IRCTC Package: ಕನ್ಯಾಕುಮಾರಿ ಯಾತ್ರೆಗೆ ಕರ್ನಾಟಕ ಸರ್ಕಾರದಿಂದ ಹಣ ಸಹಾಯ; 6 ದಿನಗಳ ಯಾತ್ರೆಯಲ್ಲಿ ಹಲವು ಕ್ಷೇತ್ರಗಳ ದರ್ಶನ
IRCTC Kanyakumari Package: ಕನ್ಯಾಕುಮಾರಿ, ರಾಮೇಶ್ವರ, ಮಧುರೈ ಹೀಗೆ ದಕ್ಷಿಣದ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಬಯಕೆ ನಿಮಗಿದ್ದರೆ ಐಆರ್‌ಸಿಟಿಸಿಯ ಭಾರತ್ ಗೌರವ ದಕ್ಷಿಣ ಯಾತ್ರಾ ಟೂರ್ ಪ್ಯಾಕೇಜ್ ವಿವರ ಇಲ್ಲಿದೆ ಗಮನಿಸಿ.

Kanyakumari IRCTC Tour Package: ದಕ್ಷಿಣ ಭಾರತದಲ್ಲಿ ಹಲವಾರು ದೇವಾಲಯಗಳಿವೆ. ಅದರಲ್ಲೂ ತಮಿಳುನಾಡಿನಲ್ಲಿ ಸಾಕಷ್ಟು ಪುರಾತನ ಪ್ರಸಿದ್ಧ ದೇಗುಲಗಳಿವೆ. ಅದರಲ್ಲೂ ರಾಮಾಯಣದೊಂದಿಗೆ ನಂಟು ಹೊಂದಿರುವ ಕನ್ಯಾಕುಮಾರಿ, ರಾಮೇಶ್ವರಂನಂತಹ ಸ್ಥಳಗಳು ಇರುವುದು ತಮಿಳುನಾಡಿನಲ್ಲಿ. ಈ ವರ್ಷ ನೀವು ಪುಣ್ಯಸ್ಥಳಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ರಾಮೇಶ್ವರ, ಕನ್ಯಾಕುಮಾರಿಗೆ ತೆರಳಬಹುದು.
ಐಆರ್‌ಸಿಟಿಸಿಯ ಭಾರತ್ ಗೌರವ ದಕ್ಷಿಣ ಯಾತ್ರಾ ಟೂರ್ ಟೂರ್ ಪ್ಯಾಕೇಜ್‌ನಲ್ಲಿ ನೀವು ತಮಿಳುನಾಡಿನ ಹಲವು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಬರಬಹುದು. ಈ ಟೂರ್ ಪ್ಯಾಕೇಜ್ ದರ ಎಷ್ಟು, ಯಾವೆಲ್ಲಾ ಸ್ಥಳಗಳನ್ನು ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.
ಕನ್ಯಾಕುಮಾರಿ ಟೂರ್ ಪ್ಯಾಕೇಜ್
ಈ ಟೂರ್ ಪ್ಯಾಕೇಜ್ ಒಟ್ಟು 5 ರಾತ್ರಿ ಹಾಗೂ 6 ಹಗಲುಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ನೀವು ಕನ್ಯಾಕುಮಾರಿ, ತಿರುವನಂತಪುರ, ರಾಮೇಶ್ವರಂ ಹಾಗೂ ಮಧುರೈ ಸುತ್ತಲಿನ ಸ್ಥಳಗಳನ್ನು ನೋಡಿಬರಬಹುದು. ಮೇ9 ರಂದು ಈ ಟೂರ್ ಪ್ಯಾಕೇಜ್ ಆರಂಭವಾಗುತ್ತದೆ. ಅಂದಹಾಗೆ ಈ ಟೂರ್ ಪ್ಯಾಕೇಜ್ ಆರಂಭವಾಗುವುದು ಬೆಳಗಾಂನಿಂದ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬೋರ್ಡಿಂಗ್ ಪಾಯಿಂಟ್ ಇದೆ. ಬೆಳಗಾಂ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಬೆಂಗಳೂರು.
ಕನ್ಯಾಕುಮಾರಿ ಟೂರ್ ಪ್ಯಾಕೇಜ್ ಪ್ರಯಾಣ ವಿವರ
ದಿನ 1: ಬೆಳಿಗ್ಗೆ ಬೆಳಗಾಂನಿಂದ ಹೊರಡು ಸಂಪೂರ್ಣ ರಾತ್ರಿ ರೈಲು ಪ್ರಯಾಣ.
ದಿನ 2: ಕನ್ಯಾಕುಮಾರಿ ತಲುಪುವುದು. ಹೋಟೆಲ್‌ನಲ್ಲಿ ಫ್ರೆಶ್‌ಅಪ್ ಆಗಿ ಭಾಗ್ಯವತಿ ದೇವಾಲಯ ಹಾಗೂ ವಿವೇಕಾನಂದ ರಾಕ್ ಗಾರ್ಡನ್‌ಗೆ ಭೇಟಿ ನೀಡುವುದು. ಅಲ್ಲಿ ಸೂರ್ಯಾಸ್ತ ನೋಡುವುದು ಇರುತ್ತದೆ. ರಾತ್ರಿ ಊಟ ಮುಗಿಸಿ ಕನ್ಯಾಕುಮಾರಿಯಲ್ಲಿ ರಾತ್ರಿ ಉಳಿಯುವುದು.
