Women's Day Special: ಮದುವೆ-ಮಕ್ಕಳ ನಂತರ ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  Women's Day Special: ಮದುವೆ-ಮಕ್ಕಳ ನಂತರ ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆ

Women's Day Special: ಮದುವೆ-ಮಕ್ಕಳ ನಂತರ ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆ

Tips to restart career: ಮದುವೆ-ಮಕ್ಕಳ ನಂತರ ದೀರ್ಘಾವಧಿ ವಿರಾಮದ ಬಳಿಕ ಕರಿಯರ್‌ ರೀ ಸ್ಟಾರ್ಟ್‌ ಮಾಡಬೇಕೆಂದಿರುವವರಿಗೆ ಇಲ್ಲಿವೆ ಒಂದಿಷ್ಟು ಟಿಪ್ಸ್..

ಮಹಿಳೆಯರಿಗೆ ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆ (ಪ್ರಾತಿನಿಧಿಕ ಚಿತ್ರ)
ಮಹಿಳೆಯರಿಗೆ ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆ (ಪ್ರಾತಿನಿಧಿಕ ಚಿತ್ರ)

ಅದೆಷ್ಟೋ ಮಹಿಳೆಯರು ಮದುವೆ, ಮಕ್ಕಳ ಕಾರಣಕ್ಕೆ ತಮಗೆ ಸಿಕ್ಕಿದ್ದ ಉದ್ಯೋಗ ಬಿಟ್ಟಿರುತ್ತಾರೆ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ತಮ್ಮ ವೃತ್ತಿಜೀವನವನ್ನ ಆರಂಭಿಸಬೇಕೆಂದು ಬಯಸುತ್ತಾರೆ. ಕೆಲವರು ಕುಟುಂಬದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಮತ್ತೆ ಕೆಲಸ ಮಾಡಬೇಕು ಅಂತ ಯೋಚಿಸ್ತಾರೆ. ಮದುವೆ-ಮಕ್ಕಳ ನಂತರ ದೀರ್ಘಾವಧಿ ವಿರಾಮದ ಬಳಿಕ ಕರಿಯರ್‌ ರೀ ಸ್ಟಾರ್ಟ್‌ ಮಾಡಬೇಕೆಂದಿರುವವರಿಗೆ ಇಲ್ಲಿವೆ ಒಂದಿಷ್ಟು ಸಲಹೆಗಳು. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಈ ಮಾಹಿತಿ ನಿಮಗಾಗಿ..

ಕರಿಯರ್‌ ರೀ ಸ್ಟಾರ್ಟ್‌ ಮಾಡಲು ಸಲಹೆಗಳು

1) ಮೊದಲು ನಿಮ್ಮ ಕುಟುಂದವರ ಜೊತೆ ಈ ಕುರಿತು ಚರ್ಚಿಸಿ. ನಿಮ್ಮ ಆಸೆ-ಉದ್ದೇಶವನ್ನು ತಿಳಿಸಿ. ನಿಮ್ಮ ಹೊಸ ವೃತ್ತಿಜೀವನಕ್ಕೆ ಕುಟುಂಬಸ್ಥರ ಸಹಕಾರವೂ ಸಿಕ್ಕರೆ ತುಂಬಾ ಒಳ್ಳೆಯದು.

2) ಕೆಲ ಸಮಯ ನಿಮ್ಮ ಗಮನವನ್ನ ಉದ್ಯೋಗ ಹುಡುಕುವುದರ ಮೇಲೆಯೇ ಕೇಂದ್ರೀಕರಿಸಿ. ನಿಮ್ಮ ಶೈಕ್ಷಣಿಕ ಅರ್ಹತೆ, ಆಸಕ್ತಿ, ಕೌಶಲ್ಯ, ಸಾಮರ್ಥ್ಯಕ್ಕೆ ಈ ಸಮಯದಲ್ಲಿ ಯಾವೆಲ್ಲಾ ಕೆಲಸಗಳು ಸಿಗಬಹುದು ಎಂದು ಸಂಶೋಧನೆ ಮಾಡಿ.

3) ನಿಮ್ಮ ಉದ್ಯೋಗಕ್ಕೆ ಯಾವುದಾದರೂ ತರಬೇತಿ, ಕೋರ್ಸ್​ ಅಗತ್ಯತೆ ಇದ್ದರೆ ಅದನ್ನು ಮುಗಿಸಿಬಿಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆನಂತರ ಕೆಲಸ ಹುಡುತ್ತೀರ ಆದರೆ ಅದಕ್ಕೆ ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಿ.

4) ಹೊಸದಾಗಿ ರೆಸ್ಯೂಮ್ ರೆಡಿ ಮಾಡಿ. ಇಷ್ಟು ದಿನಗಳ ಕಾಲ ಬಿಡುವಿನ ಸಮಯದಲ್ಲಿ ನೀವು ಹೊಸತೇನಾದ್ರೂ ಕಲಿತಿದ್ರೆ, ಹೊಸ ಕೋರ್ಸ್​ ಏನಾದ್ರೂ ಕಲಿತಿದ್ರೆ ಅದನ್ನೂ ಉಲ್ಲೇಖಿಸಿ. ಆಯಾ ಕಂಪನಿಗಳಿಗೆ ನಿಮ್ಮ ರೆಸ್ಯೂಮ್​ ಕಳಿಸಿ.

