International Kissing Day: ಮುತ್ತಿಗೂ ಒಂದು ದಿನ; ಅಂತರರಾಷ್ಟ್ರೀಯ ಕಿಸ್ಸಿಂಗ್ ದಿನದ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ
ಪ್ರತಿವರ್ಷ ಜುಲೈ 6 ರಂದು ಅಂತರರಾಷ್ಟ್ರೀಯ ಮುತ್ತಿನ ದಿನವನ್ನು ಆಚರಿಸಲಾಗುತ್ತದೆ. ಸ್ನೇಹ ಸಂಬಂಧದ ಚುಂಬನದೊಂದಿಗೆ ಫ್ರೆಂಚ್ ಕಿಸ್‌ವರೆಗೆ ಹಲವು ಬಗೆಯ ಚುಂಬನಗಳು ಪ್ರಪಂಚದಲ್ಲಿ ಅಸ್ತಿತ್ವದಲ್ಲಿವೆ. ಚುಂಬನದ ಮಹತ್ವವನ್ನು ಸಾರುವುದು ಈ ದಿನದ ವಿಶೇಷವಾಗಿದೆ.
ʼಮುತ್ತೇ ಪ್ರಥಮ ಅದುವೇ ಜಗದ ನಿಯಮ...ʼ ರವಿಮಾಮ ನಟನೆಯ ಯುಗ ಪುರುಷ ಸಿನಿಮಾದ ಈ ಹಾಡನ್ನು ಬಹುಶಃ ಕೇಳದವರಿಲ್ಲ. ಇಂದ್ಯಾಕೆ ಈ ಹಾಡು ನೆನಪಾಯ್ತು ಅಂತೀರಾ, ಹೌದು ಅದಕ್ಕೂ ಕಾರಣ ಇದೆ. ಇದು ಅಂತರರಾಷ್ಟ್ರೀಯ ಕಿಸ್ಸಿಂಗ್ ಅಥವಾ ಚುಂಬನ ದಿನ. ಪ್ರತಿ ವರ್ಷ ಜುಲೈ 6 ರಂದು ಅಂತರರಾಷ್ಟ್ರೀಯ ಕಿಸ್ಸಿಂಗ್ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಈ ದಿನವನ್ನು ಪ್ರೀತಿ ಹಾಗೂ ಸಂಭ್ರಮದಿಂದ ಆಚರಿಸುವುದು ವಾಡಿಕೆ. ವಾಲೈಂಟೆನ್ಸ್ ದಿನದ ಹಿಂದೆ ಕೂಡ ಕಿಸ್‌ಡೇ ಬರುತ್ತಲ್ಲ ಅಂತ ಕನ್ಫ್ಯೂಸ್ ಆಗಬೇಡಿ. ಆ ದಿನವೇ ಬೇರೆ, ಈ ದಿನವೇ ಬೇರೆ. ಚುಂಬನ ಎನ್ನುವುದು ಪ್ರೇಮಿಗಳಿಗೆ ಮಾತ್ರ ಸೀಮಿತವಲ್ಲ. ಚುಂಬನ ಎಂದರೆ ಮನದ ಭಾವವನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ. ಚುಂಬನ ಅಥವಾ ಕಿಸ್‌ನ ಪ್ರಯೋಜನಗಳನ್ನು ಅರ್ಥ ಮಾಡಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಸಂವಹನದಲ್ಲಿ ಚುಂಬನದ ಮಹತ್ವವನ್ನು ಸಾರುವುದು ಈ ದಿನದ ವಿಶೇಷವಾಗಿದೆ.
ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಚುಂಬನಾಭ್ಯಾಸವು ಪ್ರಾರಂಭವಾಗಿತ್ತು. ನಂತರ ನಿಧಾನವಾಗಿ ಇದು ಇತರ ದೇಶಗಳಲ್ಲೂ ಜನಪ್ರಿಯವಾಯಿತು. ಜಗತ್ತಿನಲ್ಲಿ ಇರುವ ವಿವಿಧ ಬಗೆಯ ಮುತ್ತುಗಳ ಬಗ್ಗೆ ತಿಳಿಸುವುದು, ಒಂದು ಮುತ್ತಿನ ಶಕ್ತಿ ಏನು? ನಮ್ಮ ಆತ್ಮೀಯರು ಬಿಗಿದಪ್ಪಿ ಹಣೆಯ ಮೇಲೆ ನೀಡುವ ಒಂದು ಮುತ್ತು ನಮ್ಮ ಮನಃಸ್ಥಿತಿಯನ್ನು ಹೇಗೆ ಹೆಚ್ಚಿಸಬಲ್ಲದು, ಚುಂಬನ ಹಾಗೂ ಆತ್ಮೀಯ ಭಾವ
ಹೀಗೆ ಚುಂಬನ ಶಕ್ತಿಯನ್ನು ಅರ್ಥ ಮಾಡಿಸುವ ಉದ್ದೇಶ ಈ ದಿನದ ಆಚರಣೆಯದ್ದು.
