Women's Day Special: ಹೊರಗೂ ಕೆಲಸ, ಒಳಗೂ ಕೆಲಸ: ಉದ್ಯೋಗಸ್ಥ ಮಹಿಳೆಯರಿಗೆ ಸಮಯ ಉಳಿಸಲು ಹೆಲ್ಪ್​ ಆಗುವ ಅಡುಗೆಮನೆ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  Women's Day Special: ಹೊರಗೂ ಕೆಲಸ, ಒಳಗೂ ಕೆಲಸ: ಉದ್ಯೋಗಸ್ಥ ಮಹಿಳೆಯರಿಗೆ ಸಮಯ ಉಳಿಸಲು ಹೆಲ್ಪ್​ ಆಗುವ ಅಡುಗೆಮನೆ ಟಿಪ್ಸ್

Women's Day Special: ಹೊರಗೂ ಕೆಲಸ, ಒಳಗೂ ಕೆಲಸ: ಉದ್ಯೋಗಸ್ಥ ಮಹಿಳೆಯರಿಗೆ ಸಮಯ ಉಳಿಸಲು ಹೆಲ್ಪ್​ ಆಗುವ ಅಡುಗೆಮನೆ ಟಿಪ್ಸ್

Kitchen tips: ಹೊರಗಡೆ ದುಡಿಯೋಕೆ ಹೋಗಲ್ಲ ಅಂದ್ರೆ ಮನೆಯಲ್ಲಿ ಕೆಲಸ ಮಾಡಿಕೊಳ್ಳಲು ಒಂದಿಷ್ಟು ಸಮಯ ಸಿಗುತ್ತೆ. ಆದರೆ ಉದ್ಯೋಗಸ್ಥ ಮಹಿಳೆಯರಿಗೆ ಮನೆ ಒಳಗೂ ಕೆಲಸ ಹೊರಗೂ ಕೆಲಸ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಅವರಿಗೆ ಸಮಯ ಉಳಿಸಲು ಹೆಲ್ಪ್​ ಆಗುವ ಅಡುಗೆಮನೆ ಟಿಪ್ಸ್ ತಿಳಿಯೋಣ…

ಅಡುಗೆಮನೆ ಟಿಪ್ಸ್  (ಪ್ರಾತಿನಿಧಿಕ ಚಿತ್ರ)
ಅಡುಗೆಮನೆ ಟಿಪ್ಸ್ (ಪ್ರಾತಿನಿಧಿಕ ಚಿತ್ರ)

ಅಮ್ಮ, ಅಕ್ಕ, ತಂಗಿ, ಹೆಂಡತಿ, ಅತ್ತಿಗೆ, ಅತ್ತೆ, ಸೊಸೆ, ಮಗಳು ಹೀಗೆ ಬಹುತೇಕರ ಮನೆಯಲ್ಲಿ ಹೆಣ್ಮಕ್ಕಳೇ ಅಡುಗೆ ಮನೆ ಕೆಲಸವನ್ನು ಹೆಚ್ಚು ಮಾಡ್ತಾರೆ. ಹೊರಗಡೆ ದುಡಿಯೋಕೆ ಹೋಗಲ್ಲ ಅಂದ್ರೆ ಮನೆಯಲ್ಲಿ ಕೆಲಸ ಮಾಡಿಕೊಳ್ಳಲು ಒಂದಿಷ್ಟು ಸಮಯ ಸಿಗುತ್ತೆ. ಆದರೆ ಉದ್ಯೋಗಸ್ಥ ಮಹಿಳೆಯರಿಗೆ ಮನೆ ಒಳಗೂ ಕೆಲಸ ಹೊರಗೂ ಕೆಲಸ. ಎಷ್ಟೇ ಗಡಿಬಿಡಿ ಆದ್ರೂ ಕೂಡ ಅಡುಗೆ ಮನೆ ಕೆಲಸ ಮಾತ್ರ ಮಾಡಲೇಬೇಕಾದ ಪರಿಸ್ಥಿತಿ ಇರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಸಮಯ ಉಳಿಸಲು ಹೆಲ್ಪ್​ ಆಗುವ ಅಡುಗೆಮನೆ ಟಿಪ್ಸ್ ಇಲ್ಲಿವೆ.

