್ವ ಸಂತೋಷ ದಿನ

ಪ್ರತಿವರ್ಷ ಮಾರ್ಚ್‌ 20 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂತೋಷದ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಸಂತೋಷ ದಿನ ಬುಧವಾರವಿದೆ.

ವಿಶ್ವ ಸಂತೋಷ ದಿನದ ಇತಿಹಾಸ

2012ರ ಜುಲೈ 12 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್‌ 20 ಅನ್ನು ಅಂತರರಾಷ್ಟ್ರೀಯ ಸಂತೋಷದ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿ ವರ್ಷ ಈ ದಿನದಂದು ವಿಶ್ವ ಸಂತೋಷದ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ

ಇದು ಸಂತೋಷದ ಅಸ್ಮಿತೆಯನ್ನು ಸಂಭ್ರಮಿಸುವ ದಿನ. ಸಂತೋಷ ಎಂಬುದು ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಂತೋಷವು ಮಾನವನ ಮೂಲಭೂತ ಗುರಿಯಾಗಿದೆ. ಸಂತೋಷವು ಆರೋಗ್ಯ, ಆಯುಷ್ಯ ವೃದ್ಧಿಸುವ ಶಕ್ತಿಯನ್ನೂ ಹೊಂದಿದೆ. ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಸಂತೋಷದ ಗುರಿಯನ್ನು ಗುರುತಿಸಿ ಈ ದಿನದ ಆಚರಣೆಗೆ ಕರೆ ನೀಡಿದೆ. ಇದು ಜಗತ್ತಿಗೆ ಸಂತೋಷವನ್ನು ಹರಡುವ ದಿನವಾಗಿದೆ. ಸದಾ ನಗುತ್ತಾ, ನಗಿಸುತ್ತಾ ಸದಾ ಖುಷಿಯಿಂದ ಇರೋಣ, ಎಲ್ಲರಿಗೂ ಖುಷಿ ಹಂಚುತ್ತಾ ಬದುಕನ್ನು ಸಂಭ್ರಮದಿಂದ ಕಳೆಯೋಣ. ಸಂತೋಷದಿಂದಲೇ ಬದುಕನ್ನು ಅಂತ್ಯಗೊಳಿಸೋಣ, ದ್ವೇಷಕ್ಕೆ ಬಾಯ್‌ ಹೇಳಿ ಖುಷಿಯನ್ನು ಹಂಚುವ ಮೂಲಕ ಈ ದಿನವನ್ನು ಸಂಭ್ರಮಿಸೋಣ.

ಮೊದಲು ಆರಂಭಿಸಿದ್ದು ಭೂತಾನ್‌

ವಿಶ್ವ ಸಂತೋಷ ದಿನಾಚರಣೆಯನ್ನು ಒಗತ್ತಿನಲ್ಲೇ ಮೊದಲು ಆರಂಭಿಸಿದ್ದು ಭೂತಾನ್‌ ದೇಶ. ವಿಶ್ವಸಂಸ್ಥೆಯು 2012 ವಿಶ್ವ ಸಂತೋಷ ದಿನಾಚರಣೆಯ ಮಹತ್ವದ ಬಗ್ಗೆ ಹೇಳಿದ್ದಾದರೂ ಭೂತಾನ್‌ ದೇಶವು 1970ರ ಸುಮಾರಿನಲ್ಲೇ ಸಂತೋಷವಾಗಿರುವುದು ಹಾಗೂ ಸಂತೋಷದ ದಿನಾಚರಣೆಯ ಮಹತ್ವವನ್ನು ತಿಳಿಸಿತ್ತು.

ವಿಶ್ವದಲ್ಲಿ ಸಂತೋಷದ ದೇಶಗಳಲ್ಲಿ ಭಾರತಕ್ಕಿಲ್ಲ ಅಗ್ರಸ್ಥಾನ

ಸದ್ಯದ ವರದಿಯ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಸಂತೋಷದಿಂದ ಇರುವ ಅಥವಾ ಅತಿ ಹೆಚ್ಚು ಸಂತೋಷಪಡುವ ಜನರು ಇರುವುದು ಫಿನ್‌ಲ್ಯಾಂಡ್‌ನಲ್ಲಿ. ಡೆನ್ಮಾಕ್‌, ಸ್ವಿಟ್ವರ್ಲೆಂಡ್‌, ನೆರ್ದಲ್ಯಾಂಡ್‌ ದೇಶಗಳು ಸಂತೋಷದಲ್ಲಿ ಅಗ್ರಸ್ಥಾನದಲ್ಲಿವೆ. ಈ ಸಂತೋಷದ ದೇಶಗಳ ಪಟ್ಟಿಯಲ್ಲಿ ಭಾರತ 144ನೇ ಸ್ಥಾನದಲ್ಲಿದೆ ಎನ್ನುವುದು ಮಾತ್ರ ಬೇಸರದ ಸಂಗತಿ.

Whats_app_banner