Japan News: ನಾಯಿಯಾಗಿ ಪರಿವರ್ತನೆಯಾಗಲು 11 ಲಕ್ಷ ರೂಪಾಯಿ ಖರ್ಚು ಮಾಡಿದ ಜಪಾನ್ ವ್ಯಕ್ತಿ; ಈತನ ಬದುಕಲ್ಲಿ ಮುಂದೇನಾಯ್ತು?
ಕನ್ನಡ ಸುದ್ದಿ  /  ಜೀವನಶೈಲಿ  /  Japan News: ನಾಯಿಯಾಗಿ ಪರಿವರ್ತನೆಯಾಗಲು 11 ಲಕ್ಷ ರೂಪಾಯಿ ಖರ್ಚು ಮಾಡಿದ ಜಪಾನ್ ವ್ಯಕ್ತಿ; ಈತನ ಬದುಕಲ್ಲಿ ಮುಂದೇನಾಯ್ತು?

Japan News: ನಾಯಿಯಾಗಿ ಪರಿವರ್ತನೆಯಾಗಲು 11 ಲಕ್ಷ ರೂಪಾಯಿ ಖರ್ಚು ಮಾಡಿದ ಜಪಾನ್ ವ್ಯಕ್ತಿ; ಈತನ ಬದುಕಲ್ಲಿ ಮುಂದೇನಾಯ್ತು?

ಜಪಾನ್‌ನಲ್ಲಿ ವ್ಯಕ್ತಿಯೊಬ್ಬ 11 ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಪರಿವರ್ತನೆ ಆಗಿದ್ದಾರೆ. ಇದೀಗ ಈತ ನಡೆಯುವ ಶೈಲಿ, ಆಹಾರದ ಪದ್ದತಿ ಸೇರಿ ಜೀವನ ಶೈಲಿಯೇ ಶ್ವಾನದಂತೆ ಬದಲಾಗಿದೆ.

ಜಪಾನ್‌ನಲ್ಲಿ ನಾಯಿಯಾಗಿ ಪರಿವರ್ತನೆಯಾಗಿರುವ ವ್ಯಕ್ತಿ. ಈತನ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ.
ಜಪಾನ್‌ನಲ್ಲಿ ನಾಯಿಯಾಗಿ ಪರಿವರ್ತನೆಯಾಗಿರುವ ವ್ಯಕ್ತಿ. ಈತನ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿದೆ.

ಟೋಕಿಯೋ (ಜಪಾನ್): Man transform into dog ಜಪಾನ್‌ನ ವ್ಯಕ್ತಿಯೊಬ್ಬರು ಬರೋಬ್ಬರಿ 11 ಲಕ್ಷ ರೂಪಾಯಿ ಖರ್ಚು ಮಾಡಿ ತನ್ನನ್ನು ನಾಯಿಯಂತೆ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಟೊಕೊ ಎಂದು ಕರೆಯಲ್ಪಡುವ ಈತ ಇದೀಗ ಎಲ್ಲರ ಆಕರ್ಷಣೆಯಾಗಿದ್ದಾರೆ.

ಸದ್ಯ ಟೊಕೊ ತನ್ನ ದೈನಂದಿನ ಜೀವನವನ್ನು ಹೇಗೆ ನಡೆಸುತ್ತಿರಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತೆ. ಈತ ತಿನ್ನುವ ಆಹಾರ, ಆಟ ಹೀಗೆ ಎಲ್ಲವೂ ಬದಲಾಗಿದೆ. ಟೊಕೊ ಜೀವನಶೈಲಿಯ ಕುರಿತ ಈ ವಿಡಿಯೋವನ್ನು ನೋಡಿ.

ಜರ್ಮನಿಯ ಟಿವಿ ಚಾನೆಲ್‌ವೊಂದರ ಸಂದರ್ಶನಕ್ಕಾಗಿ ಚಿತ್ರೀಕರಿಸಿರುವ ಈ ವಿಡಿಯೊ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾರ್ಕ್‌ವೊಂದರ ಬಳಿ ಟೊಕೊ ಪಲ್ಟಿ ಹಾಕುವುದು, ನಡೆದಾಡುವುದನ್ನು ಗಮನಿಸಿದ ಇತರೆ ಶ್ವಾನಗಳು ವಿಚಿತ್ರವಾಗಿ ನೋಡುತ್ತಿವೆ. ನಾಯಿಯ ವೇಷದಲ್ಲಿರುವುದು ಮನುಷ್ಯ ಎಂದು ಗುರುತಿಸಲು ಪಾರ್ಕ್ ಬಳಿಯ ಪಾದಾಚಾರಿಗಳು ಹರಸಾಹಸ ಪಟ್ಟಿದ್ದಾರೆ.

ಒಂದು ವರ್ಷದ ಹಿಂದೆ ಟೊಕೊ ಪಕ್ಕಾ ನಾಯಿಯಂತೆ ಕಾಣುವ ಸೂಟ್ ಧರಿಸಿ ಕೋಲಿಯಾಗಿ ಮಾರ್ಪಟ್ಟ ಮಾನವ ಎಂದು ಪರಿಚಯಿಸಲಾಗಿತ್ತು. ಅಂದಿನಿಂದ ನಾಯಿಯಂತೆ ಇರುವ ತಮ್ಮ ದೈನಂದಿನ ದಿನಚರಿಯ ಬಗ್ಗೆ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಟೊಕೊ ಟೇಬಲ್ ಟೆನ್ನಿಸ್ ಆಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕಾಲಿಗೆ ಪ್ಯಾಡಲ್ ಕಟ್ಟಿರುವುದನ್ನು ಗಮನಿಸಬಹುದು. ಚೆಂಡನ್ನ ಹೊಡೆಯಲಾಗದ ಹರಸಾಹಸ ಪಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ವರ್ಷದಿಂದ ಹಿಂದಿನ ವಿಡಿಯೊಗೆ 99 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮತ್ತೊಂದು ವಿಡಿಯೊದಲ್ಲಿ ಮನೆಗೆ ಹೋಗಲು ಮೊದಲು ನಾಲ್ಕೈದು ಸ್ಟೆಪ್ಸ್ ಹತ್ತಿದ ಬಳಿಕ ಲಿಫ್ಟ್‌ಗಾಗಿ ತಾಳ್ಮೆಯಿಂದ ಕಾದು ಲಿಫ್ಟ್‌ನಲ್ಲಿ ಹೋಗುವುದನ್ನು ನೋಡಬಹುದು. ಹೊರಗಡೆ ಹೋಗುವಾಗ ಟೊಕೊ ನಡಿಗೆ ಹಲವನ್ನು ನಿಬ್ಬೆರಗಾಗುವಂತೆ ಮಾಡಿದೆ. ನಾಯಿಯಂತೆ ವೇಷ ತೊಟ್ಟಿರುವ ಈತನ ವಿಡಿಯೊಗಳು ಗಮನ ಸೆಳೆಯುತ್ತಿವೆ.

Whats_app_banner