ಕನ್ನಡ ಸುದ್ದಿ  /  Lifestyle  /  International Yoga Day Best Yoga Asanas For Kids To Boost Concentration And Focus Bal Bakasana Sirshasana In Kannada Rst

International Yoga Day: ಬಾಲ ಬಕಾಸನದಿಂದ ಶೀರ್ಷಾಸನದವರೆಗೆ ಮಕ್ಕಳಲ್ಲಿ ಏಕಾಗ್ರತೆ, ಗಮನಶಕ್ತಿ ಹೆಚ್ಚಿಸಲು ನೆರವಾಗುವ ಯೋಗಾಸನಗಳಿವು

Best Yoga Asanas For Kids: ಯೋಗ ಮಾಡುವುದರಿಂದ ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಇದೇ ಹಲವು ಪ್ರಯೋಜನ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಗಮನಶಕ್ತಿ ಹೆಚ್ಚಲು ನೆರವಾಗುವ ಕೆಲವು ಯೋಗಾಸನಗಳು ಇಲ್ಲಿವೆ.

ವಿವಿಧ ಯೋಗಾಸನ ಭಂಗಿಗಳಲ್ಲಿ ಹಿಮಾಲಯನ್‌ ಸಿದ್ಧಾ ಅಕ್ಷರ ಅವರು, ಬಕಾಸನ (ಒಂದನೇ ಚಿತ್ರ), ಶೀರ್ಷಾಸನ (ಎರಡನೇ ಚಿತ್ರ)  ಬಾಲ ಬಕಾಸನ (ಮೂರನೇ ಚಿತ್ರ)
ವಿವಿಧ ಯೋಗಾಸನ ಭಂಗಿಗಳಲ್ಲಿ ಹಿಮಾಲಯನ್‌ ಸಿದ್ಧಾ ಅಕ್ಷರ ಅವರು, ಬಕಾಸನ (ಒಂದನೇ ಚಿತ್ರ), ಶೀರ್ಷಾಸನ (ಎರಡನೇ ಚಿತ್ರ) ಬಾಲ ಬಕಾಸನ (ಮೂರನೇ ಚಿತ್ರ)

ಇಂದಿನ ವೇಗದ ಜಗತ್ತಿನಲ್ಲಿ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಗಮನಶಕ್ತಿಯನ್ನು ಬೆಳೆಸುವುದು ಪೋಷಕರಿಗೆ ಸವಾಲು. ಪೋಷಕರು ಹಾಗೂ ಶಿಕ್ಷಕರು ಮಕ್ಕಳು ಶೈಕ್ಷಣಿಕವಾಗಿ ಹಾಗೂ ಭಾವನಾತ್ಮಕವಾಗಿ ಯಶಸ್ವಿಯಾಗಲು ಅಗತ್ಯವಾದ ಸಾಧನಗಳನ್ನು ಒದಗಿಸಲು ಪ್ರಯತ್ನಿಸುತ್ತಾರೆ. ಆದರೂ ಮಕ್ಕಳಲ್ಲಿ ಗಮನಶಕ್ತಿಯ ಕೊರತೆ ಕಾಡಬಹುದು. ಅದಕ್ಕಾಗಿ ಯೋಗಾಭ್ಯಾಸ ರೂಢಿಸುವುದು ಉತ್ತಮ. ಯೋಗದಿಂದ ದೈಹಿಕ ಅಭಿವೃದ್ಧಿ ಮಾತ್ರವಲ್ಲ ಮಗುವಿನ ಮಾನಸಿಕ ಅಭಿವೃದ್ಧಿಗೂ ಹಲವು ರೀತಿಯಿಂದ ಸಹಾಯವಾಗುತ್ತದೆ. ಯೋಗಾಸನಗಳ ಅಭ್ಯಾಸದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುವ ಜೊತೆಗೆ ಸಮಗ್ರ ಅಭಿವೃದ್ಧಿಯೂ ಸಾಧ್ಯ.

ಟ್ರೆಂಡಿಂಗ್​ ಸುದ್ದಿ

ʼಮಕ್ಕಳಲ್ಲಿ ಬಾಲ್ಯದಿಂದಲೇ ಯೋಗ ತರಬೇತಿಯನ್ನು ರೂಢಿಸುವುದರಿಂದ ಅವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಲವು ರೀತಿಯಲ್ಲಿ ಪ್ರಯೋಜನಗಳು ಉಂಟಾಗುತ್ತವೆ. ಬೆಕ್ಕು, ಹಸು, ನಾಯಿ, ಕಪ್ಪೆ ಮುಂತಾದ ಆಸನ ಶೀರ್ಷಿಕೆಗಳೊಂದಿಗೆ ಯೋಗವು ಮಕ್ಕಳನ್ನು ಆಸಕ್ತಿ ಹಾಗೂ ವಿನೋದದಿಂದ ಯೋಗದಲ್ಲಿ ತೊಡಗುವಂತೆ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತ ಮನೋಭಾವ ತಳೆಯಲು ನೆರವಾಗುತ್ತದೆʼ ಎನ್ನುತ್ತಾರೆ ಅಕ್ಷರ ಯೋಗ ಸಂಸ್ಥೆಗಳ ಸಂಸ್ಥಾಪಕ ಹಿಮಾಲಯನ್‌ ಸಿದ್ಧಾ ಅಕ್ಷರ.

