IRCTC Package: ಒಂದೇ ಏಟಿಗೆ ದೆಹಲಿ, ಆಗ್ರಾ, ಜೈಪುರ ನೋಡುವ ಆಸೆಯಿದ್ದರೆ ಇದು ಕಡಿಮೆ ಖರ್ಚಿನ ಉತ್ತಮ ಆಯ್ಕೆ
IRCTC Package: ಪ್ರೇಮಸೌಧ ತಾಜ್ ಮಹಲ್, ಇಂಡಿಯಾ ಗೇಟ್, ಜೈಪುರದ ಗುಲಾಬಿ ಬಣ್ಣದ ನಗರದ ಸೌಂದರ್ಯ ನೋಡೋ ಕನಸು ನಿಮ್ಮದಾಗಿದ್ದರೆ, ಐಆರ್‌ಸಿಟಿಸಿಯ ಈ ಪ್ಯಾಕೇಜ್ ನೀವು ನೋಡಲೇ ಬೇಕು. ದೆಹಲಿ, ಆಗ್ರಾ ಜೈಪುರ ನೋಡಿಕೊಂಡು ಬನ್ನಿ.

ಉತ್ತರ ಭಾರತ ಪ್ರವಾಸ ದುಬಾರಿ ಎಂಬ ಯೋಚನೆ ಹಲವರಲ್ಲಿದೆ. ಅದರಲ್ಲೂ ಹೆಚ್ಚು ದಿನವೂ ಬೇಕು ಎಂಬ ಲೆಕ್ಕಾಚಾರ ಇನ್ನೊಂದು ಕಡೆ. ಉತ್ತರ ಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ದೆಹಲಿ, ಆಗ್ರಾ, ಜೈಪುರಕ್ಕೆ ಅಗ್ರಸ್ಥಾನ. ಆಗ್ರಾದಲ್ಲಿರುವ ಪ್ರೇಮಸೌಧ ತಾಜ್‌ಮಹಲ್, ಮೊಘಲ್ ಸಾಮ್ರಾಜ್ಯ ಮತ್ತು ರಜಪೂತ ರಾಜವಂಶದ ವಾಸ್ತುಶಿಲ್ಪವು ಪ್ರವಾಸಿಗರನ್ನು ಕರೆಯುತ್ತದೆ. ಇನ್ನೊಂದೆಡೆ ಪಿಂಕ್ ಸಿಟಿ ಜೈಪುರ ನೋಡಲೇಬೇಕಾದ ನಗರ. ನಿಮ್ಮ ಪ್ರವಾಸದ ಮೋಹಕ್ಕಾಗಿ ಐಆರ್‌ಸಿಟಿಸಿಯ (IRCTC Package) ಅತ್ಯುತ್ತಮ ಟೂರ್ ಪ್ಯಾಕೇಜ್‌ಗಳಿವೆ. ಕರ್ನಾಟಕದ ಜನರಿಗಾಗಿ ಬೆಂಗಳೂರಿನಿಂದ ಹೊರಟು ಮತ್ತೆ ಬೆಂಗಳೂರಿಗೆ ಬರುವ ದೆಹಲಿ -ಆಗ್ರಾ -ಜೈಪುರ ಪ್ರವಾಸ ಪ್ಯಾಕೇಜ್ ಆಯ್ಕೆ ಮಾಡಬಹುದು. ವಿವರಗಳು ಮುಂದಿವೆ.
ಪ್ರವಾಸದ ವಿವರ
- ಪ್ಯಾಕೇಜ್ ಹೆಸರು: ಗೋಲ್ಡನ್ ಟ್ರಯಾಂಗಲ್ ಚಾರ್ಟರ್ ಕೋಚ್ ಪ್ರವಾಸ ಪ್ಯಾಕೇಜ್ (Golden Triangle Charter Coach tour package Ex: Bengaluru)
- ಪ್ರವಾಸದ ಸ್ಥಳ: ದೆಹಲಿ-ಆಗ್ರಾ-ಜೈಪುರ
- ಪ್ರಯಾಣದ ವಿಧಾನ: ರೈಲು (ಹೋಗಲು 12649, ಬರಲು 12650)
- ವರ್ಗ: 3A
- ನಿರ್ಗಮನ ಸಮಯ ಮತ್ತು ರೈಲು ನಿಲ್ದಾಣ: ಯಶವಂತಪುರ ರೈಲು ನಿಲ್ದಾಣ (ಮಧ್ಯಾಹ್ನ 1:05 ಗಂಟೆಗೆ)
- ಯಾವಾಗ: ಮಾರ್ಚ್ 31, 2025
- ಅವಧಿ: 10 ರಾತ್ರಿ, 11 ದಿನ
ಪ್ಯಾಕೇಜ್ ವೆಚ್ಚ ಎಷ್ಟು?
10 ದಿನಗಳ ಪ್ರವಾಸಕ್ಕೆ ಒಬ್ಬರಿಗೆ 46,600 ರೂ ವೆಚ್ಚವಾಗಲಿದೆ. ಇಬ್ಬರು ಶೇರಿಂಗ್ ಆದರೆ, ತಲಾ 32,500 ರೂ ವೆಚ್ಚವಾಗಲಿದೆ. ಮೂರು ಜನರಿಗೆ ಶೇರಿಂಗ್ ತಲಾ 30,700 ರೂ ಆಗಲಿದೆ.
ಪ್ರವಾಸ ಹೇಗಿರಲಿದೆ?
