ಕನ್ನಡ ಸುದ್ದಿ  /  ಜೀವನಶೈಲಿ  /  ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ: ಜೂನ್ 23ಕ್ಕೆ ಬೆಳಗಾವಿಯಿಂದ ಕನ್ಯಾಕುಮಾರಿಗೆ ಪ್ರವಾಸ; ಟಿಕೆಟ್ ದರ ಸೇರಿ ಹೀಗಿದೆ ವಿವರ

ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ: ಜೂನ್ 23ಕ್ಕೆ ಬೆಳಗಾವಿಯಿಂದ ಕನ್ಯಾಕುಮಾರಿಗೆ ಪ್ರವಾಸ; ಟಿಕೆಟ್ ದರ ಸೇರಿ ಹೀಗಿದೆ ವಿವರ

ಬೆಳಗಾವಿಯಿಂದ ಕನ್ಯಾಕುಮಾರಿಗೆ ಐಆರ್‌ಸಿಟಿಸಿ ಆರಂಭಿಸಿರುವ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ ರೈಲು ಬೆಂಗಳೂರಿಗೂ ಆಗಮಿಸುತ್ತೆ. ದಿನಾಂಕ, ಟಿಕೆಟ್ ಮೊತ್ತ, ಕರ್ನಾಟಕ ಸರ್ಕಾರದಿಂದ ಸಿಗುವ ರಿಯಾಯಿತಿ ಹಾಗೂ ವೀಕ್ಷಣೆಯ ಸ್ಥಳಗಳ ಮಾಹಿತಿಯನ್ನು ತಿಳಿಯೋಣ.

ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ: ಜೂನ್ 23ಕ್ಕೆ ಬೆಳಗಾವಿಯಿಂದ ಕನ್ಯಾಕುಮಾರಿಗೆ ಪ್ರವಾಸ; ಟಿಕೆಟ್ ಸೇರಿ ಹೀಗಿದೆ ಐಆರ್‌ಸಿಟಿಸಿ ವಿವರ
ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರಾ: ಜೂನ್ 23ಕ್ಕೆ ಬೆಳಗಾವಿಯಿಂದ ಕನ್ಯಾಕುಮಾರಿಗೆ ಪ್ರವಾಸ; ಟಿಕೆಟ್ ಸೇರಿ ಹೀಗಿದೆ ಐಆರ್‌ಸಿಟಿಸಿ ವಿವರ

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸ ಕಾರ್ಪೊರೇಷನ್ - (IRCTC) ಆಗಾಗ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಅದರಂತೆ ಬೆಳಗಾವಿಯಿಂದ ಕನ್ಯಾಕುಮಾರಿಗೆ ವರಗೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯನ್ನು (Karnataka Bharat Gaurav Dakshina Yatra) ಆರಂಭಿಸಿದೆ. ಈ ವಿಶೇಷ ಪ್ರವಾಸದ ರೈಲು ಸೇವೆ ಜೂನ್ 23 ರಂದು ಬೆಳಗಾವಿಯಿಂದ ಆರಂಭವಾಗಲಿದೆ. ಧಾರ್ಮಿಕ ಕ್ಷೇತ್ರಗಳ ಪ್ರವಾಸದ ಈ ರೈಲು ಪ್ರವಾಸದ ಪ್ಯಾಕೇಜ್‌ನಲ್ಲಿ ಪ್ರಯಾಣದ ಟಿಕೆಟ್ ದರ, ಕರ್ನಾಟಕ ಸರ್ಕಾರದ ರಿಯಾಯಿತಿ, ಊಟ, ಹೋಟೆಲ್, ವೀಕ್ಷಣೆ ಮಾಡುವಂತಹ ಸ್ಥಳಗಳು, ರೈಲು ಹೊರಡಲಿರುವ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕ ಸರ್ಕಾರವು ಐಆರ್‌ಸಿಟಿಸಿ ಸಹಯೋಗದೊಂದಿಗೆ ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆಯನ್ನು ಆರಂಭಿಸಿದೆ. ಥೀಮ್-ಆಧಾರಿತ ತೀರ್ಥಯಾತ್ರೆಯನ್ನು ಭಾರತ್ ಗೌರವ್ ಟೂರಿಸ್ಟ್ ರೈಲು ಮೂಲಕ 6 ದಿನಗಳ ಪ್ರವಾಸವನ್ನು ಇದು ಒಳಗೊಂಡಿದೆ. ತಿರುವನಂತಪುರಂ, ಕನ್ಯಾಕುಮಾರಿ, ರಾಮೇಶ್ವರಂ ಹಾಗೂ ಮಧುರೈನ ಪ್ರಮುಖ ಧಾರ್ಮಿಕ ಪವಿತ್ರ ಸ್ಥಳಗಳನ್ನು ಈ ಟೂರ್ ಪ್ಯಾಕೇಜ್ ಒಳಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಪ್ರವಾಸದ ಪ್ರಮುಖ ಮಾಹಿತಿ

ಪ್ರವಾಸದ ಹೆಸರು: ಕರ್ನಾಟಕ ಭಾರತ್ ಗೌರವ್ ದಕ್ಷಿಣ ಯಾತ್ರೆ

ಅವಧಿ: 5 ರಾತ್ರಿಗಳನ್ನು ಒಳಗೊಂಡ 6 ದಿನಗಳ ಪ್ರವಾಸ (ಬೆಳಗಾವಿಯಿಂದ ಆರಂಭ)

ಹೊರಡಲಿರುವ ದಿನಾಂಕ: 23.06.2024

ಪ್ರವಾಸ ಪ್ಯಾಕೇಜ್ ಬೆಲೆ: ಪ್ರತಿ ವ್ಯಕ್ತಿಗೆ 15,000 ರೂಪಾಯಿ

ವಿಶೇಷ ಕೊಡುಗೆ: ಕರ್ನಾಟಕ ಸರ್ಕಾರದಿಂದ 5,000 ಸಹಾಯಧನ

ಪ್ರವಾಸ: ಬೆಳಗಾವಿ-ಕನ್ಯಾಕುಮಾರಿ-ತಿರುವನಂತಪುರಂ-ರಾಮೇಶ್ವರಂ-ಮಧುರೈ-ಬೆಳಗಾವಿ

ರೈಲು ಬೋರ್ಡಿಂಗ್ ಪಾಯಿಂಟ್ಸ್: ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಎಸ್‌ಎಂವಿಟಿ ಬೆಂಗಳೂರು

ಯಾವ ಸ್ಥಳದಲ್ಲಿ ಏನೆಲ್ಲಾ ನೋಡಲು ಅವಕಾಶ ಇದೆ?

ಕನ್ಯಾಕುಮಾರಿಯಲ್ಲಿ ನೋಡುವಂತ ಸ್ಥಳಗಳು: ಭಗವತಿ ದೇವಸ್ಥಾನ, ವಿವೇಕಾನಂದ ರಾಕ್ ಸ್ಮಾರಕ

ತಿರುವನಂತಪುರಂನಲ್ಲಿ ವೀಕ್ಷಣೆಯ ಸ್ಥಳ: ಶ್ರೀಪದ್ಮನಾಭಸ್ವಾಮಿ ದೇವಸ್ಥಾನ

ರಾಮೇಶ್ವರಂ: ರಾಮನಾಥಸ್ವಾಮಿ ದೇವಸ್ಥಾನ

ಮಧುರೈ: ಮೀನಾಕ್ಷಿ ದೇವಸ್ಥಾನ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)