ETF vs Gold Bond: ಚಿನ್ನದ ಮೇಲೆ ಹೂಡಿಕೆಗೆ ಇಟಿಎಫ್ ಒಳ್ಳೇದೋ? ಸಾವರಿನ್ ಗೋಲ್ಡ್ ಬಾಂಡ್ ಒಳ್ಳೇದೋ? ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ಜೀವನಶೈಲಿ  /  Etf Vs Gold Bond: ಚಿನ್ನದ ಮೇಲೆ ಹೂಡಿಕೆಗೆ ಇಟಿಎಫ್ ಒಳ್ಳೇದೋ? ಸಾವರಿನ್ ಗೋಲ್ಡ್ ಬಾಂಡ್ ಒಳ್ಳೇದೋ? ಇಲ್ಲಿದೆ ಉತ್ತರ

ETF vs Gold Bond: ಚಿನ್ನದ ಮೇಲೆ ಹೂಡಿಕೆಗೆ ಇಟಿಎಫ್ ಒಳ್ಳೇದೋ? ಸಾವರಿನ್ ಗೋಲ್ಡ್ ಬಾಂಡ್ ಒಳ್ಳೇದೋ? ಇಲ್ಲಿದೆ ಉತ್ತರ

ETFs and SGBs: ಚಿನ್ನದ ಇಟಿಎಫ್‌ಗಳು ಮತ್ತು ಸಾವರಿನ್‌ ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಭಿನ್ನ ಅನುಕೂಲಗಳಿವೆ. ಎಸ್‌ಜಿಬಿ ಮತ್ತು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ವಿಭಿನ್ನ ಪ್ರಯೋಜನಗಳಿವೆ.

ಚಿನ್ನದ ಮೇಲೆ ಹೂಡಿಕೆಗೆ ಇಟಿಎಫ್ ಒಳ್ಳೇದೋ? ಸಾವರಿನ್ ಗೋಲ್ಡ್ ಬಾಂಡ್ ಒಳ್ಳೇದೋ
ಚಿನ್ನದ ಮೇಲೆ ಹೂಡಿಕೆಗೆ ಇಟಿಎಫ್ ಒಳ್ಳೇದೋ? ಸಾವರಿನ್ ಗೋಲ್ಡ್ ಬಾಂಡ್ ಒಳ್ಳೇದೋ

ಚಿನ್ನದ ಮೇಲೆ ಹೂಡಿಕೆ ಮಾಡಲು ಸಾವರಿನ್‌ ಗೋಲ್ಡ್‌ ಬಾಂಡ್‌ (sovereign gold bonds) ಅನ್ನು ಹಲವು ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಗೋಲ್ಡ್ ಬಾಂಡ್‌ನತ್ತ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ. ಸಾವರಿನ್‌ ಗೋಲ್ಡ್‌ ಬಾಂಡ್‌ಗಳು (SGBs) ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅಪಾರ ಸಂಖ್ಯೆಯ ಉತ್ಸಾಹಿ ಹೂಡಿಕೆದಾರರನ್ನು ಆಕರ್ಷಿಸಿದೆ. ಪ್ರಸ್ತುತ ಹಣದುಬ್ಬರ ದರವನ್ನು ಮೀರಿ ಚಿನ್ನದ ಬೆಲೆಯು ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರೇರೇಪಿಸಿದೆ.

ಹೂಡಿಕೆದಾರರು ಹಣದುಬ್ಬರದಿಂದ ಉಂಟಾಗಬಲ್ಲ ನಷ್ಟದಿಂದ ತಾವು ದುಡಿದ ಹಣವನ್ನು ರಕ್ಷಿಸಲು ಬಯಸುತ್ತಾರೆ. ಇಂಥಾ ಸಂದರ್ಭದಲ್ಲಿ ಚಿನ್ನವನ್ನು ವಿಶ್ವಾಸಾರ್ಹ ಹೂಡಿಕೆ ಕ್ಷೇತ್ರವಾಗಿ ನೋಡುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಹಳದಿ ಲೋಹವು ದೀರ್ಘಾವಧಿ ಬಳಿಕ ತನ್ನ ಮೌಲ್ಯದಲ್ಲಿ ವ್ಯಾಪಕ ಏರಿಕೆಯನ್ನು ಕಾಪಾಡಿಕೊಳ್ಳುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಇದು ಬಂಡವಾಳ ಮೌಲ್ಯವರ್ಧನೆ ಮತ್ತು ಹಣದುಬ್ಬರದಿಂದ ರಕ್ಷಣೆ ಬಯಸುವ ಹೂಡಿಕೆದಾರರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.