ಅವರು ಮಕ್ಕಳಿಗೆ ಏಕಾಗ್ರತೆ ಹೆಚ್ಚಿಸುವ ಹಾಗೂ ಗಮನಶಕ್ತಿ ಹೆಚ್ಚಿಸುವ ಬೆಸ್ಟ್‌ ಯೋಗಾಸನಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಬಕಾಸನ - ಕಪ್ಪೆ ಭಂಗಿ

ಕಪ್ಪೆ ನಿಲ್ಲುವ ರೀತಿಯಂತೆ ಕಾಣುವ ಈ ಆಸನಕ್ಕೆ ಬಕಾಸನ ಎಂದು ಕರೆಯಲಾಗುತ್ತದೆ. ಕೈಗಳ ಮೇಲೆ ನಿಲ್ಲುವ ಈ ಆಸನದಲ್ಲಿ ಇಡೀ ದೇಹದ ಭಾರ ಕೈಮೇಲೆ ಇರುತ್ತದೆ. ಈ ಸಮಯವನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಗಮನಶಕ್ತಿ ಹೆಚ್ಚುತ್ತದೆ.

ಬಾಲ ಬಕಾಸನ - ಮರಿ ಕಪ್ಪೆ ಭಂಗಿ

ಮೊಣಕೈ ಮಾತ್ರ ಊರಿದಂತಿದ್ದು, ದೇಹದ ಹಿಂಭಾಗವನ್ನು ಸಂಪೂರ್ಣವಾಗಿ ಮೇಲಕ್ಕೆ ಎತ್ತಿ ಮುಖದ ಭಾಗವನ್ನು ನೆಲಕ್ಕೆ ತಾಕಿಸುವಂತಿರುವ ಈ ಯೋಗಾಸನವನ್ನು ಮಕ್ಕಳು ಬಾಲ್ಯದಿಂದಲೇ ಅಭ್ಯಾಸ ಮಾಡುವುದು ಉತ್ತಮ. ಇದರಿಂದ ಏಕಾಗ್ರತೆ ಹೆಚ್ಚುತ್ತದೆ.

ಶೀರ್ಷಾಸನ

ಇದು ವಜ್ರಾಸನದ ಆರಂಭಿಕ ಹಂತವಾಗಿದೆ. ತಲೆಯನ್ನು ಕೆಳಗಾಗಿಸಿ, ಕಾಲನ್ನು ಮೇಲಾಗಿಸಿ ನಿಲ್ಲುವ ಈ ಆಸನವನ್ನು ಅಭ್ಯಾಸ ಮಾಡಬೇಕು, ಅಲ್ಲದೆ ಒಂದಿಷ್ಟು ಹೊತ್ತು ಹೀಗೆ ನಿಲ್ಲುವ ಗುರಿ ಇರಬೇಕು. ಇದರಿಂದ ಗಮನಶಕ್ತಿ ಹೆಚ್ಚಲು ಸಾಧ್ಯ.

ಧಾನ್ಯದ ತಂತ್ರಗಳು

ಸ್ಥಿತಿ ಧ್ಯಾನ: ಸುಖಾಸನದಲ್ಲಿ ಕುಳಿತುಕೊಳ್ಳಬೇಕು. 4 ರಿಂದ 5 ಸೆಕೆಂಡುಗಳ ಕಾಲ ನೇರವಾಗಿ ನೋಡಬೇಕು. ಕಣ್ಣು ಮುಚ್ಚಿ ಧ್ಯಾನಸ್ಥ ಸ್ಥಿತಿಯಲ್ಲಿ ಇರಬೇಕು.

ಈ ರೀತಿ ಯೋಗಾಸನಗಳು ಹಾಗೂ ಧ್ಯಾನದ ಸ್ಥಿತಿಗಳು ಮಕ್ಕಳಲ್ಲಿ ಏಕಾಗ್ರತೆಯನ್ನು ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ

Yoga Day 2023: ಜೀವನಶೈಲಿ ಸುಧಾರಣೆಗಿರಲಿ ಯೋಗಾಸನ; ಯೋಗ ಮಾಡಿ ಜಡ ಜೀವನಶೈಲಿಗೆ ಗುಡ್‌ಬಾಯ್‌ ಹೇಳಿ

Yoga and Sedentary Lifestyle: ಇಂದಿನ ಯುವಜನರು ಹಲವು ಕಾರಣಗಳಿಂದ ಜಡಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಚಕ್ರದ ಭಂಗಿಯಿಂದ ಸಂತೋಲನಾಸನದವರೆಗೆ ಜಡಜೀವನ ಶೈಲಿಯಿಂದಾಗುವ ಸಮಸ್ಯೆಗಳ ನಿವಾರಣೆಗೆ ನೆರವಾಗುವ ಯೋಗಾಸನಗಳಿವು.

ಜಡಜೀವನಶೈಲಿಯು ತಮ್ಮ ದೇಹ ಹಾಗೂ ಯೋಗಕ್ಷೇಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅತಿಯಾಗಿ ಒಂದೇ ಕಡೆ ಕುಳಿತುಕೊಳ್ಳುವುದು, ವಾಕಿಂಗ್‌ ಮಾಡದೇ ಇರುವುದು ಅಥವಾ ದೈಹಿಕ ಚಲನೆಗೆ ಒತ್ತು ಕೊಡದೇ ಇರುವುದು ಜಡಜೀವನಶೈಲಿ ಎನ್ನಿಸಬಹುದು. ವರ್ಕ್‌ ಫ್ರಂ ಹೋಮ್‌ ಸಂಸ್ಕೃತಿಯು ಜಡಜೀವನ ಶೈಲಿಯನ್ನು ಹೆಚ್ಚಿಸಿದೆ. ಮನೆಯಿಂದಲೇ ಕೆಲಸ ಮಾಡುವಾಗ ನಾವು ಸದಾ ಕುರ್ಚಿಗೆ ಅಂಟಿಕೊಂಡಿರುತ್ತೇವೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ವಿಭಾಗ