ಕನ್ನಡ ಸುದ್ದಿ  /  ಜೀವನಶೈಲಿ  /  World Television Day: ಇಂದು ವಿಶ್ವ ದೂರದರ್ಶನ ದಿನ; ಈ ದಿನದ ಆಚರಣೆಯ ಉದ್ದೇಶ, ಮಹತ್ವ, ಇತಿಹಾಸ ಹೀಗಿದೆ

World Television Day: ಇಂದು ವಿಶ್ವ ದೂರದರ್ಶನ ದಿನ; ಈ ದಿನದ ಆಚರಣೆಯ ಉದ್ದೇಶ, ಮಹತ್ವ, ಇತಿಹಾಸ ಹೀಗಿದೆ

ನಮ್ಮೆಲ್ಲರ ಬದುಕಿನ ಭಾಗವಾಗಿರುವ ಟಿವಿಯ ಹುಟ್ಟನ್ನು ಸಂಭ್ರಮಿಸುವ ಉದ್ದೇಶದಿಂದ ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಉದ್ದೇಶ, ಮಹತ್ವ, ಇತಿಹಾಸದ ಬಗ್ಗೆ ತಿಳಿಯಿರಿ.

ಇಂದು ವಿಶ್ವ ದೂರದರ್ಶನ ದಿನ
ಇಂದು ವಿಶ್ವ ದೂರದರ್ಶನ ದಿನ

ಟಿವಿ... ಬಹುಶಃ ನಾವು ಹುಟ್ಟಿದ ದಿನಗಳಿಂದಲೂ ತಮ್ಮ ಮನೆಯ ಭಾಗವಾಗಿದೆ. ಆಗೆಲ್ಲಾ ಡೂಮ್‌ ಟಿವಿಗಳಿದ್ದರೆ, ಈಗ ಕಾಲ ಬದಲಾಗಿದೆ. ಈಗೆಲ್ಲಾ ಎಲ್‌ಇಡಿ, ಎಲ್‌ಸಿಡಿ ಸ್ಮಾರ್ಟ್‌ ಟಿವಿಯದ್ದೇ ಜವಾನ. ಆದರೂ ಡೂಮ್‌ ಟಿವಿಗೆ ಡಿಶ್‌, ಆಂಟೆನಾ ಅಳವಡಿಸಿ ಟಿವಿ ನೋಡುತ್ತಿದ್ದ ದಿನಗಳೇ ಬಲು ಸುಂದರ. ಟಿವಿ ಎಂಬ ಎಲೆಕ್ಟ್ರಾನಿಕ್‌ ಪರಿಕರವು ಎಲ್ಲ ವಯೋಮಾನದವರಿಗೂ ಮಾಹಿತಿ, ಮನೋರಂಜನೆ ಎಲ್ಲವನ್ನೂ ನೀಡುತ್ತದೆ. ಪುಟಾಣಿ ಮಕ್ಕಳಿಗೆ ಕಾರ್ಟೂನ್‌ಗಳು ಮನರಂಜಿಸುವ ಜೊತೆಗೆ ವಿವಿಧ ಕಾರ್ಯಕ್ರಮಗಳು, ನ್ಯೂಸ್‌, ಧಾರಾವಾಹಿಗಳು, ಸಿನಿಮಾಗಳು ಹೀಗೆ ಮಕ್ಕಳಿಂದ ವಯಸ್ಸಾದವರೆಗೂ ಟಿವಿ ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿರುತ್ತದೆ. ಇದು ಯುಗಯುಗಗಳಿಂದಲೂ ಜನರನ್ನು ರಂಜಿಸುವ ಕೆಲಸ ಮಾಡುತ್ತಿದೆ. ದೂರದರ್ಶನವು ಪ್ರಾರಂಭದ ದಿನಗಳಿಂದಲೂ ಸಾಕಷ್ಟು ಅಭಿವೃದ್ಧಿ ಹಾಗೂ ನಾವೀನ್ಯತೆಗೆ ಹೆಸರಾಗಿದೆ. ಪ್ರಸ್ತುತ ಯುಗದಲ್ಲಿ ಇದು ಇನ್ನಷ್ಟು ಬದಲಾವಣೆ ಕಂಡಿದೆ. ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಟಿವಿಯು ಒಗ್ಗಿಕೊಳ್ಳುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಟಿವಿ ಎಂದು ಮನೆಮನೆಯ ಈ ಸ್ನೇಹಿತನನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ ಪ್ರಪಂಚದಾದ್ಯಂತ ವಿಶ್ವ ದೂರದರ್ಶನ ದಿನ ಅಥವಾ ವರ್ಲ್ಡ್‌ ಟೆಲಿವಿಷನ್‌ ಡೇ ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಆಚರಣೆಯ ಹಿಂದಿನ ಉದ್ದೇಶವೇನು ತಿಳಿಯಿರಿ.