ಅತ್ತ ಇಟಿಎಫ್‌ (exchange traded funds -ETFs)ನತ್ತವೂ ಗಣನೀಯ ಸಂಖ್ಯೆಯ ಹೂಡಿಕೆದಾರರು ಆಕರ್ಷಿತರಾಗುತ್ತಾರೆ. ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ ಮೂಲಕ ನಿಮ್ಮ ಹಣವು ಸ್ವತ್ತಾಗಿ ಕಾರ್ಯನಿರ್ವಹಿಸುತ್ತದೆ. ಷೇರುಗಳಂತೆಯೇ ಇಟಿಎಫ್‌ಗಳನ್ನು ಷೇರುಪೇಟೆಯಲ್ಲಿ ಟ್ರೇಡ್‌ ಮಾಡಲಾಗುತ್ತದೆ. ಇಲ್ಲಿ ಹೂಡಿಕೆದಾರರು ಇಟಿಎಫ್‌ ಅನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

ಇದನ್ನೂ ಓದಿ | ಸಾವರಿನ್‌ ಗೋಲ್ಡ್‌ ಬಾಂಡ್‌ 4ನೇ ಕಂತು ಆರಂಭ; ಚಿನ್ನದ ಮೇಲೆ ಹೂಡಿಕೆ ಮಾಡುವವರು ಫೆ 16ರೊಳಗೆ ಅರ್ಜಿ ಸಲ್ಲಿಸಿ

ಈ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಅನುಕೂಲಗಳು ವಿಭಿನ್ನವಾಗಿವೆ. ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡುವುದಕ್ಕಿಂತ ಇಟಿಎಫ್‌ ಹೂಡಿಕೆಯ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ಕೈಗೆಟುಕುವ ಆಯ್ಕೆ ಮತ್ತು ಸುಲಭವಾಗಿ ಆರಂಭಿಸಬಹುದು

ಭೌತಿಕ ಚಿನ್ನವು ಗಣನೀಯ ಪ್ರಮಾಣದ ಆರಂಭಿಕ ಹೂಡಿಕೆ ಮತ್ತು ಸುರಕ್ಷಿತ ಸಂಗ್ರಹಣೆಯನ್ನು ಬಯಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಚಿನ್ನದ ಇಟಿಎಫ್‌ಗಳನ್ನು ಸುಲಭವಾಗಿ ಆರಂಭಿಸಬಹುದು. ಹೂಡಿಕೆದಾರರು ಷೇರುಗಳ ಭಾಗಗಳನ್ನು ಒಳಗೊಂಡಂತೆ ಸಣ್ಣ ಮೊತ್ತಗಳೊಂದಿಗೆ ಭಾಗವಹಿಸಬಹುದು. ಇದು ಅವರವರ ಬಜೆಟ್ ಅನುಸಾರವಾಗಿ ಆರಂಭಿಸಲು ಸೂಕ್ತ ಆಯ್ಕೆ.

ದ್ರವ್ಯತೆ ಮತ್ತು ಅನುಕೂಲತೆ

ಚಿನ್ನದ ಇಟಿಎಫ್‌ಗಳನ್ನು ಇತರ ಯಾವುದೇ ಸೆಕ್ಯೂರಿಟಿಗಳಂತೆಯೇ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಇದು ಅತ್ಯುತ್ತಮ ದ್ರವ್ಯತೆಯೊಂದಿಗ ಖರೀದಿ ಮತ್ತು ಮಾರಾಟ ಮಾಡಲು ಸುಲಭ ಆಯ್ಕೆಯನ್ನು ಒದಗಿಸುತ್ತದೆ. ನಿಮ್ಮ ಹೂಡಿಕೆಯನ್ನು ನಗದು ಆಗಿ ಪರಿವರ್ತಿಸುವ ನೇರವಾದ ಪ್ರಕ್ರಿಯೆ ಇದಾಗಿದೆ. ಅತ್ತ ಭೌತಿಕ ಚಿನ್ನಕ್ಕೆ ಖರೀದಿದಾರರನ್ನು ಹುಡುಕುವ ಅಗತ್ಯವಿದೆ.

