International Kissing Day: ಚುಂಬನದಲ್ಲೂ ಇದೆ ನಾನಾ ವಿಧ, ನೂರಾರು ಅರ್ಥ; ಪ್ರಚಲಿತದಲ್ಲಿರುವ 7 ಬಗೆಯ ಮುತ್ತುಗಳು, ಅವುಗಳ ಅರ್ಥ ಇಲ್ಲಿದೆ
Types Of Kisses And Meaning: ಪ್ರತಿವರ್ಷ ಜುಲೈ 6 ರಂದು ಅಂತರರಾಷ್ಟ್ರೀಯ ಮುತ್ತಿನ ದಿನವನ್ನು ಆಚರಿಸಲಾಗುತ್ತದೆ. ಪ್ರೀತಿಯ ಪರಿಭಾಷೆಯನ್ನು ವ್ಯಕ್ತಪಡಿಸುವ ಚುಂಬನದಲ್ಲೂಇದೆ ಹಲವು ವಿಧ, ನಾನಾ ಅರ್ಥ. ಜಗತ್ತಿನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮುತ್ತಿನ ಬಗೆಗಳು ಮತ್ತು ಅವುಗಳ ಅರ್ಥವನ್ನು ಇಲ್ಲಿ ವಿವರಿಸಲಾಗಿದೆ.
ಇಂದು ಅಂತರರಾಷ್ಟ್ರೀಯ ಕಿಸ್ಸಿಂಗ್ ಅಥವಾ ಚುಂಬನ ದಿನ. ಪ್ರೀತಿ ಪರಿಭಾಷೆಯನ್ನು ವ್ಯಕ್ತಪಡಿಸುವ ಮುತ್ತಿನಲ್ಲೂ ಹಲವು ಬಗೆ ಇದೆ. ಕೆನ್ನೆ ಮೇಲೆ ನವಿರಾಗಿ ಚುಂಬಿಸುವುದರಿಂದ ಹಿಡಿದು ತುಟಿಗಳಿಂದ ಗಾಢವಾಗಿ ಚುಂಬಿಸುವವರೆಗೆ ಚುಂಬನಗಳ ವಿಧಗಳು ಹಾಗೂ ಅವುಗಳ ಅರ್ಥಗಳು ಬೇರೆ ಬೇರೆಯಾಗಿವೆ. ಈ ಸ್ಟೋರಿಯಲ್ಲಿ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಬಗೆಯ ಮುತ್ತುಗಳು ಹಾಗೂ ಅವುಗಳ ಅರ್ಥದ ಬಗ್ಗೆ ವಿವರಿಸಲಾಗಿದೆ.
ಪ್ರತಿವರ್ಷ ಜೂನ್ 6 ರಂದು ಅಂತರರಾಷ್ಟ್ರೀಯ ಮುತ್ತಿನ ದಿನವನ್ನು ಆಚರಿಸಲಾಗುತ್ತದೆ. ಇದನ್ನೂ ಅಂತರರಾಷ್ಟ್ರೀಯ ಕಿಸ್ಸಿಂಗ್ ದಿನ ಎಂದೂ ಕರೆಯಲಾಗುತ್ತದೆ. ಈ ದಿನದ ಆಚರಣೆಯು ಆರಂಭವಾಗಿದ್ದು ಯುನೈಟೆಡ್ ಕಿಂಗ್‌ಡಮ್‌ನಿಂದ. 2000ನೇ ಇಸವಿಯಿಂದ ಇದನ್ನು ಪ್ರಪಂಚದಾದ್ಯಂತ ಆಚರಿಸುತ್ತಿದ್ದಾರೆ.
ಇಲ್ಲಿದೆ ಪ್ರಪಂಚದ ವಿವಿಧ ಬಗೆಯ ಚುಂಬನಗಳು. ಪ್ರತಿ ಚುಂಬನಕ್ಕೂ ಭಿನ್ನ ಅರ್ಥವಿರುವುದು ಮಾತ್ರವಲ್ಲ, ಪ್ರಯೋಜನಗಳೂ ಇವೆ.
ಎಸ್ಕಿಮೊ ಕಿಸ್
ಎಸ್ಕಿಮೊ ಚುಂಬನದಲ್ಲಿ ಇಬ್ಬರೂ ವ್ಯಕ್ತಿಗಳು ತಮ್ಮ ಮೂಗುಗಳನ್ನು ವೃತ್ತಾಕಾರದ ಚಲನೆಯಲ್ಲಿ ಒತ್ತುತ್ತಾರೆ. ಈ ರೀತಿಯ ಕಿಸ್ ಸೌಹಾರ್ದ ಹಾಗೂ ಪ್ರೀತಿಯ ಸಂಕೇತವಾಗಿದೆ. ಕುಟುಂಬ ಸದಸ್ಯರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ಚುಂಬನವನ್ನು ಹೆಚ್ಚು ಅನುಸರಿಸುತ್ತಾರೆ. ಇದನ್ನೂ ನೂಸ್ ಕಿಸ್ ಅಂತಲೂ ಕರೆಯುತ್ತಾರೆ.