1) ಚಪಾತಿ, ಪೂರಿ ಮಾಡಿದ ನಂತರ ಲಟ್ಟಣಿಗೆಗೆ ಅಂಟಿಕೊಂಡ ಹಿಟ್ಟು ಬೇಗ ಕ್ಲೀನ್​ ಆಗಬೇಕು ಅಂದ್ರೆ ಬಿಸಿ ನೀರಿಗೆ ಡಿಶ್‌ ವಾಶ್ ಸೋಪ್‌ ಅಥವಾ ಡಿಶ್‌ ವಾಶ್​ ಲಿಕ್ವಿಡ್‌ ಹಾಕಿ ಆ ದ್ರಾವಣದಲ್ಲಿ 5 ನಿಮಿಷ ಲಟ್ಟಣಿಗೆ ನೆನೆಸಿಡಿ. ನಂತರ ಸ್ಪಾಂಜ್​ ಬಳಸಿ ಉಜ್ಜಿ. ಆಗ ಅಂಟಿರುವ ಹಿಟ್ಟು ಬೇಗ ಬಿಟ್ಟುಕೊಳ್ಳುತ್ತದೆ.

2) ನೀವು ಅನ್ನ, ಪಲಾವ್​, ಬಿರಿಯಾನಿ ಮಾಡಿದಾಗ ತಳ ಸೀದು ಹೋದರೆ ಇಡೀ ಅನ್ನಕ್ಕೆ ಸುಟ್ಟ ವಾಸನೆ ಆವರಿಸುತ್ತದೆ. ಸುಟ್ಟ ವಾಸನೆ ಹೋಗಬೇಕು ಅಂದ್ರೆ ಈರುಳ್ಳಿಯ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ, ನೀರಿನಲ್ಲಿ ತೊಳೆದು ಸಿಪ್ಪೆ ಸಹಿತ ನಾಲ್ಕು ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳನ್ನು ಅನ್ನದ ಪಾತ್ರೆಯ ಸುತ್ತಲೂ 4 ಕಡೆ ಹುದುಗಿಸಿ. ಮುಚ್ಚಳ ಮಚ್ಚಿ 10 ನಿಮಿಷ ಬಿಡಿ. ನಂತರ ಅನ್ನದಿಂದ ಈರುಳ್ಳಿಯನ್ನು ಹೊರಗೆ ತೆಗೆಯಿರಿ. ಮೇಲ್ಭಾಗದ ಅನ್ನವನ್ನಷ್ಟೇ ಬೇರೆ ಪಾತ್ರೆಗೆ ವರ್ಗಾಯಿಸಿ. ಈಗ ನೋಡಿ, ಅನ್ನದಲ್ಲಿ ಸುಟ್ಟ ವಾಸನೆ ತೊಲಗಿರುತ್ತದೆ.

3) ನೀವು ಬಳಸುವ ಅಡುಗೆಗೆ ಹೆಚ್ಚು ಬೆಳ್ಳುಳ್ಳಿ ಬೇಕು ಅಂದ್ರೆ ಹಿಂದಿನ ದಿನ ರಾತ್ರಿಯೇ ಅದರ ಸಿಪ್ಪೆ ಬಿಡಿಸಿ ಇಟ್ಟುಕೊಳ್ಳಿ. ಆಗ ಬೆಳಗ್ಗೆ ಗಡಿಬಿಡಿ ಆಗುವುದಿಲ್ಲ.

4) ಸೊಪ್ಪಿನ ವಿಚಾರದಲ್ಲೂ ಅಷ್ಟೇ. ಸೊಪ್ಪು ಬಿಡಿಸಿ ಕ್ಲೀನ್​ ಮಾಡಲು ತುಂಬಾ ಟೈಂ ಬೇಕಾಗಗತ್ತೆ. ಹೀಗಾಗಿ ರಾತ್ರಿಯೇ ಕ್ಲೀನ್​ ಮಾಡಿ ಕತ್ತರಿಸಿ ಇಡಿ.

5) ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರಬಾರ್ದು ಅಂದ್ರೆ ಈರುಳ್ಳಿ ಸಿಪ್ಪೆ ಬಿಡಿಸಿ ನೀರಿನಲ್ಲಿ ಒಂದು ನಿಮಿಷ ನೆನೆಸಿ ಆಮೇಲೆ ಈರುಳ್ಳಿ ಕತ್ತರಿಸಿ. ಸನ್ ಗ್ಲಾಸ್ ಕೂಡ ಹಾಕಿಕೊಂಡು ಈರುಳ್ಳಿ ಕತ್ತರಿಸಬಹುದು.

