ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರು-ಶಿರಡಿ ರೈಲು ಪ್ರವಾಸ; ಟಿಕೆಟ್ ದರ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರು-ಶಿರಡಿ ರೈಲು ಪ್ರವಾಸ; ಟಿಕೆಟ್ ದರ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಐಆರ್‌ಸಿಟಿಸಿ ಬೆಂಗಳೂರು ಶಿರಡಿ ನಡುವೆ ರೈಲು ಪ್ರವಾಸವನ್ನು ಆರಂಭಿಸಿದೆ. ಟೂರ್ ಪ್ಯಾಕೇಜ್‌ನಲ್ಲಿ ಯಾವೆಲ್ಲಾ ಪ್ರವಾಸಿ, ಧಾರ್ಮಿಕ ತಾಣಗಳನ್ನು ತೋರಿಸಲಾಗುತ್ತೆ, ಟಿಕೆಟ್ ದರ, ಊಟ, ಹೋಟೆಲ್ ವ್ಯವಸ್ಥೆಯ ಮಾಹಿತಿ ಇಲ್ಲಿ ನೀಡಲಾಗಿದೆ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರು-ಶಿರಡಿ ರೈಲು ಪ್ರವಾಸ; ಟಿಕೆಟ್ ದರ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಜೂನ್ 27ಕ್ಕೆ ಬೆಂಗಳೂರು-ಶಿರಡಿ ರೈಲು ಪ್ರವಾಸ; ಟಿಕೆಟ್ ದರ ಸೇರಿ ಪ್ರಮುಖ ಮಾಹಿತಿ ಇಲ್ಲಿದೆ

ಭಾರತದಲ್ಲಿ ಅತಿ ಹೆಚ್ಚು ಯಾತ್ರಿಕರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರದಲ್ಲಿ ಶಿರಡಿಯ ಸಾಯಿಬಾಬಾ ದೇವಾಲಯ ಕೂಡ ಒಂದಾಗಿದೆ. ಮಹಾರಾಷ್ಟ್ರದಲ್ಲಿರುವ ಈ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸಿ ಸಾಯಿಬಾಬನ ದರ್ಶನ ಪಡೆಯುತ್ತಾರೆ. ವಿಶೇಷವೆಂದರೆ ಯಾವುದೇ ಧರ್ಮ, ಜಾತಿ ಅಥವಾ ಪಥದ ಭೇದ ಭಾವ ಇಲ್ಲದೆ ಲಕ್ಷಾಂತರ ಮಂದಿ ಭಕ್ತರು ಸಾಯಿ ಬಾಬನ ದರ್ಶನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಶನಿ ದೇವರಿಗೆ ದೇವಸ್ಥಾನಗಳನ್ನು ಕಟ್ಟುವುದಿಲ್ಲ. ಆದರೆ ಇರುವಂತ ಕೆಲವೇ ಕೆಲವು ದೇವಾಲಯದಲ್ಲಿ ಮಹಾರಾಷ್ಟ್ರದ ಶನಿ ಸಿಂಗ್ನಾಪುರದ ದೇವಾಲಯವೂ ಒಂದಾಗಿದೆ. ಇಲ್ಲಿಗೆ ಭೇಟಿ ನೀಡಿದರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಲಕ್ಷಾಂತರ ಮಂದಿ ಭಕ್ತರಲ್ಲಿದೆ.

ಹೀಗಾಗಿಯೇ ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೂ ತಂಡಗಳಾಗಿ ಭಕ್ತರು ಬರುತ್ತಾರೆ. ಬೆಂಗಳೂರಿನಿಂದ ಶಿರಡಿ ನಿತ್ಯ ರೈಲು ಸೇವೆ ಇದ್ದರೂ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರ್ ಕಾರ್ಪೊರೇಷನ್ - ಐಆರ್‌ಸಿಟಿಸಿ ಆಗಾಗ ಬೆಂಗಳೂರಿನಿಂದ ಶಿರಡಿ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತದೆ. ಅದರಂತೆ ಜೂನ್ 27 ರಂದು ಬೆಂಗಳೂರು ಶಿರಡಿ ರೈಲು ಪ್ರವಾಸ ಪ್ಯಾಕೇಜ್ (IRCTC Tour Package Bangalore to Shirdi) ಘೋಷಣೆ ಮಾಡಿದೆ. ಈ ಪ್ರವಾಸದಲ್ಲಿ ಶಿರಡಿಯ ಜೊತೆಗೆ ಬೇರೆ ಯಾವೆಲ್ಲಾ ದೇವಾಲಯಗಳನ್ನು ತೋರಿಸಲಾಗುತ್ತದೆ, ಹೋಟೆಲ್ ವ್ಯವಸ್ಥೆ ಹೇಗಿರುತ್ತೆ, ಊಟ, ಟಿಕೆಟ್ ದರ ಹಾಗೂ ಇತರೆ ಮಾಹಿತಿಯನ್ನು ತಿಳಿಯಿರಿ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರಿನಿಂದ ಶಿರಡಿ ರೈಲು ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ ಎಷ್ಟು ಹಣ?