ಫ್ರೆಂಚ್ ಕಿಸ್
ಇದು ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತದಲ್ಲಿರುವ ಕಿಸ್ಸಿಂಗ್ ವಿಧಾನ. ಇದು ಗಾಢವಾದ ಚುಂಬನವೂ ಹೌದು. ತುಟಿ, ಬಾಯಿ, ನಾಲಿಗೆಯನ್ನೂ ಬಳಸಿಕೊಂಡು ಅತ್ಯಂತ ಭಾವೋದ್ರಿಕ್ತ ಚುಂಬನದ ವಿಧಗಳಲ್ಲಿ ಇದೂ ಒಂದು. ಇದು ಮನದ ಬಲವಾದ ಭಾವನೆಗಳು ಮತ್ತು ಪರಸ್ಪರ ಬಯಕೆಯನ್ನು ವ್ಯಕ್ತಪಡಿಸುವ ಅತ್ಯಂತ ಭಾವನಾತ್ಮಕ ರೀತಿ ಕಿಸ್ ಆಗಿದೆ. ಇದನ್ನು ಮೊದಲ ಮಹಾಯುದ್ಧದ ಸಮಯದಲ್ಲಿ ಫ್ರೆಂಚರು ಕಂಡು ಹಿಡಿದರು.
ಹಣೆ ಮೇಲಿನ ಮುತ್ತು
ಹಣೆ ಮೇಲೆ ಮುತ್ತು ಪ್ರೀತಿ, ಗೌರವ, ಆದರ, ಅಭಿಮಾನ, ಒಲವು, ಹೆಮ್ಮೆ ಹೀಗೆ ಹಲವು ಭಾವನೆಗಳನ್ನು ವ್ಯಕ್ತಪಡಿಸುವ ಚುಂಬನ ವಿಧಾನವಾಗಿದೆ. ಇದು ಮೃದುವಾದ, ಸಿಹಿಯಾದ ಭಾವವನ್ನು ವ್ಯಕ್ತಪಡಿಸುತ್ತದೆ.
ಬಟರ್ ಫ್ಲೈ ಕಿಸ್
ಇದೊಂದು ಭಿನ್ನ ವಿಧಾನದ ಕಿಸ್ ಆಗಿದ್ದು, ಇದರಲ್ಲಿ ಒಲವಿನ ಸಂಗಾತಿಗೆ ಕಣ್ಣರೆಪ್ಪೆಯ ಮೂಲಕ ಚುಂಬಿಸುವುದಾಗಿದೆ. ತಮ್ಮ ಸಂಗಾತಿ ಅಥವಾ ಎದುರಿನ ವ್ಯಕ್ತಿಯ ಕೆನ್ನೆ ಮೇಲೆ ಕಣ್ಣರೆಪ್ಪೆಯನ್ನು ಸವರುವ ಚುಂಬನ ಬಟರ್‌ಫ್ಲೈ ಕಿಸ್ ಆಗಿದೆ. ಇದು ಸಂಗಾತಿಗಳಿಬ್ಬರ ನಡುವಿನ ಆಳವಾದ ಪ್ರೀತಿ, ಮೆಚ್ಚುಗೆ ಸೂಚಿಸುವ ಅತ್ಯಂತ ನಿಕಟ ಮತ್ತು ರೊಮ್ಯಾಂಟಿನ್ ಗೆಸ್ಚರ್ ಆಗಿದೆ.
ಸಿಂಗಲ್ ಲಿಪ್ ಕಿಸ್
ಇದು ಒಂದು ರೀತಿಯ ಭಾವೋದೇಕ ವ್ಯಕ್ತಪಡಿಸುವ ಚುಂಚನದ ವಿಧಾನವಾಗಿದೆ. ಇದರಲ್ಲಿ ಸಂಗಾತಿಗಳು ಪ್ರೀತಿಯ ಧಾರೆಯನ್ನು ಆಳವಾಗಿ ವ್ಯಕ್ತಪಡಿಸುತ್ತಾರೆ. ಒಬ್ಬರು ಮೇಲುತುಟಿಯನ್ನು, ಇನ್ನೊಬ್ಬರು ಕೆಳತುಟಿಯನ್ನು ಲಘುವಾಗಿ ಚುಂಬಿಸುವ ಈ ವಿಧಾನವು ಅತಿ ಪ್ರೀತಿಯ ತೋರ್ಪಡಿಕೆಯ ಸಂಕೇತವೂ ಹೌದು.
ಪೆಕ್ ಕಿಸ್
ಇದು ತುಟಿಗಳ ಚುಂಚನ. ಇದನ್ನು ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರೂ ಸ್ನೇಹ ವ್ಯಕ್ತಪಡಿಸಲು ಹೀಗೆ ಚುಂಬಿಸುತ್ತಾರೆ. ಫ್ಲರ್ಟಿಂಗ್ ಮಾಡುವವರು ಇದನ್ನು ಅನುಸರಿಸುತ್ತಾರೆ. ಆತ್ಮೀಯರು ಬಹಳ ಸಮಯದ ನಂತರ ಭೇಟಿ ಮಾಡಿದವರು ಇದನ್ನು ಬಳಸುತ್ತಾರೆ.
ಹ್ಯಾಂಡ್ ಕಿಸ್
ಇದು ಹೆಸರೇ ಹೇಳುವಂತೆ ಸಂಗಾತಿಯ ಕೈ ಮೇಲೆ ಚುಂಬಿಸಿವುದಾಗಿದೆ. ಇದು ಗೌರವ ಹಾಗೂ ಮೆಚ್ಚುಗೆಯನ್ನು ಸೂಚಿಸುವ ಚುಂಬನವಾಗಿದೆ. ಇದನ್ನು ಸಭ್ಯತೆಯ ಕಿಸ್ ಅಂತಲೂ ಕರೆಯುತ್ತಾರೆ. ಇದನ್ನು ಎದುರಿಗಿನ ವ್ಯಕ್ತಿಯ ಮೇಲೆ ದಯೆ, ಸಭ್ಯತೆ ತೋರುವ ಬಳಸುವ ಅತ್ಯಂತ ಮಧುರವಾದ ಸೂಚಕವಾಗಿದೆ.
ವಿಭಾಗ