6) ಗ್ಯಾಸ್​ ಬರ್ನರ್​ನಲ್ಲಿರುವ ಕೊಳೆ ಹೊಗಲಾಡಿಸಲು ಬಿಸಿ ನೀರಿನಲ್ಲಿ ನಿಂಬೆ ರಸ ಹಾಗೂ ಇನೋವನ್ನು ಮಿಶ್ರಣ ಮಾಡಿ. ಇದರಲ್ಲಿ ಗ್ಯಾಸ್​ ಬರ್ನರ್​ಗಳನ್ನು ಹಾಕಿ 15 ನಿಮಿಷಗಳ ಕಾಲ ನೆನೆಯಲು ಬಿಡಿ. 15 ನಿಮಿಷಗಳ ಬಳಿಕ ಅವುಗಳ ಮೇಲಿರುವ ಜಿಡ್ಡಿನಂಶ ಹೋಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡಿ. ಜಿಡ್ಡು ತೇವವಾಗಿದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಹಳೆಯ ಬ್ರಶ್​ನಿಂದ 2 ನಿಮಿಷಗಳ ಕಾಲ ಬರ್ನರ್​ನ್ನು ಶುದ್ಧಗೊಳಿಸಿ.

7) ಕೆಲವು ಅಡುಗೆಗಳಲ್ಲಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅವುಗಳನ್ನು ಬೆಳಿಗ್ಗೆ ತಯಾರಿಸುವುದಕ್ಕಿಂತ. ಮೊದಲೇ ಪೇಸ್ಟ್‌ ತಯಾರಿಸಿಟ್ಟುಕೊಳ್ಳಬಹುದು. ಇದು ಕೆಲ ದಿನಗಳ ಕಾಲ ಬಾಳಿಕೆ ಬರುತ್ತದೆ. ಫ್ರಿಡ್ಜ್​​ನಲ್ಲಿಟ್ಟರಂತೂ ಹೆಚ್ಚು ದಿನ ಹಾಳಾಗದೇ ಚೆನ್ನಾಗಿರುತ್ತದೆ. ಹಾಗೆಯೇ ಹುಣಸೆಹಣ್ಣಿನ ಪೇಸ್ಟ್ ಸಹ ಮಾಡಿಟ್ಟುಕೊಳ್ಳಬಹುದು.

8) ಅಡುಗೆ ಮನೆ ಗೋಡೆಯಲ್ಲಿನ ಕಲೆ-ಕೊಳೆ, ಡಬ್ಬಿಗಳ ಮೇಲಿನ ಕೊಳೆ, ಸ್ಟವ್​ ಮೇಲಿನ ಎಣ್ಣೆ ಜಿಡ್ಡಿನ ಕಲೆ ಹೀಗೆ ಎಲ್ಲವೂ ಬೇಗನೇ ಕ್ಲೀನ್​ ಆಗಬೇಕು ಅಂದ್ರೆ ಅಡುಗೆ ಸೋಡಾ ಮತ್ತು ವಿನೆಗರ್​ ಸಿಂಪಡಿಸಿ ಕೆಲ ಸಮಯದ ಬಳಿಕ ಉಜ್ಜಿ ತೊಳೆಯಿರಿ.

9) ಆಲೂಗಡೆ ಸಿಪ್ಪೆಯನ್ನು ಬೇಗ ತೆಗೆಯಲು ಕುದಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಆಲೂಗಡ್ಡೆಯ ಸಿಪ್ಪೆಯನ್ನು ಬಹಳ ಸುಲಭವಾಗಿ ತೆಗೆಯಬಹುದು.

10) ತೆಂಗಿನ ಕಾಯಿಯನ್ನು ತುರಿದಿಟ್ಟು ಅದು ದೀರ್ಘ ಕಾಲದವರೆಗೆ ತಾಜಾವಾಗಿಡಲು ನೀವು ಅದರಲ್ಲಿ ಕರಿಬೇವನ್ನು ಹಾಕಿಡಬಹುದು. ಹಾಗೆಯೇ ತೆಂಗಿನಕಾಯಿ ಒಡೆದ ಬಳಿಕ ಅದಕ್ಕೆ ಸ್ಪಲ್ಪ ಉಪ್ಪು ಸವರಿ ಇಟ್ಟರೆ ಕೆಲ ದಿನಗಳವರೆಗೆ ಕೆಡುವುದಿಲ್ಲ.

11) ಸಕ್ಕರೆ ಡಬ್ಬಿಯಲ್ಲಿ ಮೂರರಿಂದ ನಾಲ್ಕು ಲವಂಗ ಕಾಳುಗಳನ್ನು ಹಾಕಿಟ್ಟರೆ ಡಬ್ಬಕ್ಕೆ ಇರುವೆ ಬರುವುದನ್ನು ತಡೆಯಬಹುದು.

12) ಕಾಳುಗಳು ಮತ್ತು ಬೇಳೆಗಳು ಬೇಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಳಸುವ ಮುನ್ನ ಬೇಳೆ ಅಥವಾ ಕಾಳುಗಳನ್ನು ನೆನೆಸಿ, ನಂತರ ಬೇಯಿಸಿದರೆ ಬೇಗ ಬೇಯುತ್ತದೆ.

Whats_app_banner