ಕನ್ನಡ ಸುದ್ದಿ  /  ಜೀವನಶೈಲಿ  /  Womenʼs Day: ಪಿಂಕ್‌ ಫ್ರಾಕ್‌ನಿಂದ ಬ್ಯಾಗ್‌ವರೆಗೆ ಹೆಣ್ಣುಮಕ್ಕಳ ಖುಷಿಯಲ್ಲಿ ಗುಲಾಬಿ ಬಣ್ಣಕ್ಕಿದೆ ವಿಶೇಷ ಮಹತ್ವ; ಹೀಗಿರಲಿ ಮಗಳ ಶಾಲಾ ಪರಿಕರ

Womenʼs Day: ಪಿಂಕ್‌ ಫ್ರಾಕ್‌ನಿಂದ ಬ್ಯಾಗ್‌ವರೆಗೆ ಹೆಣ್ಣುಮಕ್ಕಳ ಖುಷಿಯಲ್ಲಿ ಗುಲಾಬಿ ಬಣ್ಣಕ್ಕಿದೆ ವಿಶೇಷ ಮಹತ್ವ; ಹೀಗಿರಲಿ ಮಗಳ ಶಾಲಾ ಪರಿಕರ

ಗಂಡು ಮಕ್ಕಳಿಗಿಂತ ಸ್ವಲ್ಪ ಭಿನ್ನ. ಇವರು ಬಣ್ಣಗಳೊಂದಿಗೆ ಭಾವನೆ ಹಂಚುವವರು. ಹೆಣ್ಣುಮಕ್ಕಳಿಗೆ ಪಿಂಕ್‌ ಬಣ್ಣದ ಮೇಲೆ ವಿಶೇಷ ಒಲವು. ಗುಲಾಬಿ ಬಣ್ಣದ ವಸ್ತುಗಳು ಅವರ ಬಳಿ ಇದ್ದರೆ ಆ ಖುಷಿಯೇ ಬೇರೆ. ಶಾಲೆಗೆ ಹೋಗುವ ಹೆಣ್ಣುಮಗಳ ಪರಿಕರ ಹೀಗಿರಲಿ.

ಪಿಂಕ್‌ ಫ್ರಾಕ್‌ನಿಂದ ಬ್ಯಾಗ್‌ವರೆಗೆ ಹೆಣ್ಣುಮಕ್ಕಳ ಖುಷಿಯಲ್ಲಿ ಗುಲಾಬಿ ಬಣ್ಣಕ್ಕಿದೆ ವಿಶೇಷ ಮಹತ್ವ
ಪಿಂಕ್‌ ಫ್ರಾಕ್‌ನಿಂದ ಬ್ಯಾಗ್‌ವರೆಗೆ ಹೆಣ್ಣುಮಕ್ಕಳ ಖುಷಿಯಲ್ಲಿ ಗುಲಾಬಿ ಬಣ್ಣಕ್ಕಿದೆ ವಿಶೇಷ ಮಹತ್ವ

ಪ್ರತಿದಿನ ಬೆಳಗಾದರೆ ಸಾಕು, ಮನೆಯಲ್ಲಿ ಮಕ್ಕಳು ಶಾಲೆಗೆ ಹೋಗುವ ಗಡಿಬಿಡಿ. ಬ್ಯಾಗ್‌, ಪುಸ್ತಕ, ಜಾಮೆಟ್ರಿ, ಟಿಫಿನ್‌, ವಾಟರ್‌ ಬಾಟಲ್‌ ಒಂದೇ ಎರಡೇ, ಅವರ ವಸ್ತುಗಳ ಪಟ್ಟಿ ಮಾರುದ್ದ ಇರುತ್ತದೆ. ಇವೆಲ್ಲ ಬಿಡಿ, ಪ್ರತಿ ಮನೆಯಲ್ಲೂ ಇರುವ ಸಂಗತಿಯೇ. ಆದರೆ ಇನ್ನೂ ಒಂದು ವಿಶೇಷ ಏನು ಗೊತ್ತಾ, ಗಂಡುಮಕ್ಕಳು ಶಾಲೆಗೆ ಹೋಗುವ ತಯಾರಿಗೂ, ಹೆಣ್ಣುಮಕ್ಕಳು ಶಾಲೆಗೆ ಹೋಗುವ ತಯಾರಿಗೂ ಸಾಕಷ್ಟು ವ್ಯತ್ಯಾಸವಿದೆ. ಗಂಡು ಮಕ್ಕಳಿಗೆ ಯಾವುದಾದರೂ ಒಂದು ಬಣ್ಣದ ಸ್ಪೈಡರ್‌ ಮ್ಯಾನ್‌ ಜಾಮಟ್ರಿನೊ ಅಥವಾ ಅವರಿಷ್ಟದ ಕಾರ್ಟೂನ್‌ ವಸ್ತು ಸಿಕ್ಕರೆ ಸಾಕು, ಹೆಚ್ಚೇನೂ ತಲೆಕೆಡಿಸಿಕೊಳ್ಳದೇ ಶಾಲೆಗೆ ಹೋಗುತ್ತಾರೆ. ಆದರೆ ಹೆಣ್ಣು ಮಕ್ಕಳದು ಹಾಗಲ್ಲ. ಪ್ರತಿಯೊಂದಕ್ಕೂ ಅವರು ಇಷ್ಟ ಪಡುವ ಬಣ್ಣದ ವಸ್ತುಗಳೇ ಬೇಕು. ಹೆಣ್ಣುಮಕ್ಕಳು ಹೆಚ್ಚಾಗಿ ಪಿಂಕ್‌ ಬಣ್ಣದ ವಸ್ತುಗಳನ್ನೇ ಆರಿಸಿಕೊಳ್ಳುತ್ತಾರೆ. ಪಿಂಕ್‌ ಬ್ಯಾಗ್‌, ಪಿಂಕ್‌ ಛತ್ರಿ, ಪಿಂಕ್‌ ವಾಟರ್‌ ಬಾಟಲ್‌ ಹೀಗೆ. ಅದೇನೋ ಹೆಣ್ಣು ಮಕ್ಕಳಿಗೆ ಪಿಂಕ್‌ ಬಣ್ಣದ ಮೇಲೆ ಸಿಕ್ಕಾಪಟ್ಟೆ ಪ್ರೀತಿ.

