ಕನ್ನಡ ಸುದ್ದಿ  /  ಜೀವನಶೈಲಿ  /  International Men's Day: ಗಂಡಸರು ಅಂದ್ರೆ ಎಟಿಎಂಗಳಲ್ಲ ಕಣ್ರೀ; ಎಚ್‌ಎನ್ ಗಾಯತ್ರಿ ಮನೋಜ್ಞ ಬರಹ

International Men's Day: ಗಂಡಸರು ಅಂದ್ರೆ ಎಟಿಎಂಗಳಲ್ಲ ಕಣ್ರೀ; ಎಚ್‌ಎನ್ ಗಾಯತ್ರಿ ಮನೋಜ್ಞ ಬರಹ

International Menʼs Day: ಗಂಡಸರು ನಿಜಕ್ಕೂ ಪಾಪದವರು. ತಮ್ಮ ಸಮುದಾಯದ ಕೆಲವು ನೀಚರ ಕಾರಣಕ್ಕೆ ನಮ್ಮಂಥವರಿಂದ ದಿನಾಲೂ ಬೈಯಿಸಿಕೊಳ್ಳುವವರು. ಸ್ತ್ರೀ ಸಂವೇದನೆ ಅಂದರೆ ಬರೀ ಗಂಡಸರನ್ನು ಬೈಯುವುದಲ್ಲ ಅಂತ ಅರ್ಥ ಮಾಡಿಸಿದ, ಎಲ್ಲ ಮನುಷ್ಯತ್ವದ ಗಂಡಸರಿಗೂ Happy men's day.

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ 2023
ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ 2023 (PC: Unsplash)

ಫಾದರ್ಸ್‌ ಡೇ, ಮದರ್ಸ್‌ ಡೇ, ಬ್ರದರ್ಸ್‌ ಡೇ ಹೀಗೆ ಕುಟುಂಬದಲ್ಲಿನ ಎಲ್ಲರಿಗೂ ಒಂದೊಂದು ದಿನ ಮೀಸಲಾಗಿದೆ. ಹಾಗೇ ಈ ದಿನ, ನವೆಂಬರ್‌ 19 ರಂದು ಮೆನ್ಸ್‌ ಡೇಯನ್ನೂ ಆಚರಿಸಲಾಗುತ್ತಿದೆ. 1992ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಥಾಮಸ್‌ ಓಸ್ಟರ್‌ ಎನ್ನುವವರು ಆಚರಿಸಿದರು.

1999ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪುರುಷರ ದಿನ ಆಚರಣೆ

ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡಾ ಪ್ರತಿದಿನ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳ ಬಗ್ಗೆ ದನಿ ಎತ್ತುವ ಅಂಗವಾಗಿ ಮೆನ್ಸ್‌ ಡೇ ಆಚರಿಸುವ ಪರಿಕಲ್ಪನೆಯನ್ನು ಥಾಮಸ್‌ ಓಸ್ಟರ್‌ ಜಾರಿಗೆ ತಂದರು. ಆದರೆ ಕಾರಣಾಂತರಗಳಿಂದ ಕೆಲವು ವರ್ಷಗಳು ಈ ದಿನಾಚರಣೆಯನ್ನು ಆಚರಿಸಲಾಗಲಿಲ್ಲ. 1999ರಲ್ಲಿ ನಂತರ ಮತ್ತೊಮ್ಮೆ ಭಾರತೀಯ ಮೂಲದ ಪ್ರೊಫೆಸರ್ ಡಾ. ಜೊರೋಮ್ ತಿಲಕ್ ಸಿಂಗ್ ಎನ್ನುವವರು ನವೆಂಬರ್ 19 ರಂದು ತಮ್ಮ ತಂದೆಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಿದರು. ಅಂದಿನಿಂದ ಇದುವರೆಗೂ ಈ ಆಚರಣೆ ಮಾಡಲಾಗುತ್ತಿದೆ.