ಕಂಫರ್ಟ್ (3ಎಸಿ): ಒಬ್ಬರಿಗೆ 10,460 ರೂಪಾಯಿ, ಇಬ್ಬರಿಗೆ ತಲಾ 8,170 ರೂಪಾಯಿ, ಮೂವರಿಗೆ ತಲಾ 7,780 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 6,810 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 5,820 ರೂಪಾಯಿ

ಪ್ರಮಾಣಿತ (ಎಸ್‌ಎಲ್): ಒಬ್ಬರಿಗೆ 7,980 ರೂಪಾಯಿ, ಇಬ್ಬರಿಗೆ ತಲಾ 5,690 ರೂಪಾಯಿ, ಮೂವರಿಗೆ ತಲಾ 5,300 ರೂಪಾಯಿ, ಹಾಸಿಗೆ ಇರುವ ಮಗು (5-11 ವರ್ಷ) 4,330 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 3,3340 ರೂಪಾಯಿ

ಐಆರ್‌ಸಿಟಿಸಿ ಬೆಂಗಳೂರು-ಶಿರಡಿ ರೈಲು ಪ್ರವಾಸ ಪ್ಯಾಕೇಜ್‌ ವಿವರ

ಮೊದಲ ದಿನ: ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರೈಲು ಸಂಖ್ಯೆ 12627 ಮೂಲಕ ಜೂಲೈ 27 ರ ಸಂಜೆ 5.20ಕ್ಕೆ ಹೊರಡುತ್ತದೆ. ರಾತ್ರಿಯ ಪ್ರಯಾಣ ಇರುತ್ತೆ.

ಎರಡನೇ ದಿನ: ಕೊಪ್ರಗಾಂವ್ ನಿಲ್ದಾಣವನ್ನು ಮಧ್ಯಾಹ್ನ 1.37ಕ್ಕೆ ತಲುಪುತ್ತದೆ. ಶಿರಡಿ ಹೋಟೆಲ್‌ನಲ್ಲಿ ವಾಹನದ ಮೂಲಕ ಕರೆದೊಯ್ಯಲಾಗುತ್ತೆ. ಆ ಬಳಿಕ ಅನುಕೂಲಕರ ಸಮಯ ನೋಡಿ ಶ್ರೀ ಸಾಯಿಬಾಬಾ ದೇವಸ್ಥಾನಕ್ಕೆ ಕೆರೆದೊಯ್ಯಲಾಗುತ್ತದೆ.ಶಿರಡಿಯಲ್ಲಿ ರಾತ್ರಿ ಉಳಿದುಕೊಳ್ಳಲುವುದು

ಮೂರನೇ ದಿನ: ಬೆಳಗಿನ ಉಪಹಾರದ ನಂತರ ಶನಿಸಿಂಗನಾಪುರ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತೆ. ಅಲ್ಲಿ ದೇವರ ವೀಕ್ಷಣೆ ಬಳಿಕ ಕೋಪರ್ಗೊನ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 3.30ಕ್ಕೆ ತಲುಪಿಸಲಾಗುತ್ತದೆ. ಅಲ್ಲಿ 12628 ಸಂಖ್ಯೆಯ ರೈಲನ್ನು ಹಿಡಿದು ಬೆಂಗಳೂರಿನತ್ತ ಸಂಜೆ 4.40ಕ್ಕೆ ಹೊರಡುತ್ತೆ.

ನಾಲ್ಕನೇ ದಿನ - ಮಧ್ಯಾಹ್ನ 12.30ಕ್ಕೆ ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣವನ್ನು ತಲುಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ಜಾಲತಾಣ irctc.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)