ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ತಿರುಪತಿ ಬಾಲಾಜಿ ದರ್ಶನ ಪ್ರವಾಸ; ದೇವಾಲಯಗಳ ವೀಕ್ಷಣೆ, ದಿನಾಂಕ, ಟಿಕೆಟ್ ವಿವರ ಹೀಗಿದೆ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ತಿರುಪತಿ ಬಾಲಾಜಿ ದರ್ಶನ ಪ್ರವಾಸ; ದೇವಾಲಯಗಳ ವೀಕ್ಷಣೆ, ದಿನಾಂಕ, ಟಿಕೆಟ್ ವಿವರ ಹೀಗಿದೆ

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಐಆರ್‌ಸಿಟಿಸಿ ಬೆಂಗಳೂರಿನಿಂದ ತಿರುಪತಿ ಬಾಲಾಜಿ ದರ್ಶನ ಟೂರ್ ಪ್ಯಾಕೇಜ್ ಆಯೋಜಿಸಿದೆ. ದಿನಾಂಕ, ಪ್ಯಾಕೇಜ್‌ನಲ್ಲಿ ನೋಡಬಹುದಾದ ದೇವಾಲಯಗಳು, ಟಿಕೆಟ್ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ತಿರುಪತಿ ಬಾಲಾಜಿ ದರ್ಶನ ಪ್ರವಾಸ; ದೇವಾಲಯಗಳ ವೀಕ್ಷಣೆ, ದಿನಾಂಕ, ಟಿಕೆಟ್ ವಿವರ ಹೀಗಿದೆ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ತಿರುಪತಿ ಬಾಲಾಜಿ ದರ್ಶನ ಪ್ರವಾಸ; ದೇವಾಲಯಗಳ ವೀಕ್ಷಣೆ, ದಿನಾಂಕ, ಟಿಕೆಟ್ ವಿವರ ಹೀಗಿದೆ

ನೆರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ (Tirupati Sri Venkateswara) ಬೇಡಿದ ವರಗಳನ್ನು ಕರುಣಿಸುವ ದೇವರು. ದಕ್ಷಿಣ ಭಾರತದ ಪ್ರಾಚೀನಾ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿಯ ತಿಮ್ಮಪ್ಪನ್ನು ದರ್ಶನಕ್ಕೆ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಭಕ್ತರು ಪ್ರತಿ ನಿತ್ಯ ಆಗಮಿಸುತ್ತಾರೆ. ತಿರುಪತಿಯಿಂದ ಘಾಟ್ ರಸ್ತೆಯಿಂದ ಹೊರಟರೆ 26 ಕಿಲೋ ಮೀಟರ್ ದೂರದಲ್ಲಿರುವ ಪೂರ್ವ ಘಟ್ಟಗಳಲ್ಲಿನ ಏಳು ಬೆಟ್ಟಗಳ ನಡುವೆ ಶ್ರೀ ವೆಂಕಟೇಶ್ವರನ ಪವಿತ್ರ ದೇವಾಲಯವಿದೆ.

ಎಲ್ಲವನ್ನು ಅನುಗ್ರಹಿಸುವ, ಇಷ್ಟಾರ್ಥಗಳನ್ನು ನೆರವೇರಿಸುವ ಶಕ್ತಿದಾತನೆಂದು ಭಕ್ತರು ನಂಬಿರುವ ತಿರುಪತಿಯ ಶ್ರೀ ವೆಂಕಟೇಶ್ವರ ದರ್ಶನ ಮಾಡಲು ನೀವೇನಾದರೂ ಪ್ಲಾನ್ ಮಾಡಿಕೊಂಡಿದ್ದರೆ ಐಆರ್‌ಸಿಟಿಸಿಯ ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಟೂರ್ ಪ್ಯಾಕೇಜ್ (Bengaluru Tirupati Balaji Darshan Tour Package) ನಿಮಗೆ ಉಪಯೋಗವಾಗಬಹುದು. ಈ ಪ್ಯಾಕೇಜ್‌ನಲ್ಲಿ ಏನೆಲ್ಲಾ ಇರುತ್ತೆ ಎಂಬುದರ ಮಾಹಿತಿ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ತಿರುಪತಿ ಬಾಲಾಜಿ ದರ್ಶನ ಟೂರ್ ಪ್ಯಾಕೇಜ್ ವಿವರ

ಪ್ಯಾಕೇಜ್ ಹೆಸರು: ಬೆಂಗಳೂರು ತಿರುಪತಿ ಬಾಲಾಜಿ ದರ್ಶನ

ನೋಡುವಂತ ಸ್ಥಳಗಳು: ತಿರುಚನೂರು ಮತ್ತು ತಿರುಮಲ

ಪ್ರಯಾಣದ ಮೋಡ್: ಮಲ್ಟಿ ಆಕ್ಸಲ್ ಎಸಿ ಬಸ್

ನಿರ್ಗಮನ ಸ್ಥಳ, ಸಮಯ: ಬೆಂಗಳೂರು ನಗರ, ರಾತ್ರಿ 9.30

ಆವರ್ತನ: ಪ್ರತಿದಿನ

ಈ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ 1,930 ರೂಪಾಯಿ ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ.

