ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಟಾಪ್ 10 ಐಟಿ ಕಂಪನಿಗಳು; ಇನ್ಫೋಸಿಸ್‌ನಿಂದ ಒರಾಕಲ್‌ವರೆಗೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಟಾಪ್ 10 ಐಟಿ ಕಂಪನಿಗಳು; ಇನ್ಫೋಸಿಸ್‌ನಿಂದ ಒರಾಕಲ್‌ವರೆಗೆ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಟಾಪ್ 10 ಐಟಿ ಕಂಪನಿಗಳು; ಇನ್ಫೋಸಿಸ್‌ನಿಂದ ಒರಾಕಲ್‌ವರೆಗೆ

ಕನ್ನಡ ರಾಜ್ಯೋತ್ಸವ 2024 (Karnataka Rajyotsava) ಸಮಯದಲ್ಲಿ ಕರ್ನಾಟಕದ ಪ್ರಮುಖ ಹತ್ತು ಐಟಿ ಕಂಪನಿಗಳ (Top 10 IT Companies in Karnataka) ಕುರಿತ ಮಾಹಿತಿ ಇಲ್ಲಿದೆ. ರಾಜ್ಯದ ಗರಿಮೆಯನ್ನು ಅಂತರರಾಷ್ಟ್ರೀಯ ಮಟ್ಟದವರೆಗೆ ಕೊಂಡ್ಯೊಯ್ದ ಕೀರ್ತಿ ಈ ಕಂಪನಿಗಳದ್ದು.

ಕರ್ನಾಟಕದ ಟಾಪ್ 10 ಐಟಿ ಕಂಪನಿಗಳು
ಕರ್ನಾಟಕದ ಟಾಪ್ 10 ಐಟಿ ಕಂಪನಿಗಳು

Top 10 IT Companies In Karnataka: ಬೆಂಗಳೂರನ್ನ ಐಟಿ ಸಿಟಿ ಎಂದು ಕರೆಯುತ್ತಾರೆ. ‌ಮಹಾನಗರಿಯಲ್ಲಿ ನೂರಾರು ಮಾಹಿತಿ ತಂತ್ರಜ್ಞಾನ ಕಂಪನಿಗಳಿವೆ. ಇಲ್ಲಿ ದೇಶ ವಿದೇಶಗಳ ಹಲವರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಹಲವು ಐಟಿ ಕಂಪನಿಗಳು ದೇಶ, ವಿದೇಶಗಳಲ್ಲೂ ಹೆಸರು ಮಾಡಿವೆ. ಕರ್ನಾಟಕದ ಬಹುತೇಕ ಐಟಿ ಕಂಪನಿಗಳು ಬೆಂಗಳೂರಿನಲ್ಲೇ ಇದ್ದು, ಕರ್ನಾಟಕದ ಹಿರಿಮೆಯನ್ನು ವಿಶ್ವ ಮಟ್ಟಕ್ಕೆ ಕೊಂಡ್ಯೊಯ್ದಿವೆ.

ಇನ್ಫೋಸಿಸ್‌ನಿಂದ ಅಕ್ಸೆಂಚರ್‌ವರೆಗೆ ಕರ್ನಾಟಕದಲ್ಲಿರುವ ಪ್ರಮುಖ ಹತ್ತು 10 ಕಂಪನಿಗಳು ರಾಜ್ಯದ ಆರ್ಥಿಕತೆಗೆ ಸಾಕಷ್ಟು ಬಲ ತುಂಬುತ್ತಿವೆ. ಈ ಕಂಪನಿಗಳು ಕರ್ನಾಟಕದ ರಾಜ್ಯದ ಅದೆಷ್ಟೋ ಪದವಿಧರರಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಕಡಿಮೆಯಾಗುವಂತೆ ಮಾಡಿವೆ. ಜಾಬ್ ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಕಂಪನಿಗಳು ಕೇವಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪದವಿಯಲ್ಲಿ ವಿವಿಧ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೂ ಅವಕಾಶ ನೀಡಿವೆ. ಸಂಬಳ, ಉದ್ಯೋಗದ ಭರವಸೆ, ಉದ್ಯೋಗಿಗಳ ಭವಿಷ್ಯ ಹೀಗೆ ಹಲವು ಕಾರಣಗಳಿಂದ ಕರ್ನಾಟಕದಲ್ಲಿ ಟಾಪ್ ಎನ್ನಿಸಿದ 10 ಐಟಿ ಕಂಪನಿಗಳ ಪಟ್ಟಿ ಇಲ್ಲಿದೆ.

1. ಇನ್ಫೋಸಿಸ್‌

2. ಟಿಸಿಎಸ್‌

3. ವಿಪ್ರೊ

4. ಐಬಿಎಂ

5. ಕ್ಯಾಪ್‌ಜೆಮಿನಿ

6. ಅಕ್ಸೆಂಚರ್

7. ಕಾಂಗ್ನಿಜೆಂಟ್

8. ಒರಾಕಲ್‌

9. ಡೆಲ್‌

10. ಮೈಂಡ್ ಟ್ರಿ

1. ಇನ್ಫೋಸಿಸ್‌: ಇನ್ಫೋಸಿಸ್ ಕಂಪನಿಯನ್ನು ಕನ್ನಡವರೇ ಆದ ನಾರಾಯಣ ಮೂರ್ತಿ ಅವರು ಕಟ್ಟಿ ಬೆಳೆಸಿದ್ದಾರೆ. ಇನ್ಫೋಸಿಸ್ ಕಂಪನಿಯ ಮುಖ್ಯ ಕಚೇರಿ ಇರುವುದು ಬೆಂಗಳೂರಿನಲ್ಲಿ. 1981ರಲ್ಲಿ ಪುಣೆಯಲ್ಲಿ ಈ ಕಂಪನಿಯನ್ನು ಆರಂಭಿಸಲಾಯಿತು. ಸದ್ಯ ಪ್ರಪಂಚದಾದ್ಯಂತ ಈ ಕಂಪನಿ ವಹಿವಾಟು ನಡೆಸುತ್ತಿದೆ.

2. ಟಿಸಿಎಸ್‌: ಟಾಟಾ ಕನ್ಸಲೆನ್ಸಿ ಸರ್ವಿಸ್ ಆರಂಭವಾಗಿದ್ದು 1968ರಲ್ಲಿ. ಈ ಕಂಪನಿಯ ಮುಖ್ಯಕಚೇರಿ ಇರುವುದು ಮುಂಬೈನಲ್ಲಿ. ಬೆಂಗಳೂರಿನಲ್ಲಿ ಸುಮಾರು 8ರಷ್ಟು ಟಾಟಾ ಕನ್ಸಲ್ಟೆನ್ಸಿ ಕಂಪನಿಗಳಿವೆ. ಜೆಆರ್‌ಡಿ ಟಾಟಾ ಅವರು ಈ ಕಂಪನಿಯನ್ನು ಸ್ಥಾಪಿಸಿದ್ದರು.

3. ವಿಪ್ರೊ: ಎಂ.ಎಚ್. ಹಶಮ್ ಪ್ರೇಮ್‌ಜಿ ಈ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ಕಂಪನಿಯ ಮುಖ್ಯ ಕಚೇರಿ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿದೆ. 1945ರಲ್ಲಿ ಕಂಪನಿಯನ್ನು ಪ್ರಾರಂಭಿಸಲಾಯಿತು.

4. ಐಬಿಎಂ: ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾಗಿರುವ ಐಬಿಎಂ ಆರಂಭವಾಗಿದ್ದು ಸುಮಾರು 113 ವರ್ಷಗಳ ಹಿಂದೆ. ಇದು 1911ರಲ್ಲಿ ಅಮೆರಿಕದಲ್ಲಿ ಶುರುವಾದ ಕಂಪನಿಯಾಗಿದೆ. ಬೆಂಗಳೂರಿನ ಹಲವು ಕಡೆ ಐಬಿಎಂ ಕಂಪನಿಯ ಬ್ರಾಂಚ್ ಆಫೀಸ್‌ಗಳಿವೆ.