ಟ್ರೆಂಡಿಂಗ್​ ಸುದ್ದಿ

ಪುಟ್ಟ ಮಗು ಇರುವಾಗಲೇ ಪಿಂಕ್‌ ಅವರಿಷ್ಟದ ಬಣ್ಣವಾಗಿರುತ್ತದೆ. ಹೆಣ್ಣು ಮಕ್ಕಳ ಫೆವರೆಟ್‌ ಆಟಿಕೆಯಾದ ಬಾರ್ಬಿ ಡಾಲ್‌ ಇರುವುದು ಸಹ ಹೆಚ್ಚಾಗಿ ಪಿಂಕ್‌ ಬಣ್ಣದ್ದೇ. ಅವರು ಆಟ ಆಡುವ ಡಾಲ್‌ಗಳ ಮನೆ ಇನ್ನಿತರ ಆಟಿಕೆಗಳೂ ಸಹ ಪಿಂಕ್‌ ಬಣ್ಣದ್ದೇ. ಚಿಕ್ಕಂದಿನಿಂದಲೂ ಹೆಣ್ಣುಮಕ್ಕಳಿಗೆ ಬಣ್ಣಗಳ ಜೊತೆ ಭಾವನಾತ್ಮಕ ನಂಟಿರುತ್ತದೆ. ಶಾಲೆಗೆ ಹೋಗುವಾಗಲೂ ಅದು ಹಾಗೇ ಮುಂದುವರಿಯುತ್ತದೆ. ಹೆಣ್ಣು ಮಗುವಿನ ಶಾಲೆಯ ತಯಾರಿ ಸ್ವಲ್ಪ ಭಿನ್ನವಾಗಿರುತ್ತದೆ. ಶಾಲೆಗೆ ಬೇಕಾಗುವ ಕಲಿಕಾ ಸಾಮಗ್ರಿಗಳಲ್ಲೂ ಅವರಿಷ್ಟದ ಬಣ್ಣವನ್ನು ಹುಡುಕಿ ಆಯ್ದುಕೊಟ್ಟರೆ ಶಾಲೆಗೆ ಬಹಳ ಖುಷಿಯಿಂದ ಹೋಗುತ್ತಾರೆ. ಅಂಗಡಿಗೆ ಹೋದಾಗ ಅಲ್ಲಿ ಕೆಲವೊಮ್ಮೆ ಪೋಷಕರಿಗೆ ಗೊಂದಲವುಂಟಾಗುವುದು ಉಂಟು. ಹಾಗಾಗಿ ಹಣ್ಣು ಮಗುವಿಗೆ ಏನೆಲ್ಲಾ ಇಷ್ಟವಾಗಬಹುದು ಎಂಬುದರ ಬಗ್ಗೆ ಸ್ವಲ್ಪ ತಿಳಿವಳಿಕೆಯಿದ್ದರೆ ಪೋಷಕರ ಮತ್ತು ಮಕ್ಕಳ ಇಬ್ಬರ ಮನಸ್ಸೂ ಮುದಗೊಳ್ಳುತ್ತದೆ. ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸುವ ತಯಾರಿಲ್ಲಿ ನೀವಿದ್ದರೆ ಇಲ್ಲ ಕೆಲವು ಸಾಮಾನ್ಯ ಸಲಹೆಗಳನ್ನು ನೀಡಲಾಗಿದೆ.