ದಿನ 3: ತಿರುವನಂತಪುರ: ಬೆಳಿಗ್ಗೆ ಸೂರ್ಯೋದಯ ವೀಕ್ಷಣೆ. ಬೆಳಗಿನ ಉಪಾಹಾರ ಮುಗಿಸಿ ಕನ್ಯಾಕುಮಾರಿಯಿಂದ ಹೊರಡುವುದು. ಮಧ್ಯಾಹ್ನ ಕೋಚುವೇಲಿ ತಲುಪುವುದು. ದಾರಿ ಮಧ್ಯೆ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವುದು. ರಾತ್ರಿ ತಿರುವಂತನಪುರದಿಂದ ಹೊರಡುವುದು.
ದಿನ 4: ರಾಮೇಶ್ವರ: ಬೆಳಿಗ್ಗೆ ರಾಮೇಶ್ವರ ತಲುಪುವುದು. ಮಧ್ಯಾಹ್ನದ ಊಟದ ನಂತರ ರಾಮೇಶ್ವರ ದೇಗುಲಕ್ಕೆ ಭೇಟಿ. ರಾತ್ರಿ ರಾಮೇಶ್ವರದಲ್ಲೇ ತಂಗುವುದು.
ದಿನ 5: ಮಧುರೈ: ಬೆಳಗಿನ ತಿಂಡಿ ಮುಗಿಸಿ ರಾಮೇಶ್ವರದಿಂದ ರೈಲಿನಲ್ಲಿ ಹೊರಡುವುದು. ಮಧ್ಯಾಹ್ನದ ವೇಳೆಗೆ ಮಧುರೈಗೆ ಭೇಟಿ. ನಂತರ ಮಧುರೈ ಮೀನಾಕ್ಷಿ ದೇವಾಲಯಕ್ಕೆ ಭೇಟಿ. ರಾತ್ರಿ ಊಟ ಮುಗಿಸಿ ಮಧುರೈನಿಂದ ಹೊರಡುವುದು.
ದಿನ 6: ಬೆಳಗಾಂ ತಲುಪುವುದು. ಮಾರ್ಗ ಮಧ್ಯದಲ್ಲಿ ನೀವು ರೈಲು ಹತ್ತಿದ ಸ್ಥಳದಲ್ಲಿ ಇಳಿಯುವ ವ್ಯವಸ್ಥೆಯೂ ಇರುತ್ತದೆ.
ಕನ್ಯಾಕುಮಾರಿ ಟೂರ್ ಪ್ಯಾಕೇಜ್ ದರ ವಿವರ
ಭಾರತ್ ಗೌರವ ದಕ್ಷಿಣ ಯಾತ್ರಾ ಟೂರ್ ಪ್ಯಾಕೇಜ್ ದರ ಒಬ್ಬರಿಗೆ 15,000 ರೂ ಇರುತ್ತದೆ. ಕರ್ನಾಟಕ ಸರ್ಕಾರದ ಸಬ್ಸಿಡಿ ಇರುವವರಿಗೆ 5,000 ರೂ ಇರುತ್ತದೆ.
ಈ ಟೂರ್ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗೆ
ಕನ್ಯಾಕುಮಾರಿ ಟೂರ್ ಪ್ಯಾಕೇಜ್ ಕುರಿತ ಮಾಹಿತಿಗೆ ಮೊಬೈಲ್ ಸಂಖ್ಯೆ: 9003140710,8595931290, ಇಮೇಲ್ ವಿಳಾಸ: tourismsbc[at]irctc[dot]com ಹಾಗೂ ಹೆಚ್ಚಿನ ಮಾಹಿತಿಗೆ www.irctctourism.com ವೆಬ್‌ಸೈಟ್‌ಗೆ ಭೇಟಿ ನೀಡಿ.
ರಾಮೇಶ್ವರ, ಮಧುರೈಯಂತಹ ಪುರಾತನ ದೇಗುಲಗಳನ್ನು ಜೀವನದಲ್ಲಿ ಒಮ್ಮೆಯಾದ್ರೂ ನೋಡಬೇಕು. ಇಲ್ಲಿನ ಅದ್ಭುತ ವಾಸ್ತುಶಿಲ್ಪಗಳು ನಿಮ್ಮ ಕಣ್ಮನ ಸೆಳೆಯದೇ ಇರುವುದು. ಇಬ್ಬರೇ ಟ್ರಿಪ್‌ಗೆ ಹೋಗುವುದು ಕಷ್ಟ ಎನ್ನುವವರು ಇಂತಹ ಟೂರ್ ಪ್ಯಾಕೇಜ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.