Dosa Batter: ದೋಸೆ ಹಿಟ್ಟು ತುಂಬಾ ಹುಳಿಯಾಗಿದ್ಯಾ? ಹಾಗಾದ್ರೆ ಹುಳಿ ಅಂಶ ಕಡಿಮೆ ಮಾಡಲು ಇವುಗಳನ್ನು ಬಳಸಿ
Dosa Batter: ನೀವು ದೋಸೆಗೆ ಹಿಟ್ಟು ಹುಳಿ ಬರಲಿ ಎಂದು ಸೋಡಾ ಅಥವಾ ಮೊಸರನ್ನು ಹಾಕಿ ಅದು ತಿನ್ನಲಾಗದಷ್ಟು ಹುಳಿಯಾಗಿದ್ದರೆ ಅದಕ್ಕೆ ಈ ರೀತಿ ಮಾಡಿ. ನಾವಿಲ್ಲಿ ನೀಡಿದ ಕೆಲವು ಟಿಫ್ಸ್ ಕಂಡಿತ ನಿಮ್ಮ ಪ್ರಯೋಜನಕ್ಕೆ ಬರುತ್ತದೆ. ಟ್ರೈ ಮಾಡಿ ನೋಡಿ.
ಆರೋಗ್ಯಕರ ಉಪಹಾರಕ್ಕಾಗಿ ಇಡ್ಲಿಗಳು ಮತ್ತು ದೋಸೆಗಳನ್ನು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತದೆ. ನೀವು ಕೂಡ ಇದೇ ರೀತಿ ದಿನವೂ ದೋಸೆ ಮಾಡುವವರಾಗಿದ್ದರೆ ಒಮ್ಮೆ ಇದನ್ನು ಓದಿ. ಅಥವಾ ಆಫೀಸ್‌ನಲ್ಲಿ ಕೆಲಸ ಜಾಸ್ತಿ ಎಂದು ಒಂದೇ ದಿನ ಹಿಟ್ಟು ರೆಡಿ ಮಾಡಿ ವಾರ ಪೂರ್ತಿ ಬಳಕೆ ಮಾಡುವವರು ಇದನ್ನು ಓದಲೇಬೇಕು. ಮಕ್ಕಳಿಂದ ದೊಡ್ಡವರವರೆಗೂ ಇಡ್ಲಿ ಮತ್ತು ದೋಸೆ ತಿನ್ನಲು ಇಷ್ಟಪಡುತ್ತಾರೆ. ಎಷ್ಟೋ ಜನ ಇದನ್ನೇ ಲಂಚ್ ಬಾಕ್ಸ್‌ಗೂ ಪ್ಯಾಕ್ ಮಾಡಿ ಕೊಡುತ್ತಾರೆ. ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ. ಬೆಳಗ್ಗೆ ಮಕ್ಕಳಿಗೆ ಶಾಲೆಯ ಊಟವನ್ನು ತಯಾರಿಸುವಾಗ ದೋಸೆ ಹಿಟ್ಟು ಹೆಚ್ಚಾಗಿ ಹುಳಿ ಬಂದಿದ್ದರೆ ಈ ವಿಧಾನವನ್ನು ಪಾಲಿಸಿ.
ತೆಂಗಿನ ಹಾಲು
ಹಿಟ್ಟು ಹುಳಿಯಾದರೆ ಅದಕ್ಕೆ ತೆಂಗಿನ ಹಾಲು ಅಥವಾ ತೆಂಗಿನಕಾಯಿ ಪುಡಿಯನ್ನು ಸೇರಿಸಿ. ಹೀಗೆ ಮಾಡುವುದರಿಂದ ಹಿಟ್ಟಿನ ಹುಳಿ ನಿವಾರಣೆಯಾಗುತ್ತದೆ.
ಶುಂಠಿ ಪೇಸ್ಟ್
ದೋಸೆ ಹಿಟ್ಟು ರುಚಿಯಲ್ಲಿ ಸ್ವಲ್ಪ ಹುಳಿಯಾಗಿದ್ದರೆ, ಅದಕ್ಕೆ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಬಹುದು. ಸ್ವಲ್ಪ ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ. ಅದರ ನಂತರ, ಈ ಪೇಸ್ಟ್ ಅನ್ನು ಹಿಟ್ಟಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಸ್ವಲ್ಪ ಉಪ್ಪನ್ನೂ ಸೇರಿಸಿ. ಹೀಗೆ ಮಾಡಿದರೆ ಖಂಡಿತ ಹುಳಿ ಕಡಿಮೆ ಆಗುತ್ತದೆ.
ಅಕ್ಕಿ ಹಿಟ್ಟು ಅಥವಾ ಉಪ್ಮಾ ರವಾ
ದೋಸೆ ಹಿಟ್ಟಿಗೆ ಸ್ವಲ್ಪ ಅಕ್ಕಿಹಿಟ್ಟು ಅಥವಾ ಉಪ್ಮಾರವ್ವ ಅಥವಾ ಇಡ್ಲಿ ರವ ಹಾಕುವುದರಿಂದ ಹಿಟ್ಟಿನ ಹುಳಿಯೂ ಕಡಿಮೆಯಾಗುತ್ತದೆ. ಹಿಟ್ಟಿನ ಪ್ರಮಾಣವೂ ಹೆಚ್ಚಾಗುತ್ತದೆ. ಈ ಹಿಟ್ಟನ್ನು ಇನ್ನೊಂದು ದಿನದವರೆಗೆ ಯೂಸ್ ಮಾಡಬಹುದು. ಅಕ್ಕಿ ಹಿಟ್ಟು ಅಥವಾ ರವೆಗೆ ಎಷ್ಟು ಅಗತ್ಯವಿದೆಯೋ ಅಷ್ಟು ನೀರನ್ನೂ ಇದರ ಜೊತೆ ಸೇರಿಸಬೇಕು.
ಇಡ್ಲಿ ಮತ್ತು ದೋಸೆಯ ಹಿಟ್ಟು ಹುಳಿಯಾಗದಂತೆ ತಡೆಯಲು ಕೆಲವು ಮುನ್ನೆಚ್ಚರಿಕೆಗಳನ್ನು ಮೊದಲೇ ತೆಗೆದುಕೊಳ್ಳಬಹುದಾಗಿದೆ. ಹಿಟ್ಟನ್ನು ಕೋಣೆಯ ಉಷ್ಣಾಂಶದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಇರಿಸಿದರೆ ಹದವಾಗಿ ಹುಳಿಯಾಗುತ್ತದೆ. ಅದಕ್ಕಿಂತ ಹೆಚ್ಚಿನ ಹೊತ್ತು ಅದನ್ನು ಇಡಬಾರದು. ಹೀಗೆ ಮಾಡಿದರೆ ಹುಳಿ ಆಗುವುದಿಲ್ಲ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಸರು ಅಥವಾ ಬೇಕಿಂಗ್ ಸೋಡಾ ಸೇರಿಸಬೇಡಿ. ಇದು ಕೂಡ ನಿಮಗೆ ಹುಳಿ ಹೆಚ್ಚು ಮಾಡುವ ಅಂಶವಾಗಿದೆ.
ನೀವು ಮುಖ್ಯವಾಗಿ ಇದರ ಹದವನ್ನು ಕಂಡುಕೊಳ್ಳಬೇಕು. ಇಲ್ಲವಾದರೆ ದೋಸೆ ಸರಿಯಾಗಿ ಆಗುವುದಿಲ್ಲ. ತುಂಬಾ ಹುಳಿ ಬಂದ ದೋಸೆಯನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮವೂ ಅಲ್ಲ.