ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರಿನಿಂದ ಮುನ್ನಾರ್, ಅಲಪ್ಪುಳ ರೈಲು ಪ್ರವಾಸ; ಪ್ಯಾಕೇಜ್‌ ವಿವರ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರಿನಿಂದ ಮುನ್ನಾರ್, ಅಲಪ್ಪುಳ ರೈಲು ಪ್ರವಾಸ; ಪ್ಯಾಕೇಜ್‌ ವಿವರ ತಿಳಿಯಿರಿ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರಿನಿಂದ ಮುನ್ನಾರ್, ಅಲಪ್ಪುಳ ರೈಲು ಪ್ರವಾಸ; ಪ್ಯಾಕೇಜ್‌ ವಿವರ ತಿಳಿಯಿರಿ

ಬೆಂಗಳೂರಿನಿಂದ ಕೇರಳದ ಮುನ್ನಾರ್, ಅಲಪ್ಪುಳ ರೈಲು ಟೂರ್ ಪ್ಯಾಕೇಜ್‌ನಲ್ಲಿ ನೋಡುವಂತ ತಾಣಗಳು ಯಾವುವು, ಊಟದ ವ್ಯವಸ್ಥೆ, ಹೋಟೆಲ್, ಪ್ಯಾಕೇಜ್ ಮೊತ್ತ, ಯಾರಿಗೆ ಎಷ್ಟು ಹಣ ಇರಲಿದೆ ಎಂಬುದು ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜುಲೈ 15ಕ್ಕೆ ಬೆಂಗಳೂರಿನಿಂದ ಅಯೋಧ್ಯೆ ಪ್ರವಾಸ; ಟಿಕೆಟ್ ದರ, ವೀಕ್ಷಣೆಯ ಪ್ರಮುಖ ತಾಣಗಳ ವಿವರ ಹೀಗಿದೆ

ದೇವರ ನಾಡು ಕೇರಳ ಹೆಸರು ಕೇಳಿದ್ರೆ ಸಾಕು ಇಲ್ಲಿನ ಪ್ರಾಚೀನ ಕಾಲದ ಹಿನ್ನೀರು, ಪಾಮ್ ಫ್ರಿಂಜ್ಡ್ ಬೀಜ್‌ಗಳು, ಪ್ರಶಾಂತವಾದ ಹಳ್ಳಿಗಳು, ಸಮೃದ್ಧವಾಗಿರುವ ಹಸಿರು, ವಿಶೇಷವಾಗಿ ಅತ್ಯಂತ ಹಳೆಯ ದೇವಾಲಯಗಳು ಕಣ್ಮನ ಸೆಳೆಯುತ್ತವೆ. ಭಾರತದಲ್ಲಿ ಪ್ರವಾಸಕ್ಕೆ ಹೇಳಿಮಾಡಿಸಿದಂತ ತಾಣಗಳು ನೆರೆಯ ಕೇರಳದಲ್ಲಿವೆ. ಸೂರ್ಯ ಚುಂಬನದ ಕಡಲ ತೀರಗಳು, ಮಂಜಿನ ಗಿರಿಧಾನಗಳು, ಐತಿಹಾಸಿಕ ಸ್ಮಾರಕಗಳು ನಿಮ್ಮ ಮಂತ್ರಮುಗ್ಧರನ್ನಾಗಿಸುತ್ತವೆ. ಐಆರ್‌ಸಿಟಿಸಿ ಕೇರಳ ಟೂರ್ ಪ್ಯಾಕೇಜ್‌ಗಳನ್ನು ಆಗಾಗ ಆಯೋಜಿಸುತ್ತಲೇ ಇರುತ್ತದೆ. ಇದೀಗ ಮಳೆಗಾಲದಲ್ಲಿ ಮುನ್ನಾರ್, ಅಲಪ್ಪುಳ ರೈಲು ಟೂರ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಜೂನ್ 27 ರಂದು ಪ್ರವಾಸ ಆರಂಭವಾಗುತ್ತದೆ.

ಬೆಂಗಳೂರಿನಿಂದ ಕೇರಳದ ಮುನ್ನಾರ್, ಅಲಪ್ಪುಳ ರೈಲು ಟೂರ್ ಪ್ಯಾಕೇಜ್‌ನಲ್ಲಿ (Munnar Alleppey Rail Tour Package Ex Bengaluru) ನೋಡುವಂತ ತಾಣಗಳು ಯಾವುವು, ಊಟದ ವ್ಯವಸ್ಥೆ, ಹೋಟೆಲ್, ಪ್ಯಾಕೇಜ್ ಮೊತ್ತ, ಯಾರಿಗೆ ಎಷ್ಟು ಹಣ ಇರಲಿದೆ ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ಒಂದೊಂದಾಗಿ ತಿಳಿಯೋಣ.

ಬೆಂಗಳೂರಿನಿಂದ ಕೇರಳದ ಮುನ್ನಾರ್, ಅಲಪ್ಪುಳ ರೈಲು ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ ಎಷ್ಟು ಹಣ?