1 ರಾತ್ರಿ 2 ದಿನಗಳ ಬೆಂಗಳೂರು ತಿರುಪತಿ ಟೂರ್ ಪ್ಯಾಕೇಜ್ ಹೀಗಿರುತ್ತೆ

ಮೊದಲ ದಿನ: ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಡುವು

ಎರಡನೇ ದಿನ: ಮುಂಜಾನೆ 3.30ಕ್ಕೆ ತಿರುತಿಗೆ ಆಗಮನ, ಹೋಟೆಲ್‌ನಲ್ಲಿ ಫ್ರೆಶ್‌ಅಪ್ ಆಗುವುದು, ಬೆಳಗ್ಗೆ ತಿರುಚಾನೂರ್ ದೇವಸ್ಥಾನ ಭೇಟಿ, ಅಲಮೇಲು ಮಂಗಾಪುರದ ಪದ್ಮಾವತಿ ದೇವಿಯ ದರ್ಶನ. ಬೆಳಗ್ಗೆ 8 ಗಂಟೆ ಸುಮಾರಿಗೆ ತಿರುಪತಿಯಿಂದ ತಿರುಮಲ್ಕೆ ಲಿಂಕ್ ನಾನ್ ಎಸಿ ಬಸ್‌ನಲ್ಲಿ ಹೊರಡುವುದು.

ತಲೆ ಬೋಳಿಸಲು ಸ್ವಲ್ಪ ಸಮಯ ನೀಡಲಾಗುತ್ತೆ, ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ವೆಂಕಟೇಶ್ವರ ಶೀಘ್ರ ದರ್ಶನ ಮಾಡುವುದು, ನಂತರ ಲಡ್ಡು ಪ್ರಸಾದ ಸಂಗ್ರಹಿಸಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಿರುಪತಿಗೆ ವಾಪಸ್ ಆಗುವುದು.

ತಿರುಪತಿಯಿಂದ ಮಧ್ಯಾಹ್ನ 3.30 ರ ಸುಮಾರಿಗೆ ಹೊರಡುವುದು. ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರಿಗೆ ತಲುಪುವುದು. ಇಲ್ಲಿನ ಪ್ರವಾಸ ಕೊನೆಗೊಳುತ್ತದೆ. ಐಆರ್‌ಟಿಸಿ ಈ ರೀತಿಯ ಟೂರ್ ಪ್ಯಾಕೇಜ್‌ಗಳನ್ನು ಪ್ರತಿ ದಿನ ಆಯೋಜಿಸುತ್ತದೆ. ಒಂದು ವೇಳೆ ನಿಮಗೆ ಈ ಪ್ಯಾಕೇಜ್ ಇಷ್ಟವಾದರೆ ನೀವು ಕೂಡ ಬುಕ್ ಮಾಡಿಕೊಳ್ಳಬಹುದು.

ತಿರುಮಲಕ್ಕೆ ಭೇಟಿ ನೀಡುವ ಮುನ್ನ ಈ ವಿಷಯಗಳು ತಿಳಿದಿರಬೇಕು

ಇನ್ನ ತಿರುಪತಿಗೆ ಹೋಗಲು ಬಯಸುವ ಭಕ್ತರು ದೇವಾಲಯದಲ್ಲಿ ನಿಯಮಗಳನ್ನು ತಿಳಿದಿರಬೇಕು. ಎಲ್ಲಾ ಯಾತ್ರಿಕರು, ಪ್ರವಾಸಿಕರು ತಿರುಮಲದಲ್ಲಿ ದರ್ಶನಕ್ಕೆ ಮೊದಲು ತಮ್ಮ ವೈಯಕ್ತಿಕ ಗುರುತಿನ ಚೀಟಿಗಳನ್ನು ಒಯ್ಯಬೇಕು, ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದರೆ ಟಿಟಿಡಿ ಆಡಳಿತ ದರ್ಶನಕ್ಕೆ ಅನುಮತಿ ನೀಡುವುದಿಲ್ಲ.

ತಿಮ್ಮಪ್ಪನ ಸನ್ನಿಧಿಯಲ್ಲಿ ಡೆಸ್ ಕೋಡ್ ಇದ್ದು ಪುರುಷರು ಧೋತಿ (ಬಿಳಿ) ಮತ್ತು ಶರ್ಟ್ ಅಥವಾ ಕುರ್ತಾ ಮತ್ತು ಪೈಜಾಮಾ ಧರಿಸಬೇಕು. ಮಹಿಳೆಯರು ಸೀರೆ ಅಥವಾ ಸಲ್ವಾರ್ ಕಮೀಜ್ (ಪಲ್ಲು ಕಡ್ಡಾಯ) ಧರಿಸಬೇಕು. ತಿರುಮಲದಲ್ಲಿ ಟಿ-ಶರ್ಟ್, ಜೀನ್ಸ್ ಹಾಗೂ ಇತರೆ ಉಡುಪುಗಳನ್ನು ಧರಿಸದಂತೆ ವಿನಂತಿಸಲಾಗಿದೆ. ಯಾವುದೇ ವಯಸ್ಸಿನ ವರ್ಗವನ್ನು ಲೆಕ್ಕಿಸದೆ ಕಟ್ಟುನಿಟ್ಟಾಗಿ ನಿಷೇಧಿಸಾಗಿದೆ. ಈ ಟೂರ್ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ irctctourism.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)