IRCTC Package: ಬೇಸಿಗೆಯಲ್ಲಿ ಗೋವಾ ಬೀಚ್‌ ಸ್ವರ್ಗಕ್ಕೆ ಸಮವಂತೆ, ಬೆಂಗಳೂರಿನಿಂದ ವಾರಕ್ಕೊಮ್ಮೆ ಇದೆ ವಿಶೇಷ ಪ್ಯಾಕೇಜ್
ಕನ್ನಡ ಸುದ್ದಿ  /  ಜೀವನಶೈಲಿ  /  Irctc Package: ಬೇಸಿಗೆಯಲ್ಲಿ ಗೋವಾ ಬೀಚ್‌ ಸ್ವರ್ಗಕ್ಕೆ ಸಮವಂತೆ, ಬೆಂಗಳೂರಿನಿಂದ ವಾರಕ್ಕೊಮ್ಮೆ ಇದೆ ವಿಶೇಷ ಪ್ಯಾಕೇಜ್

IRCTC Package: ಬೇಸಿಗೆಯಲ್ಲಿ ಗೋವಾ ಬೀಚ್‌ ಸ್ವರ್ಗಕ್ಕೆ ಸಮವಂತೆ, ಬೆಂಗಳೂರಿನಿಂದ ವಾರಕ್ಕೊಮ್ಮೆ ಇದೆ ವಿಶೇಷ ಪ್ಯಾಕೇಜ್

IRCTC Goa Package: ಬೇಸಿಗೆಯ ದಿನಗಳಲ್ಲಿ ಗೋವಾ ಬೀಚ್‌ನಲ್ಲಿ ಸುತ್ತಾಡೋದು ನಿಜಕ್ಕೂ ಸೂಪರ್ ಆಗಿರುತ್ತೆ, ಅದರ ಖುಷಿಯನ್ನು ನೀವು ಅನುಭವಿಸಬೇಕು ಅಂತಿದ್ರೆ ಈ ಟೂರ್ ಪ್ಯಾಕೇಜ್ ಆಯ್ಕೆ ಮಾಡಿಕೊಂಡು ಟ್ರಿಪ್‌ಗೆ ತೆರಳಿ.

ಬೆಂಗಳೂರಿನಿಂದ ವಾರಕ್ಕೊಮ್ಮೆ ಇದೆ ಗೋವಾಕ್ಕೆ ವಿಶೇಷ ಪ್ಯಾಕೇಜ್
ಬೆಂಗಳೂರಿನಿಂದ ವಾರಕ್ಕೊಮ್ಮೆ ಇದೆ ಗೋವಾಕ್ಕೆ ವಿಶೇಷ ಪ್ಯಾಕೇಜ್

IRCTC Goa Package: ಗೋವಾ ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಗೋವಾ ಚಿಕ್ಕ ರಾಜ್ಯವಾದ್ರೂ ಪ್ರವಾಸೋದ್ಯಮ ದೃಷ್ಟಿಯಿಂದ ಸಾಕಷ್ಟು ಮುಂದುವರಿದಿದೆ. ಗೋವಾ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿದೇಶಿಗರಿಗೂ ಅಚ್ಚುಮೆಚ್ಚು. ಆ ಕಾರಣಕ್ಕೆ ಉತ್ತರ ಗೋವಾದಲ್ಲಿ ನಮಗೆ ವಿದೇಶಕ್ಕೆ ಹೋದ ಅನುಭವ ಸಿಗುತ್ತದೆ. ಸುಂದರ ಕಡಲ ತೀರಗಳಲ್ಲಿ ಸುತ್ತಾಡೋದು ನಿಮಗೆ ಇಷ್ಟ ಅಂದ್ರೆ ನೀವು ಜೀವನದಲ್ಲಿ ಒಮ್ಮೆಯಾದ್ರೂ ಗೋವಾಕ್ಕೆ ಭೇಟಿ ನೀಡಬೇಕು.

