Kiss Contest: 2013ರಲ್ಲಿ ಕೊನೆಗೊಂಡಿತ್ತು ವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆ; ಇದಕ್ಕೆ ಗಿನ್ನೆಸ್‌ ವಿವರಿಸುವ ಕಾರಣಗಳು ಹೀಗಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Kiss Contest: 2013ರಲ್ಲಿ ಕೊನೆಗೊಂಡಿತ್ತು ವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆ; ಇದಕ್ಕೆ ಗಿನ್ನೆಸ್‌ ವಿವರಿಸುವ ಕಾರಣಗಳು ಹೀಗಿವೆ

Kiss Contest: 2013ರಲ್ಲಿ ಕೊನೆಗೊಂಡಿತ್ತು ವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆ; ಇದಕ್ಕೆ ಗಿನ್ನೆಸ್‌ ವಿವರಿಸುವ ಕಾರಣಗಳು ಹೀಗಿವೆ

Longest Kiss World Record Contest: 2013ರಲ್ಲಿ ಥಾಯ್‌ ದಂಪತಿಗಳಾದ ಎಕ್ಕಾಚಾಯ್‌ ಮತ್ತು ಲಕ್ಷನಾ ತಿರಾನರತ್‌ ಅವರು ಸುದೀರ್ಘ ಚುಂಬನದ ಮೂಲಕ ವಿಶ್ವದಾಖಲೆಯನ್ನು ಬರೆದಿದಿದ್ದರು. ಅವರು ಸುದೀರ್ಘ 58 ಗಂಟೆ 35 ನಿಮಿಷ ಚುಂಬಿಸಿದ್ದರು. ಆ ನಂತರ ಈ ಸ್ಪರ್ಧೆಯನ್ನು ಕೊನೆಗೊಳಿಸಲಾಗಿತ್ತು. ಸ್ಪರ್ಧೆ ನಿಲ್ಲಲ್ಲು ಕಾರಣ ಏನು ಗೊತ್ತಾ? ಇಲ್ಲಿದೆ ವಿವರ…

ವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆ ಕೊನೆಗೊಳ್ಳಲು ಕಾರಣ ಹೀಗಿದೆ (ಸಾಂಕೇತಿಕ ಚಿತ್ರ)
ವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆ ಕೊನೆಗೊಳ್ಳಲು ಕಾರಣ ಹೀಗಿದೆ (ಸಾಂಕೇತಿಕ ಚಿತ್ರ)

ನವದೆಹಲಿ: ʼವಿಶ್ವ ದಾಖಲೆಯ ದೀರ್ಘ ಚುಂಬನ ಸ್ಪರ್ಧೆʼ ಎನ್ನುವ ವಿಭಾಗವಿದೆ ಎನ್ನುವುದು ನಿಮಗೆ ತಿಳಿದಿದ್ಯಾ? ಆದರೆ ಈಗ ಸ್ಪರ್ಧೆ ನಡೆಯುತ್ತಿಲ್ಲ. 20132ರಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಯಾಕೆಂದರೆ ಈ ಸ್ಪರ್ಧೆಯು ಅಪಾಯಕಾರಿ ಹಾಗೂ ರೆಕಾರ್ಡ್‌ ಕೀಪರ್‌ಗಳ ಪ್ರಸ್ತುತ ಹಾಗೂ ಹೊಸ ನೀತಿಗಳು ಈ ಸ್ಪರ್ಧೆ ನಿಲ್ಲುವಂತೆ ಮಾಡಿದ್ದವು.

ದೀರ್ಘ ಚುಂಬನ ಸ್ಪರ್ಧೆಯ ನಿಯಮಗಳು ಹೀಗಿದ್ದವು

* ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಪ್ರಕಾರ ʼಚುಂಬನವನ್ನು ನಿಲ್ಲಿಸುವಂತಿರಲಿಲ್ಲ ಮಾತ್ರವಲ್ಲ, ತುಟಿಗೆ ತುಟಿ ಅಂಟಿಕೊಂಡೇ ಇರಬೇಕು. ಒಂದು ವೇಳೆ ತುಟಿ ಬೇರ್ಪಟ್ಟರೆ ಅವರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ. ಸ್ಪರ್ಧೆಯ ವೇಳೆ ಸ್ಪರ್ಧಿಗಳಿಗೆ ಸ್ಟ್ರಾ ಮೂಲಕ ದ್ರವಾಹಾರ ಸೇವಿಸಲು ಅನುಮತಿ ನೀಡಲಾಗಿತ್ತು. ಆದರೆ ಆಗಲೂ ತುಟಿಗಳು ಬೇರಾಗುವಂತಿರಲಿಲ್ಲ.