ಮೊದಲ ದಿನ (31.03.2025) ರೈಲು ಸಂಖ್ಯೆ 12649ರಲ್ಲಿ ಮಧ್ಯಾಹ್ನ 1:05 ಗಂಟೆಗೆ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣದಿಂದ ನಿರ್ಗಮಿಸಿ ರಾತ್ರಿಪೂರ್ತಿ ರೈಲು ಪ್ರಯಾಣ ಇರಲಿದೆ. ಎರಡನೇ ದಿನ ಹಗಲು ಪೂರ್ತಿ ಮತ್ತು ರಾತ್ರಿ ರೈಲು ಪ್ರಯಾಣ ಇರಲಿದೆ.
ಮೂರನೇ ದಿನ ( 02.04.2025) ಬೆಳಗ್ಗೆ 08:10 ಗಂಟೆಗೆ ದೆಹಲಿಯ ಎಚ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ರೈಲು ತಲುಪುತ್ತದೆ. ಅಲ್ಲಿಂದ ಹೋಟೆಲ್‌ಗೆ ಕರೆದೊಯ್ಯಲಾಗುತ್ತದೆ. ಫ್ರೆಶ್ ಅಪ್ ಆದ ನಂತರ ದೆಹಲಿಯ ಸ್ಥಳೀಯ ದೃಶ್ಯವೀಕ್ಷಣೆಗೆ ಅವಕಾಶ. ಐತಿಹಾಸಿಕ ಕುತುಬ್ ಮಿನಾರ್, ಕಮಲ ದೇವಾಲಯ, ಅಕ್ಷರಧಾಮವನ್ನು ವೀಕ್ಷಿಸಬಹುದು. ರಾತ್ರಿ ದೆಹಲಿಯಲ್ಲಿ ವಾಸ್ತವ್ಯ ಇರಲಿದೆ.
ನಾಲ್ಕನೇ ದಿನ (03.04.2025) ಐತಿಹಾಸಿಕ ಕೆಂಪು ಕೋಟೆ, ರಾಜ್ ಘಾಟ್, ತೀನ್ ಮೂರ್ತಿ ಭವನ, ಇಂಡಿಯಾ ಗೇಟ್ ನೋಡಬಹುದು. ಮತ್ತೆ ದೆಹಲಿಯಲ್ಲಿ ರಾತ್ರಿ ವಾಸ್ತವ್ಯ.
ಐದನೇ ದಿನ (04.04.2025) ಚೆಕ್ ಔಟ್ ಮಾಡಿ ಜೈಪುರಕ್ಕೆ ಪ್ರಯಾಣ. ಜೈಪುರ ತಲುಪಿದ ನಂತರ ಹೋಟೆಲ್‌ನಲ್ಲಿ ಚೆಕ್ ಇನ್ ಆಗಿ ಹವಾ ಮಹಲ್‌ಗೆ ಭೇಟಿ. ಇಲ್ಲಿ ಶಾಪಿಂಗ್ ಮಾಡಿಕೊಂಡು ರಾತ್ರಿ ಜೈಪುರದಲ್ಲಿ ವಾಸ್ತವ್ಯ.
ಆರನೇ ದಿನ 06 (05.04.2025) ಅಮೇರ್ ಕೋಟೆ, ಸಿಟಿ ಪ್ಯಾಲೇಸ್, ಜಂತರ್ ಮಂತರ್‌ಗೆ ಭೇಟಿ ನೀಡಿ. ಜೈಪುರದಲ್ಲಿ ರಾತ್ರಿ ವಾಸ್ತವ್ಯ.
ಏಳನೇ ದಿನ (06.04.2025) ಚೆಕ್ ಔಟ್ ಮಾಡಿ ಆಗ್ರಾಗೆ ಪ್ರಯಾಣ. ಮಾರ್ಗಮಧ್ಯೆ ಫತೇಪುರ್ ಸಿಕ್ರಿಗೆ ಭೇಟಿ ನೀಡಿ. ಆಗ್ರಾ ತಲುಪಿದ ನಂತರ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ. ಆಗ್ರಾದಲ್ಲಿ ರಾತ್ರಿ ವಾಸ್ತವ್ಯ.
ಎಂಟನೇ ದಿನ (07.04.2025) ಬೆಳಗ್ಗೆ ತಾಜ್ ಮಹಲ್‌ಗೆ ಭೇಟಿ ನೀಡಿ. ಚೆಕ್ ಔಟ್ ಮಾಡಿ ಆಗ್ರಾ ಕೋಟೆಗೆ ಭೇಟಿ. ಅಲ್ಲಿಂದ ದೆಹಲಿಗೆ ತೆರಳಿ ಹೋಟೆಲ್‌ಗೆ ತೆರಳಿ ರಾತ್ರಿ ವಾಸ್ತವ್ಯ.
ಒಂಬತ್ತನೇ ದಿನ (08.04.2025) ಬೆಳಗಿನ ಉಪಾಹಾರದ ನಂತರ ಮುಂಜಾನೆ, ಎಚ್ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ರೈಲು ಹತ್ತಬೇಕು. 12650 ರೈಲು ಬೆಳಗ್ಗೆ 08.20ಕ್ಕೆ ಹೊರಡುತ್ತದೆ. ಹತ್ತನೇ ದಿನ ಪೂರ್ತಿ ರೈಲು ಪ್ರಯಾಣ ಇರಲಿದೆ. 11ನೇ ದಿನ ಬೆಳಗ್ಗೆ 04.30 ಗಂಟೆಯೊಳಗೆ ಯಶವಂತಪುರ ಜಂಕ್ಷನ್‌ಗೆ ರೈಲು ತಲುಪಲಿದೆ. ಅಲ್ಲಿಗೆ ಪ್ರಯಾಣ ಮುಗಿಯಲಿದೆ. ಪ್ರವಾಸ ಕುರಿತ ಹೆಚ್ಚಿನ ವಿವರಗಳಿಗೆ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
