ಬಿಸಿ ಬಿಸಿ ಅನ್ನದ ಜೊತೆ ಬೆಸ್ಟ್ ಕಾಂಬಿನೇಷನ್ ಕೆಂಪು ಹರಿವೆ ಬೆಣ್ಣೆ ಹುಳಿ, ರುಚಿಯ ಜೊತೆ ಆರೋಗ್ಯವೂ ಇದರಲ್ಲಿ ಅಡಗಿದೆ-kempu harive soppina tasty benne huli best recipe in kannada cooking tips smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿ ಬಿಸಿ ಅನ್ನದ ಜೊತೆ ಬೆಸ್ಟ್ ಕಾಂಬಿನೇಷನ್ ಕೆಂಪು ಹರಿವೆ ಬೆಣ್ಣೆ ಹುಳಿ, ರುಚಿಯ ಜೊತೆ ಆರೋಗ್ಯವೂ ಇದರಲ್ಲಿ ಅಡಗಿದೆ

ಬಿಸಿ ಬಿಸಿ ಅನ್ನದ ಜೊತೆ ಬೆಸ್ಟ್ ಕಾಂಬಿನೇಷನ್ ಕೆಂಪು ಹರಿವೆ ಬೆಣ್ಣೆ ಹುಳಿ, ರುಚಿಯ ಜೊತೆ ಆರೋಗ್ಯವೂ ಇದರಲ್ಲಿ ಅಡಗಿದೆ

ಕೆಂಪು ಹರಿವೆ ಬೆಣ್ಣೆ ಹುಳಿ: ನೀವು ಯಾವಾಗಲೂ ಒಂದೇ ರೀತಿ ತರಕಾರಿ ಉಪಯೋಗಿಸಿ ಊಟ ಮಾಡಿ ಬೋರಾಗಿದ್ದರೆ. ಇಂದು ಈ ಕೆಂಪು ಹರಿವೆ ಸೊಪ್ಪಿನ ಬೆಣ್ಣೆ ಹುಳಿಯನ್ನೊಮ್ಮೆ ಟ್ರೈ ಮಾಡಿ ನೊಡಿ. ತುಂಬಾ ರುಚಿಯಾಗಿ ಹಾಗೂ ಅಷ್ಟೇ ಆರೋಗ್ಯಕರವಾಗಿ ಇದು ಇರುತ್ತದೆ. ಮಾಡುವ ವಿಧಾನ ಕೂಡ ತುಂಬಾ ಸರಳ.

ಕೆಂಪು ಹರಿವೆ ಬೆಣ್ಣೆ ಹುಳಿ
ಕೆಂಪು ಹರಿವೆ ಬೆಣ್ಣೆ ಹುಳಿ

ಕೆಂಪು ಹರಿವೆ ಸೊಪ್ಪಿನ ಬೆಣ್ಣೆ ಹುಳಿಯನ್ನು ನೀವು ಒಮ್ಮೆ ತಿಂದರೆ ಇನ್ನೊಮ್ಮೆ ತಿನ್ನಲು ಇಷ್ಟ ಪಡುತ್ತೀರ. ಇದು ಅಷ್ಟೊಂದು ಟೇಸ್ಟಿಯಾಗಿರುತ್ತದೆ. ಮನೆಯಲ್ಲಿ ತುಂಬಾ ಸರಳವಾಗಿ ಹಾಗೂ ಕಡಿಮೆ ಸಮಯದಲ್ಲಿ ನೀವಿದನ್ನು ಮಾಡಿಕೊಂಡು ತಿನ್ನಬಹುದು. ನೀವು ಯಾವಾಗಲೂ ಒಂದೇ ರೀತಿ ತರಕಾರಿ ಉಪಯೋಗಿಸಿ ಊಟ ಮಾಡಿ ಬೋರಾಗಿದ್ದರೆ. ಇಂದು ಈ ಕೆಂಪು ಹರಿವೆ ಸೊಪ್ಪಿನ ಬೆಣ್ಣೆ ಹುಳಿಯನ್ನೊಮ್ಮೆ ಟ್ರೈ ಮಾಡಿ ನೊಡಿ. ತುಂಬಾ ರುಚಿಯಾಗಿ ಹಾಗೂ ಅಷ್ಟೇ ಆರೋಗ್ಯಕರವಾಗಿ ಇದು ಇರುತ್ತದೆ. ಮಾಡುವ ವಿಧಾನ ಕೂಡ ತುಂಬಾ ಸರಳ.