* ಸಂಗಾತಿಗಳು ಎಲ್ಲಾ ಸಮಯದಲ್ಲೂ ಎಚ್ಚರವಾಗಿಯೇ ಇರಬೇಕಿತ್ತು.

* ಸ್ಪರ್ಧೆ ಸಮಯದಲ್ಲಿ ಅವರು ನಿಂತುಕೊಂಡೇ ಇರಬೇಕಿತ್ತು.

* ಅವರಿಗೆ ಯಾವುದೇ ವಿಶ್ರಾಂತಿಗೆ ಅನುಮತಿಗೆ ಇರಲಿಲ್ಲ.

* ವಯಸ್ಕರು ಡಯಾಪರ್‌, ನ್ಯಾಪ್‌ಕಿನ್‌ ಧರಿಸುವಂತಿರಲಿಲ್ಲ. ದಂಪತಿಗೆ ಶೌಚಾಲಯ ಬಳಸಲು ಅನುಮತಿ ಇತ್ತು. ಆದರೆ ಆಗಲೂ ಅವರು ಚುಂಬಿಸಿಕೊಂಡೇ ಇರಬೇಕಿತ್ತು.

* ವಿಶ್ರಾಂತಿ, ಚಿಕ್ಕ ವಿರಾಮಕ್ಕೂ ಅನುಮತಿ ಇಲ್ಲದ ಕಾರಣ ಭಾಗವಹಿಸುವವರಿಗೆ ನಿದ್ರಾಹೀನತೆ ಸೇರಿದಂತೆ ಹಲವು ಅಪಾಯಗಳು ಎದುರಾಗುವ ಸಾಧ್ಯತೆಯಿತ್ತು.

ಸೈಕೊಸಿಸ್‌ನಂತಹ ಸಮಸ್ಯೆ ಎದುರಾಗುವ ಅಪಾಯವೂ ಇತ್ತು ಎಂದು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಹೇಳಿದೆ.

* ಈ ದೀರ್ಘ ಚುಂಬನದ ಸ್ಪರ್ಧೆಯು ಹಲವು ಬಗೆಯ ತೊಂದರೆಗಳನ್ನು ಎದುರಿಸಿದ ಹಲವು ನಿರ್ದಶನಗಳಿವೆ.

1999 ರಲ್ಲಿ ಇಸ್ರೇಲ್‌ನ ಕರ್ಮಿತ್‌ ಟ್ಜುಬೆರಾ ಮತ್ತು ಡ್ರೊರ್‌ ಒರ್ಪಾಜ್‌ ಅವರು 30 ಗಂಟೆ 45 ನಿಮಿಷಗಳ ಕಾಲ ಚುಂಬಿಸಿದ್ದರು. ಆದರೆ ಅವರು ತೀವ್ರ ಅಸ್ವಸ್ಥರಾದ ಕಾರಣ ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿತ್ತು. ಈ ದಂಪತಿ ಪ್ರಪಂಚದಾದ್ಯಂತ ಪ್ರವಾಸ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುವ ಜೊತೆಗೆ 2,06,775 ರೂ ಕ್ಯಾಷ್‌ ಪ್ರೈಸ್‌ ಪಡೆದಿದ್ದರು.

37 ವರ್ಷದ ಆಂಡ್ರಿಯಾ ಸರ್ತಿ (ಇಟಲಿ) ತನ್ನ ಗೆಳತಿ ಅನ್ನಾ ಚೆನ್‌ (ಥಾಯ್ಲೆಂಡ್‌) ಅವರನ್ನು 31 ಗಂಟೆ 18 ನಿಮಿಷಗಳ ಕಾಲ ಚುಂಬಿಸಿದ್ದರು. ಆದರೆ ಅವರಿಗೆ ಉಸಿರಾಟದ ಸಮಸ್ಯೆಯಾಗಿ ಆಕ್ಸಿಜನ್‌ ನೀಡಿ ಮರುಜೀವ ನೀಡಲಾಗಿತ್ತು.

