ಆಲೂಗಡ್ಡೆಯನ್ನು ಕುದಿಸಿದ ನಂತರ ಕುಕ್ಕರ್ ಕಪ್ಪು ಬಣ್ಣಕ್ಕೆ ತಿರುಗುತ್ತಾ: ಈ ಟಿಪ್ಸ್ ಅನುಸರಿಸಿದರೆ ಹೊಸದರಂತೆ ಹೊಳೆಯುತ್ತದೆ
ಆಲೂಗಡ್ಡೆಯನ್ನು ಕುದಿಸಿದ ನಂತರ ಕುಕ್ಕರ್‌ನ ಒಳಭಾಗವು ಕಪ್ಪು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿರಬಹುದು. ಡಿಶ್ ವಾಶ್ ಮತ್ತು ಸ್ಕ್ರಬ್ಬರ್ ಬಳಸಿ ತಿಕ್ಕಿ ತಿಕ್ಕಿ ತೊಳೆದರೂ ಸ್ವಚ್ಛವಾಗುವುದಿಲ್ಲ. ಹೀಗಾಗಿ ಈ ಸಲಹೆಗಳನ್ನು ಅನುಸರಿಸುವುದರಿಂದ ಕುಕ್ಕರ್ ಹೊಸದರಂತೆ ಹೊಳೆಯುವಂತೆ ಮಾಡಬಹುದು. ಇಲ್ಲಿದೆ ಟಿಪ್ಸ್.
ಮಹಿಳೆಯರು ಹೆಚ್ಚಾಗಿ ಎದುರಿಸುವ ಸಮಸ್ಯೆಗಳಲ್ಲಿ ಕುಕ್ಕರ್ ಸ್ವಚ್ಛಗೊಳಿಸುವುದು ಕೂಡ ಒಂದು. ಕುಕ್ಕರ್ ಅಡುಗೆಯನ್ನು ಸುಲಭಗೊಳಿಸುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುತ್ತದೆ. ಆಹಾರವನ್ನು ರುಚಿಕರವಾಗಿಸಲು ಮತ್ತು ಸಮಯವನ್ನು ಉಳಿಸಲು ಇದು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಕುಕ್ಕರ್ ಅನ್ನು ಹೆಚ್ಚು ಬಳಸಲಾಗುತ್ತದೆ. ಆದರೆ, ಕುಕ್ಕರ್‌ನಲ್ಲಿ ಆಲೂಗಡ್ಡೆ ಬೇಯಿಸಿದ ನಂತರ ಕುಕ್ಕರ್ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎಂದು ಸಾಮಾನ್ಯವಾಗಿ ಮಹಿಳೆಯರು ದೂರುತ್ತಾರೆ. ಡಿಶ್ ವಾಶ್ ಮತ್ತು ಸ್ಕ್ರಬ್ಬರ್ ಬಳಸಿ ತಿಕ್ಕಿ ತಿಕ್ಕಿ ತೊಳೆದರೂ ಅಷ್ಟು ಸುಲಭವಾಗಿ ಸ್ವಚ್ಛಗೊಳ್ಳುವುದಿಲ್ಲ. ಇದಲ್ಲದೆ, ಆಲೂಗಡ್ಡೆಯನ್ನು ಕುದಿಸುವಾಗ ಕುಕ್ಕರ್‌ನಲ್ಲಿಯೇ ಹಲವು ಬಾರಿ ಒಡೆಯುತ್ತವೆ. ಹೀಗೆ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಬೇಯಿಸುವಾಗ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಆಲೂಗಡ್ಡೆಯನ್ನು ಬೇಯಿಸಿದ ನಂತರ ಕುಕ್ಕರ್ ಅನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳು ನಿಮ್ಮ ಕುಕ್ಕರ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಆಲೂಗಡ್ಡೆ ಬೇಯಿಸುವಾಗ ಕುಕ್ಕರ್ ಕಪ್ಪು ಬಣ್ಣಕ್ಕೆ ತಿರುಗದಂತೆ ಈ ರೀತಿ ಮಾಡಿ
ನಿಂಬೆ ಸಿಪ್ಪೆ: ಆಲೂಗಡ್ಡೆ ಕುದಿಸುವಾಗ ಕುಕ್ಕರ್ ಒಳಗಿನಿಂದ ಕಪ್ಪು ಬಣ್ಣಕ್ಕೆ ತಿರುಗಬಾರದು ಎಂದು ಬಯಸಿದರೆ, ಆಲೂಗಡ್ಡೆಯನ್ನು ಕುದಿಯಲು ಇಟ್ಟಾಗ ಒಂದು ಚಮಚ ಉಪ್ಪು ಮತ್ತು ಮೂರ್ನಾಲ್ಕು ನಿಂಬೆ ಸಿಪ್ಪೆಯನ್ನು ಹಾಕಿ, ವಿಶಿಲ್ ಹೊಡೆಸಿ. ಕುಕ್ಕರ್‌ನಲ್ಲಿ ನಿಂಬೆ ಸಿಪ್ಪೆಯನ್ನು ಹಾಕುವ ಈ ಸಲಹೆಯನ್ನು ಅನುಸರಿಸುವುದರಿಂದ, ಆಲೂಗಡ್ಡೆ ಕುದಿವಾಗ ಕುಕ್ಕರ್‌ನ ಒಳಭಾಗವು ಕಪ್ಪಾಗುವುದಿಲ್ಲ. ಜತೆಗೆ ಕುಕ್ಕರ್ ಸ್ವಚ್ಛವಾಗುತ್ತದೆ. ನಿಂಬೆ ಹಣ್ಣಿನ ಸಿಪ್ಪೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಹೀಗಾಗಿ ನಿಂಬೆಯ ಸಿಪ್ಪೆಯನ್ನು ಬಳಸುವುದರಿಂದ ಯಾವುದೇ ತೊಂದರೆಯಿಲ್ಲ.
ಆಲೂಗಡ್ಡೆ ಸಿಡಿಯುವುದನ್ನು ತಡೆಯಲು ಸಲಹೆಗಳು
ಕುಕ್ಕರ್‌ನಲ್ಲಿ ಆಲೂಗಡ್ಡೆ ಕುದಿಯುತ್ತಿರುವಾಗ, ಆಗೊಮ್ಮೆ ಈಗೊಮ್ಮೆ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಹೀಗೆ ಒಡೆಯುವುದರಿಂದ ಕರಿ ಸರಿಯಾಗಿ ಬರುವುದಿಲ್ಲ. ಆಲೂಗಡ್ಡೆಳನ್ನು ತುಂಡುಗಳಾಗಿ ಒಡೆಯದೆ ಬೇಯಿಸಲು ಈ ಸಲಹೆಯನ್ನು ಅನುಸರಿಸಬಹುದು. ಕುಕ್ಕರ್‌ನ ಗಾತ್ರಕ್ಕೆ ಅನುಗುಣವಾಗಿ ಆಲೂಗಡ್ಡೆಗಳನ್ನು ಆಯ್ಕೆ ಮಾಡಬೇಕು. ಎಲ್ಲಾ ಆಲೂಗಡ್ಡೆಗಳು ಮುಳುಗಿಸಲು ಸಾಕಷ್ಟು ನೀರನ್ನು ಸುರಿಯಿರಿ. ನಂತರ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಬೇಯಿಸಿ. ಬಲವಂತವಾಗಿ ಶಿಳ್ಳೆ ಹೊಡೆಯಲು ಪ್ರಯತ್ನಿಸಬೇಡಿ. ವಿಶಿಲ್ ಹೊಡೆದ ನಂತರ ಒತ್ತಡ ಹೋಗುವವರೆಗೂ ಕಾಯಿರಿ. ಈ ಸಲಹೆಯನ್ನು ಅನುಸರಿಸುವುದರಿಂದ ಆಲೂಗಡ್ಡೆ ಸಂಪೂರ್ಣವಾಗಿ ಬೇಯುತ್ತದೆ ಮತ್ತು ಸಣ್ಣ ತುಂಡುಗಳಾಗಿ ಒಡೆಯುವುದಿಲ್ಲ.
ಆಲೂಗಡ್ಡೆಯನ್ನು ಬೇಯಿಸುವಾಗ ಈ ವಿಚಾರ ತಿಳಿದಿರಲೇಬೇಕು
- ಪ್ರೆಶರ್ ಕುಕ್ಕರ್ ದೊಡ್ಡದಾಗಿದ್ದರೆ, ಆಲೂಗಡ್ಡೆಯನ್ನು ಬೇಯಿಸಲು 2 ರಿಂದ 3 ಸೀಟಿಗಳು ಸಾಕು. ಕುಕ್ಕರ್ ಚಿಕ್ಕದಾಗಿದ್ದರೆ 4 ರಿಂದ 5 ಸೀಟಿಗಳು ಬರುವವರೆಗೆ ಕಾಯಬೇಕಾಗುತ್ತದೆ.
- ಕುಕ್ಕರ್‌ನಲ್ಲಿ ಪ್ರೆಶರ್ ಅಥವಾ ಒತ್ತಡ ಹೆಚ್ಚಿದ್ದರೆ ತಕ್ಷಣ ಸೀಟಿಯನ್ನು ಊದಿಸಬೇಡಿ. ಇದು ಅನೇಕ ಅಪಘಾತಗಳಿಗೆ ಕಾರಣವಾಗಬಹುದು. ತಕ್ಷಣ ಗ್ಯಾಸ್ ಆಫ್ ಮಾಡಿ. ಒಂದು ಚಮಚದ ಸಹಾಯದಿಂದ ಸೀಟಿಯನ್ನು ಸ್ವಲ್ಪ ಮೇಲಕ್ಕೆತ್ತಿದರೆ, ಎಲ್ಲಾ ಹಬೆಯು ಆ ಮಾರ್ಗದ ಮೂಲಕ ಹೊರಹೋಗುತ್ತದೆ. ಅದರ ನಂತರ ಸೀಟಿ ತೆಗೆಯಬೇಕು.
ವಿಭಾಗ