ಕೆಂಪು ಹರಿವೆ ಸೊಪ್ಪಿನ ಬೆಣ್ಣೆ ಹುಳಿಗೆ ಬೇಕಾಗುವ ಸಾಮಗ್ರಿಗಳು

ಬೇಕಾಗಿರುವ ಪದಾರ್ಥಗಳು
ಕೆಂಪು ಹರಿವೆ ಸೊಪ್ಪು
ಉಪ್ಪು
ನೀರು
ಎಣ್ಣೆ
ಹಸಿಮೆಣಸಿನಕಾಯಿ
ಬೆಣ್ಣೆ
ಬೆಳ್ಳುಳ್ಳಿ
ಹುಣಸೆಹಣ್ಣು/ ವಾಟೆ ಹುಳಿ

ಇವಿಷ್ಟೇ ಸಾಕು ನೀವು ತುಂಬಾ ರುಚಿಯಾದ ಕೆಂಪುಹರಿವೇ ಸೊಪ್ಪಿನ ಬೆಣ್ಣೆ ಹುಳಿ ಮಾಡಬಹುದು.

ಕೆಂಪು ಹರಿವೆ ಸೊಪ್ಪಿನ ಬೆಣ್ಣೆ ಹುಳಿ ಮಾಡುವ ವಿಧಾನ

ಮೊದಲಿಗೆ ನೀವು ಕೆಂಪು ಹರಿವೆ ಸೊಪ್ಪನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಕೊಳ್ಳಬೇಕು. ಅದನ್ನು ನೀರಿಗೆ ಹಾಕಿ ಬೇಯಿಸಬೇಕು. ಅದು ಕುದಿ ಬರಲು ಆರಂಭಿಸಿದ ತಕ್ಷಣ ಅದಕ್ಕೆ ಬೆಣ್ಣೆ ಸೇರಿಸಬೇಕು. ಹಸಿ ಮೆಣಸಿನಕಾಯಿ, ಸಾಸಿವೆ, ಹುಳಿಸೊಪ್ಪು, ಬೆಳ್ಳುಳ್ಳಿ ಇವೆಲ್ಲವನ್ನು ಒಟ್ಟಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಉಪ್ಪು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಣ್ಣೆ, ಬೆಲ್ಲ ಹಾಕಿ ಇನ್ನಷ್ಟು ಕುಸಿಕೊಳ್ಳಬೇಕು. ಹೀಗೆ ಮಾಡಿದಾಗ ಅದರ ಸವಿ ಬಿಡುತ್ತದೆ. ಅದರ ರಸಕ್ಕೆ ತುಂಬಾ ಟೇಸ್ಟ್ ಇರುತ್ತದೆ. ಇದನ್ನು ನೀವು ಸಾಂಬಾರ್ ರೀತಿಯಲ್ಲಿ ಉಪಯೋಗಿಸಬಹುದು. ಬಿಸಿಬಿಸಿ ಅನ್ನದ ಜೊತೆ ಸವಿದು ತಿನ್ನಲು ಇದು ತುಂಬಾ ಉಪಯುಕ್ತ. ಹಾಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮನೆಯಲ್ಲಿ ಯಾವುದೇ ಕಾಳು ಬೇಳೆ ಇಲ್ಲ ಖಾಲಿಯಾಗಿದೆ ಎಂದರೂ ಸಹ ನೀವಿದನ್ನು ಮಾಡಿ ತಿನ್ನಬಹುದು. ಕಡಿಮೆ ಕೊಲೆಸ್ಟ್ರಾಲ್‌ ಅಂಶವನ್ನು ಹೊಂದಿರುವುದರಿಂದ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿಯಾಗಿದೆ. ಕೊಲೆಸ್ಟ್ರಾಲ್‌ ಕಡಿಮೆಯಾದಂತೆ ತೂಕವು ನಿಯಂತ್ರಣಕ್ಕೆ ಬರುತ್ತದೆ. ಅದರ ಜೊತೆಯಲ್ಲಿ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಾರಿನಾಂಶ ಇರುವುದರಿಂದ ದೇಹದ ಆರೋಗ್ಯಕ್ಕೆ ತುಂಬಾನೆ ಉಪಯೋಗಕಾರಿಯಾಗಿದೆ.

mysore-dasara_Entry_Point