ಕನ್ನಡ ಸುದ್ದಿ  /  Lifestyle  /  Isha Mahashivratri 2024 Devotees Can Book Ticket Who Wants To Participate Shivaratri Celebration In Isha Foundation Rsm

Isha Mahashivratri 2024: ಇಶಾ ಫೌಂಡೇಷನ್‌ನಲ್ಲಿ ನಡೆವ ಮಹಾ ಶಿವರಾತ್ರಿ ಆಚರಣೆಯಲ್ಲಿ ಪಾಲ್ಗೊಳ್ಳಬೇಕಾ? ಟಿಕೆಟ್‌ ದರ, ಇನ್ನಿತರ ವಿವರ ಹೀಗಿದೆ

Isha Mahashivratri 2024: ಎಂದಿನಂತೆ ಈ ಬಾರಿ ಕೂಡಾ ತಮಿಳುನಾಡಿನ ಕೊಯಂಬತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಶಿವರಾತ್ರಿ ಆಚರಣೆ ಜರುಗುತ್ತಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವ ಭಕ್ತರು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಬಹುದಾಗಿದೆ.

ಇಶಾ ಫೌಂಡೇಶನ್‌ನಲ್ಲಿ ಮಹಾ ಶಿವರಾತ್ರಿ ಆಚರಣೆ
ಇಶಾ ಫೌಂಡೇಶನ್‌ನಲ್ಲಿ ಮಹಾ ಶಿವರಾತ್ರಿ ಆಚರಣೆ (PC: Isha Foundation Facebook)

Isha Mahashivratri 2024: ಶಿವರಾತ್ರಿ ಹತ್ತಿರ ಬರುತ್ತಿದೆ. ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆಚರಿಸುವ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಕೂಡಾ ಒಂದು. ಈ ವರ್ಷ ಮಾರ್ಚ್‌ 8ರಂದು ಶಿವರಾತ್ರಿ ಆಚರಿಸಲಾಗುತ್ತಿದೆ. ದೇಶಾದ್ಯಂತ ಶಂಕರನನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುವುದು. ಈಗಾಗಲೇ ಮಹಾ ಶಿವರಾತ್ರಿ ಆಚರಿಸಲು ಎಲ್ಲೆಡೆ ಸಿದ್ದತೆ ನಡೆಯುತ್ತಿದೆ.

ಶಿವರಾತ್ರಿಯಂದು ಭಕ್ತರು ಉಪವಾಸ ಇದ್ದು, ಜಾಗರಣೆ ಮಾಡಿ, ಸಮೀಪದಲ್ಲಿರುವ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸುತ್ತಾರೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ಸಾಮಾನ್ಯವಾಗಿ ಪ್ರತಿವರ್ಷ ಮಾಘ ಅಥವಾ ಫಲ್ಗುಣ ಮಾಸದ 14ನೇ ದಿನದಂದು ಆಚರಿಸಲಾಗುವುದು. ಆದರೆ ಈ ಬಾರಿ ಮಾರ್ಚ್‌ 8, ಶುಕ್ರವಾರ ಶಿವರಾತ್ರಿ ಆಚರಿಸಲಾಗುತ್ತಿದೆ.