ಕೆಲವೊಂದು ದೇಶಗಳಲ್ಲಷ್ಟೇ ಆಚರಣೆಯಲ್ಲಿರುವ ಮುತ್ತಿನ ದಿನವನ್ನು ಶೀಘ್ರದಲ್ಲೇ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಕುರಿತು ಆಸಕ್ತಿದಾಯಕ ವಿಚಾರಗಳು ಹೀಗಿವೆ ನೋಡಿ.
ದಿನ
ಪ್ರತಿವರ್ಷ ಜುಲೈ 6 ರಂದು ಅಂತರರಾಷ್ಟ್ರೀಯ ಮುತ್ತಿನ ದಿನವನ್ನು ಆಚರಿಸಲಾಗುತ್ತದೆ. ಸ್ನೇಹ ಸಂಬಂಧದ ಚುಂಬನದೊಂದಿಗೆ ಫ್ರೆಂಚ್ ಕಿಸ್‌ವರೆಗೆ ಹಲವು ಬಗೆಯ ಚುಂಬನಗಳು ಪ್ರಪಂಚದಲ್ಲಿ ಅಸ್ತಿತ್ವದಲ್ಲಿವೆ. ಪ್ರೀತಿಪಾತ್ರರ ಹೆಣೆ, ಕೆನ್ನೆ ಮೇಲೆ ಮುತ್ತಿಕ್ಕುವುದರಿಂದ ಹಿಡಿದು, ಒಲವಿನ ಸಂಗಾತಿಗೆ ತುಟಿಗಳ ಚುಂಬನದ ಮೂಲಕ ವ್ಯಕ್ತ ಪಡಿಸುವ ಪ್ರೀತಿ ಇದೆಲ್ಲವೂ ಮುತ್ತಿನ ಪ್ರಾಮುಖ್ಯವನ್ನು ತಿಳಿಸುತ್ತದೆ. ಚುಂಚನವು ಹಲವು ರೀತಿಯ ಭಾವನೆಗಳನ್ನು ಹೊರ ಸೂಸುತ್ತದೆ. ಜೊತೆಗೆ ಹಲವು ರೀತಿ ಭಾವನೆಗಳನ್ನೂ ಹುಟ್ಟು ಹಾಕುತ್ತದೆ.
ಇತಿಹಾಸ
ಮುತ್ತು ನೀಡುವ ಸಂಪ್ರದಾಯ ಆರಂಭವಾಗಿದ್ದು ರೋಮನ್ನರಿಂದ. ಅವರು ಮೂರು ರೀತಿಯ ಚುಂಬನವನ್ನು ಪರಿಚಯಿಸಿದ್ದರು. ಆಸ್ಕುಲಮ್ (ಕೆನ್ನೆಯ ಮೇಲೆ ಮುತ್ತಿಡುವುದು), ಸೇವಿಯಮ್ (ತುಟಿಗಳಿಂದ ದೀರ್ಘ ಮುತ್ತಿಡುವುದು) ಬೇಸಿಯಮ್ (ತುಟಿಗಳ ಮೇಲೆ ಚುಂಬಿಸುವುದು). ಮೊದಲನೇ ಮಹಾಯುದ್ಧದ ಸಮಯದಲ್ಲಿ ಫ್ರೆಂಚರು ಫ್ರೆಂಚ್ ಕಿಸ್ ಅನ್ನು ಪರಿಚಯಿಸಿದ್ದರು.
ಮಹತ್ವ
ನಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸಲು ಚುಂಬನ ಒಂದು ಉತ್ತಮ ಮಾಧ್ಯಮವಾದರೂ ಸಹ, ಬೇರೆಯವರನ್ನು ಚುಂಬಿಸುವ ಮೊದಲು ಅವರ ಅನುಮತಿ ಪಡೆಯಬೇಕು ಎಂಬುದನ್ನು ಯಾವಾಗಲೂ ಮರೆಯಬಾರದು. ಅನುಚಿತವಾಗಿ ನೀಡುವ ಮುತ್ತು ಎದುರಿನ ವ್ಯಕ್ತಿಗೆ ಅಸಮಾಧಾನ ತರಬಹುದು. ಚುಂಬನದ ಮೂಲಕ ವ್ಯಕ್ತಿಯನ್ನು ನಾವು ಪ್ರೀತಿಸುವ, ಕಾಳಜಿ ತೋರುವ ರೀತಿಯನ್ನು ವ್ಯಕ್ತಪಡಿಸಲು ಸಾಧ್ಯ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅದು ಹೇಗೆ ಮುಖ್ಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಂತರರಾಷ್ಟ್ರೀಯ ಚುಂಬನ ದಿನವನ್ನು ಆಚರಿಸಲಾಗುತ್ತದೆ.
ಸದ್ಯ ಈ ದಿನದ ಆಚರಣೆ ಭಾರತದಲ್ಲಿಲ್ಲ. ಮುಂದಿನ ದಿನಗಳಲ್ಲಿ ಇದು ಭಾರತದಲ್ಲೂ ಈ ದಿನ ಜಾರಿಯಾಗಬಹುದು.
ವಿಭಾಗ