2011ರಲ್ಲಿ ಮಹಿಳೆಯೊಬ್ಬರು 30 ನಿಮಿಷಗಳ ಕಾಲ ಸ್ಪರ್ಧೆಯಲ್ಲಿ ಭಾಗವಹಿಸಿ ಸಾವನ್ನಪ್ಪಿಸಿದ್ದರು.

2013ರಲ್ಲಿ ಥಾಯ್‌ ದಂಪತಿ ಎಕ್ಕಾಚಾಯ್ ಮತ್ತು ಲಕ್ಷನಾ ತಿರಾನರತ್ ಅವರು ಸುದೀರ್ಘ ಚುಂಬನದ ವಿಶ್ವದಾಖಲೆಯನ್ನು ಸ್ಥಾಪಿಸಿದರು. ಅವರು 58 ಗಂಟೆ 35 ನಿಮಿಷಗಳ ಕಾಲ ಚುಂಬಿಸಿದ್ದರು.

ಗಿನ್ನೆಸ್ ವಿಶ್ವ ದಾಖಲೆಯು ಅತಿ ಉದ್ದದ ಚುಂಬನದ ಮ್ಯಾರಥಾನ್‌ನೊಂದಿಗೆ ಅತಿ ಉದ್ದದ ಕಿಸ್ ವಿಶ್ವ ದಾಖಲೆಯನ್ನು ಬದಲಾಯಿಸಿತು.

ಈ ಸುದ್ದಿಗಳನ್ನೂ ಓದಿ

International Kissing Day: ಮುತ್ತಿಗೂ ಒಂದು ದಿನ; ಅಂತರರಾಷ್ಟ್ರೀಯ ಕಿಸ್ಸಿಂಗ್‌ ದಿನದ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ

ʼಮುತ್ತೇ ಪ್ರಥಮ ಅದುವೇ ಜಗದ ನಿಯಮ...ʼ ರವಿಮಾಮ ನಟನೆಯ ಯುಗ ಪುರುಷ ಸಿನಿಮಾದ ಈ ಹಾಡನ್ನು ಬಹುಶಃ ಕೇಳದವರಿಲ್ಲ. ಇಂದ್ಯಾಕೆ ಈ ಹಾಡು ನೆನಪಾಯ್ತು ಅಂತೀರಾ, ಹೌದು ಅದಕ್ಕೂ ಕಾರಣ ಇದೆ. ಇದು ಅಂತರರಾಷ್ಟ್ರೀಯ ಕಿಸ್ಸಿಂಗ್‌ ಅಥವಾ ಚುಂಬನ ದಿನ. ಪ್ರತಿ ವರ್ಷ ಜುಲೈ 6 ರಂದು ಅಂತರರಾಷ್ಟ್ರೀಯ ಕಿಸ್ಸಿಂಗ್‌ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಈ ದಿನವನ್ನು ಪ್ರೀತಿ ಹಾಗೂ ಸಂಭ್ರಮದಿಂದ ಆಚರಿಸುವುದು ವಾಡಿಕೆ. ವಾಲೈಂಟೆನ್ಸ್‌ ದಿನದ ಹಿಂದೆ ಕೂಡ ಕಿಸ್‌ಡೇ ಬರುತ್ತಲ್ಲ ಅಂತ ಕನ್ಫ್ಯೂಸ್‌ ಆಗಬೇಡಿ. ಆ ದಿನವೇ ಬೇರೆ, ಈ ದಿನವೇ ಬೇರೆ. ಚುಂಬನ ಎನ್ನುವುದು ಪ್ರೇಮಿಗಳಿಗೆ ಮಾತ್ರ ಸೀಮಿತವಲ್ಲ. ಚುಂಬನ ಎಂದರೆ ಮನದ ಭಾವವನ್ನು ವ್ಯಕ್ತಪಡಿಸುವ ಒಂದು ಮಾಧ್ಯಮ. ಚುಂಬನ ಅಥವಾ ಕಿಸ್‌ನ ಪ್ರಯೋಜನಗಳನ್ನು ಅರ್ಥ ಮಾಡಿಕೊಳ್ಳಲು ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಸಂವಹನದಲ್ಲಿ ಚುಂಬನದ ಮಹತ್ವವನ್ನು ಸಾರುವುದು ಈ ದಿನದ ವಿಶೇಷವಾಗಿದೆ.

Whats_app_banner