ಕಂಫರ್ಟ್ (3AC): ಒಬ್ಬರಿಗೆ 37,220 ರೂಪಾಯಿ, ಇಬ್ಬರಿಗೆ 20,370 ರೂಪಾಯಿ, ಮೂವರಿಗೆ 16,440 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 12,070 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 10,090 ರೂಪಾಯಿ

ಪ್ರಮಾಣಿತ (SL): ಒಬ್ಬರಿಗೆ 35,020 ರೂಪಾಯಿ, ಇಬ್ಬರಿಗೆ 18,170 ರೂಪಾಯಿ, ಮೂವರಿಗೆ 14,240 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 9,860 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 7,880 ರೂಪಾಯಿ

ಪ್ರವಾಸದ ವಿವರ ಎರ್ನಾಕುಲಂ-ಮುನ್ನಾರ್ (2) - ಅಲಪ್ಪುಳ (1) - ಎರ್ನಾಕುಲಂ (5 ರಾತ್ರಿಗಳು ಮತ್ತು 6 ದಿನಗಳ) ಟೂರ್ ಪ್ಯಾಕೇಜ್ ವಿವರ

ಮೊದಲ ದಿನ: ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 16526 ಮೂಲಕ ರಾತ್ರಿ 8.10 ಗಂಟೆಗೆ ಹೊರಡಲಿದೆ. ರಾತ್ರಿಯ ಪ್ರಮಾಣ.

ಎರಡನೇ ದಿನ: ಎರ್ನಾಕುಲಂ ಟೌನ್ ರೈಲು ನಿಲ್ದಾಣಕ್ಕೆ ಬೆಳಗ್ಗೆ 7.20ಕ್ಕೆ ತಲುಪುತ್ತದೆ. ಪಿಕ್ ಅಪ್ ಇರುತ್ತೆ. ರಸ್ತೆ ಮೂಲಕ ಮುನ್ನಾರ್‌ಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಹೋಟೆಲ್‌ಗೆ ಚೆಕ್ ಇನ್ ಮಾಡಲಾಗುತ್ತೆ. ಫ್ರೆಶ್‌ಅಪ್ ಆದ ನಂತರ ಟೀ ಮ್ಯೂಸಿಯಂಗೆ ಸಂಜೆ ಭೇಟಿ ನೀಡಿಲಾಗುತ್ತದೆ. ಮುನ್ನಾರ್‌ನಲ್ಲಿ ರಾತ್ರಿ ಉಳಿದುಕೊಳ್ಳಲಾಗುತ್ತದೆ.

ಮೂರನೇ ದಿನ: ಎರವಿಕುಲಂ ರಾಷ್ಟ್ರೀಯ ಉದ್ಯಾನವನಕ್ಕೆ (ಅಥವಾ) ಟಾಪ್ ಸ್ಟೇಷನ್ ವ್ಯೂ ಪಾಯಿಂಟ್‌ಗೆ ಮುಂಜಾನೆ ಕರೆದೊಯ್ಯಲಾಗುತ್ತೆ. ಈ ವೇಳೆ ಬೆಳಗಿನ ಉಪಾಹರ ಇರುತ್ತದೆ. ಮಧ್ಯಾಹ್ನ ಮೆಟ್ಟುಪೆಟ್ಟಿ ಅಣೆಕಟ್ಟು ಮತ್ತು ಎಕೋ ಪಾಯಿಂಟ್, ಕುಂಡ್ಲಾ ಸರೋವರ. ಶಾಪಿಂಗ್‌ಗಾಗಿ ಮುನ್ನಾರ್ ಟೌನ್‌ಗೆ ಸಂಜೆ ಭೇಟಿ. ಮತ್ತೆ ಮುನ್ನಾರ್‌ನಲ್ಲಿ ರಾತ್ರಿ ಉಳಿದುಕೊಳ್ಳಲಾಗುತ್ತದೆ.

ನಾಲ್ಕನೇ ದಿನ: ಬೆಳಗಿನ ಉಪಹಾರದ ನಂತರ ಅಲಪ್ಪುಳಕ್ಕೆ ಕರೆದೊಯ್ಯಲಾಗುತ್ತದೆ. ಹೌಸ್‌ಬೋಟ್ ತೋರಿಸಲಾಗುತ್ತೆ. ಮಧ್ಯಾಹ್ನದ ಊಟ, ರಾತ್ರಿಯ ಊಟ ಮತ್ತು ಹೌಸ್‌ಬೋಟ್‌ನಲ್ಲಿ ರಾತ್ರಿಯ ಉಳಿದುಕೊಳ್ಳಲಾಗುತ್ತದೆ.

ಐದನೇ ದಿನ: ಬೆಳಗ್ಗೆ 8 ಗಂಟೆಗೆ ಹೌಸ್ ಬೋಟ್‌ನಿಂದ ಹೊರಟು ಕೊಚ್ಚಿಗೆ ತಲುಪಲಾಗುತ್ತದೆ. ಇಲ್ಲಿಗೆ ಆಗಮಿಸಿದ ನಂತರ ಸೇಂಟ್ ಫ್ರಾನ್ಸಿಸ್ ಚರ್ಚ್, ಸಾಂಟಾ ಕ್ರೂಜ್ ಬೆಸಿಲಿಕಾ ಚರ್ಚ್‌ಗೆ ಭೇಟಿ ನೀಡಲಾಗುತ್ತದೆ. ಎರ್ನಾಕುಲಂ ಟೌನ್ ರೈಲ್ವೇ ನಿಲ್ದಾಣಕ್ಕೆ ಸಂಜೆ ಡ್ರಾಪ್ ರೈಲು (ರೈಲು ಸಂಖ್ಯೆ 16525) ಸಂಜೆ 5.55ಕ್ಕೆ ಅಲ್ಲಿಂದ ಹೊರಡಲಾಗುತ್ತದೆ.

ಆರನೇ ದಿನ: ಬೆಳಗ್ಗೆ 06:40 ಗಂಟೆಗೆ ಕೆಎಸ್ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣವನ್ನು ತಲುಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿ ಅಧಿಕೃತ ಜಾಲತಾಣ irctc.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner