Job in Bengaluru: ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ, ಖಾಲಿ ಇದೆ 39 ಹುದ್ದೆ; ಪಿಯುಸಿ ಪಾಸಾದವರೂ ಹಾಕಿ ಅರ್ಜಿ
KSSFCL Recruitment 2024: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (KSSFCL) ಖಾಲಿ ಇರುವ 39 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸೆಪ್ಟೆಂಬರ್ 9 ಆಗಿದೆ.
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ಹೌದು, ಖಾಲಿ ಇರುವ 39 ಹುದ್ದೆಗಳ ಭರ್ತಿಗೆ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (KSSFCL) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 9ರಂದು ಕೊನೆಯ ದಿನಾಂಕವಾಗಿದೆ. ಹಾಗಿದ್ದರೆ, ವಿದ್ಯಾರ್ಹತೆ, ವೇತನ, ಅರ್ಜಿ ಸಲ್ಲಿಸುವುದೇಗೆ? ಈ ಎಲ್ಲದರ ಮಾಹಿತಿ ಮುಂದಿನಂತಿದೆ.
ಕೆಎಸ್ಎಸ್ಎಫ್ಸಿಎಲ್ ಒಟ್ಟು ಜೂನಿಯರ್ ಅಸಿಸ್ಟೆಂಟ್ ಡ್ರೈವರ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ವಯಸ್ಸಿನ ಮಿತಿ 30 ರಿಂದ 35 ವರ್ಷದೊಳಗೆ. ಕೆಲಸ ಮಾಡುವ ಸ್ಥಳ ಬೆಂಗಳೂರು. ಇಲ್ಲಿ ವೇತನವು ಆಯಾ ಪೋಸ್ಟ್ಗೆ ತಕ್ಕಂತೆ ಇರುತ್ತದೆ. ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸ ಬಯಸುವವರ ಜಾತಿ ಮೀಸಲಾತಿ ಅನುಸಾರವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿದ್ಯಾರ್ಹತೆ ಏನಿರಬೇಕು?
ಸಂಸ್ಥೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಎಚ್‌ಆರ್ ಆಫೀಸರ್, ಲಾ ಆಫೀಸರ್, ಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್, ಟ್ರೈನಿಂಗ್ ಆಫೀಸರ್, ಅಸಿಸ್ಟೆಂಟ್ ಹೀಗೆ ಒಟ್ಟು 39 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿಎ, ಸಿಎಸ್, ICWA, ಎಚ್‌ಆರ್, ಎಲ್ಎಲ್ಬಿ, ಎಂಎ, ಎಂಬಿಎ, ಎಂಎಸ್‌ಡಬ್ಲು, ಪದವಿ, ಪಿಯುಸಿ ಉತ್ತೀರ್ಣವಾಗಿರಬೇಕು.
ಯಾವ ಹುದ್ದೆಗೆಷ್ಟು ವೇತನ?
ಟ್ರೈನಿಂಗ್ ಆಫೀಸರ್ - 35,000-38,000 ರೂಪಾಯಿ
ಫ್ರೆಂಡ್ಲಿ ಡೆವಲಪ್ಮೆಂಟ್ ಆಫೀಸರ್ - 28,000-30,000 ರೂಪಾಯಿ
ಚಾರ್ಟರ್ಡ್ ಅಕೌಂಟೆಂಟ್ - 60,000-70,000 ರೂಪಾಯಿ
ಅಸಿಸ್ಟೆಂಟ್ - 20,000-22,000 ರೂಪಾಯಿ
ಎಚ್ ಆಫೀಸರ್ - 35,000-38,000 ರೂಪಾಯಿ
ಜೂನಿಯರ್ ಅಸಿಸ್ಟೆಂಟ್ - 13,000-15,000 ರೂಪಾಯಿ
ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಆಫೀಸರ್ - 13,000-15,000 ರೂಪಾಯಿ
ಲಾ ಆಫೀಸರ್ - 35,000-38,000 ರೂಪಾಯಿ
ಟೈಪಿಸ್ಟ್ ಮತ್ತು ಸ್ಟೆನೋ - 20,000-22,000 ರೂಪಾಯಿ
ಯಾರಿಗೆಷ್ಟು ಅರ್ಜಿ ಶುಲ್ಕ?
ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ 300 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಶುಲ್ಕ 500 ರೂಪಾಯಿ ನಿಗದಿಪಡಿಸಲಾಗಿದೆ. ಆದರೆ ಈ ಹಣವನ್ನು ನೀವು ಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ?
ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಇಲ್ಲಿ ಆಯ್ಕೆಯಾದವರನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೂಡಲೇ ದಾಖಲೆಗಳ ಸಮೇತ 'ಸೌಹಾರ್ದ ಸಹಕಾರಿ ಸೌಧ', #68, ಮೊದಲನೇ ಮಹಡಿ, 18ನೇ ಅಡ್ಡ ರಸ್ತೆ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055 ಇಲ್ಲಿಗೆ ಕಳುಹಿಸಬೇಕು.