5) ಲಿಂಕಡ್​​ಇನ್​​, ನೌಕರಿ ಡಾಟ್​ ಕಾಮ್​​ನಂತಹ ಉದ್ಯೋಗ ಹುಡುಕಲು ಸಹಕರಿಸುವ ಆ್ಯಪ್​​ ಹಾಗೂ ವೆಬ್​ಸೈಟ್​​ಗಳಲ್ಲಿ ನಿಯಮಿತವಾಗಿ ಸರ್ಚ್​ ಮಾಡುತ್ತಿರಿ. ವರ್ಕ್​ ಫ್ರಂ ಹೋಂ ಅವಕಾಶಗಳೂ ಸಾಕಷ್ಟು ಸಿಗುತ್ತವೆ.

6) ನಿಮ್ಮ ವೃತ್ತಿಗೆ ಸಂಬಂಧಿಸಿದ ಈವೆಂಟ್‌ಗಳಿಗೆ ಹಾಜರಾಗಿ ನಿಮ್ಮ ಪ್ರೊಫೆಷನಲ್​ ನೆಟ್​ವರ್ಕ್ ಬೆಳೆಸಿಕೊಳ್ಳಿ. ನಿಮ್ಮ ಸ್ನೇಹಿತರು, ಪರಿಚಿತರು, ಹಳೆ ಕಂಪನಿಯಲ್ಲಿ ಕೆಲಸ ಮಾಡಿದ ಸಹೋದ್ಯೋಗಿಗಳು, ಸಂಬಂಧಿಕರು ಹೀಗೆ ಎಲ್ಲರಿಗೂ ನಿಮಗೆ ಬೇಕಾದ ಉದ್ಯೋಗವಿದ್ದರೆ ತಿಳಿಸಲು ಹೇಳಿ.

7) ಯಾವ ಸಮಯದಲ್ಲಾದರೂ ನಿಮಗೆ ಅವಕಾಶ ಸಿಗಬಹುದು. ಹೀಗಾಗಿ ನಿಮ್ಮ ಎಲ್ಲಾ ಡಾಕ್ಯುಮೆಂಟ್​ಗಳನ್ನು ರೆಡಿ ಇಟ್ಟುಕೊಂಡಿರಿ. ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು, ಮಾರ್ಕ್ಸ್​ ಕಾರ್ಡ್​ಗಳು, ಹಿಂದೆ ಕೆಲಸ ಮಾಡಿದ ಅನುಭವದ ದಾಖಲೆಗಳು ಹೀಗೆ ಎಲ್ಲವೂ ಸಿದ್ಧವಿರಲಿ. ಇವನ್ನು ನೀವು ಇಷ್ಟು ದಿನ ಎಲ್ಲೆಲ್ಲೋ ಇಟ್ಟಿರಬಹುದು.

8) ಸಂದರ್ಶನವನ್ನು ಎದುರಿಸಲು ತಯಾರಾಗಿ. ಕನ್ನಡಿ ಮುಂದೆ ನಿಂತು ನೀವೇ ಸಂದರ್ಶಕರೂ, ನೀವೇ ಸಂದರ್ಶನಾರ್ಥಿಯೂ ಆಗಿ ಮಾತನಾಡಿ ಧೈರ್ಯ ತಂದುಕೊಳ್ಳಿ.

9) ಪಾರ್ಟ್​ ಟೈಂ ಕೆಲಸ ಮಾಡಲು ಬಯಸುವಿರಾ ಅಥವಾ ಫುಲ್​ ಟೈಂ ಮಾಡುವಿರಾ ಯೋಚಿಸಿ. ಅಥವಾ ಕಾಂಟ್ರಾಕ್ಟ್​ ಬೇಸ್​ನಲ್ಲಿ ಕೆಲಸ ಕೂಡ ಇರುತ್ತವೆ. ಇವೆಲ್ಲವೂ ವರ್ಕ್​ ಫ್ರಂ ಹೋಂ ಅಡಿಯಲ್ಲೂ ಸಿಗಬಹುದು. ಮೊದಲು ಪಾರ್ಟ್​ ಟೈಂನಿಂದ ಕೆಲಸ ಮಾಡಲು ಶುರು ಮಾಡಿದ್ರೆ ನಿಮಗೆ ಕೆಲಸ ಟಚ್​ ಸಿಗುತ್ತದೆ. ಆಗ ಫುಲ್​ ಟೈಂ ವರ್ಕ್​ಗೆ ಹೋಗಲು ಸುಲಭವಾಗುತ್ತದೆ.

10) ಎಲ್ಲಾದರೂ ಉದ್ಯೋಗ ಮೇಳಗಳಿದ್ದರೆ ಮಿಸ್​​ ಮಾಡಬೇಡಿ. ​ ಎಲ್ಲಾ ದಾಖಲೆಗಳೊಂದಿಗೆ ಹಾಜರಾಗಿ.

Whats_app_banner