ಇಶಾ ಫೌಂಡೇಷನ್‌ನಲ್ಲಿ ಮಹಾ ಶಿವರಾತ್ರಿ ಆಚರಣೆ

ಸದ್ಗುರು ಅವರ ಇಶಾ ಫೌಂಡೇಷನ್‌ನಲ್ಲಿ ಪ್ರತಿ ವರ್ಷವೂ ಸಾವಿರಾರು ಭಕ್ತರು ಶಿವರಾತ್ರಿ ಆಚರಿಸಲು ಸೇರುತ್ತಾರೆ. ಸ್ವತ: ಸದ್ಗುರು ಜಗ್ಗಿ ವಾಸುದೇವ ಮುಂದೆ ನಿಂತು ಶಿವರಾತ್ರಿ ಆಚರಣೆ ಮಾಡುತ್ತಾರೆ. ಸಿನಿಮಾ ತಾರೆಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಧ್ಯಾನ, ಡ್ಯಾನ್ಸ್‌, ಸಂಗೀತ ಕಾರ್ಯಕ್ರಮಗಳಿರುತ್ತವೆ. ವಿವಿಧ ಡ್ಯಾನ್ಸ್‌ ಗ್ರೂಪ್‌, ಮ್ಯೂಸಿಕ್‌ ಬ್ರಾಂಡ್‌, ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಮಹಾ ಶಿವರಾತ್ರಿ ಆಚರಣೆಯ ಸಮಯ, ಸ್ಥಳ

ಮಾರ್ಚ್‌ 8 ಶುಕ್ರವಾರದಂದು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಇಶಾ ಯೋಗ ಸೆಂಟರ್‌ನಲ್ಲಿ ಈ ಬಾರಿಯ ಶಿವರಾತ್ರಿಯನ್ನು ಆಚರಿಸಲಾಗುವುದು. 3 ವರ್ಷಗಳ ಹಿಂದೆ ಕನ್ನಡ ಗಾಯಕಿ ಅನನ್ಯಾ ಭಟ್‌ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸೋಜುಗಾದ ಸೂಜುಮಲ್ಲಿಗೆ ಹಾಡನ್ನು ಹಾಡುವ ಮೂಲಕ ಕೇಳುಗರ ಗಮನ ಸೆಳೆದಿದ್ದರು.

ಇಶಾ ಫೌಂಡೇಶನ್‌ನಲ್ಲಿ ಆಚರಿಸುವ ಶಿವರಾತ್ರಿ ಆಚರಣೆಯಲ್ಲಿ ಭಾಗಿಯಾಗಬೇಕು ಎಂದು ಬಯಸುವ ಭಕ್ತರು, ಇಶಾ ಯೋಗ ಸೆಂಟರ್‌ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಬಹುದಾಗಿದೆ. ಮಾರ್ಚ್‌ 4ವರೆಗೆ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯವಿದೆ. ಇಶಾ ಫೌಂಡೇಶನ್‌ ಆವರಣದಲ್ಲೇ ವಸತಿ ಸೌಲಭ್ಯವಿದ್ದು ಕಾರ್ಯಕ್ರಮಕ್ಕೆ ಹೋಗ ಬಯಸುವವರು ತಡ ಮಾಡದೆ ಬುಕ್‌ ಮಾಡಿ. ಟಿಕೆಟ್‌ ವಿವಿಧ ರೀತಿ ಲಭ್ಯವಿದೆ. ನೀವು ಡಯಾಸ್‌ ಮುಂಭಾಗದಲ್ಲಿ ಕುಳಿತುಕೊಳ್ಳಬೇಕು ಎಂದರೆ ಒಬ್ಬರಿಗೆ 50 ಸಾವಿರ ರೂ ನೀಡಬೇಕು. ಗಂಗಾ, ಬ್ರಹ್ಮಪುತ್ರ, ಗೋದಾವರಿ, ಕಾವೇರಿ, ತಾಪಿ ಸೀಟ್‌ಗಳಿಗೆ ಒಂದೊಂದು ದರ ನಿಗದಿಯಾಗಿದ್ದು ತಾಮಿತಬರಣಿಗೆ ಯಾವುದೇ ಶುಲ್ಕವಿಲ್ಲ. ಆದರೆ ವೇದಿಕೆಯಿಂದ ದೂರ ಇರಬೇಕು.

ಆನ್‌ಲೈನ್‌ನಲ್ಲಿ ಸೀಟು ಕಾಯ್ದಿರಿಸಲು https://isha.sadhguru.org/mahashivratri/. ವೆಬ್‌ಸೈಟ್‌ಗೆ ಭೇಟಿ ನೀಡಿ.