ಇದನ್ನೂ ಓದಿ:

ಶಾಲೆಯ ಬ್ಯಾಗ್‌: ಈಗ ಹೆಚ್ಚಿನದಾಗಿ ಎಲ್ಲಾ ಅಂಗಡಿಗಳಲ್ಲೂ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಬೇರೆ ಬಣ್ಣದ ಬ್ಯಾಗ್‌ಗಳು ಬರುತ್ತವೆ. ಹೆಣ್ಣು ಮಕ್ಕಳಿಗೆ ಬಾರ್ಬಿ ಚಿತ್ರ ಇರುವ ಬ್ಯಾಗ್‌, ಡೋರಾ ಬ್ಯಾಗ್‌ ಆಯ್ದುಕೊಳ್ಳಬಹುದು. ಅವು ಹೆಚ್ಚಾಗಿ ಪಿಂಕ್‌ ಬಣ್ಣದ್ದೇ ಇರುತ್ತವೆ.‌

ಲಂಚ್‌ ಬ್ಯಾಗ್‌: ಇದೂ ಸಹ ಹೆಚ್ಚಿನದಾಗಿ ಪಿಂಕ್‌ ಬಣ್ಣದಲ್ಲೇ ಬರುತ್ತದೆ. ಆದರೆ ಆ ಬ್ಯಾಗ್‌ಗಳ ಮೇಲೆ ಅವರು ಇಷ್ಟು ಪಡುವ ಕಾರ್ಟೂನ್‌ ಇದ್ದರೆ ಇನ್ನೂ ಚೆನ್ನಾಗಿರುತ್ತದೆ. ವಾಟರ್‌ ಬಾಟಲ್‌ ಕೂಡಾ ಪಿಂಕ್‌ ಬಣ್ಣದ್ದಿರಲಿ.

ಟಿಫಿನ್‌ ಬಾಕ್ಸ್‌: ಹೆಣ್ಣು ಮಕ್ಕಳು ಸಾಮಾನ್ಯವಾಗಿ ಪಿಂಕ್‌ ಅಥವಾ ಕೆಂಪು ಬಣ್ಣದ ಟಿಫನ್‌ ಬಾಕ್ಸ್‌ ಅನ್ನು ಇಷ್ಟಪಡುತ್ತಾರೆ.

ನ್ಯಾಪ್ಕಿನ್‌ ಮತ್ತು ಹ್ಯಾಂಕಿ: ಪಿಂಕ್‌ ಬಣ್ಣದ ನ್ಯಾಪ್‌ಕಿನ್‌ ಮೇಲೆ ಕೆಂಪು, ಹಸಿರು ಮತ್ತು ನೀಲಿ ಹೂವುಗಳಿದ್ದರೆ ಹೆಣ್ಣು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಅದೇ ರೀತಿ ಹ್ಯಾಂಕಿ ಕೂಡಾ.

ಛತ್ರಿ: ಹೆಣ್ಣು ಮಕ್ಕಳು ಪಿಂಕ್‌ ಬಣ್ಣದ ಛತ್ರಿ ಹೆಚ್ಚಾಗಿ ಇಷ್ಟಪಡುತ್ತಾರೆ. ಜೊತೆಗೆ ಅದರ ಮೇಲೆ ಕಾರ್ಟೂನ್‌ ಚಿತ್ರಗಳು ಅಥವಾ ಐಸ್‌ಕ್ರೀಮ್‌ ಚಿತ್ರಗಳಿದ್ದರೆ ಇನ್ನೂ ಸಂತೋಷ ಪಡುತ್ತಾರೆ. ಅಂಗಡಿಗಳಲ್ಲಿ ಸಿಗಲಿಲ್ಲವೆಂದರೆ ನೀವು ಆನ್‌ಲೈನ್‌ನಲ್ಲೂ ಖರೀದಿಸಬಹುದು.

ಜಾಮೆಟ್ರಿ ಬಾಕ್ಸ್‌: ಪ್ಲಾಸ್ಟಿಕ್‌ ಬಾಕ್ಸ್‌ನಿಂದ ಹಿಡಿದು ಪೌಚ್‌ ಮಾದರಿಯವರೆಗೂ ಪಿಂಕ್‌ ಬಣ್ಣದಲ್ಲಿ ದೊರೆಯುತ್ತದೆ. ಪೆನ್ಸಿಲ್‌, ಪೆನ್‌, ಇರೇಸರ್‌, ಶಾರ್ಪನರ್‌ ಹಾಕಿಡಲು ಬಾಕ್ಸ್‌ ಮತ್ತು ಕ್ರೆಯಾನ್ಸ್‌, ಸ್ಕೆಚ್‌ಪೆನ್‌ ಮುಂತಾದವುಗಳನ್ನು ಹಾಕಿಡಲು ಪೌಚ್‌ ಕೊಂಡುಕೊಳ್ಳಬಹುದು.

ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂಭ್ರಮ ಬಹಳ ವಿಶೇಷವಾದದ್ದು. ಇದನ್ನು ಪೋಷಕರು ಮತ್ತು ಮಕ್ಕಳೂ ಇಬ್ಬರೂ ಆನಂದಿಸಬಹುದು. ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿರುವ ನಾವು ಹೆಣ್ಣುಮಕ್ಕಳ ಆಯ್ಕೆಯಲ್ಲಿ ಸಂತೋಷ ಪಡುವುದರ ಮೂಲಕವೂ ಆಚರಿಸಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