ಹೂಡಿಕೆ ಪೋರ್ಟ್ ಫೋಲಿಯೊದ ವೈವಿಧ್ಯೀಕರಣ

ಚಿನ್ನವು ಸ್ಟಾಕ್‌ಗಳು ಮತ್ತು ಬಾಂಡ್‌ಗಳಂಥ ಸಾಂಪ್ರದಾಯಿಕ ಆಸ್ತಿ ವರ್ಗಗಳೊಂದಿಗೆ ಕನಿಷ್ಠ ಸಂಬಂಧ ಹೊಂದಿದೆ. ಇದೇ ವೇಳೆ ನಿಮ್ಮ ಹೂಡಿಕೆಯ ಪೋರ್ಟ್‌ಫೋಲಿಯೊಗೆ ಚಿನ್ನದ ಇಟಿಎಫ್‌ಗಳನ್ನು ಪರಿಚಯಿಸುವುದರಿಂದ ನಿಮ್ಮ ಹೂಡಿಕೆಯಲ್ಲಿ ವೈವಿಧ್ಯತೆ ತರಬಹುದು. ಇದು ನಿಮಗೆ ಎದುರಾಗುವ ಒಟ್ಟಾರೆ ಅಪಾಯವನ್ನು ತಗ್ಗಿಸುತ್ತದೆ. ವಿಶೇಷವಾಗಿ ಮಾರುಕಟ್ಟೆ ಚಂಚಲವಾದಾಗ ಒಂದು ರೀತಿಯ ಭದ್ರತೆ ಒದಗಿಸುತ್ತದೆ.

ಇದನ್ನೂ ಓದಿ | ETF Investment: ಇಟಿಎಫ್‌ನಲ್ಲಿ ಹೂಡಿಕೆ ಮಾಡಲು ಬಯಸುವಿರಾ, ಏನಿದು ಇಟಿಎಫ್‌, ಹೂಡಿಕೆಯ ಪ್ರಯೋಜನಗಳೇನು, ಇಲ್ಲಿದೆ ವಿವರ

ಸಂಗ್ರಹಣೆ ಮತ್ತು ಭದ್ರತೆಗೆ ಕಡಿಮೆ ವೆಚ್ಚ

ಭೌತಿಕ ಚಿನ್ನಕ್ಕೆ ಹೆಚ್ಚಿನ ಭದ್ರತೆ ಬೇಕೇ ಬೇಕು. ಹೀಗಾಗಿ ಸೇಫ್‌ ಡೆಪಾಸಿಟ್‌ ಬಾಕ್ಸ್‌ ಮತ್ತು ಕಳ್ಳತನದ ವಿರುದ್ಧ ವಿಮೆ ಸೇರಿದಂತೆ ಸಂಗ್ರಹಣೆಯ ವೆಚ್ಚ ಹೆಚ್ಚು. ಆದರೆ, ಚಿನ್ನದ ಇಟಿಎಫ್‌ಗಳು ಇಂಥಾ ಕಳವಳಗಳನ್ನು ನಿವಾರಿಸುತ್ತದೆ. ಏಕೆಂದರೆ ಚಿನ್ನವನ್ನು ಇಟಿಎಫ್ ಪೂರೈಕೆದಾರರು ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾರೆ.

ಸ್ಪಷ್ಟತೆ ಮತ್ತು ಕಡಿಮೆ ವೆಚ್ಚ

ಚಿನ್ನದ ಇಟಿಎಫ್‌ಗಳು ಸಾಮಾನ್ಯವಾಗಿ ಪರಿಣಾಮಕಾರಿ ನಿಯಂತ್ರಣ ಮತ್ತು ಪಾರದರ್ಶಕತೆಗೆ ಒಳಪಟ್ಟಿರುತ್ತವೆ. ಹೂಡಿಕೆದಾರರಿಗೆ ಚಿನ್ನದ ಹಿಡುವಳಿಗಳ ಬಗ್ಗೆ ನಿಖರವಾದ ವಿವರ ಒದಗಿಸುತ್ತವೆ. ಇದಕ್ಕೂ ಹೆಚ್ಚುವರಿಯಾಗಿ, ಸಕ್ರಿಯವಾಗಿ ನಿರ್ವಹಿಸಲ್ಪಡುವ ಚಿನ್ನದ ನಿಧಿಗಳಿಗೆ ಹೋಲಿಸಿದರೆ ಅವು ಸಾಮಾನ್ಯವಾಗಿ ಕಡಿಮೆ ಶುಲ್ಕವನ್ನು ಹೊಂದಿರುತ್ತವೆ.

ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಇಟಿಎಫ್ ಗಳ ಜನಪ್ರಿಯತೆ ನಿಸ್ಸಂದೇಹವಾಗಿ ಹೆಚ್ಚಾಗಿದೆ. ಹೂಡಿಕೆದಾರರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ.

ಇದನ್ನೂ ಓದಿ | Business News: ಚಿನ್ನದ ಮೇಲೆ ಹೂಡಿಕೆ ಮಾಡೋ ಪ್ಲ್ಯಾನ್‌ ಇದ್ಯಾ, ಸಾವರಿನ್‌ ಗೋಲ್ಡ್‌ ಬಾಂಡ್‌ ಖರೀದಿಸಬಹುದು ನೋಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner