ಇಷ್ಟು ಬೇಗ ಮದುವೆ ಆಗ್ತಿರೋ ಬಗ್ಗೆ ಪ್ರಶ್ನೆ ಬಂದಿತ್ತು: ಜೊತೆ ಜೊತೆಯಲಿ ನಟಿ ಮಾನಸಾ ಮನೋಹರ್, ಪತಿ ಪ್ರೀತಂ ಸಂದರ್ಶನ
‘ಜೊತೆ ಜೊತೆಯಲಿʼ, ‘ಲಕ್ಷ್ಮೀ ನಿವಾಸʼಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಮೊದಲ ಬಾರಿ ಪತಿ ಪ್ರೀತಂ ಜೊತೆಗೆPanchami Talksಯೂಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ನೀಡಿದ್ದಾರೆ. – ಸಂದರ್ಶನ ಪದ್ಮಶ್ರೀ ಭಟ್
‘ಜೊತೆ ಜೊತೆಯಲಿʼ, ‘ಲಕ್ಷ್ಮೀ ನಿವಾಸʼ ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಇವರ ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಪ್ರೀತಂ ಅವರ ಫಾರ್ಮ್‌ಹೌಸ್‌ನಲ್ಲಿ ಈ ಮದುವೆ ನಡೆದಿದೆ. ಮಾನಸಾ ಅವರ ಪತಿ ಪ್ರೀತಂ ಅವರು ಫುಟ್‌ಬಾಲ್ ಅಕಾಡೆಮಿ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಆಗಿದೆ. ಮೀಟ್ ಆಗಿ ಹದಿನೈದು ದಿನಕ್ಕೆ ಈ ಜೋಡಿ ಮದುವೆ ಆಗಬೇಕು ಅಂತ ಫಿಕ್ಸ್ ಆಗಿದೆ. ಆಮೇಲೆ ಇವರಿಬ್ಬರು ಕುಟುಂಬವನ್ನು ಒಪ್ಪಿಸಿ ಮದುವೆಯಾಗಿದ್ದಾರೆ.
Manifestation ಮಾಡಿದೆ
“ನನಗೆ ಮಾನಸಾ ಅವರು ನಟಿ ಅನ್ನೋದು ಗೊತ್ತಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ನೋಡಿ ಮೆಸೇಜ್ ಮಾಡಿದೆ. ಆಮೇಲೆ ಅವರು ರಿಪ್ಲೇ ಮಾಡಿದರು. ನಾನು ಕನ್ನಡ ಧಾರಾವಾಹಿಗಳನ್ನು ಅಷ್ಟಾಗಿ ನೋಡಲ್ಲ, ಆದರೆ ಸಿನಿಮಾ ನೋಡ್ತೀನಿ. ನಾನು ಕಾಮನ್ ಮ್ಯಾನ್, ನನ್ನ ಮೆಸೇಜ್ ಅವರಿಗೆ ತಲುಪುತ್ತೋ ಇಲ್ಲವೋ ಎನ್ನುವ ಭಯ ಇತ್ತು. ಆದರೆ, ಅವರು ಮೆಸೇಜ್ ನೋಡಿ ರಿಪ್ಲೇ ಮಾಡಿದರು. ನಾನು ಮೊದಲು ಮಾನಸಾ ಅವರನ್ನು ದೇವಸ್ಥಾನದಲ್ಲಿ ಭೇಟಿ ಮಾಡಿದೆ. ನಾನು Manifestation ಮಾಡಿದೆ, ನನಗೆ ಇದರಲ್ಲಿ ತುಂಬ ನಂಬಿಕೆ ಇದೆ” ಎಂದು ಮಾನಸಾ ಮನೋಹರ್ ಅವರ ಪತಿ ಪ್ರೀತಂ ಹೇಳಿದ್ದಾರೆ.
ಪರಿಚಯ ಹೇಗೆ ಆಯ್ತು?
“ನಾವು ಯಾವುದೇ ಒಂದನ್ನು ತುಂಬ ಇಷ್ಟಪಟ್ಟರೆ ಅದನ್ನು ಪಡೆಯಲು ನಮಗೆ ಯುನಿವರ್ಸ್ ಸಹಾಯ ಮಾಡುತ್ತದೆ. ಇದನ್ನು ಹಿಂದೂ ಧರ್ಮದಲ್ಲಿ ಪ್ರಾರ್ಥನೆ ಅಂತಾ ಕರೆಯಲಾಗುತ್ತದೆ. ಜೀವನದಲ್ಲಿ ಏನು ನಡೆಯುತ್ತಿದೆ? ಏನಾಗಬೇಕು? ಸಂಗಾತಿಯಲ್ಲಿ ಯಾವ ಗುಣವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಸುದೀರ್ಘವಾದ ಮೆಸೇಜ್ ಕಳಿಸಿದರು. ಇಷ್ಟು ಮುಕ್ತವಾಗಿ ಮಾತನಾಡಿದ್ದು ನನಗೆ ತುಂಬ ಖುಷಿ ಕೊಟ್ಟಿತು” ಎಂದು ಪ್ರೀತಂ ಅವರು ಹೇಳಿದ್ದಾರೆ.
ಸಂಪ್ರದಾಯ ಫಾಲೋ ಮಾಡಿದ್ವಿ!
“ಜ್ಯೋತಿಷಿ ಜೊತೆ ಮಾತನಾಡಿ ನಮ್ಮಿಬ್ಬರ ಜಾತಕ ತೋರಿಸಿ ಅವರ ಆಶೀರ್ವಾದ ಪಡೆದೆವು. ನಮ್ಮಿಬ್ಬರ ಜಾತಕ ಮ್ಯಾಚ್ ಆಗುತ್ತದೆ ಅಂತಾ ಹೇಳಿದ್ದರು. ನಮ್ಮ ಮನೆಗೆ ನೀವು ಬನ್ನಿ, ಆಮೇಲೆ ನಮ್ಮ ಮನೆಯವರು ನಿಮ್ಮ ಮನೆಗೆ ಬರ್ತಾರೆ ಅಂತ ಸಂಪ್ರದಾಯ ಫಾಲೋ ಮಾಡೋಣ ಅಂತಾ ಹೇಳಿದರು. ಮಾಡರ್ನ್ ಡ್ರೆಸ್ ಹಾಕಿದರೂ ಕೂಡ ಅವರ ಹೃದಯ ಸಂಪ್ರದಾಯವನ್ನು ಫಾಲೋ ಮಾಡುತ್ತದೆ. ಮದುವೆ ಅಂತ ಬಂದಾಗ ಎಲ್ಲರಿಗೂ ಸೆಕೆಂಡ್ ಚಾನ್ಸ್ ಸಿಗೋದಿಲ್ಲ” ಎಂದು ಪ್ರೀತಂ ಹೇಳಿದ್ದಾರೆ.
ಬೇಗ ಮದುವೆ ಆಯ್ತು!
“30 ಆಗೋವರೆಗೂ ನನಗೂ ಮದುವೆ ಬಗ್ಗೆ ಭಯ ಇರುತ್ತದೆ. ಯಾರಾದರೂ ನನಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದರೆ ಸಮಯ ತಗೊಂಡು ಮದುವೆ ಆಗಿ ಅಂತ ನಾನು ಹೇಳುವೆ. ಇಷ್ಟು ಬೇಗ ಮದುವೆ ಆಗ್ತಿದ್ದೀಯಾ ಅಂತಾ ನನಗೆ ನನ್ನ ಸ್ನೇಹಿತರು ಕೇಳಿದರು. ನನಗೆ ಇವರೇ ನನ್ನ ಹುಡುಗಿ ಎನ್ನೋದು ಪಕ್ಕಾ ಆಗಿತ್ತು. ಹೀಗಾಗಿ ನನಗೆ ಇನ್ನಷ್ಟು ಸಮಯ ತಗೊಳ್ಳುವ ಅವಶ್ಯಕತೆ ಇರಲಿಲ್ಲ. ನನ್ನ ನಿರ್ಧಾರದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಮಾಡ್ತಿರೋದು ಸರಿ ಅಂತಲೂ ನನಗೆ ಗೊತ್ತಿದೆ ಅಂತಾ ಹೇಳಿದೆ. ಇನ್ನೊಂದು ವಿಷಯ ಏನಂದ್ರೆ ನನಗೆ ಮಾನಸಾ ಜೊತೆ ಜಾಸ್ತಿ ಸಮಯ ಕಳೆಯಬೇಕಿತ್ತು. ಬೆಂಗಳೂರಿನಲ್ಲಿ ನಾನು ಒಂದು ಕಡೆ ಇದ್ರೆ ಇವರು ಇನ್ನೊಂದು ಕಡೆ ಇದ್ರು. ಹೀಗಾಗಿ ಭೇಟಿ ಮಾಡೋದು ಕಷ್ಟ ಆಗುತ್ತಿತ್ತು. ಆದ್ದರಿಂದ ನಾವಿಬ್ಬರು ಬೇಗ ಮದುವೆಯಾದೆವು” ಎಂದು ಪ್ರೀತಂ ಹೇಳಿದ್ದಾರೆ.
ಸಂದರ್ಶನ: ಪದ್ಮಶ್ರೀ ಭಟ್
ಇದನ್ನೂ ಓದಿ: Jyothi Kiran Interview: ನನಗೆ ಸಾವಿನ ಅನುಭವ ಆದ್ಮೇಲೆ ಲೈಫ್ ತುಂಬಾ ಬದಲಾಗಿದೆ: ಜ್ಯೋತಿ ಕಿರಣ್ ಸಂದರ್ಶನ