ಕನ್ನಡ ಸುದ್ದಿ  /  ಜೀವನಶೈಲಿ  /  International Yoga Day: ಯೋಗ ಪದ್ಧತಿ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ, ಯೋಗ ಪದದ ಅರ್ಥವೇನು? ಈ ಕುರಿತ ಆಸಕ್ತಿದಾಯಕ ವಿಚಾರ ಇಲ್ಲಿದೆ

International Yoga Day: ಯೋಗ ಪದ್ಧತಿ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ, ಯೋಗ ಪದದ ಅರ್ಥವೇನು? ಈ ಕುರಿತ ಆಸಕ್ತಿದಾಯಕ ವಿಚಾರ ಇಲ್ಲಿದೆ

ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್‌ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗಾಭ್ಯಾಸದ ಮಹತ್ವ ಹಾಗೂ ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಪ್ರಪಂಚಕ್ಕೆ ತಿಳಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಈ ವರ್ಷದ ಯೋಗ ದಿನದ ಸಂದರ್ಭ ಯೋಗ ಪದ್ಧತಿಯ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ, ಇದರ ಮೂಲದ ಕುರಿತ ವಿವರ ತಿಳಿಯಿರಿ.

ಯೋಗ ಪದ್ಧತಿ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ, ಯೋಗ ಪದದ ಅರ್ಥವೇನು?
ಯೋಗ ಪದ್ಧತಿ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ, ಯೋಗ ಪದದ ಅರ್ಥವೇನು?

ಪ್ರಪಂಚದಾದ್ಯಂತ ಜನರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ ಯೋಗಭ್ಯಾಸ ಮಾಡುವುದು ಸಾಮಾನ್ಯವಾಗಿದೆ. ಯೋಗದಿಂದ ನಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಬದುಕು ವೃದ್ಧಿಯಾಗುತ್ತದೆ. ಮಾನವನ ಯೋಗಕ್ಷೇಮ ಕಾಪಾಡುವಲ್ಲಿ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿರುವ ಯೋಗದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 21ರಂದು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತದೆ.

ಯೋಗವನ್ನು ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಅಂತರರಾಷ್ಟ್ರೀಯ ಯೋಗ ದಿನ. ಯೋಗವು ವ್ಯಕ್ತಿಗೆ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ನೀಡುತ್ತದೆ.

ಯೋಗವು ಯುಜಾ ಎಂಬ ಸಂಸ್ಕೃತ ಪದದಿಂದ ಬಂದಿದೆ. ಒಂದುಗೂಡುವುದು ಅಥವಾ ಸೇರುವುದು ಎಂಬುದು ಈ ಪದದ ಅರ್ಥ. ಯೋಗವು ದೇಹ ಮತ್ತು ಮನಸ್ಸಿನ ಏಕತೆಯನ್ನು ಪ್ರತಿನಿಧಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಯೋಗ ಅಸ್ವಿತ್ತಕ್ಕೆ ಬಂದಿದ್ದು ಯಾವಾಗ?

ನಾಗರಿಕತೆಯ ಆರಂಭದಿಂದಲೂ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಯಾವುದೇ ಧರ್ಮ, ನಂಬಿಕೆಗಳು ಅಸ್ತಿತ್ವಕ್ಕೆ ಬರುವ ಮೊದಲೇ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ ಯೋಗ ಅಸ್ತಿತ್ವಕ್ಕೆ ಬಂದಿತು ಎಂಬುದು ನಂಬಿಕೆ .

ಭಗವಾನ್ ಶಿವನನ್ನು ಯೋಗ ಪುರಾಣಗಳಲ್ಲಿ ಮೊದಲ ಯೋಗಿ ಅಥವಾ ಆದಿಯೋಗಿ ಎಂದು ಪರಿಗಣಿಸಲಾಗಿದೆ. ಪರಮೇಶ್ವರನನ್ನು ಯೋಗದ ಮೊದಲ ಗುರು ಎಂದು ಕೂಡ ಕರೆಯಲಾಗುತ್ತದೆ. ಆದಿಯೋಗಿ ಅಂದರೆ ಶಿವನು ಸಾವಿರಾರು ವರ್ಷಗಳ ಹಿಂದೆ ಹಿಮಾಲಯದ ಕಾಂತಿ ಸರೋವರದ ತೀರದಲ್ಲಿ ಸಪ್ತಋಷಿಗಳಿಗೆ ತನ್ನ ವ್ಯಾಪಕವಾದ ಬುದ್ಧಿವಂತಿಕೆಯನ್ನು ಧಾರೆ ಎರೆಯುತ್ತಾರೆ. ಆ ಋಷಿಗಳು ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಗತ್ತಿನಲ್ಲಿ ಅತ್ಯಂತ ಶಕ್ತಿಯುತವಾದ ಯೋಗ ವಿಜ್ಞಾನ ಅಂಶವನ್ನು ಹರಡುತ್ತಾರೆ. ಆಯುಷ್ ಸಚಿವಾಲಯದ ಪ್ರಕಾರ, ಸಮಕಾಲೀನ ಸಂಶೋಧಕರು ಪ್ರಪಂಚದಾದ್ಯಂತದ ಪ್ರಾಚೀನ ಸಂಸ್ಕೃತಿಗಳ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಗಮನಿಸಿದ್ದಾರೆ. 

ಬೇರೆಲ್ಲಾ ದೇಶಗಳಲ್ಲಿ ಯೋಗದ ಬಗ್ಗೆ ಅರಿವು ಇದ್ದರೂ ಯೋಗದ ಶಿಸ್ತು ಎಂಬುದು ಅಂತಿಮವಾಗಿ ಅಭಿವ್ಯಕ್ತಿಗೊಂಡಿದ್ದು ಭಾರತದಲ್ಲಿ ಮಾತ್ರ. ಭಾರತೀಯ ಉಪಖಂಡವನ್ನು ಸಂಚರಿಸಿದ ನಂತರ, ಈ ಸಂಸ್ಕೃತಿಯ ಮೂಲ ತತ್ವವಾದ ಯೋಗ ಜೀವನವನ್ನು ಸಪ್ತಋಷಿಗಳಲ್ಲಿ ಒಬ್ಬರಾದ ಅಗಸ್ತ್ಯರು ಸ್ಥಾಪಿಸುತ್ತಾರೆ.

ಅಂತರಾಷ್ಟ್ರೀಯ ಯೋಗ ದಿನ 2024

ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಥೀಮ್ ನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗ ಎಂಬುದಾಗಿದೆ. ಅಭ್ಯಾಸವು ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮಾಜಿಕ ಯೋಗಕ್ಷೇಮವನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಮೇಲೆ ಇದು ಕೇಂದ್ರೀಕರಿಸುತ್ತದೆ. ಇದು ವೈಯಕ್ತಿಕ ಮತ್ತು ಸಾಮೂಹಿಕ ಆರೋಗ್ಯವು ಹೇಗೆ ಹೆಣೆದುಕೊಂಡಿದೆ ಎಂಬುದನ್ನು ಒತ್ತಿಹೇಳುತ್ತದೆ ಮತ್ತು ಯೋಗವನ್ನು ವೈಯಕ್ತಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿ ಎರಡನ್ನೂ ಉತ್ತೇಜಿಸುವ ಸಾಧನವಾಗಿ ಪ್ರಸ್ತುತಪಡಿಸುತ್ತದೆ.