ದಿನಾಂಕ

ಪ್ರತಿವರ್ಷ ನವೆಂಬರ್‌ 21 ರಂದು ವಿಶ್ವ ಟೆಲಿವಿಷನ್‌ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮಂಗಳವಾರ ವಿಶ್ವ ದೂರದರ್ಶನ ದಿನ ಬಂದಿದೆ.

ಇತಿಹಾಸ

1927ರಲ್ಲಿ ಮೊದಲ ಎಲೆಕ್ಟ್ರಿಕ್‌ ಟೆಲಿವಿಷನ್‌ ಅನ್ನು ಫಿಲೋ ಟೇಲರ್‌ ಫಾರ್ನ್ಸ್ವರ್ತ್ ಎಂಬ ಅಮೆರಿಕನ್‌ ಸಂಶೋಧಕರೊಬ್ಬರು ಕಂಡುಹಿಡಿದರು. 1996ರಲ್ಲಿ ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸ್ಲೆಂಬಿ ನವೆಂಬರ್‌ 21 ಅನ್ನು ವಿಶ್ವ ದೂರದರ್ಶನ ದಿನ ಎಂದು ಘೋಷಿಸಿತು. ಅಲ್ಲದೆ ಪ್ರತಿ ವರ್ಷ ಈ ದಿನ ಆಚರಿಸಬೇಕು ಎಂದು ಕರೆ ನೀಡಿತು.

1996ರ ನವೆಂಬರ್‌ 21 ಹಾಗೂ ನವೆಂಬರ್‌ 22ರಂದು ವಿಶ್ವಸಂಸ್ಥೆಯು ಮೊದಲ ವಿಶ್ವ ದೂರದರ್ಶನ ವೇದಿಕೆಯನ್ನು ಆಯೋಜಿಸಿತು.

ಮಹತ್ವ

ಈ ದಿನದಂದು ಮಾನವನ ಜೀವನದಲ್ಲಿ ದೂರದರ್ಶನ ಪ್ರಾಮುಖ್ಯತೆಯನ್ನು ಚರ್ಚಿಸಲು ಜನರು ಒಟ್ಟಾಗಿ ಸೇರುತ್ತಾರೆ. ಟಿವಿ ಪ್ರಸಾರದ ಮಾದರಿಗಳನ್ನು ಸುಧಾರಿಸುವ ಮಾರ್ಗಗಳನ್ನು ಅನ್ವೇಷಿಸುತ್ತಾರೆ.

ಇಂದು ದೂರದರ್ಶನ ಅಥವಾ ಟಿವಿ ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದು ಎಲ್ಲಾ ವಯೋಮಾನದವರಿಗೂ ಪ್ರಸ್ತುತವಾಗಿದೆ. ನಮ್ಮ ನೋವು, ಬೇಸರ ಕಳೆಯುವ ಶಕ್ತಿ ಟಿವಿಗಿದೆ. ಎಲ್ಲಾ ವಯಸ್ಸಿನವರಿಗೂ ಮನರಂಜನೆ ನೀಡುವ ಮಾಯಾ ಶಕ್ತಿ ಟಿವಿಯದ್ದು. ವಿಶ್ವ ಟೆಲಿವಿಷನ್‌ ದಿನದಂದು ಜನರು ದೂರದರ್ಶನದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಚರ್ಚಿಸುತ್ತಾರೆ. ಟೆಲಿವಿಷನ್‌ ವೀಕ್ಷಣೆಯ ಪರಿಣಾಮ ಮತ್ತು ಪ್ರಯೋಜನಗಳ ಬಗ್ಗೆ ಪ್ರೇಕ್ಷಕರಿಗೆ ಅರಿವು ಮೂಡಿಸಲಾಗುತ್ತದೆ.

ವಿಭಾಗ