ಗೋವಾ ಟ್ರಿಪ್‌ ಬೇಸಿಗೆಯಲ್ಲಿ ಚೆನ್ನಾಗಿರುತ್ತೆ, ಬಿಸಿಲಿನ ತಾಪ ಹೆಚ್ಚಿದ್ದರೂ ಸಂಜೆ ಸಮಯದಲ್ಲಿ ಅಲ್ಲಿನ ಕಡಲ ತೀರಗಳು ಸ್ವರ್ಗದಂತೆ ಕಾಣಿಸುವುದು ಸುಳ್ಳಲ್ಲ. ಅದರಲ್ಲೂ ನೀವು ಸೀಫುಡ್‌ ಪ್ರೇಮಿಯಾದ್ರೆ ಗೋವಾಕ್ಕೆ ಭೇಟಿ ನೀಡೋದು ಮಿಸ್ ಮಾಡಲೇಬಾರದು. ಈ ಬೇಸಿಗೆ ರಜೆಯಲ್ಲಿ ನೀವು ಮಕ್ಕಳ ಜೊತೆ ಕೂಡ ಗೋವಾ ಟ್ರಿಪ್ ಪ್ಲಾನ್ ಮಾಡಬಹುದು. ಗೋವಾಕ್ಕೆ ಬೆಂಗಳೂರಿನಿಂದ ವಾರಕ್ಕೊಮ್ಮೆ ವಿಶೇಷ ಟೂರ್ ಪ್ಯಾಕೇಜ್ ಇದೆ. ಈ ಟೂರ್ ಪ್ಯಾಕೇಜ್ ದರ ಎಷ್ಟು, ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬ ವಿವರ ಇಲ್ಲಿದೆ.

ಐಆರ್‌ಸಿಟಿಟಿ ಗೋವಾ ಟೂರ್ ಪ್ಯಾಕೇಜ್‌

ಗೋವಾ ಟೂರ್ ಪ್ಯಾಕೇಜ್ 4 ರಾತ್ರಿ ಹಾಗೂ 5 ಹಗಲುಗಳನ್ನು ಒಳಗೊಂಡಿರುತ್ತದೆ. ಗೋವಾದಲ್ಲಿರುವ ಕಡಲ ತೀರಗಳು ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

ಗೋವಾ ಟೂರ್ ಪ್ಯಾಕೇಜ್ ಪ್ರಯಾಣ ವಿವರ

ಮೊದಲ ದಿನ: ಯಶವಂತಪುರ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 17309 ರಲ್ಲಿ ಮಧ್ಯಾಹ್ನ 3 ಗಂಟೆಗೆ ಹೊರಡುವುದು. ರಾತ್ರಿ ಪೂರ್ತಿ ಪ್ರಯಾಣ ಮಾಡುವುದು.

ಎರಡನೇ ದಿನ: ಬೆಳಿಗ್ಗೆ 5 ಗಂಟೆಗೆ ವಾಸ್ಕೋ ಡಾ ಗಾಮ ರೈಲು ನಿಲ್ದಾಣಕ್ಕೆ ತಲುಪುವುದು. ಅಲ್ಲಿಂದ ಪಿಕ್‌ಅಪ್ ವಾಹನದಲ್ಲಿ ನಾರ್ತ್‌ ಗೋವಾದಲ್ಲಿರುವ ಹೋಟೆಲ್‌ ತಲುಪುವುದು. ಫ್ರೆಶ್ ಅಪ್ ಆಗಿ ಅಗುವಾಡಾ ಕೋಟೆ, ಕ್ಯಾಲಂಗುಟ್ ಬೀಚ್, ಅಂಜುನಾ ಬೀಚ್ ಮತ್ತು ವೆಗಟಾರ್‌ ಬೀಚ್ ನೋಡಿಕೊಂಡು ರಾತ್ರಿ ಹೋಟೆಲ್‌ನಲ್ಲಿ ತಂಗುವುದು.