ಡಿಜಿಟಲ್‌ ಕ್ರಿಯೇಟರ್‌ ಗಾಯತ್ರಿ ಎಚ್‌ಎನ್‌ ಬರಹ

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಅಂಗವಾಗಿ ಡಿಜಿಟಲ್‌ ಕ್ರಿಯೇಟರ್‌ ಗಾಯತ್ರಿ ಎನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಗಮನ ಸೆಳೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

''ಗಂಡಸರ ಮೇಲೆ ಸೂಪರ್ ಮ್ಯಾನ್‌ಗಳಾಗುವ ಒತ್ತಡ ಬೇಡ. ಗಂಡಸರು 6 ಪ್ಯಾಕ್ ಇಲ್ಲದಿದ್ದರೂ ಚಂದವೇ. ಚೆಂದಗಾಣಿಸೋದು ಗುಣ, ರೂಪವಲ್ಲ.ಗಂಡಸರು ಎಟಿಎಮ್‌ಗಳಲ್ಲ. ಹೆಂಡತಿ ಮಕ್ಕಳು ಕೇಳಿದ್ದೆಲ್ಲಾ ಕೊಡಿಸುವ ಹೊಣೆ ನೀವು ಹೊರಬೇಕಿಲ್ಲ. ಅವರ ಹೆಸರು ಹೇಳಿಕೊಂಡು ನೀವು ಭ್ರಷ್ಟರಾಗುವ ಅಗತ್ಯವಿಲ್ಲ. ಗಂಡಸರು ಮನೆ ಕಟ್ಟಲೇಬೇಕಿಲ್ಲ. ಕಾರ್ ಕೊಳ್ಳುವುದೇ ಸಾಧನೆಯಲ್ಲ. ಹುದ್ದೆಗಳು ನಿಮ್ಮ ಯೋಗ್ಯತೆಗೆ ಒರೆಗಲ್ಲೂ ಅಲ್ಲ.''

ಸ್ತ್ರೀ ಸಂವೇದನೆ ಎಂದರೆ ಗಂಡಸರನ್ನು ಬೈಯ್ಯುವುದಲ್ಲ

''ಅಪ್ಪ ಅಮ್ಮನನ್ನು ಸಾಕುವ ಕರ್ತವ್ಯ ಹೆಣ್ಣು ಮಕ್ಕಳೊಂದಿಗೆ ನೀವು ಹಂಚಿಕೊಳ್ಳಬಹುದು. ಹಾಗೇ, ನಿಮ್ಮ ಹೆಂಡತಿಯರ ಅಪ್ಪ ಅಮ್ಮನನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸಾಮಾಜಿಕ ನಿಯಮಾವಳಿ ಅಡ್ಡಿ ಬರಬೇಕಿಲ್ಲ. ಗಂಡಸರು ನಿಜಕ್ಕೂ ಪಾಪದವರು. ತಮ್ಮ ಸಮುದಾಯದ ಕೆಲವು ನೀಚರ ಕಾರಣಕ್ಕೆ ನಮ್ಮಂಥವರಿಂದ ದಿನಾಲೂ ಬೈಯಿಸಿಕೊಳ್ಳುವವರು. ಆದರೂ ನಮ್ಮ ಜಗತ್ತನ್ನು ಮತ್ತಷ್ಟು ಇಂಟ್ರೆಸ್ಟಿಂಗ್‌ ಆಗಿಸಲು ಮತ್ತದೇ ನಗು ಹೊತ್ತು ಇನ್‌ಬಾಕ್ಸ್‌ ಮಾಡುವ ಅಮಾಯಕರು. ಸ್ತ್ರೀ ಸಂವೇದನೆ ಅಂದರೆ ಬರೀ ಗಂಡಸರನ್ನು ಬೈಯುವುದಲ್ಲ ಅಂತ ಅರ್ಥ ಮಾಡಿಸಿದ, ಎಲ್ಲ ಮನುಷ್ಯತ್ವದ ಗಂಡಸರಿಗೂ Happy men's day. ಮಿಕ್ಕವರು ಮುಂದಿನ ವರ್ಷ ವಿಶ್‌ ಮಾಡಿಸಿಕೊಳ್ಳುವ ಅರ್ಹತೆ ಪಡೆಯುವಂತಾಗಲಿ Cheers'' ಎಂದು ಗಾಯತ್ರಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.''