5. ಕ್ಯಾಪ್‌ಜೆಮಿನಿ: 1967ರಲ್ಲಿ ಆರಂಭವಾದ ಕಂಪನಿಯಿದು. ಸದ್ಯ ಪ್ರಪಂಚದಾದ್ಯಂತ ವಹಿವಾಟು ನಡೆಸುತ್ತಿರುವ ಈ ಕಂಪನಿಯ ಮುಖ್ಯ ಕಚೇರಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ. ಬೆಂಗಳೂರಿನಲ್ಲಿ ಕ್ಯಾಪ್‌ಜೆಮಿನಿಯ ಹಲವು ಆಫೀಸ್‌ಗಳಿವೆ.

6. ಅಕ್ಸೆಂಚರ್: 1989ರಲ್ಲಿ ಸ್ಥಾಪಿಸಲಾದ ಈ ಕಂಪನಿಯ ಮುಖ್ಯ ಕಚೇರಿ ಇರುವುದು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ. ಒಟ್ಟು 58 ದೇಶಗಳಲ್ಲಿ ಅಕ್ಸೆಂಚರ್ ಕಂಪನಿಗಳಿವೆ.

7. ಕಾಂಗ್ನಿಜೆಂಟ್: ಇದು ಭಾರತ ಮೂಲದ ಕಂಪನಿ. 1994ರಲ್ಲಿ ಚೆನ್ನೈನಲ್ಲಿ ಈ ಕಂಪನಿಯನ್ನು ಆರಂಭಿಸಲಾಯಿತು. ಇದರ ಮುಖ್ಯ ಕಚೇರಿ ಅಮೆರಿಕದ ನ್ಯೂ ಜೆರ್ಸಿಯಲ್ಲಿದೆ.

8. ಒರಾಕಲ್‌: ಈ ಕಂಪನಿ ಆರಂಭವಾಗಿ 47 ವರ್ಷಗಳಾಗಿವೆ. 1977 ರಲ್ಲಿ ಒರಾಕಲ್ ಕಂಪನಿಯನ್ನು ಆರಂಭಿಸಲಾಯಿತು. ಅಮೆರಿಕದಲ್ಲಿ ಆರಂಭವಾದ ಕಂಪನಿಯಿದು. ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಈ ಕಂಪನಿಯ ಮುಖ್ಯ ಕಚೇರಿ ಇದೆ.

9. ಸಿಸ್ಕೊ: 1984ರಲ್ಲಿ ಸ್ಥಾಪನೆಯಾದ ಕಂಪನಿಯಿದು. ಇದನ್ನು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲಾಯಿತು. ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಸಿಸ್ಕೊ ಕಂಪನಿಗಳಿವೆ.

10. ಮೈಂಡ್ ಟ್ರಿ: ಮೈಂಡ್‌ಟ್ರೀ ಕಂಪನಿ ಆರಂಭವಾಗಿ 25 ವರ್ಷಗಳ ಕಳೆದಿವೆ. 1999ರಲ್ಲಿ ಆರಂಭವಾದ ಕಂಪನಿಯಿದು. ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್‌ಪಾರ್ಕ್‌ನಲ್ಲಿದೆ ಇದರ ಮುಖ್ಯ ಕಚೇರಿ.

(ಗಮನಿಸಿ: ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಹಲವು ಐಟಿ ಕಂ‍ಪನಿಗಳಿದ್ದು, ಅವುಗಳಲ್ಲಿ ಆಯ್ದ ಕೆಲವು ಕಂಪನಿಗಳ ಪರಿಚಯ ಇಲ್ಲಿದೆ ನೀಡಲಾಗಿದೆ.)

Whats_app_banner