ದಿನ 3: ಬೆಳಗಿನ ಉಪಾಹಾರ ಮುಗಿಸಿ ಸೌತ್ ಗೋವಾ ನೋಡಲು ತೆರಳುವುದು. ಹಳೆಯ ಗೋವಾ ಚರ್ಚ್‌ಗಳು, ಶ್ರೀ ಮಂಗೇಶಿ ದೇವಸ್ಥಾನ, ಮಿರಾಮಾರ್ ಬೀಚ್‌ನಲ್ಲಿ ಕಾಲ ಕಳೆದು ಸಂಜೆ ಮಾಂಡೋವಿ ನದಿಯಲ್ಲಿ ದೋಣಿ ವಿಹಾರದ ಮಾಡುವುದು. ಅಲ್ಲಿಂದ ಹೋಟೆಲ್‌ಗೆ ಬಂದು ರಾತ್ರಿ ಅಲ್ಲಿಯೇ ಉಳಿಯುವುದು.

ದಿನ 4: ಆ ದಿನ ಪೂರ್ತಿ ಬಿಡುವು ಇರುತ್ತದೆ, ಶಾಪಿಂಗ್ ಇತ್ಯಾದಿ ಮಾಡಬಹುದು. ರಾತ್ರಿ 8 ಗಂಟೆಗೆ ಪಿಕ್ ವಾಹನದಲ್ಲಿ ತೆರಳುವುದು. ವಾಸ್ಕೊಡಗಾಮ ರೈಲು ನಿಲ್ದಾಣದಿಂದ ರಾತ್ರಿ 10.55ಕ್ಕೆ ಬೆಂಗಳೂರಿಗೆ ಮರಳಿ ರೈಲು.

ದಿನ 5: ಮಧ್ಯಾಹ್ನ 12.35ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪುವುದು.

ಗೋವಾ ಟೂರ್ ಪ್ಯಾಕೇಜ್ ದರ ವಿವರ

ಈ ಟೂರ್ ಪ್ಯಾಕೇಜ್ ಎರಡು ವಿಧಗಳನ್ನು ಹೊಂದಿರುತ್ತದೆ. 3AC ಆಯ್ಕೆ ಮಾಡಿದವರಿಗೆ ಒಬ್ಬರಿಗೆ 37,930 ರೂ, ಇಬ್ಬರಿಗೆ 20,730 ರೂ, ಮೂವರಿಗೆ 16,460 ರೂ, 5 ರಿಂದ 11 ವರ್ಷದ ಮಕ್ಕಳಿಗೆ ಬೆಡ್ ಸಹಿತ 11,430 ರೂ, 5 ರಿಂದ 11 ವರ್ಷದ ಮಕ್ಕಳಿಗೆ ಬೆಡ್ ರಹಿತ 11,120ರೂ ಇದೆ. ಸ್ಟ್ಯಾಂಡರ್ಡ್‌ನಲ್ಲಿ ಒಬ್ಬರಿಗೆ 36,100 ರೂ, ಇಬ್ಬರಿಗೆ ತಲಾ 18,900 ರೂ, ಮೂವರಿಗೆ 14,630 ರೂ, 5 ರಿಂದ 11 ವರ್ಷದ ಮಕ್ಕಳಿಗೆ ಬೆಡ್ ಸಹಿತ 9,600 ರೂ ಹಾಗೂ 5 ರಿಂದ 11 ವರ್ಷದ ಮಕ್ಕಳಿಗೆ ಬೆಡ್ ರಹಿತ 9,290 ರೂ ಇದೆ.

ಗೋವಾ ಪ್ಯಾಕೇಜ್ ಮಾಹಿತಿಗೆ

ಗೋವಾ ಟೂರ್ ಪ್ಯಾಕೇಜ್ ಕುರಿತ ಮಾಹಿತಿಗೆ ದೂರವಾಣಿ ಸಂಖ್ಯೆ: 080-43023088/ 8595931291, ಇಮೇಲ್ ವಿಳಾಸ: tourismsbc[at]irctc[dot]com ಹಾಗೂ ಈ ಕುರಿತ ಹೆಚ್ಚಿನ ಮಾಹಿತಿಗೆ Website: www.irctctourism.com ವೆಬ್‌ಸೈಟ್‌ಗೆ ಭೇಟಿ ನೀಡಿ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.